ಗರ್ಭಾವಸ್ಥೆಯ ಬಗ್ಗೆ ನಿಮಗೆ ಯಾರು ಹೇಳಿರದ ಕೆಲವು ಅದ್ಭುತ ಸಂಗತಿಗಳು

ಗರ್ಭಧಾರಣೆಯು ಜೀವನದ ಅದ್ಭುತ ವಿಷಯಗಳಲ್ಲಿ ಒಂದಾಗಿದೆ. ನೀವು ಒಂದು ಜೀವವನ್ನು ನಿಮ್ಮ ದೇಹದ ಒಳಗೆ ಬೆಳೆಸುತ್ತಿರುವಿರಿ. ಖಂಡಿತವಾಗಿ ಈ ಪಯಣದಲ್ಲಿ ಹಲವು ಅಸ್ವಸ್ಥತೆಗಳಿವೆ, ಅವು ತೂಕ ಪಡೆಯುವುದು, ಕೈ ಕಾಲು ಊದಿಕೊಳ್ಳುವುದು, ಆಗಾಗ್ಗೆ ವಿಸರ್ಜನೆಗೆ ಹೋಗುವುದು ಮುಂತಾದವು, ಆದರೆ, ಅಂತಿಮ ಫಲಿತಾಂಶ ನಿಮಗೆ ಎಂದು ಸಿಗದ ಒಂದು ಅದ್ಭುತ ಉಡುಗೊರೆಯನ್ನು ನೀಡುತ್ತದೆ. ನೀವು ಗರ್ಭಾವಸ್ಥೆಯ ಬಗ್ಗೆ ಹಲವು ಸಂಗತಿಗಳನ್ನು ಕೇಳಿರಬಹುದು, ಆದರೆ ಇಲ್ಲಿರುವ ಕೆಲವು ಸಂಗತಿಗಳನ್ನು ನಿಮಗೆ ಯಾರು ತಿಳಿಸಿರಲು ಸಾಧ್ಯವಿಲ್ಲ. ಅವುಗಳನ್ನು ತಿಳಿಯಲು ಮುಂದೆ ಓದಿ.

೧.ಕೀಲುಗಳು ಮೃದುವಾಗುತ್ತವೆ

ಮಗುವಿನ ಜನನಕ್ಕೆ ನಿಮ್ಮ ದೇಹವನ್ನು ತಯಾರಿಸಲು, ರೇಲಕ್ಸಿನ್ ಎಂಬ ಹಾರ್ಮೋನನ್ನು ಇದು ಬಿಡುಗಡೆ ಮಾಡುತ್ತದೆ, ಅದು ಅಸ್ಥಿರಜ್ಜುಗಳನ್ನು ಮೃದುವಾಗಿಸುತ್ತದೆ. ಇದು ನಿಮ್ಮ ಮಗು ಹೆರಿಗೆಯ ಸಮಯದಲ್ಲಿ ಸುಲಭವಾಗಿ ಪೆಲ್ವಿಸ್(ಮೂತ್ರಕೋಶದ ಕುಳಿ) ಮೂಲಕ ಹೊರಬರಲು ಸಹಾಯವಾಗುತ್ತದೆ.

೨.ನಿಮ್ಮ ವಾಸನೆ ಶಕ್ತಿ ಹೆಚ್ಚುತ್ತದೆ

ಗರ್ಭಾವಸ್ಥೆಯಲ್ಲಿ, ನನ್ನ ವಾಸನೆ ಗ್ರಹಿಸುವಿಕೆ ಜ್ಞಾನ ತುಂಬಾ ಸೂಕ್ಷ್ಮವಾಗಿದೆ, ನನ್ನ ಪತಿ ನನಗೆ ಯಾವುದೊ ಶಕ್ತಿ ಬಂದಿದೆ ಎಂದು ಭಾವಿಸಿದ್ದರು. ಇದಕ್ಕೆ ಕಾರಣ, ನಿಮ್ಮ ದೇಹದಲ್ಲಿ ಅಧಿಕವಾಗಿ ಬಿಡುಗಡೆಯಾಗುವ ಈಸ್ಟ್ರೋಜೆನ್, ಮಾನವ ಕೊರಿಯಾನಿಕ್ ಗೋನಾಡೋಟ್ರೋಪಿನ್(HCG).

೩.ಎತ್ತರಕ್ಕಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಅವಳಿ ಮಕ್ಕಳಾಗುವ ಸಾಧ್ಯತೆ ಹೆಚ್ಚು

ಡಾಕ್ಟರ್ ಗ್ಯಾರಿ ಸ್ಟೈನ್ಮ್ಯಾನ್ 2006 ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಎತ್ತರಕ್ಕಿರುವ ಮಹಿಳೆಯರು ಅವಳಿ ಮಕ್ಕಳನ್ನು ಹೊಂದಿರುತ್ತಾರಂತೆ.

೪.ಅಮ್ಮನಿಗಿಂತ ಮೊದಲು ಮಗುವು ಪೌಷ್ಟಿಕಾಂಶವನ್ನು ತೆಗೆದುಕೊಳ್ಳುತ್ತದೆ

ಗರ್ಭಾವಸ್ಥೆಯಲ್ಲಿ, ನೀವು ಆಹಾರದ ಮೂಲಕ ತೆಗೆದುಕೊಳ್ಳುವ ಪೌಷ್ಟಿಕಾಂಶಗಳು ಮಗುವಿಗೆ ತಲುಪಿದ ನಂತರ ನಿಮ್ಮನ್ನು ಸೇರುತ್ತವೆ. ನೀವು ಒಂದು ಸಮಯದ ಆಹಾರವನ್ನು ಸೇವಿಸದಿದ್ದರು, ನಿಮ್ಮಲ್ಲಿರುವ ಶೇಖರಣೆಯ ಶಕ್ತಿಯನ್ನು ತಗೆದು ಮಗುವಿಗೆ ಕಳುಹಿಸುತ್ತದೆ, ಅದು ಮಗುವಿನ ಆರೋಗ್ಯವನ್ನು ಕಾಪಾಡಲು. ಆದ್ದರಿಂದ ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಏಕೆ ಸೇವಿಸಬೇಕೆಂಬುದಕ್ಕೆ ಇದೆ ಕಾರಣ.

೫.ನಿಮ್ಮ ಗರ್ಭಾಶಯವು ಸಾಮಾನ್ಯ ಗಾತ್ರಕ್ಕಿಂತ ೫೦೦ ಪಟ್ಟು ಹೆಚ್ಚು ಗಾತ್ರವನ್ನು ಹೊಂದುತ್ತದೆ

ಮಹಿಳೆಯ ದೇಹವು ಊಹಿಸಲಾಗದ ವಿಷಯ. ನಿಮಗೆ ಗೊತ್ತಾ? ಗರ್ಭವು ಅದರ ಸಾಮಾನ್ಯ ಗಾತ್ರಕ್ಕಿಂತ ೫೦೦ ಪಟ್ಟು ಹೆಚ್ಚು ಗಾತ್ರವನ್ನು ಗರ್ಭಾವಸ್ಥೆಯಲ್ಲಿ ಪಡೆಸುಕೊಳ್ಳುತ್ತದೆ. ಜೊತೆಗೆ ಇದು ೫೦ಗ್ರಾಂ ನಿಂದ, ೧ಕೆ.ಜಿ. ಯವರೆಗೆ ತೂಕವನ್ನು ಹೊಂದಿರುತ್ತದೆ. ಹೆರಿಗೆಯಾದ ಬಳಿಕ ಇದು ಕ್ರಮೇಣ ತನ್ನ ಮೊದಲಿನ ಸ್ಥಿತಿಗೆ ಬರುತ್ತದೆ.

Leave a Reply

%d bloggers like this: