ಛಲ ಬಿಡದ ಅಮ್ಮನಿಂದ ಜಗತ್ತಿಗೇ ಬೆಳಕು ಸಿಕ್ಕಿತು!

ಏಳು ವರ್ಷದ ಹುಡುಗನೊಬ್ಬ ಒಂದೇ ಕೋಣೆ ಇದ್ದ, ಯಾವಾಗಲೂ ಸದ್ದಿನಿಂದ ಕೂಡಿರುತ್ತಿದ್ದ, 38 ವಿದ್ಯಾರ್ಥಿಗಳ ಶಾಲೆಗೆ 12 ವಾರಗಳವರೆಗೆ ಹೋದ. ಈ ಶಾಲೆಯಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಿ ಕಲಿಸುವುದರ ಬದಲಿಗೆ, ಚಾಟಿಯಿಂದ ಬೀಸಿ ಕಲಿಸುವುದು ವಾಡಿಕೆ ಆಗಿತ್ತು. ಈ ಹುಡುಗನ ತಲೆ ಸದಾಕಾಲ ಪ್ರಶ್ನೆಗಳಿಂದ ತುಂಬಿರುತ್ತಿತ್ತು ಹಾಗು ಅವನು ಅವುಗಳನ್ನ ಶಿಕ್ಷಕನಿಗೆ ಕೇಳದೆ ಇರುತ್ತಿರಲಿಲ್ಲ. ಅವನಿಗೆ ಉತ್ತರ ಸಮಾಧಾನ ನೀಡಲಿಲ್ಲ ಎಂದರೆ, ಮರುಪ್ರಶ್ನೆಗಳನ್ನ ಕೇಳುತ್ತಲೇ ಇದ್ದ. ಇದು ಆ ವಿದ್ಯಾರ್ಥಿಗೆ ತುಂಬಾ ಅಹಂ ಇದೆ ಎಂದು ಶಿಕ್ಷಕನು ಭಾವಿಸುವಂತೆ ಮಾಡುತ್ತಿತ್ತು. ಆ ವಿದ್ಯಾರ್ಥಿಯ ಸಿಟ್ಟಿನ ಹಾಗು ಬಹಳಷ್ಟು ಕೆಲಸದಿಂದ ತಲೆ ಬಿಸಿ ಮಾಡಿಕೊಂಡಿದ್ದ ಶಿಕ್ಷಕನೊಬ್ಬ ಒಂದು ದಿನ ತನ್ನ ತಾಳ್ಮೆಯನ್ನ ಕಳೆದುಕೊಂಡ. ಈ ವಿದ್ಯಾರ್ತಿಯ ದೊಡ್ಡ ಹಣೆ ಮತ್ತು ಸಾಮಾನ್ಯವಾಗಿ ಆ ವಯಸ್ಸಿನ ಮಕ್ಕಳಿಗೆ ಇರಬೇಕಿದ್ದ ತಲೆಯ ಗಾತ್ರಕ್ಕಿಂತ ಹೆಚ್ಚು ದೊಡ್ಡದಿದ್ದ ತಲೆಯನ್ನ ನೋಡಿ ಆ ಶಿಕ್ಷಕನು ಈ ಅತ್ಯುತ್ಸಾಹಿ ವಿದ್ಯಾರ್ಥಿಯ ಮೆದುಳು ವಿಕಾರಗೊಂಡಿದೆ ಎಂದು ಮತ್ತು ಇವನು ಭ್ರಮಣೆ ಹೊಂದಿದ್ದಾನೆ ಎಂದು ತಿರಸ್ಕರಿಸಿದನು. ಇದರಿಂದ ಕುಪಿತಗೊಂಡ ವಿದ್ಯಾರ್ಥಿಯು ಶಾಲೆಯಿಂದ ಹೊರನಡೆದ.

ಮರುದಿನ ಆತನ ತಾಯಿ ಅವನೊಂದಿಗೆ ಶಾಲೆಗೆ ಬಂದಳು. ಆಕೆಯ ಮನಸಿನಲ್ಲಿ ಶಿಕ್ಷಕನಿಗೆ ಕ್ಷಮೆ ಕೇಳಿ ತನ್ನ ಮಗನನ್ನ ಪುನಃ ಶಾಲೆಗೆ ಸೇರಿಸಿಕೊಳ್ಳಲು ಬೇಡಿಕೊಳ್ಳುವುದು ಇತ್ತು. ಆದರೆ ಆ ಶಿಕ್ಷಕನ ಜಡತ್ವದಿಂದ ಮತ್ತು ಒರಟುತನದಿಂದ ಸಿಟ್ಟಿಗೆದ್ದ ಈ ವಿದ್ಯಾರ್ಥಿಯ ತಾಯಿ “ನನ್ನ ಮಗ ಕಲಿಕೆಯಲ್ಲಿ ಹಿಂದೆ ಬಿದ್ದಿಲ್ಲ, ನಾನು ಒಂದು ಶಿಕ್ಷಕಿ ಆಗಿ ಇದು ನನಗೆ ತಿಳಿದಿದೆ” ಎಂದು ಶಿಕ್ಷಕರ ಮುಖದ ಮೇಲೆ ಹೇಳಿದಳು. ಇಷ್ಟೇ ಅಲ್ಲ, ಆಕೆ “ಆಯ್ತು! ನನ್ನ ಮಗನನ್ನ ಈ ಶಾಲೆಯಿಂದ ಬಿಡಿಸುತ್ತೇನೆ” ಎಂದಳು. ಇದು ಆ ವಿದ್ಯಾರ್ಥಿಯನ್ನೂ ಚಕಿತಗೊಳಿಸಿತು. ಅವನ ಕಿವಿಗಳನ್ನ ಅವನಿಗೆಯೇ ನಂಬಲಾಗಲಿಲ್ಲ. “ನನ್ನ ಮಗನಿಗೆ ನಾನೇ ವಿದ್ಯೆ ತುಂಬುತ್ತೇನೆ” ಎಂದಳು.

ಈ ಕ್ಷಣದಲ್ಲಿ ತನ್ನ ತಾಯಿಯ ಮುಖವನ್ನ ನೋಡಿದ ಅವನು ತನ್ನ ತಾಯಿ ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ಎಂದಿಗೂ ಮೋಸ ಮಾಡುವುದಿಲ್ಲ ಎಂದು ಮತ್ತು ತನ್ನ ತಾಯಿಯನ್ನ ಜಗತ್ತೇ ಮೆಚ್ಚುವಂತೆ ಬೆಳೆಯುವೆ ಎಂಬ ಶಪತ ಮಾಡಿದ.

ಈ ಹುಡುಗನೇ ಇಂದಿಗೂ ನಾವು ಬೆಳಕಿನ ಬಲ್ಬಿನ ಅಡಿಯಲ್ಲಿ ಕೂತು ಕೆಲಸ ಮಾಡುತ್ತಿದ್ದರೆ ನೆನೆಯಬೇಕಾದ ಜಗತ್ತಿನ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಥಾಮಸ್ ಆಲ್ವಾ ಎಡಿಸನ್!

Leave a Reply

%d bloggers like this: