ammandirige-bore-aadaga-maduva-7-kelasagalu

ನಿಮಗೆ ಹೊಸದಾಗಿ ಮಗು ಆಗಿದ್ದರೆ ಅದಕ್ಕಿಂತ ಖುಷಿಯ ವಿಷಯ ಬೇರೊಂದಿಲ್ಲ! ಅದು ನೀವು ಹಿಂದೆಂದೂ ಅನುಭವಿಸಿರದ ಒಂದು ಭಾವನೆ! ಆದರೆ ಅದು ಕೆಲವೊಮ್ಮೆ ಬೋರಿಂಗ್ ಕೂಡ ಆಗಿರುತ್ತದೆ. ನೀವು ಯಾವಾಗಲಾದರೂ ಒಬ್ಬರೇ ಮಗುವಿನ ಜೊತೆ ದಿನವೆಲ್ಲಾ ಕಳೆದರೆ, ಡಯಪರ್ ಚೇಂಜ್ ಮಾಡುವುದು ಬಿಟ್ಟರೆ ಉಳಿದ ದಿನವೆಲ್ಲಾ ಖಾಲಿ ಕೂರಬೇಕು ಎಂದು ಬೇಸರ ಅನಿಸಿರಬಹುದು. ಹೀಗಾಗಿ ನೀವು ನಿಮ್ಮ ಮಗುವಿನೊಂದಿಗೆ ಸಮಯ ಕಳೆಯಲು ಈ ಕೆಳಗಿನಲ್ಲಿ ಕನಿಷ್ಟಪಕ್ಷ ಕೆಲವನ್ನಾದರೂ ಮಾಡಿರುತ್ತೀರ

೧. ಮಗು ಕೇಳಿಸಿಕೊಳ್ಳುತ್ತಿದೆಯೋ ಇಲ್ಲವೋ, ಮನೆಯಲ್ಲಿರುವ ಅಷ್ಟೂ ಮಕ್ಕಳ ಪುಸ್ತಕಗಳನ್ನ ಓದುವುದು.

ಯಾವುದೋ ಒಂದು ಮಕ್ಕಳ ಪೋಷಣೆಯ ಬಗೆಗಿನ ಪುಸ್ತಕ ಹೇಳುವುದು ಏನೆಂದರೆ, ನಾವು ಮಗು ಹುಟ್ಟಿದೊಡನೆ ಅದಕ್ಕೆ ಓದಿ ಹೇಳುವುದನ್ನ ಶುರು ಮಾಡಬೇಕಂತೆ. ಹೆಂಗೋ, ಮನೆಯಲ್ಲಿ ಯಾರು ಇಲ್ಲ, 10 ಘಂಟೆಗಳು ಬೇರೇ ಕಳೆಯಬೇಕು. ಹಾಗಾಗಿ, ಅದೇ ಪಂಚತಂತ್ರ ಕಥೆಯನ್ನೇ ತಿರುಗ-ಮುರುಗ ಏಕೆ ಹೇಳಬಾರದು ಅಲ್ಲವೇ? ಮಗುವಿಗೆ ಅರ್ಥ ಆಗುತ್ತೋ ಬಿಡುತ್ತೋ, ಅದಕ್ಕೆ ತಲೆ ಆದರು ಇನ್ನೂ ನಿಂತಿದೆಯೋ ಇಲ್ಲವೋ, ಯಾರಿಗೆ ಬೇಕು. ನಾವು ಈ ಕಥೆಯಲ್ಲಿ ಬರುವ ಕಾಡುಪ್ರಾಣಿಗಳ ಶಬ್ದಗಳನ್ನ ಮಾಡಿರುವುದರಲ್ಲಿ ಪರಿಣಿತಿ ಹೊಂದಬೇಕು! ಅಷ್ಟೇ!

೨. ಮಗುವನ್ನ ಜೋಲಿಯಲ್ಲಿ ಮಲಗಿಸು. ಜೋಲಿಯಿಂದ ಎತ್ತಿ ಆಡಿಸು. ಮಗುವನ್ನ ಮ್ಯಾಟ್ ಮೇಲೆ ಕೂರಿಸು. ಮ್ಯಾಟ್ನಿಂದ ಎತ್ತಿ ಮತ್ತೆ ಆಡಿಸು.

ಈಗ ಇದನ್ನೇ ದಿನ ಪೂರ್ತಿ 72 ಸರಿ ಮಾಡಿ! ನೀವು ಬೆನ್ನು ನೋವು ಮಾಡಿಕೊಳ್ಳದೆ ಇದ್ದಾರೆ ಈ ಸ್ಪರ್ಧೆಯಲ್ಲಿ ಅದೇ ನಿಮಗೆ ಬಹುಮಾನ.

೩. ಪಕ್ಕದ ಮನೆಯವರ ಜೊತೆ ಮಾತಾಡಲಿಕ್ಕೆ ಎಂದು ಮಗುವನ್ನ ಸೊಂಟದ ಮೇಲೆ ಕೂರಿಸಿಕೊಂಡು ಹೊರಗೆ ಬರುವುದು. ನಂತರ, ಏನೋ ವಾಸನೆ ಎಂದು ನೋಡಿದರೆ ಅಲ್ಲಿ ಮಗು ಆಗಲೇ ಗಲೀಜು ಮಾಡಿಕೊಂಡಿರುವುದು. ತಲೆ ಕೆಟ್ಟು ಎಲ್ಲಿಯೂ ಬೇಡ ಎಂದು ಮನೆಯಲ್ಲೇ ಕೂರುವುದು.

ಮಗುವಿನ ಜೊತೆ ಹೊರ ಹೋಗುವಾಗ ಪಾಲಿಸಬೇಕಾದ ಮೊದಲ ನಿಯಮ ಎಂದರೆ “ಮಗುವನ್ನ ಕರೆದುಕೊಂಡು ಹೊರಗೆ ಹೋಗಬೇಡಿ”! ಎರಡನೇ ನಿಯಮ ಅಂದರೆ “ಹೋಗುತ್ತಾ ಹೋಗುತ್ತಾ ನಿಮಗೆ ಇದು ಅಭ್ಯಾಸ ಆಗುತ್ತದೆ”. ಮೂರನೇ ನಿಯಮ “ನಿಮ್ಮ ಮಗುವು ಅಳದೆ, ಗಲೀಜು ಮಾಡಿಕೊಳ್ಳದೆ ನೀವು ಹೊರಹೋಗಿ ಬರಲು ಯಶಸ್ವೀ ಆದರೆ, ನಿಮಗೆ ನೀವೇ ಶಬಾಶ್ ಎಂದುಕೊಳ್ಳಿ”!

೪. ಕನ್ನಡಿ ಮುಂದೆ ಮಗುವನ್ನ ಹಿಡಿದುಕೊಂಡು ನಿಂತು “ಅಲ್ಲಿ ನೋಡು….ಯಾರಿದ್ದಾರೆ ಅಂತಾ!” ಅಂತ ವಿಚಿತ್ರ ಧ್ವನಿಯಲ್ಲಿ ಹೇಳುವುದು

ನೀವು ನಿಮ್ಮ ಶಾಲೆಯಲ್ಲಿ ಸುಮುಧರ ಸಂಗೀತ ಅಥವಾ ಇನ್ನ್ಯಾವುದೋ ಸಂಗೀತ ಹಾಡಿರಬಹುದು. ಆದರೆ ಇಲ್ಲಿ ನೀವು ಹೆಚ್ಚು ಕಮ್ಮಿ 6-7 ವಿಚಿತ್ರ ಧ್ವನಿಗಳನ್ನ ಮೈಗೂಡಿಸಿಕೊಂಡು ನಿಮ್ಮ ಮಗುವನ್ನ ರಂಜಿಸಬೇಕು.

೫. ಸ್ನಾನದ ಸಮಯ

ಸ್ವಚ್ಛ ಮಾಡುವುದಕ್ಕಿಂತ ಬೇರೇ ಯಾವ ಕೆಲಸ ಹೆಚ್ಚು ಸಮಯ ಕೊಲ್ಲಲು ಸಾಧ್ಯ ಹೇಳಿ. ನೀವು ಸ್ನಾನ ಮಾಡದಿದ್ದರು ನಡೆಯಿತು, ನಿಮ್ಮ ಮಗುವಿಗೆ ಮಾತ್ರ ಲಕಲಕ ಹೊಳೆಯುವಂತೆ ಘಂಟೆಗಟ್ಟಲೆ ಸ್ನಾನ ಮಾಡಿಸಬೇಕು.

೬. ನಿಮ್ಮ ಮಗುವಿನದ್ದು ದಿನಕ್ಕೆ ಒಂದು 250 ಫೋಟೋ ತೆಗೆಯುವುದು

“ಸ್ಟೋರೇಜ್ ಫುಲ್” ಅಂತ ನಿಮ್ಮ ಫೋನು ತೋರಿಸುವವರೆಗೂ ನೀವು ನಿಮ್ಮ ಮಗುವಿನ ಮುದ್ದು ಮುದ್ದು ಫೋಟೊಗಳನ್ನ ಬೇರೇ ಬೇರೇ ಆಂಗಲ್ ಗಳಿಂದ ತೆಗೆದು ನಿಮ್ಮ ಫೋನನ್ನು ತುಂಬಿಸುತ್ತೀರಾ. ಮಗು ಜೋಲಿಯಲ್ಲಿ ಕುಳಿತಿರುವ ಫೋಟೋ, ಮಗು ಸ್ನಾನದ ಟಬ್ ಅಲ್ಲಿ ಕುಳಿತಿರುವ ಫೋಟೋ, ಮಗು ಬೆಡ್ ಮೇಲೆ ಕುಳಿತಿರುವ ಫೋಟೋ, ಅಮ್ಮ-ಮಗು ಸೆಲ್ಫಿ, ಮುದ್ದಾದ ಬಟ್ಟೆಯಲ್ಲಿ ಮಗು ಫೋಟೋ. ಅಯ್ಯೋ, ಕೇಳ್ಬೇಕಾ?!

೭. ಅಗ್ನಿಸಾಕ್ಷಿ ಅಥವಾ ಪುಟ್ಟಗೌರಿ ಮದುವೆ ಸೀರಿಯಲ್ ಒಂದು ಎಪಿಸೋಡ್ ನೋಡುವುದು. ಓಕೆ! ಸುಳ್ಳು ಯಾಕೆ ಹೇಳ್ಬೇಕು, ಒಂದ್ ಎರಡು ಮೂರು ಎಪಿಸೋಡ್ ನೋಡುವುದು.

ನಿನ್ನ ಮಗು ಮಲಗಿದಾಗ, ನೀನು ಮಲಗಿ ರೆಸ್ಟ್ ತಗೋ ಅಂತ ಎಲ್ಲರೂ ಸಲಹೆ ಮಾಡುತ್ತಾರೆ. ಆದರೆ ಆ ಸೀರಿಯಲ್ ಅಲ್ಲಿ ಬರುವ ನಾಯಕ-ನಾಯಕಿಯ ಮೊದಲ ರಾತ್ರಿ ಆಗುವುದಕ್ಕೆ ಅತ್ತೆ ಬಿಟ್ಟಲ ಎಂದು ಅಥವಾ ವಿಪರೀತ ನೋವು ಅನುಭವಿಸುತ್ತಿರುವ ಇನ್ನೊಂದು ಸೀರಿಯಲ್ಲಿನ ಗರ್ಭಿಣಿ ನಾಯಕಿಗೆ ಕೊನೆಗೂ ಡೆಲಿವರಿ ಆಯ್ತಾ ಎಂದು ತಿಳಿದುಕೊಳ್ಳುವುದಕ್ಕಿಂತ ನಿದ್ದೆ, ರೆಸ್ಟ್ ಇವೆಲ್ಲಾ ಏನು ದೊಡ್ಡದು ಅಲ್ಲ ಅಲ್ಲವ? ಸೌಂಡ್ ಸ್ವಲ್ಪ ಕಮ್ಮಿ ಇಟ್ಟು ಮಗು ಎಚ್ಚರಗೊಳ್ಳದಿದ್ದರೆ ಸಾಕು. ಇಲ್ಲ ಎಂದರೆ, ಮತ್ತೆ ಕಥೆ ಪುಸ್ತಕ ತೆಗೆದು ಅದೇ ಕಥೆ ಮತ್ತೆ ಓದಬೇಕು!

Leave a Reply

%d bloggers like this: