ನಿಜ ಹೇಳಬೇಕೆಂದರೆ ಗರ್ಭಧಾರಣೆ ವೇಳೆ ಕೆಟ್ಟ ವಾಸನೆಗಿಂತ ಬೇರೊಂದು ಕೆಟ್ಟ ವಿಷಯ ಇಲ್ಲ. ಅದು ಪಕ್ಕದ ಮನೆಯವರು ಮಾಡುತ್ತಿರುವ ಮಟನ್ ವಾಸನೆ ಇರಬಹುದು ಅಥವಾ ನಿಮ್ಮ ಸಂಗಾತಿಯ ಸೆಂಟಿನ ವಾಸನೆಯೇ ಆಗಿರಬಹುದು. ಕೆಲವೊಂದು ವಾಸನೆಗಳು ನೀವು ಗರ್ಭಿಣಿ ಇಲ್ಲದಿದ್ದರೂ ವಾಕರಿಕೆ ಬರಿಸಬಹುದು. ಆದರೆ ಗರ್ಭಧಾರಣೆ ವೇಳೆ ನಿಮ್ಮ ಮೂಗಿನ ಸೂಕ್ಷ್ಮತೆ ಹೆಚ್ಚುವುದರ ಕಾರಣ ಕೇವಲ ಮೊಸರಿನ ವಾಸನೆ ಬಂದರೂ ನೀವು ಬಾತ್ರೂಮಿನ ಕಡೆ ಓಡಬೇಕಾಗಬಹುದು. ನೀವು ನಿಮ್ಮ ಗರ್ಭಧಾರಣೆ ಎಲ್ಲಾ ಗೂಡು ಬಿಟ್ಟು ಬರದ ಬೆದರಿದ ಸೂಕ್ಷ್ಮ ಹಕ್ಕಿ ಮರಿ ಥರ ಕಳೆಯಬಾರದು ಎಂದರೆ, ನಿಮಗೆ ವಾಸನೆಯು ವಾಕರಿಕೆ ಬಾರಿಸಿದಾಗ ಏನು ಮಾಡಬೇಕು ಎಂಬುದು ಗೊತ್ತಿರಬೇಕು.
ವೈದ್ಯರು ಹೇಳುವ ಪ್ರಕಾರ ಗರ್ಭಿಣಿ ಹೆಂಗಸರಲ್ಲಿ ವಾಸನೆಗೆ ಜಾಸ್ತಿ ಸೂಕ್ಷ್ಮತೆ ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರವಾದ ಉತ್ತರ ಇಲ್ಲದಿದ್ದರೂ, ಗರ್ಭಧಾರಣೆ ವೇಳೆ ಹೆಚ್ಚಾಗುವ ಹಾರ್ಮೋನ್ಗಳಾದ ಹೆಚ್.ಸಿ.ಜಿ (HCG) ಮತ್ತು ಎಸ್ಟ್ರೋಜನ್ (ಮದಜನಕ) ಇದಕ್ಕೆ ಕಾರಣವಿರಬಹುದು. ವೈದ್ಯರಾದ ಫಿಲಿಪ್ಸ್ ಹೇಳುವುದು ಏನೆಂದರೆ ಇದು ಪಾರಂಪರಿಕ ಕೂಡ ಆಗಿರಬಹುದು ಎಂದು. “ಏಕೆಂದರೆ ಮುಂಚೆ ನಮ್ಮ ಬಳಿ ಫ್ರಿಡ್ಜ್ ಇರಲಿಲ್ಲ, ಆಗ ನಮ್ಮ ಮೂಗು ನೈಸರ್ಗಿಕವಾಗಿ ಕೆಟ್ಟ ಅಥವಾ ಕೊಳೆತ ಆಗಾರದ ವಾಸನೆಗಳನ್ನ ದೂರವಿಡಲು ಸಹಾಯ ಮಾಡುತಿತ್ತು. ಈಗ ಅದು ಬದಲಾಗಿ, ನಮಗೆ ಸ್ವಲ್ಪ ವಾಸನೆಯು ಅಹಿತಕರವಿದ್ದರೂ ತಡೆಯಲು ಆಗುವುದಿಲ್ಲ” ಎನ್ನುತ್ತಾರೆ.
ನೀವು ಈ ವಾಕರಿಕೆ ತೊಂದರೆ ನಿವಾರಿಸಲು ಮೊದಲು ಮುಖ್ಯ ಆರೋಪಿಗಳನ್ನ ದೂರವಿಡಿ, ಅವುಗಳು ಯಾವೆಂದರೆ : ಮಾಂಸ, ಮೊಟ್ಟೆ, ಮೀನು, ಕರಿದ ವಸ್ತುಗಳು, ಸಿಗರೇಟ್ ಹೊಗೆ, ಸೆಂಟ್ ಗಳು. ನಿಮಗೆ ಯಾವುದಾದರು ಒಂದು ವಾಸನೆ ಅಹಿತಕರ ಎನಿಸದರೆ ನಿಮಗೆ ಸಾಧ್ಯ ಆದಷ್ಟು ಅದರಿಂದ ದೂರವಿರಿ.
ಶುಂಟಿ ಚಾಕಲೇಟ್ ಮತ್ತು ಟೀ, ಇವೆರೆಡು ನಿಮಗೆ ವಾಕರಿಕೆ ನಿಲ್ಲಿಸುವುದರಲ್ಲಿ ತುಂಬಾನೇ ಉಪಯುಕ್ತ ವಸ್ತುಗಳು.