ನಿಮ್ಮ ಮೊದಲ ಹೆರಿಗೆ ಸಿಸೇರಿಯನ್ ಆಗಿದ್ದು, ಎರಡನೆಯದ್ದು ನಾರ್ಮಲ್ ಆಗಿರಬೇಕಿದ್ದರೆ ಇದು ಓದಿ !

ಸಿಸೇರಿಯನ್ ಮಾಡಿಸಿಕೊಂಡು ಮಗುವಿಗೆ ಜನ್ಮ ನೀಡುವುದು ಎಂದರೆ ಆಟವೇ ಅಲ್ಲ. ಅದು ಕೂಡ ನೀವು ಸ್ವಾಭಾವಿಕ ಹೆರಿಗೆಯೇ ಆಗುವುದು ಎಂದು ಅಂದುಕೊಂಡಿದ್ದು, ಕೊನೆಯ ಕ್ಷಣದಲ್ಲಿ ಸಿಸೇರಿಯನ್ ಆದರಂತೂ ಇನ್ನೂ ಕಷ್ಟ. ಕೆಲವು ಹೆಂಗಸರು ಎರಡನೇ ಬಾರಿಯೂ ಸಿಸೇರಿಯನ್ಗೆ ಮೊರೆ ಹೋದರೆ, ಇನ್ನೂ ಕೆಲವು ಹೆಂಗಸರು ಬೇರೇ ಅನುಭವ ಇಚ್ಚಿಸುತ್ತಾರೆ. ಸ್ವಾಭಾವಿಕ ಹೆರಿಗೆಗಳು ಈಗ ಮತ್ತೆ ಜನಪ್ರಿಯತೆ ಗಳಿಸುತ್ತಿದ್ದು, ಸಿಸೇರಿಯನ್ ಮಾಡಿಸಿಕೊಂಡ ತಾಯಂದಿರು ಕೂಡ ಇದರ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಒಮ್ಮೆ ಸಿಸೇರಿಯನ್ ಆದಮೇಲೆ ಸ್ವಾಭಾವಿಕ ಹೆರಿಗೆ ಸಾಧ್ಯವೇ?

ವೈದ್ಯರಾದ ವಿಷ್ಣು ಮಹಾಜನ್ ಹೇಳುವ ಪ್ರಕಾರ ಇದಕ್ಕೆ ಉತ್ತರ ಬಹಳಷ್ಟು ಅಂಶಗಳ ಮೇಲೆ ಅವಲಂಬಿಸಿದೆ. ಸಿಸೇರಿಯನ್ಗೆ ಕಾರಣ, ಗರ್ಭಧಾರಣೆಗಳ ನಡುವಿನ ಸಮಯ, ಎರಡನೇ ಹೆರಿಗೆ ಉಸ್ತುವಾರಿ ಹೊತ್ತಿರುವ ವೈದ್ಯ ಯಾರು ಎನ್ನುವುದನೆಲ್ಲಾ ಒಳಗೊಂಡಿರುತ್ತವೆ.

ಎರಡನೇ ಹೆರಿಗೆ ಯಾರು ಮಾಡುತ್ತಿದ್ದಾರೆ ಎಂಬುದು ತುಂಬಾನೇ ಮುಖ್ಯ ಆಗುತ್ತದೆ. ಉತ್ತಮ ಕೌಶಲ್ಯ ಹೊಂದಿರುವ ವೈದ್ಯರು ಈ ರಿಸ್ಕ್ ಅನ್ನು ತೆಗೆದುಕೊಳ್ಳಲು ಇಚ್ಚಿಸುತ್ತಾರೆ. ಇದರಲ್ಲಿ ಇರುವ ತುಂಬಾ ಅಪಾಯದ ಕೆಲಸ ಅಂದರೆ ಅದು ಮೊದಲ ಹೆರಿಗೆಯಲ್ಲಿ ಕೊಯ್ದಿರುವ ಅಂಗಾಂಶಗಳನ್ನ ಗರ್ಭಕೋಶದ ಮೇಲ್ಮೈ ಇಂದ ಬೇರ್ಪಡಿಸುವುದು.

ಗರ್ಭಕೋಶ ಒಂದೇ ಕ್ಷಣದಲ್ಲಿ ಆದರು ಹಾನಿಗೆ ಒಳಗಾಗಬಹುದು ಅಥವಾ ಮೆಲ್ಲನೆ ಕೂಡ ಆಗಬಹುದು. ಎರಡು ಸಂದರ್ಭಗಳಲ್ಲೂ ಎಮರ್ಜೆನ್ಸಿ ಉಂಟಾಗುತ್ತದೆ. ಆದರೆ ಇದೊಂದು ತುಂಬಾ ವಿರಳವಾದ, ಹೆಚ್ಚು ಕಾಣಿಸಿಕೊಳ್ಳದ ತೊಂದರೆ.

ಹೀಗಾಗಿ ನೀವು ನಿಮ್ಮ ವೈದ್ಯಕೀಯ ಹಿನ್ನಲೆ ಬಗ್ಗೆ ಅಧ್ಯಯನ ಮಾಡಿ ಹಾಗು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಏನು ಮಾಡಬೇಕೆಂದು ನಿರ್ಧರಿಸಿ.

Leave a Reply

%d bloggers like this: