ಮಗುವು ಬರುವ ಮೊದಲು ತಾಯಿಯಂದಿರು ಮಾಡಬೇಕಾದ ವಿಷಯಗಳು!

ಶರವೇಗದಲ್ಲಿ ಮುನ್ನುಗ್ಗುತ್ತಿರುವ ಈ ಕಾಲದಲ್ಲಿ, ಎಲ್ಲಾ ವಿಷಯಕ್ಕೂ ಯೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಗರ್ಭಿಣಿಯಾಗುವುದು ಪ್ರತಿ ಮಹಿಳೆಗೂ ಸಂತಸದ ವಿಷಯವೇ ಸರಿ. ಆದರೆ ಅವರು ಮಗುವು ಮನೆಗೆ ಬರುವುದಕ್ಕೂ ಮುನ್ನ ಕೆಲವು ಯೋಜನೆಗಳನ್ನು ಮಾಡಿಕೊಂಡಿರುವುದು ಅವರ ಮುಂದಿನ ಭವಿಷ್ಯಕ್ಕೆ ಮತ್ತು ಆರೋಗ್ಯಕರ ಸಂತೋಷದ ಜೀವನಕ್ಕೆ ಈಗಿನಿಂದಲೇ ದಾರಿ ಮಾಡಲು ಸುಲಭವಾಗುತ್ತದೆ.

೧.ನಿಮ್ಮ ಬಜೆಟ್ ಅನ್ನು ಕ್ರಮವಾಗಿರಿಸಿರಿ

ಮಗುವು ಏನನ್ನು ಬಯಸದಿದ್ದರು, ಹಲವು ಬೇಡಿಕೆಗಳೊಂದಿಗೆ ಬರುತ್ತದೆ. ಮಗುವಿನ ಪಾಲನೆ ಪೋಷಣೆ ಹಲವು ವಿಷಯಗಳು ನಿಮ್ಮ ಗಮನಕ್ಕೆ ಬಾರದೆ ಹಣವನ್ನು ಖಾಲಿಮಾಡಿಸುತ್ತದೆ. ನೀವು ಈಗ ಮೊದಲಿನಂತೆ ಹೆಚ್ಚು ಹಣವನ್ನು ವ್ಯಯಮಾಡುವಂತಿಲ್ಲ. ಮಗುವು ಬೆಳೆಯುತ್ತಿದ್ದಂತೆ ನಿಮ್ಮ ಜವಾಬ್ದಾರಿ ಕೂಡ ಹೆಚ್ಚುತ್ತದೆ. ಅವನು/ಳು ಬೆಳೆದಂತೆ ಶಾಲೆಗೆ ಸೇರಿಸಬೇಕು, ನೀವೇ ಒಂದು ಬಾರಿ ಯೋಚಿಸಿ ಈಗಿನ ಶಾಲೆಗಳು ಉತ್ತಮ ಶಿಕ್ಷಣ ನೀಡುವ ಬದಲು ವ್ಯವಹಾರವಾಗಿ ಬದಲಾಗಿದೆ. ನೀವು ಈಗ ಹಣವು ಎಲ್ಲಿ ದುಂದು ವೆಚ್ಚವಾಗುತ್ತಿದೆ ಎಲ್ಲಿ ಉಳಿಸಬಹುದು, ಎಂಬುದರ ಬಗ್ಗೆ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.

೨.ಪೋಷಕತ್ವದ ನಿರೀಕ್ಷೆಯ ಬಗ್ಗೆ ನಿಮ್ಮ ಸಂಗಾತಿಯೊಡನೆ ಸಮಾಲೋಚಿಸಿ

ಮಗುವು ಜನಿಸಿದ ಮೇಲೆ ಅದರ ಪೋಷಣೆ ಮಾಡುವುದು ತಾಯಿಯ ಒಬ್ಬರ ಕೆಲಸವಲ್ಲ, ಗರ್ಭಾವಸ್ಥೆಯ ಮತ್ತು ಹೆರಿಗೆಯ ನೋವಿನಿಂದ ಬಳಲಿರುವ ಅವರು ಮಗುವನ್ನು ಸುಧಾರಿಸಲು ಸಾಹಸವನ್ನೇ ಮಾಡಬೇಕಾಗುತ್ತದೆ. ಆದ್ದರಿಂದ ಅವರಿಗೆ ನಿಮ್ಮ ಬಿಡುವಿನ ಸಮಯದಲ್ಲಿ ಅವರಿಗೆ ವಿಶ್ರಾಂತಿ ನೀಡಿ ಮಗುವನ್ನು ನೋಡಿಕೊಳ್ಳುವುದರ ಬಗ್ಗೆ, ನಿಮ್ಮ ಹೊರಗೆ ಹೋಗಿ ದುಡಿದು ದಣಿದು ಬಂದಿರುವರು ಅವರಿಗೂ ಆಯಾಸವಾಗಿರುತ್ತದೆ, ಆದ್ದರಿಂದ ಇದರ ಬಗ್ಗೆ ಸರಿಯಾಗಿ ಸಮಾಲೋಚಿಸಿ ಇಬ್ಬರು ಅರ್ಥಮಾಡಿಕೊಂಡು ಹೋಗುವುದು ಎಲ್ಲಾ ದೃಷ್ಟಿಯಿಂದ ಎಲ್ಲಾ ತರದಲ್ಲೂ ಒಳ್ಳೆಯದಾಗುತ್ತದೆ.

೩.ನಿಮ್ಮ ಸಹೋದ್ಯೋಗಿ ಮತ್ತು ಬಾಸ್ ಗೆ ನೀವು ಗರ್ಭಿಣಿ ಎಂದು ಹೇಳಿ

ಒಂದು ವೇಳೆ ನೀವು ಕೆಲಸಕ್ಕೆ ಹೋಗುತ್ತಿದ್ದರೆ, ನಿಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಮತ್ತು ಕೆಲ ದಿನಗಳ ರಜೆ ಹಾಕುವುದು, ಗರ್ಭಾವಸ್ಥೆಯಲ್ಲಿ ಆಗಾಗ್ಗೆ ವೈದ್ಯರ ಬಳಿ ಹೋಗುವುದು ಒಳ್ಳೆಯದು, ಆದ್ದರಿಂದ ನಿಮ್ಮ ಪರಿಸ್ಥಿಯನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ, ಅವರಲ್ಲಿ ನೀವು ಗರ್ಭಿಣಿ ಎಂದು ಹೇಳುವುದರಿಂದ ನಿಮ್ಮ ಕೆಲಸದ ಮೇಲೆ ಹೆಚ್ಚು ಒತ್ತಡ ಹೇರುವುದಿಲ್ಲ.

೪.ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ

ಇದು ನಿಮ್ಮ ಮೊದಲ ಮಗು ಅಲ್ಲದಿದ್ದರೆ, ನಿಮ್ಮ ಮಕ್ಕಳೊಂದಿಗೆ ಕಾಲಕಳೆಯಲು ಇದು ಒಳ್ಳೆ ಸಮಯ. ನಿಮ್ಮ ಎಲ್ಲಾ ಬಿಡುವಿನ ಸಮಯವನ್ನು ಅವರೊಂದಿಗೆ ಕಳಿಯಿರಿ, ಮತ್ತು ನಿಮ್ಮ ಸಣ್ಣ ಪುಟ್ಟ ಕೆಲಸಗಳಲ್ಲಿ ಅವರನ್ನು ನಿಮ್ಮ ಜೊತೆ ತೊಡಗಿಸಿಕೊಳ್ಳಿ, ಇದರಿಂದ ಅವರು ಕೆಲಸವನ್ನು ಕಲಿಯುದರ ಜೊತೆಗೆ ಕೆಲವು ಖುಷಿಯ ಕ್ಷಣಗಳನ್ನು ಅನುಭವಿಸುತ್ತಾರೆ.

೫.ನಿಮ್ಮ ಸಂಗಾತಿಯನ್ನು ಮರೆಯದಿರಿ

ಮರೆಯದಿರಿ ಎಂದರೆ ಅವರನ್ನು ನೀವು ಮರೆತು ಬಿಡುವಿರಿ ಅಥವಾ ಅವರ ಕಡೆ ಗಮನ ನೀಡಿ ಎಂದು ಅರ್ಥವಲ್ಲ. ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವದ ನಂತರ ನೀವು ನಿಮ್ಮ ದೇಹದಲ್ಲಿ ಹಲವು ಬದಲಾವಣೆಗಳನ್ನು ಕಾಣಬೇಕು, ಅದರಲ್ಲಿ ಕೆಲವು ವಿಷಯಗಳು ಯಾರ ಬಳಿಯೂ ಹೇಳಿಕೊಳ್ಳುವಂತಹದ್ದಲ್ಲ, ಅಂತಹ ಸಮಯದಲ್ಲಿ ನಿಮ್ಮ ಪತಿಯ ಜೊತೆ ಆ ವಿಷಯದ ಬಗ್ಗೆ ಅವರಿಗೆ ಅರ್ಥವಾಗುವಂತೆ ಹೇಳಿ, ಮತ್ತು ಕೆಲವು ಸಂದರ್ಭಗಳು ಅವರ ಅವಶ್ಯಕತೆ ನಿಮಗೆ ತುಂಬಾ ಪ್ರಾಮುಖ್ಯವಾಗಿರುತ್ತದೆ. ಇದರ ಬಗ್ಗೆ ಅವರಿಗೆ ಮೊದಲೇ ಸಮಾಲೋಚಿಸಿ ಇಂತಹ ಪರಿಸ್ಥಿತಿಗಳು ಎದುರಾಗಬಹುದು ಎಂದು ಹೇಳಿ, ಅದಕ್ಕೆ ತಕ್ಕಂತೆ ಅವರು ಕೂಡ ಮಾನಸಿಕವಾಗಿ ತಯಾರಾಗುತ್ತಾರೆ.

ಮಗುವು ಬರುವ ಮುನ್ನ ನಿಮ್ಮ ಜೀವನ ಇರುವುದಕ್ಕಿಂತ, ಮಗುವು ಬಂದ ಮೇಲೆ ನಿಮ್ಮ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಾಣುತ್ತೀರಾ, ಈ ಬದಲಾವಣೆಗಳು ನಿಮಗೆ ಅತ್ಯಂತ ಖುಷಿಯನ್ನು ನೀಡಲಿ ಎಂದು ನಾವು ಆಶಿಸುತ್ತೇವೆ.

Leave a Reply

%d bloggers like this: