ಮೊದಲ ಬಾರಿ ತಾಯಿಯಾದವರು ಮಾಡುವ ತಪ್ಪುಗಳು! ನೀವು ಮಾಡದಿರಿ

ತಾಯಿಯು ಎಂದು ಸಹ ತನ್ನ ಮಗುವಿನ ವಿಷಯದಲ್ಲಿ ತಪ್ಪಾಗಿ ನಡೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ ಮೊದಲ ಬಾರಿ ತಾಯಿಯಾದವರು ಮಾಡುವ ತಪ್ಪುಗಳು ಎಂದು ಬರೆದಿದ್ದೀರಲ್ಲ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ ಇದು ಅವರು ಮಗುವಿನ ಮೇಲೆ ಇಟ್ಟಿರುವ ಪ್ರೀತಿಯಿಂದ ತಮಗೆ ಅರಿಯದೆ ಅಥವಾ ಏನು ಮಾಡಬೇಕೆಂದು ಗೊತ್ತಿಲ್ಲದೇ ಮಾಡಿರುವ ತಪ್ಪುಗಳು. ಅದು ಹೇಗೆ ಇರಲಿ ಅದರಿಂದ ಮಗುವಿಗೆ ತೊಂದರೆಯಾಗಬಹುದು, ಆದ್ದರಿಂದ ತಾಯಿಯಾಗುತ್ತಿರುವವರು, ಮಹಿಳೆಯರು ಇದನ್ನು ಒಮ್ಮೆ ಓದಲೇಬೇಕು. ಇಲ್ಲಿ ಬರೆದಿರುವುದು ಕೆಲವು ಅಮ್ಮಂದಿರ ಮಾತು.

೧.ಮಗುವು ಅತ್ತಾಗ ತಾನು ಅಳುವುದು

ನನ್ನ ಮೊದಲ ಮಗುವಿನೊಂದಿಗೆ, ಕೆಲವು ಹಾರ್ಮೋನುಗಳ ಬದಲಾವಣೆ ಜೊತೆಗೆ, ನನ್ನ ಮಗುವಿನ ಜೊತೆಗೆ ನಾನು ಅಳುವ ಸಹಾನುಭೂತಿ ಬಂತು. ಮೊದಲ ಬಾರಿ ತಾಯಿಯಾದ ಈಕೆ, ತನ್ನ ಮಗುವು ಏಕೆ ಅಳುತ್ತಿದೆ ಎಂಬುದು ತಿಳಿಯದೆ ಮಗುವಿನ ಜೊತೆ ತಾನು ಅಳಲು ಪ್ರಾರಂಭಿಸಿದಳು. ಒಬ್ಬ ತಾಯಿಯಾಗಿ ಇದು ನಿಮಗೆ ನಿಸರ್ಗವೇ ಏನು ಮಾಡಬೇಕೆಂಬುದನ್ನು ಕಲಿಸುತ್ತದೆ, ಆದರೆ ಯೋಚನೆ ಅಥವಾ ಮೊದಲ ಬಾರಿ ತಾಯಿಯಾಗಿರುವೆ ಏನು ಮಾಡಬೇಕೆಂದು ನನಗೆ ಸರಿಯಾಗಿ ತಿಳಿದಿಲ್ಲವಲ್ಲ ಎಂಬ ಗೊಂದಲಕ್ಕೆ ಬಿದ್ದರೆ, ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಮಗುವು ಅಳಲು ಸಾಮಾನ್ಯ ಕಾರಣ ಹಸಿವು, ಇಲ್ಲದಿದ್ದರೆ, ಮಗುವಿಗೆ ಹೊಟ್ಟೆ ನೋವು ಬಂದಿರಬಹುದು, ಅಥವಾ ಉಷ್ಣವಾಗಿರಬಹುದು. ಹಾಲುಣಿಸಿದ ನಂತರವೂ ಮಗುವು ಅಳುವುದನ್ನು ನಿಲ್ಲಿಸದಿದ್ದರೆ ವೈದ್ಯರ ಬಳಿ ಹೋಗುವುದು ಸೂಕ್ತ.

೨.ಗಾಬರಿಗೊಂಡಿದ್ದೆ

ಮೊದಲ ಬಾರಿ ಮಗುವು ತನ್ನ ಬಾಯಿಯಿಂದ ಹಾಲನ್ನು ಕಕ್ಕಿದಾಗ(ಜಿನುಗಿಸಿಕೊಂಡಾಗ), ಅಥವಾ ತಾನು ಸೇವಿಸಿದನ್ನು ವಾಂತಿ ಮಾಡಿಕೊಂಡಾಗ ನನಗೆ ಮಗು ಏಕೆ ಇಗೆ ಮಾಡುತ್ತಿದೆ ನಾನೇನಾದರೂ ತಪ್ಪು ಮಾಡಿದನೇ ಇದರಿಂದ ಮಗುವಿಗೆ ತೊಂದರೆಯಾಯಿತೇ ಎಂದು ತುಂಬಾ ಹೆದರಿದ್ದೆ. ಆ ನಂತರ ತಿಳಿಯಿತು ಅದು ಮಗುವು ಹಾಲುಕುಡಿಯುವಾಗ ಸರಿಯಾಗಿ ಮೊಲೆಯನ್ನು ಕಚ್ಚಿಲದ್ದರಿಂದ ಬಾಯಿಯಲ್ಲಿ ಹಾಲು ಇತ್ತು ಎಂದು. ಅದು ನನ್ನ ತಾಯಿ ನನಗೆ ತಿಳಿಸಿದ ಮೇಲೆ.

೩.ಸ್ವಲ್ಪ ಅಹಂಕಾರಿಯಾಗಿ ವರ್ತಿಸಿದೆ

೯ ತಿಂಗಳು ಮಗುವನ್ನು ಹೊತ್ತಿಕೊಂಡು ಹೆರಿಗೆಯ ಬಳಿಕ ಮನೆಗೆ ಕರೆತಂದು ಪೋಷಣೆ ಮಾಡುತ್ತಿದ್ದೆ, ಸಾಮಾನ್ಯವಾಗಿ ಮಗುವಾಯಿತೆಂದರೆ ಸಂಭಂದಿಗಳು ನೆರೆಹೊರೆಯವರು ಬಂದು ಮಾತನಾಡಿಸುವುದು ಸಹಜ, ಆದರೆ ನಾನು ಮಗುವನ್ನು ಅವರ ಕೈಯಲ್ಲಿ ನೀಡಲು ಅಸಹ್ಯ ಮತ್ತು ಬೇಸರಗೊಳ್ಳುತ್ತಿದ್ದೆ. ಅದು ಏಕೆ ಎಂದು ನನಗೆ ತಿಳಿದಿಲ್ಲ ಆದರೆ ಅದರಿಂದ ನನ್ನ ಮಗುವನ್ನು ಯಾವಾಗಲು ನಾನೆ ನೋಡಿಕೊಳ್ಳುವ ಪರಿಸ್ಥಿತಿ ಬಂದು ನನಗೆ ಹೆಚ್ಚು ಆಯಾಸವಾಯಿತು. ನನಗೆ ಈಗ ಅದನ್ನು ನೆನಪಿಸಿಕೊಂಡರೆ ಬೇಸರವಾಗುತ್ತದೆ.

೪.ನಾನು ಮಾಡುತ್ತಿರುವುದೆಲ್ಲಾ ತಪ್ಪು ಎಂದು ಭಾವಿಸಿದೆ

ಮೊದಲ ಬಾರಿ ತಾಯಿಯಾದಾಗ ನಾನು ನನ್ನ ಮೇಲೆ ಕಷ್ಟ ಹೇರಿಕೊಂಡಿದ್ದೆ, ನನ್ನ ಮಗು ಕೆಲವೊಮ್ಮೆ ಏಕೆ ಕಿರುಚುತ್ತದೆ, ಮತ್ತೆ ಅಳುತ್ತದೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ, ಮತ್ತು ಮಗುವಿಗೆ ಯಾವಾಗ ಹಸಿವಾಗುತ್ತದೆ, ಹಾಲುಣಿಸುವ ಸಮಯ ಯಾವುದು, ಅದರ ವೇಳಾಪಟ್ಟಿ ಏನು ಯಾವುದು ತಿಳಿದಿರಲಿಲ್ಲ, ನನಗೆ ಈಗ ತಿಳಿಯಿತು ಮೊದಲ ಬರಿ ತಾಯಿಯಾದ ಎಲ್ಲಾ ಮಹಿಳೆಯರು ಇದನ್ನು ಅನುಭವಿಸುತ್ತಾರೆ ಎಂದು.

Leave a Reply

%d bloggers like this: