ಹೆರಿಗೆಯ ಬೆನ್ನು ನೋವಿನ ಬಗ್ಗೆ ಸ್ವತಃ ಅನುಭವಿಸಿದ ತಾಯಿಯರೇ ಹೇಳಿರುವುದನ್ನ ಕೇಳಿದರೆ, ನಿಮಗೆ ಅನುಮಾನಗಳೇ ಇರುವುದಿಲ್ಲ

ಹೆರಿಗೆ ನೋವಿನ ಬಗ್ಗೆ ನೀವು ಓದಿರುತ್ತೀರ, ಕೇಳಿರುತ್ತೀರ. ಆದರೆ ಸಾಮಾನ್ಯ ಆಡು ಭಾಷೆಯಲ್ಲೇ ಹೆರಿಗೆಯ ನೋವು ಹೇಗಿರುತ್ತದೆ ಎಂದು ವಿವರಿಸಿರುವುದು ಬಹುಶಃ ನೀವು ಕೇಳಿರುವುದಿಲ್ಲ. ಇಲ್ಲಿ ಜನ್ಮ ನೀಡಿದ ತಾಯಂದಿರು ಸ್ವತಃ ತಾವೇ ಬಿಚ್ಚಿಟ್ಟ ತಾವು ಅನುಭವಿಸಿದ ಹೆರಿಗೆ ನೋವಿನ ನಿಖರವಾದ ವಿವರಣೆ. ಇದು ನಿಮ್ಮನ್ನ ಭಯ ಪಡಿಸಲು ಹೇಳುತ್ತಿರುವುದಲ್ಲ, ಬದಲಿಗೆ ನೀವು ನಿಮ್ಮ ಮನಸ್ತಿತಿಯನ್ನ ಈಗಲಿಂದಲೇ ಆ ಕ್ಷಣಕ್ಕೆ ಸಿದ್ದಪಡಿಸಲು ಸುಲಭವಾಗಲಿ ಎಂದು.

೧. ಸೌಮ್ಯ

“ಅದು ಹೇಗೆ ಇಟ್ಟು ಅಂದ್ರೆ, ನನ್ನ ಬೆನ್ನಿನ ನರಗಳೆಲ್ಲ ಒಂದಕ್ಕೊಂದು ಸುರುಳಿ ಸುತ್ತಿಕೊಂಡು ಬೇರೇ ಬೇರೇ ದಿಕ್ಕಿನ ಕಡೆ ಜಗ್ಗಿದಂತೆ ಇತ್ತು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ನೀವು ಒಗೆದ ಬಟ್ಟೆಯಿಂದ ನೀರು ಹೊರಗೆ ತೆಗೆಯೋಕೆ ಅದನ್ನ ಹಿಂಡುತ್ತೀರಲ್ಲಾ ಹಾಗೆ! ಆ ರೀತಿ ನನ್ನ ಬೆನ್ನಿನ ನರಗಳಿಗೆ ಆಗುತ್ತಿದೆ ಅನಿಸ್ತಿತ್ತು”.

೨. ಜೆನ್ನಿಫರ್

“ಅಯ್ಯೋ ದೇವ್ರೇ! ನನಗೆ ಯಾರೋ ನನ್ನ ಹೊಕ್ಕಳನ್ನ ನನ್ನ ಬೆನ್ನಿನಿಂದ ಹಿಂದಕ್ಕೆ ಎಳೆಯುತ್ತಿದ್ದಾರೆ ಅಂತ ಅನಿಸ್ತು”.

೩. ಭಾವನ

“ನನ್ನ ಬೆನ್ನಿನ ಕೆಳಭಾಗದಲ್ಲಿ, ಯಾರೋ ಒಂದು ಕಬ್ಬಿಣದ ರಾಡ್ ಅನ್ನು ಬಿಸಿ ಮಾಡಿ ಒತ್ತುತ್ತಿರುವಂತೆ ಅನಿಸಿತು. ಹೇಗೆ ಅಂದರೆ ಅವರು ನನ್ನ ಸೊಂಟದ ಒಳಗೆ ಆ ರಾಡ್ ಅನ್ನು ತೂರಿಸುವಂತೆ! ನನ್ನ ಕಾಂಟ್ರಾಕ್ಶನ್ ಜಾಸ್ತಿ ಆದ ಹಾಗೆಲ್ಲ ನನಗೆ ನನ್ನ ಸೊಂಟ ಸೀಳಿ ಹೋಗುತ್ತಿದೆ ಏನೋ ಅನಿಸುತಿತ್ತು”.

೪. ಕೀರ್ತಿ

“ಹೆರಿಗೆ ನೋವು ಅನ್ನೋದನ್ನ ಕೇಳಿದರೆ ಒಂದು ವರ್ಷ ಆದಮೇಲೂ ಈಗಲೂ ನನಗೆ ನಡುಕ ಶುರು ಆಗುತ್ತದೆ. ನನ್ನ ಕಾಲುಗಳು ಮತ್ತು ಬೆನ್ನು ಅನುಭವಿಸಿದ ಹೇಳಲಾಗದಷ್ಟು ನೋವದು. ಅದಾದ ಮೇಲೆ ನನಗೆ ನಾನು ಗಂಟಲು ಕಿತ್ತು ಹೋಗುವ ಹಾಗೆ ಕೂಗುತ್ತಿದ್ದೆ ಅನ್ನುವುದು ಬಿಟ್ಟು ಬೇರೇ ಏನು ನೆನಪಿಲ್ಲ”.

೫. ಸುಪ್ರಿಯಾ

“ಹೇಗಿತ್ತು ಅಂದ್ರೆ, ಈ ಬುಲ್ಡೋಜರ್ ಹೇಗೆ ಕಲ್ಲುಗಳನ್ನ ಪುಡಿ ಪುಡಿ ಮಾಡುತ್ತದೋ, ಹಾಗೇನೆ ಯಾರೋ ಜೆಜ್ಜೋ ಕಲ್ಲಿನಲ್ಲಿ ನನ್ನ ಹಾಕಿ ಜೆಜ್ಜುತ್ತಿರುವಂತೆ ಇತ್ತು”.

೬. ಖುಷಿ

“ಛೆ, ನಾನು ಅದರಷ್ಟು ಕೆಟ್ಟ ನೋವು ಯಾವತ್ತು ಅನುಭವಿಸಿರ್ಲಿಲ್ಲ. ನನಗೆ ಎರಡು ಕಿಡ್ನಿ ಸ್ಟೋನ್ ಆಗಿತ್ತು, ಬೇಕಾದ್ರೆ ಆ ನೋವು ತಡ್ಕೊಳ್ತಿನಿ, ಆದರೆ ಇದಂತೂ ಬೇಡವೇ ಬೇಡ. ನನ್ನ ಬೆನ್ನ ತುದಿಯ ಮೂಳೆ ಹೊಡೆದು ಛಿದ್ರ ಆಗುತ್ತೆ ಅನ್ನೋ ಹಾಗೆ”.

೭. ಸನಾ

“ಹೆರಿಗೆ ಬೆನ್ನು ನೋವು ಹೇಗಿತ್ತು ಅಂದರೆ ನನ್ನ ಬೆನ್ನಿಗೆ ಉಡ ಇರುತ್ತಲ್ಲಾ? ಅದು ಉಗುರು ಹಾಕಿ ಕೀಳುತ್ತಿದ್ದಂತೆ ಅನಿಸ್ತು. ನಾನಂತೂ ನಿದ್ದೆ ಇಂದ ಕಿರಿಚುಕೊಂಡು ಎದ್ದೆ. ಎಷ್ಟು ಜೋರಾಗಿ ಎಂದರೆ ಅಕ್ಕ ಪಕ್ಕದ ವಾರ್ಡ್ನಲ್ಲಿ ಇದ್ದ ಜನರು, ನರ್ಸ್ಗಳು ಓಡಿ ಬಂದರು”.

Leave a Reply

%d bloggers like this: