ಜನನಕ್ಕೂ ಮುನ್ನ ಮಗುವಿನ ಜೀವನ – ಈ ಅತ್ಯದ್ಭುತ ಚಿತ್ರಗಳು ನಿಮಗೆ ತಿಳಿಸುತ್ತವೆ!

ನಮ್ಮ ಜೀವನವನ್ನು ನಾವು ಮೊದಲು ಶುರು ಮಾಡಿದ್ದು, ತಾಯಿಯ ಉದರದೊಳಗೆ, ಆದರೆ ಈಗ ನೀವು ನಿಮ್ಮ ಪುಟ್ಟ ಕಂದಮ್ಮನನ್ನು ನಿಮ್ಮ ಉದರದೊಳಗೆ ಬೆಳೆಸುತ್ತಿರುವಿರಿ, ಇದು ನಿಮಗೆ ಖುಷಿ, ಆಶ್ಚರ್ಯ, ಗೊಂದಲ ಎಲ್ಲವನ್ನು ಜೊತೆಗೆ ತಂದಿರಬಹುದು. ನಿಮ್ಮ ಮಗು ಉದರದೊಳಗೆ ಹೇಗೆ ಇರುತ್ತದೆ, ಏನು ಮಾಡುತ್ತದೆ ಮುಂತಾದ ಅದ್ಭುತ ವಿಷಯಗಳನ್ನು ಚಿತ್ರದ ಮೂಲಕ ನೋಡಿ ಕಣ್ತುಂಬಿಕೊಳ್ಳಿ.

ಗರ್ಭ ಫಲಿಸಿದ ೪ ದಿನಗಳ ನಂತರ

ಏನಿದು? ನೋಡಲು ಚೆಂಡಿನಂತೆ ಇದೆ? ಇದು ಮಾನವನೇ?

ಹೌದು!, ಇದು ಜೀವ ಮತ್ತು ಇದು ಜೀವಂತವಾಗಿದೆ. ಇದನ್ನು ಯುಗ್ಮಜ ಎಂದು ಕರೆಯುತ್ತಾರೆ, ಇದು ಈಗಾಗಲೇ ಲಿಂಗ ಮತ್ತು DNA ಅನ್ನು ಹೊಂದಿದೆ, ಮತ್ತು ಇದು ಮುಂದಿನ ೯ ತಿಂಗಳು ಭ್ರೂಣ ಶಿಶುವಾಗಲು ಸಹಾಯಮಾಡುತ್ತದೆ.

೫-೬ ವಾರಗಳ ಗರ್ಭಾವಸ್ಥೆಯಲ್ಲಿ

ಈ ಸಮಯದಲ್ಲಿ ಮಗುವು ಜನಿಸದಾಗ ಇರುವ ಒಂದನೇ ನಾಲ್ಕು ಭಾಗದಷ್ಟು ಮಾತ್ರ ಗಾತ್ರವನ್ನು ಹೊಂದಿರುತ್ತದೆ, ಆದರೂ, ಶಿಶುವಿನಲ್ಲಿ, ಬಾಯಿ, ಕಿವಿ, ಮೂಗು ಬೆಳೆಯಲು ಶುರುಮಾಡಿರುತ್ತವೆ. ಮಗುವಿನ ಹೃದಯ ನಿಮಿಷಕ್ಕೆ ೧೦೦ ಬಾರಿ ಬಡಿಯುತ್ತಿರುತ್ತದೆ. ಇದು ನಿಮ್ಮ ಹೃದಯ ಬಡಿತಕ್ಕಿಂತ ಎರಡು ಪಟ್ಟು, ಇದರ ಅರ್ಥ ಮಗುವಿನ ದೇಹದಲ್ಲಿ ಹೃದಯದಿಂದ ರಕ್ತ ಸಂಚಲನ ಶುರುವಾಗಿದೆ ಎಂದು.

೭ ನೇ ವಾರದ ಗರ್ಭಾವಸ್ಥೆಯಲ್ಲಿ

೧೦ನೇ ವಾರದ ಗರ್ಭಾವಸ್ಥೆಯಲ್ಲಿ

ಕಿಡ್ನಿ, ಕರಳು, ಮೆದುಳು ಮತ್ತು ಲಿವರ್ ಸೇರಿದಂತೆ ದೇಹದ ಎಲ್ಲಾ ಭಾಗಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿರುತ್ತವೆ. ಕೈ ಕಾಲುಗಳನ್ನು ಆಡಿಸಲು ಶುರು ಮಾಡುತ್ತದೆ.

೧೨ನೇ ವಾರದಲ್ಲಿ

ತನ್ನ ದೇಹದ ಅಂಗಗಳನ್ನು ಆಡಿಸಲು ಪ್ರಾರಂಭಿಸುವ ಸಮಯ ಇದು, ಈ ಸಮಯದಲ್ಲಿ ಮಗುವು ಉದರದೊಳಗೆ ಆಡುತ್ತಿರುವುದು ನಿಮಗೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ.

೧೬ನೇ ವಾರದಲ್ಲಿ

ಮಗುವಿನ ಕೂದಲು ಮತ್ತು ಕಾಲಿನ ಉಗುರು ಬೆಳೆಯಲು ಪ್ರಾರಂಭಿಸುತ್ತದೆ. ಮಗುವಿನ ಹೃದಯ ಪ್ರತಿ ದಿನ ೨೩ ಲೀಟರ್ ರಕ್ತವನ್ನು ಪಂಪ್ ಮಾಡಲು ಶುರುಮಾಡುತ್ತದೆ.

೧೮ – ೨೦ ನೇ ವಾರಗಳು

ತನ್ನ ಹೆಬ್ಬೆರಳನ್ನು ಚೀಪಲು ಪ್ರಾರಂಭಿಸುತ್ತದೆ.

೬ ತಿಂಗಳು

ಮಗುವು ಈಗ ಹೊರಗಿನ ಶಬ್ದಗಳನ್ನು ಕೇಳಿಸಿಕೊಳ್ಳುತ್ತದೆ. ಮಗುವಿನ ನಾಡಿ ಮಿಡಿತ ಕೂಡ ಹೆಚ್ಚಾಗುತ್ತದೆ.

೬- ೭ ತಿಂಗಳು

೮ ತಿಂಗಳು

ಮಗುವು ಈಗ ತಾಯಿಯ ಧ್ವನಿಯನ್ನು ಆಲಿಸಬಲ್ಲದು. ಇದು ಈಗಲೇ ನೋಡಲು ಮುದ್ದಾಗಿ ಕಾಣಿಸುತ್ತಿರುತ್ತದೆ.

ಇಂದಿನಿಂದ ನಿಮ್ಮ ಮಗುವನ್ನು ನಿಮ್ಮ ಕೈಯಲ್ಲಿ ಇರಿಸಿಕೊಳ್ಳಲು ನೀವು ಕಾಯಬಹುದು, ಮತ್ತು ಅತಿಶೀಘ್ರದಲ್ಲೇ ನಿಮ್ಮ ಮಗು ನಿಮಗೆ ನೀವು ಎಂದು ಮರೆಯಲಾಗದ ತನ್ನ ಮೊದಲ ಸ್ಪರ್ಶ ನೋಟವನ್ನು ನೀಡುತ್ತದೆ.

Leave a Reply

%d bloggers like this: