ಮಗು ಹಾಲು ಜಿನುಗಿಸಿಕೊಳ್ಳಲು(ಕಕ್ಕುವುದಕ್ಕೆ) ಕಾರಣ

ಮಗು ಹಾಲು ಜಿನುಗಿಸಿಕೊಳ್ಳುವುದು(ಹಾಲನ್ನು ಬಾಯಿಯಿಂದ ಹೊರಹಾಕುವುದು) ಸಾಮಾನ್ಯ, ಆದರೆ ಇದು ಪೋಷಕರಿಗೆ ನೋವಿನ ವಿಷಯವಾಗಿ ಕಾಡಬಹುದು. ಇದಕ್ಕೆ ಕೆಲವು ಕಾರಣಗಳಿವೆ, ಮತ್ತು ನಿಭಾಯಿಸುವುದು ಕೂಡ ಸುಲಭ. ಇದನ್ನು ತಿಳಿಯಲು ಮುಂದೆ ಓದಿ.

ಏಕೆ ಮಗು ಹಾಲನ್ನು ಜಿನುಗಿಸಿಕೊಳ್ಳುತ್ತದೆ?

ಮಗುವಿನ ಹೊಟ್ಟೆಯ ಮೇಲೆ ಇರುವ ಕವಾಟವು(ಕೀಲು) ಸಂಪೂರ್ಣವಾಗಿ ಬೆಳವಣಿಗೆ ಆಗಿರುವುದಿಲ್ಲ, ಅದು ಇನ್ನು ಬೆಳವಣಿಗೆಯ ಹಂತದಲ್ಲಿರುತ್ತದೆ, ಮತ್ತು ಕೆಲವೊಮ್ಮೆ ಸರಿಯಾಗಿ ಮುಚ್ಚಿಕೊಂಡಿರಲಿಲ್ಲ ಅಂದರೆ ಹಾಲು ಹಿಮ್ಮುಖವಾಗಿ ಮಗುವಿನ ಬಾಯಿಯಿಂದ ಹೊರಬರುತ್ತದೆ.

ಇದು ಸಾಮಾನ್ಯವಾಗಿ ಮಗುವಿನ ೬ ರಿಂದ ೧೨ ತಿಂಗಳ ಒಳಗಡೆ ನಿಂತುಹೋಗುತ್ತದೆ. ಇದು ಶಿಶುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವಿಷಯ ಮತ್ತು ಇದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ.

ಕೆಲವೊಮ್ಮೆ ಹಾಲು ಮಗುವಿನ ಬಾಯಿಯಿಂದ ಹಾಗೆ ಆಚೆ ಬರುತ್ತದೆ, ಮತ್ತು ಕೆಲವೊಮ್ಮೆ ಉದರದಿಂದ ಗಂಟಲಿನ ತನಕ ಬಂದು ಮತ್ತೆ ಉದರಕ್ಕೆ ಹೋಗುತ್ತದೆ.

ಇದಕ್ಕೆ ಇನ್ನೊಂದು ಕಾರಣ ಎಂದರೆ, ಮಗುವು ಸರಿಯಾಗಿ ನಿದ್ರೆ ಮಾಡದಿರುವುದು, ಹೆಚ್ಚು ಹಾಲನ್ನು ಸೇವಿಸಿರುವುದು, ಸರಿಯಾಗಿ ಜೀರ್ಣವಾಗದಿರುವುದು, ಅಥವಾ ಸರಿಯಾಗಿ ಹಾಲುಣಿಸದಿರುವುದು.

ಹೆಚ್ಚು ಮಕ್ಕಳು ಇದರಿಂದ ಯಾವುದೇ ತೊಂದರೆಯನ್ನು ಅನುಭವಿಸಿಲ್ಲ, ಮತ್ತು ಎಲ್ಲರಂತೆ ಸಾಮಾನ್ಯವಾಗಿ ತಮ್ಮ ಬೆಳವಣಿಗೆಯನ್ನು ಹೊಂದಿದ್ದಾರೆ. ಆದರೆ ಅದರಿಂದ ತೊಂದರೆ ಎಂದರೆ ನೀವು ಅದನ್ನು ಶುಚಿಗೊಳಿಸಬೇಕು, ನಿಮ್ಮ ದೈನಂದಿನ ಕೆಲಸದ ಜೊತೆಗೆ ಸೇರ್ಪಡೆಯಾಗುವ ಮತ್ತೊಂದು ಕೆಲಸವಷ್ಟೇ.

ಮಗುವು ಹಾಲನ್ನು ಜಿನುಗಿಸುಕೊಳ್ಳುವುದು ವಾಂತಿಗಿಂತ ವಿಭಿನ್ನವಾಗಿದೆ(ಅಂದರೆ ವಾಂತಿ ಮಾಡುವುದು ಮತ್ತು ಹಾಲು ಜಿನುಗಿಸಿಕೊಳ್ಳುವುದು ಎರಡು ಬೇರೆ ಬೇರೆ ಅಥವಾ ವ್ಯತ್ಯಾಸವಿದೆ). ವಾಂತಿ ಎಂದರೆ (ಮಗುವಿನ) ಹೊಟ್ಟೆಯಲ್ಲಿರುವುದನ್ನು ಬಲವಂತವಾಗಿ ಖಾಲಿ ಮಾಡುವುದು.

ಮಗು ಹಾಲು ಜಿನುಗಿಸಿಕೊಂಡಾಗ ನೀವು ಏನು ಮಾಡಬೇಕು?

೧.ಮಗುವಿಗೆ ಹಾಲುಣಿಸುವಾಗ ಗಾಳಿ ಬಿಸುವಂತೆ ನೋಡಿಕೊಳ್ಳಿ, ಅಥವಾ ಬೀಸಣಿಕೆಯಲ್ಲಿ ನಿಧಾನವಾಗಿ ಆಗಾಗ್ಗೆ ಗಾಳಿ ಬಿಸಿ ಮತ್ತು ಹಾಲುಣಿಸಿದ ನಂತರ ಮಗು ಎತ್ತಿಕೊಂಡು ಅಲ್ಲೇ ಸ್ವಲ್ಪ ನಡೆದಾಡಿ.

೨.ಹಾಲುಣಿಸಿದ ಮೇಲೆ ಮಗುವನ್ನು ನಿಮ್ಮ ತೊಡೆಯ ಮೇಲೆ ಕುರಿಸಿಕೊಳ್ಳಿ ಅಥವಾ ಶಿಶುವನ್ನು ಸ್ವಲ್ಪ ಸಮಯ ಕುಳಿತುಕೊಳ್ಳಲು ಬಿಡಿ.

೩.ಮಗುವಿನ ತಲೆಯ ಭಾಗ ಸ್ವಲ್ಪ ಮೇಲೆ ಎತ್ತುವಂತೆ ದಿಂಬು ಕೊಡಿ ಅಥವಾ ಮಗುವು ಎಚ್ಚರವಾಗಿದ್ದರೆ ಸ್ವಲ್ಪ ಸಮಯ ಕುಳಿತುಕೊಳ್ಳಲು ಬಿಡಿ.

ನೀವು ಚಿಂತಿಸುತ್ತಿದರೆ ಅಥವಾ ನಿಮ್ಮ ಮಗು ಇದನ್ನು ಮಾಡಿದರೆ ವೈದ್ಯರನ್ನು ಭೇಟಿ ಮಾಡಿ

೧.ತೂಕವನ್ನು ಪಡೆದುಕೊಳ್ಳುತ್ತಿಲ್ಲ ಅಥವಾ ಸ್ವಲ್ಪ ತೂಕವನ್ನು ಮಾತ್ರ ಪಡೆದಿದೆ ಎಂದರೆ

೨.ಮಗುವು ನೋವು ಅನುಭವಿಸುತ್ತಿದೆ ಎಂದು ಭಾವಿಸಿದರೆ(ಅಥವಾ ನೋವು ಕಂಡರೆ)

೩.ಹೆಚ್ಚು ಬಾರಿ ಹಾಲು ಜಿನುಗಿಸಿಕೊಂಡರೆ ಅಥವಾ ಪದೇ ಪದೇ ಜಿನುಗಿಸಿಕೊಂಡರೆ

೪.ಹಸಿರು ಬಣ್ಣದಲ್ಲಿ ವಾಂತಿ ಮಾಡಿಕೊಂಡರೆ.

ಈ ಸಮಯದಲ್ಲಿ ನಿಮ್ಮ ಮಗುವನ್ನು ವೈದ್ಯರ ಬಳಿ ತೋರಿಸುವುದು ಮುಖ್ಯ.

Leave a Reply

%d bloggers like this: