ಮದುವೆಯಾಗುವ ಹೆಂಗಸರು ಈ ಕಾರಣಕ್ಕೆ ಕಾಲುಂಗುರ ಧರಿಸಬೇಕು ಎಂಬುದು ನಿಮಗೆ ತಿಳಿದಿಲ್ಲ!

ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ, ವಧುವಿನ ಕಾಲಿಗೆ ವರ, ಕಾಲುಂಗುರ ಹಾಕುವುದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಾಗೆಯೆ ಹೆಣ್ಣಿನ ಕಾಲಿನಲ್ಲಿ ಕಾಲುಂಗುರ ಇದೆ ಎಂದರೆ ಆಕೆಗೆ ಮದುವೆಯಾಗಿದೆ ಎಂದರ್ಥ. ಕಾಲುಂಗುರಗಳನ್ನು ಧರಿಸುವುದರ ಸಂಪ್ರದಾಯವು ಭಾರತದಲ್ಲಿ ವಿವಾಹಿತ ಮಹಿಳೆಯರಿಗೆ ಮಹತ್ತರ ಸಾಮಾಜಿಕ ಮಹತ್ವವನ್ನು ನೀಡುತ್ತದೆ. ಮದುವೆಯಾಗಿರುವುದರ ಸಂಕೇತವಾಗಿ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂನ ಎಲ್ಲಾ ಮಹಿಳೆಯರು ಕಾಲುಂಗುರವನ್ನು ಹಾಕುತ್ತಾರೆ. ಇದನ್ನು ಮಹಿಳೆಯರ ಎರಡು ಕಾಲಿನ ಎರಡನೇ ಬೆರಳಿಗೆ ಹಾಕುತ್ತಾರೆ.

ಇದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?

೧.ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ಹಾಕುವುದು, ಲೈಂಗಿಕ/ಕಾಮಪ್ರಚೋದಕವನ್ನು ಹೊಂದಲು ಸಹಾಯ ಮಾಡುತ್ತದೆ.

೨.ಆಯುರ್ವೇಧದ ಪ್ರಕಾರ ಎರಡನೇ ಬೆರಳಿಗೆ ಕಾಲುಂಗುರ ಹಾಕುವುದು, ಸ್ತ್ರೀ ರೋಗಗಳ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

೩.ಕಾಲ್ಬೆರಳಿಗೆ ಉಂಗುರ ಹಾಕುವುದರಿಂದ, ಅದು ಬೆರಳಿನ ಕೆಲವು ನರಗಳಿಗೆ ಒತ್ತಿದಾಗ ಅದು, ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯವಾಗಿ ಮತ್ತು ಸಮತೋಲನದಿಂದ ಇರಿಸಲು ಸಾಧ್ಯವಾಗುತ್ತದೆ.

೪.ಆಯುರ್ವೇಧದ ಪ್ರಕಾರ ನಿಮ್ಮ ಪ್ರಾಣ ಸಮತೋಲನದಲಿದ್ದರೆ ಮಾತ್ರ ನಿಮ್ಮ ಅರೋಗ್ಯ ಚೆನ್ನಾಗಿರುತ್ತದೆ ಎಂದು ಹೇಳುತ್ತದೆ. ಕಾಲುಂಗುರ ಇದನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬುತ್ತಾರೆ.

೫.ಇದನ್ನು ಎರಡು ಕಾಲ್ಬೆರಳಿಗೆ ಧರಿಸುವುದರಿಂದ, ಮಹಿಳೆಯ ಋತುಚಕ್ರವು ಕ್ರಮಬದ್ಧವಾಗಿ ಸರಿಯಾದ ಸಮಯಕ್ಕೆ ಆಗುವಂತೆ ಮಾಡುತ್ತದೆ, ಮತ್ತು ಇದರಿಂದ ಬೇಗನೆ ಗರ್ಭತಾಳಲು ಸಹಾಯವಾಗುತ್ತದೆ.

೬.ಬೆಳ್ಳಿಯು ಉತ್ತಮ ವಾಹಕವಾಗಿರುವುದರಿಂದ, ಇದು ಭೂಮಿಯಿಂದ ಧ್ರುವ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ದೇಹಕ್ಕೆ ಹಾದುಹೋಗುವಂತೆ ಮಾಡುತ್ತದೆ, ಇದು ಇಡೀ ದೇಹ ವ್ಯವಸ್ಥೆಯನ್ನು ರಿಫ್ರೆಶ್ ಮಾಡುತ್ತದೆ.

ಕಾಲುಂಗುರ ಧರಿಸುವುದು ಎಲ್ಲಾ ರೀತಿಯಲ್ಲೂ ಮಹಿಳೆಯರಿಗೆ ಒಳ್ಳೆಯದು. ಇದು ಅವರ ಕಾಲಿನ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಕಾಪಾಡುವಲ್ಲೂ ಸಹ ಸಹಕಾರಿಯಾಗಿದೆ. ನಮ್ಮ ಪೂರ್ವಜರು ನಮಗೆ ಒಳ್ಳೆಯದನ್ನೇ ಕಲಿಸಿ ಹೋಗಿದ್ದಾರೆ ಎಂಬುದಕ್ಕೆ ಇದೆ ಉದಾಹರಣೆ.

Leave a Reply

%d bloggers like this: