ವಿಡಿಯೋ : ಗರ್ಭದೊಳಗೆ ಒಂದೇ ಕರುಳ ಬಳ್ಳಿಯನ್ನು ಹಂಚಿಕೊಂಡಿರುವ ಅವಳಿ ಶಿಶುಗಳು!

ಗರ್ಭಾವಸ್ಥೆ ಮಹಿಳೆಗೆ ಖುಷಿ ನೀಡುವ ಸಮಯ, ನೀವು ಗರ್ಭಧರಿಸಿರುವಿರಿ ಎಂದರೆ ಅವರಲ್ಲಿ ಎಲ್ಲಿಲ್ಲದ ಖುಷಿ, ಆದರೆ ಈಕೆಗೆ ಅದರ ಎರಡರಷ್ಟು ಹೆಚ್ಚಿನ ಖುಷಿ ಏಕೆಂದರೆ ಈಕೆಯ ಗರ್ಭದೊಳಗೆ ಎರಡು ಮಕ್ಕಳಿವೆ, ಹೌದು ಈಕೆ ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡುವಳು.

ವಿಡಿಯೋದಲ್ಲಿ ಹೇಳಿರುವುದು,

೧೩ನೇ ವಾರದಲ್ಲಿ ಶಿಶುವು ನೋಡಲು ಮಾನವರಂತೆ ಕಾಣುತ್ತದೆ. ಅವರ ಕಣ್ಣುಗಳ ಚಲನೆ ಒಟ್ಟಿಗೆ ಶುರುವಾಗುತ್ತದೆ.

ಅನೇಕ ಗರ್ಭಿಣಿ ಮಹಿಳೆಯರು ತಮ್ಮ ಮೊದಲನೇ ತ್ರೈಮಾಸಿಕದ ಕೊನೆಯ ಅವಧಿಯಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ಗೆ ಒಳಗಾಗುತ್ತಾರೆ.

ಇದರಿಂದ ಮಗುವಿನ ಮೂಲಭೂತ ಬೆಳವಣಿಗೆ ತಿಳಿಯಲು ಸಹಾಯವಾಗುತ್ತದೆ.

ನೋಡಿ ಅಲ್ಲಿ ಎರಡು ಶಿಶುಗಳು ಒಟ್ಟ್ಟಿಗೆ ಇವೆ. ಇಲ್ಲಿ ಗಮನಿಸಿ ಎರಡು ಶಿಶುಗಳಿಗೂ ಒಂದೇ ಕರುಳ ಬಳ್ಳಿ(ಹೊಕ್ಕುಳ ಬಳ್ಳಿ) ಇದೆ. ನೀವು ಸೇವಿಸುವ ಪ್ರತಿ ಆಹಾರವು ಆ ಒಂದೇ ಕರುಳ ಬಳ್ಳಿಯ ಮೂಲಕ ನಿಮ್ಮ ಎರಡು ಮಕ್ಕಳನ್ನು ತಲುಪುತ್ತದೆ.

ಅವಳಿ ಮಕ್ಕಳ ಗರ್ಭದಾರಣೆ ಸ್ವಲ್ಪ ಅಪಾಯದಿಂದ ಕೂಡಿರುತ್ತದೆ. ಒಂದೇ ಕರುಳ ಬಳ್ಳಿಯಿಂದ ಎರಡು ಮಕ್ಕಳಿಗೂ ಎಲ್ಲಾ ಸತ್ವಗಳು ತಲುಪಬೇಕಿರುವುದರಿಂದ ಸಾಮಾನ್ಯವಾಗಿ ಒಬ್ಬರಲ್ಲಿ ಅಥವಾ ಇಬ್ಬರಲ್ಲೂ ದೇಹದ ಅಂಗಗಳ ಬೆಳವಣಿಗೆ ಸರಿಯಾಗಿ ಆಗದಿರಬಹುದು(ಉದಾಹರಣೆಗೆ ಶ್ವಾಸಕೋಶ ಅಥವಾ ಅಂಗಗಳು).

ಅವಳಿ ಮಕ್ಕಳು ಉದರದೊಳಗಿದ್ದರೆ, ಸಾಮಾನ್ಯ ಹೆರಿಗೆ ಮಾಡುವುದು ತುಂಬಾ ತೊಂದರೆಯ ಕೆಲಸ, ವರದಿಗಳ ಪ್ರಕಾರ ೫೦%ಗು ಅಧಿಕ ಗರ್ಭಿಣಿಯರು ಸಿಸೇರಿಯನ್ ಮೂಲಕವೇ ಮಗುವಿಗೆ ಜನ್ಮ ನೀಡಿರುವುದು.

Leave a Reply

%d bloggers like this: