ಈ ಭಾರತೀಯರ ಸಂಪ್ರಾದಾಯಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ನಿಮಗೆ ತಿಳಿದೇ ಇಲ್ಲ!

ಇಡೀ ವಿಶ್ವದಲ್ಲೇ ಹೆಚ್ಚು ಜನಪ್ರಿಯವಾಗಿರುವ ಸಾಂಸ್ಕೃತಿಕ, ಸಂಪ್ರದಾಯ ತನ್ನದೇ ಆದ ಆಚಾರ ವಿಚಾರ ಹೊಂದಿರುವ ಅತ್ಯಂತ ಶ್ರೇಷ್ಠ ದೇಶ ನಮ್ಮ ಭಾರತ. ಭಾರತದಲ್ಲೇ ವಿವಿಧ ಪ್ರಾದೇಶಿಕ ಸ್ಥಳಗಳಿಗೆ ಅನುಗುಣವಾಗಿ ಹಲವು ಸಂಪ್ರದಾಯಗಳಿವೆ, ಅದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ, ಅದು ಸರಿಯೋ ತಪ್ಪೋ ಎಂದು ಈ ಲೇಖನದಲ್ಲಿ ವಿವರಿಸಿದೆ. ನಿಮಗೆ ತಿಳಿದರಬಹುದು ಹಲವು ವಿದೇಶಿಯರು ಸಹ ನಮ್ಮ ಸಂಸ್ಕೃತಿಗೆ ಬೆರಗಾಗಿದ್ದಾರೆ, ಅಚ್ಚರಿ ವ್ಯಕ್ತಪಡಿಸಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಅವರು ಇಷ್ಟ ಪಟ್ಟು ಪಾಲಿಸಲು ಶುರುಮಾಡುತ್ತಿದ್ದಾರೆ.

೧.ಕಿವಿ ಚುಚ್ಚಿ ಓಲೆ ಹಾಕಿಕೊಳ್ಳುವುದು

ಭಾರತದ ಆಯುರ್ವೇದದ ಪ್ರಕಾರ ಕಿವಿ ಚುಚ್ಚಿಸಿ ಓಲೆ ಹಾಕುವುದರಿಂದ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ, ನಿಮ್ಮ ಯೋಚಿಸುವ ಶಕ್ತಿ ಮತ್ತು ಯಾವುದೇ ಸಮಯದಲ್ಲಿ ಸರಿಯಾದ ದೃಢ ನಿರ್ದಾರ ತೆಗೆದುಕೊಳ್ಳಲು ನಿಮ್ಮ ಬುದ್ದಿ ಚುರಕಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಅದಕ್ಕಾಗಿಯೇ ಹುಡುಗಿಯರು ಎಲ್ಲದರಲ್ಲೂ ಮೊದಲು ಬರುವುದು ಅನಿಸುತ್ತದೆ.

೨.ತಿಲಕ

ಹಣೆಯ ಮೇಲೆ ಹುಬ್ಬುಗಳ ನಡುವಿನ ಸ್ಥಳವನ್ನು ಮಾನವನ ದೇಹದಲ್ಲಿ ಒಂದು ಪ್ರಮುಖ ನರ ಬಿಂದು ಎಂದು ಪರಿಗಣಿಸಲಾಗುತ್ತದೆ. ತಿಲಕವು ನಮ್ಮ ದೇಹದಲ್ಲಿರುವ ಶಕ್ತಿ ಕುಗ್ಗಲು ಬಿಡುವಿದಿಲ್ಲ ಎಂದು ನಂಬಲಾಗಿದೆ, ಮತ್ತು ಇದು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ತಿಲಕವನ್ನು ಇಡಲು ಎರಡು ಉಬ್ಬಿನ ಮದ್ಯ ಹಣೆಯ ಮೇಲೆ ಬೆರಳನ್ನು ಅದುಮಿದಾಗ ಅದು ಮುಖದ ನರಗಳಲ್ಲಿ ರಕ್ತವನ್ನು ಸರಾಗವಾಗಿ ಸಂಚಲನ ಮಾಡುವಂತೆ ಮಾಡಿ, ಮುಖದಲ್ಲಿ ಚೇತನವನ್ನು ಹೆಚ್ಚಿಸುತ್ತದೆ.

೩.ಮೆಹಂದಿ

ನೀವು ಗಮನಿಸಿರಬಹುದು ಮನೆಯಲ್ಲಿ ಯಾವುದೇ ಹಬ್ಬ, ಆಚರಣೆ ಅಥವಾ ಕಾರ್ಯಕ್ರಮ ಇದೆ ಎಂದರೆ ಹೆಣ್ಣು ಮಕ್ಕಳು ಮೆಹಂದಿ ಹಾಕಿಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ನೀವು ಅದು ಬರಿ ಅವರ ಸೌಂದರ್ಯ ಹೆಚ್ಚಿಸಲು ಮಾತ್ರ ಎಂದು ಭಾವಿಸಿದರೆ ಅದು ಖಂಡಿತ ತಪ್ಪು.

ಇದು ನಿಸರ್ಗ ನಮಗೆ ಒದಗಿಸಿರುವ ಒಂದು ಅದ್ಭುತ ನೈಸರ್ಗಿಕ ಔಷದಿ, ಇದನ್ನು ಹಾಕಿಕೊಳ್ಳುವುದರಿಂದ ಸಮಾರಂಭಗಳಲ್ಲಿ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಅವರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ದೇಹಕ್ಕೆ ತಂಪು ನೀಡಿ, ನಿಮ್ಮ ಕೋಪ ಕಡಿಮೆ ಮಾಡುವುದರ ಜೊತೆಗೆ ನಿಮ್ಮಲ್ಲಿ ಶಾಂತಿಯನ್ನು ನೀಡುತ್ತದೆ.

೪.ಬಳೆ ತೊಟ್ಟಿಕೊಳ್ಳುವುದು

ಬಳೆಗಳು ಮತ್ತು ನಿಮ್ಮ ಕೈಗಳು ಯಾವಾಗಲು ಘರ್ಷಣೆ ಮಾಡುವುದರಿಂದ ರಕ್ತಸಂಚಲನ ಸರಾಗವಾಗಿ ಮತ್ತು ಸುಲಭವಾಗಿ ಆಗಲು ಸಹಾಯವಾಗುತ್ತದೆ. ಬಳೆಗಳು ವೃತ್ತಾಕಾರವಿರುವುದರಿಂದ ನಮ್ಮ ಚರ್ಮದ ಮೂಲಕ ಹೊರ ಹೋಗುವ ಶಕ್ತಿಯನ್ನು ಮತ್ತೆ ನಮ್ಮ ದೇಹಕ್ಕೆ ಸೇರಿಸುವ ಲಾಭವಾಗುತ್ತದೆ.

೫.ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು

ಭೂಮಿಯು ಒಂದು ಧೈತ್ಯ ಕಾಂತೀಯವಾಗಿದ್ದು, ಮಾನವನ ದೇಹವು ತನ್ನದೇ ಆದ ಕಾಂತಿಯ ಕ್ಷೇತ್ರವನ್ನು ಹೊಂದಿದೆ. ನೀವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ, ನಿಮ್ಮ ದೇಹದ ಕಾಂತಿಯ ಕ್ಷೇತ್ರವು ಪೂರ್ವಕ್ಕೆ ಅಸಮ್ಮಿತವಾಗಿ ಹೃದಯಕ್ಕೆ ತನ್ನ ಕಾರ್ಯ ಮಾಡಲು ಕಷ್ಟವಾಗಬಹುದು ಮತ್ತು ಇದರಿಂದ ರಕ್ತದೊತ್ತಡ ಹೆಚ್ಚುತ್ತದೆ.

Leave a Reply

%d bloggers like this: