ನೀವು ಈ 5 ಕಾರಣಗಳಿಗೆ ರಾತ್ರಿ ನಗ್ನವಾಗಿ ಮಲಗಬೇಕು!

ಮಲಗುವುದು ನಾವು ದಿನದಲ್ಲಿ ಮಾಡುವ ತುಂಬಾ ಮುಖ್ಯವಾದ ಕೆಲಸಗಳಲ್ಲಿ ಒಂದು. ಸರಿಯಾದ ಪ್ರಮಾಣದ ನಿದ್ದೆ ಇಂದ ಆರೋಗ್ಯದ ಮೇಲೆ ಬಹಳಷ್ಟು ಉಪಯುಕ್ತ ಪರಿಣಾಮಗಳಿವೆ ಹಾಗು ನಿದ್ರಾಹೀನತೆ ಅನ್ನುವುದು ಬಹಳಷ್ಟು ದೇಶಗಳಲ್ಲಿ ಗಂಭೀರವಾದ ಸಮಸ್ಯೆ ಆಗಿದೆ. ಆದರೆ, ನಗ್ನವಾಗಿ ಮಲಗುವುದರಿಂದ ಆಗುವ ಸಹಾಯಗಳು ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲವಾದಲ್ಲಿ ಇದನ್ನ ಓದಿ :

೧. ಉತ್ತಮ ಗುಣಮಟ್ಟದ ನಿದ್ದೆ

ನಗ್ನವಾಗಿ ಮಲಗಿಕೊಳ್ಳುವುದರಿಂದ ಆಗುವ ಉಪಯೋಗ ಎಂದರೆ ಅದು ನಿಮ್ಮ ದೇಹ ಬೇಗನೆ ತಂಪಾಗುತ್ತದೆ ಹಾಗು ನಿಮ್ಮ ಮೆದುಳಿಗೆ ಬೇಕಿರುವ ತಾಪಮಾನವನ್ನ ದೇಹವು ಬೇಗನೆ ತಲುಪುತ್ತದೆ. ನಿಮ್ಮ ದೇಹದ ಉಷ್ಣಾಂಶ ಜಾಸ್ತಿ ಇದ್ದರೆ, ನಿಮ್ಮ ಮೆದುಳು ಗೊಂದಲಕ್ಕೆ ಒಳಗಾಗಿ ನೀವು ನಿದ್ದೆಯಲ್ಲಿ ಇದ್ದಾಗ ಮಧ್ಯೆ ಎಚ್ಚರಗೊಳ್ಳಬಹುದು. ನೀವು ನಿದ್ದೆ ಮಧ್ಯೆ ಎದ್ದರೆ ಪುನಃ ನಿದ್ದೆಗೆ ಜಾರಬಹುದು, ಆದರೆ ಅದು ಗಾಢವಾದ, ನಿರ್ಲಿಪ್ತ ನಿದ್ದೆ ಆಗಿರುವುದಿಲ್ಲ. ನಮ್ಮ ಮೆದುಳಲ್ಲಿ ನೆನಪನ್ನ ಕೂಡಿಸಿ ಇಡುವುದಕ್ಕೆ ಮತ್ತು ದೇಹದ ಕೋಶಗಳ ರಿಪೇರಿಗೆ ಬೇಕಾಗಿರುವುದು ಗಾಢ ನಿದ್ದೆ.

೨. ವೀರ್ಯದ ಗುಣಮಟ್ಟ ಕಾಯ್ದುಕೊಳ್ಳಲು

ವ್ರುಷಣಗಳನ್ನ ಹೆಚ್ಚಿನ ಉಷ್ಣಾಂಶದಲ್ಲಿ ಇರಿಸುವ ಅಥವಾ ತುಂಬಾ ಬಿಸಿಲಿಗೆ ತೆರೆದುಕೊಳ್ಳುವ ಉದ್ಯೋಗಗಳಲ್ಲಿ ಇರುವ ಅಥವಾ ಬಿಗಿಯಾಗಿರುವ ಒಳಉಡುಪು ಧರಿಸುವ ಗಂಡಸರಲ್ಲಿ ಇತರರಿಗಿಂತ ಕಡಿಮೆ ಗುಣಮಟ್ಟದ ವೀರ್ಯವನ್ನ ಹೊಂದಿರುತ್ತಾರೆ. ಇತರರಿಗಿಂತ ಇವರ ವೀರ್ಯದಲ್ಲಿ ಡಿ.ಎನ್.ಎ ಅಸ್ವಸ್ಥತೆ 25% ಹೆಚ್ಚು ಇರುತ್ತದೆ.

೩. ರಕ್ತದೊತ್ತಡದ ಇಳಿಕೆ

ಸಂಗಾತಿಯೊಂದಿಗೆ ನಗ್ನವಾಗಿ ಮಲಗಿಕೊಳ್ಳುವುದು ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಹೆಚ್ಚಿಗೆ ಮಾಡುತ್ತದೆ ಹಾಗು ಇದು ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು. ಚರ್ಮ-ಚರ್ಮ ಸ್ಪರ್ಶವು ಮೆದುಳಿಗೆ ಉದ್ವೇಗ ನೀಡುತ್ತದೆ, ಇದು ಆಕ್ಸಿಟೋಸಿನ್ ಬಿಡುಗಡೆಯನ್ನ ಶುರು ಮಾಡುತ್ತದೆ. ಇದು ಹೃದಯದ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನ ಬೀರುತ್ತದೆ. ಉದಾಹರಣೆಗೆ ರಕ್ತದೊತ್ತಡ ಇಳಿಕೆ, ಪ್ರತಿರಕ್ಷಣಾ ವ್ಯವಸ್ತೆ ವೃದ್ಧಿಸುತ್ತದೆ ಹಾಗು ಆತಂಕವನ್ನ ಕಮ್ಮಿ ಮಾಡುತ್ತದೆ.

೪. ಚರ್ಮಕ್ಕೆ ಒಳ್ಳೆಯದು

ಕೊನೆಪಕ್ಷ ದಿನದಲ್ಲಿ ಒಮ್ಮೆಯಾದರು ನಿಮ್ಮ ತ್ವಚೆಯು ಮುಕ್ತವಾಗಿ ಉಸಿರಾಡಬಹುದು. ನಿಮ್ಮ ಗುಪ್ತಾಂಗಗಳು, ಕಂಕಳು, ಪಾದಗಳು ದಿನದ ಬಹುತೇಕ ಸಮೇತ ಮುಚ್ಚಿಡಲ್ಪಡುತ್ತವೆ, ಅದೂ ಬೇಸಿಗೆಯಲ್ಲೂ ಕೂಡ. ಹೀಗಾಗಿ ನೀವು ನಿಮ್ಮ ತ್ವಚೆಗೆ ಸ್ವಲ್ಪ ಗಾಳಿ ಸೇವಿಸಲು, ಉಸಿರಾಡಲು ಬಿಡಿ. ಇದು ನಿಮ್ಮನ್ನ ಚರ್ಮದ ಕಾಯಿಲೆಗಳಿಂದ ಕಾಪಾಡುತ್ತದೆ.

೫. ಕಾರ್ಟಿಸೋಲ್ ಅನ್ನು ಮಿತಿಯಲ್ಲಿ ಇಡುವುದು

ಕಾರ್ಟಿಸೋಲ್ ಅನ್ನುವುದು ನಮ್ಮ ದೇಹದಲ್ಲಿನ ಒಂದು ವಿಚಿತ್ರ ಹಾರ್ಮೋನ್. ಇದು ಇರಬೇಕಾದ ಪ್ರಮಾಣದಲ್ಲಿ ಇದ್ದಾರೆ ಏನು ತೊಂದರೆ ಇಲ್ಲ, ಆದರೆ ಇದರ ಪ್ರಮಾಣ ಜಾಸ್ತಿ ಆದರೆ ಆತಂಕ, ಕುರಕಲು ತಿಂಡಿ ತಿನ್ನಬೇಕೆಂದು ಅನಿಸುವುದು, ತೂಕ ಹೆಚ್ಚಳ ಹಾಗು ಮತ್ತಷ್ಟು ತೊಂದರೆಗಳನ್ನ ಅನುಭವಿಸಬಹುದು.

Leave a Reply

%d bloggers like this: