ಬ್ರಾ ತೆಗೆದು ಹಾಕಿ!

ಬಹಳಷ್ಟು ಹೆಂಗಸರಿಗೆ ಕೆಲಸ ಮುಗಿಸಿ ಮನೆಗೆ ಬಂದೊಡನೆ ತಮ್ಮ ಒಳರವಿಕೆಯನ್ನ ತೆಗೆದು ಹಾಕುವುದೇ ಏನೋ ಸಮಾಧಾನ, ಆದರೆ ಇನ್ನೂ ಕೆಲವು ಮಂದಿ ಈ ಒಳರವಿಕೆಯು ತಮ್ಮ ಸ್ತನಗಳನ್ನ ಸ್ಥಿರವಾಗಿ ಮತ್ತು ಆರೋಗ್ಯಕರವಾಗಿ ಇಡುತ್ತದೆ ಎಂಬ ಗ್ರಹಿಕೆಯಲ್ಲೇ ಯಾವಾಗಲೂ ಧರಿಸಿರುತ್ತಾರೆ. ಆದರೆ, ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಹೀಗೆ ಮಾಡುವುದಕ್ಕೆ ಯಾವುದೇ ಸರಿಯಾದ ಪುರಾವೆ ಇಲ್ಲ.

ಫ್ರಾನ್ಸ್ ದೇಶದ ಪ್ರೊಫೆಸರ್ ಜೀನ್-ಡೆನಿಸ್ ರೌವಿಲನ್ ಅವರ ಅಧ್ಯಯನದ ಪ್ರಕಾರ ಹೆಂಗಸರು ಬ್ರಾ ಧರಿಸುವ ಅವಶ್ಯಕತೆಯೇ ಇಲ್ಲ. ಬದಲಿಗೆ ಬ್ರಾಗಳು ಸ್ತನಗಳ ಬೆಳವಣಿಗೆ ಮತ್ತು ನೈಸರ್ಗಿಕವಾದ ಎತ್ತುವಿಕೆಯನ್ನ ಕ್ಷೀಣಿಸುತ್ತವೆ.

ಅಧ್ಯಯನ

18 ರಿಂದ 35 ವರ್ಷದ 330 ಹೆಂಗಸರನ್ನ ಒಳಗೊಂಡಿದ್ದ ಈ ಅಧ್ಯಯನವು, 15 ವರ್ಷಗಳ ಕಾಲದಿಂದ ಈ ಹೆಂಗಸರ ಸ್ತನಗಳ ಗಾತ್ರದ ಲೆಕ್ಕ ಇಡುತ್ತಾ ಬಂದಿದೆ. ಫಲಿತಾಂಶ ತಿಳಿಸುವುದು ಏನೆಂದರೆ, ಬ್ರಾ ಧರಿಸದ ಹೆಂಗಸರಲ್ಲಿ, ವರ್ಷಕ್ಕೆ 7 ಮಿಲಿಮೀಟರ್ ಅಷ್ಟು ಅವರ ಮೊಲೆತೊಟ್ಟುಗಳು ಮೇಲೆತ್ತುವಿಕೆ ಕಂಡಿದೆ ಎಂದು. ಇದರೊಂದಿಗೆ ಬ್ರಾ ಧರಿಸದ ಹೆಂಗಸರು ಕಡಿಮೆ ಸ್ಟ್ರೆಚ್ ಮಾರ್ಕ್ಸ್ ಹೊಂದಿದ್ದಾರೆ. ಅಷ್ಟೇ ಅಲ್ಲ, ಈ ಹೆಂಗಸರ ಸ್ತನಗಳು ಬ್ರಾ ಧರಿಸುವ ಹೆಂಗಸರ ಸ್ತನಗಳಿಗಿಂತ ಹೆಚ್ಚು ಸ್ಥಿರವಾಗಿ ಇದ್ದವು.

ಅಲ್ಲದೆ ಈ ಅಧ್ಯಯನವು ಮತ್ತೊಂದು ಸಾಂಪ್ರಾದಾಯಿಕ ತಿಳುವಳಿಕೆಯನ್ನು ಕೂಡ ಸುಳ್ಳು ಮಾಡಿದೆ. ಅದೇನೆಂದರೆ, ಬ್ರಾ ಧರಿಸದೆ ಇರುವುದು ವಾಸ್ತವದಲ್ಲಿ ಸ್ತನಗಳನ್ನ ಗುರುತ್ವಾಕರ್ಷಣೆ ಇಂದ ಕಾಪಾಡುತ್ತದೆ. ಹೇಗೆ ಎಂದರೆ, ಬ್ರಾ ಧರಿಸದೆ ಇರುವುದು, ಹೆಂಗಸಿಗೆ ಉತ್ತಮ ಭಾವಭಂಗಿ ಕಾಯ್ದುಕೊಳ್ಳಲು ಉತ್ತೇಜಿಸುವುದು. ಅಲ್ಲದೆ ಇದು ಸ್ತನಗಳ ಕೆಳಗಿರುವ ಸ್ನಾಯುಗಳ ಬೆಳವಣಿಗೆಗೆ ಕೂಡ ಉತ್ತೇಜನ ನೀಡುತ್ತದೆ. ಇದು ಸ್ತನಗಳಿಗೆ ಕೆಳಗಿನಿಂದ ಬೆಂಬಲ ಕೊಡುತ್ತದೆ ಮತ್ತು ಮೇಲೆತ್ತುವಿಕೆಗೂ ಸಹಾಯ ಮಾಡುತ್ತದೆ.

ಒಂದು ಹೆಂಗಸು ಹೇಳುವಳು ಆಕೆ ಎರಡು ವರ್ಷಗಳ ಹಿಂದಿನಿಂದ ಬ್ರಾ ಧರಿಸುವುದನ್ನ ಬಿಟ್ಟ ಮೇಲೆ ಆಕೆ ಇವಾಗ ಆರಾಮಾಗಿ ಉಸಿರಾಟ, ಉತ್ತಮ ಭಾವಭಂಗಿ ಮತ್ತು ಕಡಿಮೆ ಬೆನ್ನು ನೋವು ಹೊಂದಿದ್ದಾಳೆ ಎಂದು. ಇದು ಮತ್ತಷ್ಟು ಆಶ್ಚರ್ಯಕರ ಏಕೆ ಅಂದರೆ, ಬ್ರಾಗಳು ಮಾರುಕಟ್ಟೆಗೆ ಬಂದಿದ್ದೆ ಉತ್ತಮ ಭಾವಭಂಗಿ ನೀಡಲು ಮತ್ತು ಬೆನ್ನು,ಸ್ತನಗಳ ನೋವು ಕಮ್ಮಿ ಮಾಡಲು.

Leave a Reply

%d bloggers like this: