ಮಕ್ಕಳ ಗಂಟಲಿನ ಬ್ಯಾಕ್ಟೀರಿಯಾ ಅವರ ಮೂಳೆ ಮತ್ತು ಕೀಲುಗಳಿಗೂ ಸೋಂಕು ತಾಗಿಸಬಹುದು!

ಕೆಲವು ಅಧ್ಯಯನಗಳ ಪ್ರಕಾರ ಮಕ್ಕಳ ಗಂಟಲಿನಲ್ಲಿ ಬ್ಯಾಕ್ಟೀರಿಯಾ ಇದೆ ಎಂದರೆ ಅದರ ಸೋಂಕು ಅವರ ಮೂಳೆ ಅಥವಾ ಕೀಲುಗಳಿಗೆ ತಲುಪುತ್ತಿದೆ ಎಂದು ಅರ್ಥ ಎನ್ನುತ್ತವೆ.

ವಿಜ್ಞಾನಿಗಳು ಹಿಂದೆ ಮಕ್ಕಳಲ್ಲಿ ಹೆಚ್ಚಿನ ಮೂಳೆ ಮತ್ತು ಜಂಟಿ ಸೋಂಕುಗಳ  ತೊಂದರೆಗಳಿಗೆ ಹಲವಾರು ವಿಧದ ಬ್ಯಾಕ್ಟೀರಿಯಾಗಳು ಕಾರಣ ಎಂದು ನಂಬಿದ್ದರು, ಇದರಲ್ಲಿ ಸ್ಟ್ಯಾಫಿಲೋಕೊಕಸ್ ಮತ್ತು ಸ್ಟ್ರೆಪ್ಟೊಕಾಕಸ್ ಎಂಬ ಬ್ಯಾಕ್ಟೀರಿಯಾಗಳು ಕೂಡ ಸೇರಿವೆ.

ಆದರೆ ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಬಳಸಿ ಆ ಸೋಂಕಿಗೆ “ಕಿಂಗೆಲ್ಲ ಕಿಂಗೆ(Kingella Kingae)” ಎಂಬ ಬ್ಯಾಕ್ಟೀರಿಯಾ ಮತ್ತು ಇನ್ನು ಕೆಲವು ಬಗೆಯ ಬ್ಯಾಕ್ಟೀರಿಯಾಗಳು ಕಾರಣ ಎಂದು ಇತ್ತೀಚಿಗೆ ಕಂಡು ಹಿಡಿದಿದ್ದಾರೆ.

ಇದರ ಬಗ್ಗೆ ವಿಜ್ಞಾನಿಗಳು ೬ ತಿಂಗಳಿನಿಂದ ೪ ವರ್ಷದ ವರೆಗಿನ ೭೭ ಮಕ್ಕಳನ್ನು ಕೆನಡಾ ಮತ್ತು ಸ್ವಿಟ್ಜರ್ಲ್ಯಾಂಡ್ ನಲ್ಲಿ ಅಧ್ಯಯನಕ್ಕಾಗಿ ಬಳಸಿಕೊಂಡು ಅದರಲ್ಲಿ ಹೆಚ್ಚಿನವರಿಗೆ ಈ ಸೋಂಕಿನಿಂದಲೇ ಮೂಳೆ ಮತ್ತು ಕೀಲು ತೊಂದರೆ ಅನುಭವಿಸುತ್ತಿರುವರು ಎಂದು ತಿಳಿದು ಬಂದಿದೆ. ಇವರನ್ನು ಬೇರೆ ೩೦೦ ಮಕ್ಕಳ ಜೊತೆ ಹೋಲಿಕೆ ಮಾಡಲಿಗಿದೆ.

ಸುಧಾರಿತ ರೋಗನಿರ್ಣಯದ ವಿಧಾನಗಳನ್ನು ಬಳಸಿಕೊಂಡು ಮಾಡಿದ, ಅಧ್ಯಯನವು 4 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂಳೆ ಅಥವಾ ಕೀಲು ಸೋಂಕಿನಿಂದ ಬಳಲುತ್ತಿರುವ ಮಕ್ಕಳು “ಕಿಂಗೆಲ್ಲ ಕಿಂಗೆ(Kingella Kingae)” ಬ್ಯಾಕ್ಟೀರಿಯಾದಿಂದ ಸೋಂಕಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚು ಮುಖ್ಯವಾಗಿ, ಮೂಳೆ ಅಥವಾ ಕೀಲು ಸೋಂಕು ಹೊಂದಿದ ಮಕ್ಕಳಲ್ಲಿ 70 ಪ್ರತಿಶತದಷ್ಟು ಮಕ್ಕಳು ತಮ್ಮ ಗಂಟಲಿನಲ್ಲಿ ಈ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದಾರೆ ಎಂದು ನಾವು ಅಧ್ಯಯನವು ತಿಳಿಸಿದೆ.

ಮೂಳೆ ಅಥವಾ ಕೀಲು ಸೋಂಕು ಹೊಂದಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಈ ಮಾಹಿತಿಯನ್ನು ಅವರು ಬಳಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಮೂಳೆ ಮತ್ತು ಕೀಲು ಸೋಂಕಿಗೆ ಆಂಟಿಬಯೋಟಿಕ್ ಉತ್ತಮ ಚಿಕಿತ್ಸೆಯಾಗಿದೆ. ಇದು ಗುಣವಾಗಲು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ, ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಅಗತ್ಯವಿರುತ್ತದೆ.

ಮಾನವ ಆರೋಗ್ಯವಾಗಿ ನಡೆದಾಡಲು, ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಮೂಳೆಗಳು ಆರೋಗ್ಯವಾಗಿರುವುದು ತುಂಬಾ ಮುಖ್ಯ. ನಿಮ್ಮ ಮಗುವಿನ ಗಂಟಲಿನ ಸೋಂಕಿನಿಂದ ಅವರ ಮೂಳೆಗೆ ತೊಂದರೆ ಆಗಿ ಅಪಾಯವಾಗುವ ಮೊದಲು ಅವರಿಗೆ ಯಾವುದೇ ಸೋಂಕು ತಗುಲದಂತೆ ನೋಡಿಕೊಳ್ಳಿ.

Leave a Reply

%d bloggers like this: