ಮಗುವು ಬುದ್ದಿವಂತಿಕೆ ಪಡೆಯುವುದು ಅಪ್ಪನಿಂದಲೋ ಅಥವಾ ಅಮ್ಮನಿಂದಲೋ?

ವಿಜ್ಞಾನಿಗಳು ಮಗುವಿಗೆ ಬುದ್ದಿವಂತಿಕೆ ಅನ್ನುವುದು ಬರುವುದು ತಂದೆಯಿಂದಲೋ ಅಥವಾ ತಾಯಿಯಿಂದಲೋ ಎಂದು ಸಂಶೋಧನೆ ಮಾಡಿ, ಈಗ ಒಂದು ನಿಲುವಿಗೆ ಬಂದಿದ್ದಾರೆ.

ಅದು ಏನೆಂದರೆ ತಾಯಿಯ ತಳಿಶಾಸ್ತ್ರ (ಜೆನೆಟಿಕ್ಸ್) ಮಗುವು ಎಷ್ಟು ಬುದ್ಧಿ ಹೊಂದುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ ಹಾಗು ಇದರಲ್ಲಿ ತಂದೆಯ ಪಾತ್ರ ಏನು ಇಲ್ಲ. ಹೆಂಗಸರು ಬುದ್ದಿವಂತಿಕೆಯನ್ನ ಧಾರೆ ಎರೆಯುವ ಸಾಧ್ಯತೆ ಹೆಚ್ಚು, ಏಕೆಂದರೆ ಬುದ್ದಿವಂತಿಕೆಯು X ಕ್ರೋಮೋಸೋಮ್ ಮೇಲೆ ಇರುತ್ತದೆ ಹಾಗು ಹೆಂಗಸರಲ್ಲಿ ಎರಡು X ಕ್ರೋಮೋಸೋಮ್ ಗಳು ಇರುತ್ತವೆ. ಪುರುಷರಲ್ಲಿ ಕೇವಲ ಒಂದು X ಕ್ರೋಮೋಸೋಮ್ ಇರುತ್ತದೆ.

ಆದರೆ ಇದರೊಂದಿಗೆ ವಿಜ್ಞಾನಿಗಳು ಪತ್ತೆ ಹಚ್ಚಿರುವ ಮತ್ತೊಂದು ವಿಷಯ ಎಂದರೆ ಅದು ತಂದೆಯಿಂದ ಪಡೆದುಕೊಂಡ ಅಡ್ವಾನ್ಸ್ ಕಾಗ್ನಿಟಿವ್ (ಮುಂದುವರಿದ ಅರಿವಿನ) ಕಾರ್ಯಗಳು ಕಾಲಕ್ರಮೇಣ ತಾವಾಗಿಯೇ ನಿಷ್ಕ್ರಿಯೆಗೊಳ್ಳುತ್ತವೆ ಎಂದು.

ಕೆಲವೊಂದು “ಷರತ್ತುಬದ್ದ ಜೀನ್ಸ್” ಕೆಲವು ಪ್ರಕರಣಗಳಲ್ಲಿ ಅಮ್ಮನಿಂದ ಮಾತ್ರ ಬಂದರೆ ಅಥವಾ ಕೆಲವು ಪ್ರಕರಣಗಳಲ್ಲಿ ಅಪ್ಪನಿಂದ ಮಾತ್ರ ಬಂದರೆ ಕೆಲಸ ಮಾಡುತ್ತವೆ. ಬುದ್ದಿವಂತಿಕೆ ಅನ್ನುವುದು ಇಂತಹ ಷರತ್ತುಬದ್ದ ಜೀನ್ ಆಗಿದ್ದು, ಇದು ತಾಯಿ ಇಂದ ಬಂದರೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.

ಪ್ರಯೋಗಶಾಲೆಯಲ್ಲಿ ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ, ಹೆಚ್ಚು ತಾಯಿಯ ಜೀನ್ಸ್ ಅನ್ನು ಪಡೆದುಕೊಂಡ ಇಲಿ ಮರಿಗಳಿಗೆ ದೊಡ್ಡ ತಲೆ, ದೊಡ್ಡ ಮೆದುಳು ಇದ್ದರೂ, ದೇಹ ಚಿಕ್ಕದಾಗಿತ್ತು. ಹೆಚ್ಚು ತಂದೆಯ ಜೀನ್ಸ್ ಅನ್ನು ಪಡೆದುಕೊಂಡ ಇಲಿ ಮರಿಗಳಿಗೆ ದೇಹ ದೊಡ್ಡದಿದ್ದರೂ, ಮೆದುಳು ಮತ್ತು ತಲೆ ದೊಡ್ಡದಿತ್ತು.

ಹೀಗಿದ್ದರೂ, ಸಂಶೋಧಕರು ಬುದ್ದಿವಂತಿಕೆಯು ಕೇವಲ ತಳಿಶಾಸ್ತ್ರದ ಮೇಲೆ ಅವಲಂಬಿಸಿಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ. ಕೇವಲ 40 ರಿಂದ 60 ಪರ್ಸೆಂಟ್ ಅಷ್ಟು ಬುದ್ದಿವಂತಿಕೆ ಮಾತ್ರ ವಂಶ ಪಾರಂಪರಿಕವಾಗಿ ಬರುವುದು, ಉಳಿದದ್ದು ಮಗು ಬೆಳೆಯುವ ವಾತಾವರಣದ ಮೇಲೆ ಅವಲಂಬಿಸಿರುತ್ತದೆ.  

Leave a Reply

%d bloggers like this: