ವಿಡಿಯೋ : ನಿಮ್ಮನ್ನು ವಿಸ್ಮಯಗೊಳಿಸುವ ಸಿಸೇರಿಯನ್ ಮೂಲಕ ಮಗುವಿನ ಜನನ

ಇತ್ತೀಚಿನ ದಿನಗಳಲ್ಲಿ ಬಹುತೇಕ ಗರ್ಭಿಣಿಯರು ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡುತ್ತಿರುವುದು ಸಾಮಾನ್ಯವಾಗಿದೆ ಅಥವಾ ನಿಮಗೆ ನಿಮ್ಮ ಆಪ್ತರು ಅಥವಾ ಕೆಲವರು ಸಿಸೇರಿಯನ್ ಮಾಡಿ ಮಗು ತೆಗೆಯುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿ ಸ್ವಲ್ಪ ಗೊಂದಲಕ್ಕೆ/ಆತಂಕಕ್ಕೆ ಒಳಗಾಗಿರಬಹುದು. ನೀವು ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದರೆ ಸಾಮಾನ್ಯ ಹೆರಿಗೆಯಲ್ಲಿ ಮಗುವನ್ನು ಎತ್ತಿಕೊಳ್ಳುವಂತೆ ಮಗು ಜನಿಸಿದ ತಕ್ಷಣ ಮಗುವನ್ನು ಎತ್ತಿಕೊಳ್ಳಲು ಆಗುವುದಿಲ್ಲ. ಏಕೆಂದರೆ ವೈದ್ಯರು ನಿಮ್ಮ ಭಾಗವನ್ನು ಒಲಿಗೆಹಾಕುವಲ್ಲಿ ತೊಡಗಿಸುತ್ತಾರೆ.

ದುರದೃಷ್ಟಕರ ಸಂಗತಿ ಎಂದರೆ ಸಿಸೇರಿಯನ್ ಮೂಲಕ ಮಗು ಜನಿಸಿದ ನಂತರ ತಾಯಿಗೆ ಸ್ವಲ್ಪ ಸಮಯ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅಸ್ಪಷ್ಟವಾಗಿರುತ್ತದೆ.

ಸಾಮಾನ್ಯ ಸಿಸೇರಿಯನ್(ಸಿ-ವಿಭಾಗ)ಕ್ಕಿಂತ ಜೆಂಟಲ್ ಸಿ-ವಿಭಾಗ ಹೇಗೆ ಭಿನ್ನವಾಗಿದೆ?

ಸಾಮಾನ್ಯ ಸಿಸೇರಿಯನ್ ನಲ್ಲಿ ತಾಯಿಯನ್ನು ಹಾಸಿಗೆ ಮೇಲೆ ಮಲಗಿಸಿ ಸಿಸೇರಿಯನ್ ಮಾಡಿ ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ತಾಯಿ ಬಳಿ ನೀಡುತ್ತಾರೆ.

ಜೆಂಟಲ್ ಸಿ-ವಿಭಾಗದಲ್ಲಿ ನೀವು ವೈದ್ಯರನ್ನು ಕೇಳುವ ಮೂಲಕ ನಿಮ್ಮ ಮಗುವಿಗೆ ಜನ್ಮ ನೀಡುವುದನ್ನು ನಿಮ್ಮ ಕಣ್ಣಾರೆ ನೋಡಬಹುದು, ಮತ್ತು ಇಲ್ಲಿ ಘನ ಪರದೆ ಬದಲು ಸ್ಪಷ್ಟ ಪ್ಲಾಸ್ಟಿಕ್ ಡ್ರೇಪ್ಸ್ ಗಳನ್ನು ಬಳಸುತ್ತಾರೆ.

ಸಾಮಾನ್ಯ ಹೆರಿಗೆಯಲ್ಲಿ ಮಗುವು ತಾನಾಗಿಯೇ ಹೊರ ಬರುವಂತೆ ಇದರಲ್ಲು ಮಗುವೇ ಹೊರ ಬರಲು ಸಮಯ ನೀಡಿ ನಿಧಾನವಾಗಿ ಮಗು ಹೊರ ಬರುವಂತೆ ಮಾಡುತ್ತಾರೆ. ಮತ್ತು ಮಗು ಜನಿಸಿದ ತಕ್ಷಣ ನಿಮ್ಮ ಕೈಯಲ್ಲಿ ಮಗುವನ್ನು ನೀಡುತ್ತಾರೆ ಮತ್ತು ನೀವು ಇಚ್ಛೆ ಪಟ್ಟರೆ ನಿಮ್ಮ ಆಪರೇಷನ್ ಮುಗಿಯುವ ತನಕ ಮಗುವನ್ನು ನಿಮ್ಮ ಕೈಯಲ್ಲೇ ಇರಿಸಿಕೊಳ್ಳಬಹುದು.

ನೀವು ನಿಮ್ಮ ಸುತ್ತ ಏನಾಗುತ್ತಿದೆ ಎಂದು ನೋಡುವ ಅವಕಾಶ ಇದೆ, ಒಂದು ವೇಳೆ ನೀವು ದುರ್ಬಲ ಮನಸ್ಸಿನವರಾಗಿದ್ದರೆ ಅಥವಾ ನಿಮ್ಮಲ್ಲಿ ಆತಂಕ ಇದ್ದರೆ, ವೈದ್ಯರು ನೀವು ಸುಮ್ಮನೆ ಕಣ್ಮುಚ್ಚಿ ಮಲಗಲು ಸಲಹಿಸುತ್ತಾರೆ, ಏಕೆಂದರೆ ಇದರಿಂದ ನಿಮ್ಮಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಅದರಿಂದ ನಿಮ್ಮ ಅಥವಾ ಮಗುವಿಗೆ ತೊಂದರೆಯಾಗಬಹುದೆಂದು.

ನೀವು ಈ ಸಮಯದಲ್ಲಿ ಆತಂಕಕ್ಕೆ ಅಥವಾ ಗೊಂದಲಕ್ಕೆ ಒಳಗಾಗದೆ ಇದ್ದರೆ, ಹೆರಿಗೆ ವಿಧಾನವನ್ನು ನೀವೇ ಹೆರಿಗೆ ಕೊಠಡಿಗೆ ಹೋಗುವ ಮೊದಲು ವೈದ್ಯರ ಬಳಿ ಮಾತನಾಡಿ ನೀವೇ ಆಯ್ಕೆ ಮಾಡಿಕೊಳ್ಳಬಹುದು.

Leave a Reply

%d bloggers like this: