ಅಬಾರ್ಶನ್ ಬಗ್ಗೆ ತಿಳಿದಿರಬೇಕಾದ ೫ ಸತ್ಯ ಸಂಗತಿಗಳು

ಸರಿಯಾದ ಯೋಜನೆಯಿಲ್ಲದ ಗರ್ಭವನ್ನು ತಮ್ಮ ಇಚ್ಚೆಯಿಂದ ತಾವೇ ತೆಗೆಸುವುದಕ್ಕೆ ಅಬಾರ್ಶನ್ ಎನ್ನುತ್ತೇವೆ. ಇದನ್ನು ಪೋಷಕರು ಹಲವು ಕಾರಣಗಳಿಂದ ಮಾಡಿಸಿಕೊಳ್ಳುತ್ತಾರೆ, ಅದು ಅವರ ಸ್ವಂತ ಇಚ್ಛೆ, ಆದರೆ ಇದನ್ನು ಮಾಡಿಸಿಕೊಳ್ಳುವ ಮೊದಲು ವಿಜ್ಞಾನ ಇದರ ಬಗ್ಗೆ ಏನು ಹೇಳುತ್ತದೆ ಎಂಬ ಸತ್ಯ ವಿಷಯಗಳನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ.

೧.ಅಬಾರ್ಶನ್ ಸುರಕ್ಷತೆ

ಅಬಾರ್ಶನ್ ನಲ್ಲಿ ಹಲವು ವಿಧಗಳಿವೆ ಅದರಲ್ಲಿ ಸರ್ಜಿಕಲ್ ಅಬಾರ್ಶನ್ ಕೂಡ ಒಂದು, ಇದು ತುಂಬಾ ಅಪಾಯಕಾರಿ ಅಬಾರ್ಶನ್ ವಿಧ, ಮತ್ತು ಇದರಿಂದ ಆರೋಗ್ಯದ ದೀರ್ಘಕಾಲದ ಸಮಸ್ಯೆಗೆ ಗುರಿಯಾಗಬಹುದು ಎಂಬ ಊಹೆ ಸುಳ್ಳು. ಬೇರೆ ವಿಧಗಳಿಗಿಂತ ಮಗುವನ್ನು ತೆಗೆಸಲು ಅಬಾರ್ಶನ್ ಸುರಕ್ಷಿತ ವಿಧಾನ.

೨.ಔಷಧಿ ಅಬಾರ್ಶನ್

ಅಧ್ಯಯನದ ಪ್ರಕಾರ ಔಷಧಿ ಅಬಾರ್ಶನ್ ೯೯% ಸುರಕ್ಷಿತ. ಮತ್ತು ಆರಂಭಿಕ ಗರ್ಭಧಾರಣೆಯನ್ನು ನಿಲ್ಲಿಸುವಲ್ಲಿ/ಗರ್ಭ ತೆಗೆಯುವಲ್ಲಿ ಔಷಧಿ ಅಬಾರ್ಶನ್ ೯೮% ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

೩.ಅಬಾರ್ಶನ್ ಮತ್ತು ಸ್ತನ ಕ್ಯಾನ್ಸರ್

ಅಬಾರ್ಶನ್ ನಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ ಎಂಬ ಸುಳ್ಳು ವರದಿಯಿದೆ.

ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮಾಡಿರುವ ಅಧ್ಯಯನದ ಪ್ರಕಾರ ಅಬಾರ್ಶನ್ ಮತ್ತು ಸ್ತನ ಕ್ಯಾನ್ಸರ್ ಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ ಮತ್ತು ಯಾವುದೇ ಇಂತಹ ಪ್ರಕರಣಗಳು ಅವರಿಗೆ ಲಭ್ಯವಿಲ್ಲ.

೪.ಅಬಾರ್ಶನ್ ಮತ್ತು ಮೆದುಳಿನ ಸಮಸ್ಯೆ

ತಪ್ಪು ಮಾಹಿತಿ: ಅಬಾರ್ಶನ್ ನಿಂದ ಒತ್ತಡ, ಆತಂಕ ಮತ್ತು ಬುದ್ದಿ ಸೀಮಿತವಿಲ್ಲದ ತೊಂದರೆಯನ್ನು ಎದುರಿಸುತ್ತಾರೆ.

ಆದರೆ, ಕಳೆದ ೫ ವರ್ಷಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಇಂತಹ ಯಾವುದೇ ಸಮಸ್ಯೆಯನ್ನು ಅವರು ಕಂಡಿಲ್ಲ, ಆದರೆ ಮಹಿಳೆ ತನಗೆ ಇಚ್ಛೆಯಿಲ್ಲದೆ ಮಾನಸಿಕವಾಗಿ ಕುಗ್ಗಿರುವುದು ಅವರ ದುರ್ಬಲ ಮನಸ್ಥಿತಿ ಕಾರಣ ಎಂದು  ತಿಳಿಸಿದೆ.

ಇದು ಜಾಲತಾಣದಲ್ಲಿ ಸಿಗುವ ವರದಿಯಾದರು, ನಿಮ್ಮ ಮಾನಸಿಕ ಸ್ಥಿತಿ, ಒತ್ತಡ, ಮತ್ತು ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಈ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವರು.

ನೀವು ಅಬಾರ್ಶನ್ ಮಾಡಿಸುವ ಮೊದಲು ಅದರಿಂದ ಆಗುವ ಅಡ್ಡಪರಿಣಾಮಗಳು, ತೊಂದರೆಗಳು ಮತ್ತು ಮುಂದೆ ನಿಮಗೆ ಮಗು ಪಡೆಯುವ ಇಚ್ಛೆ ಇದ್ದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದ ತಿಳಿದುಕೊಳ್ಳಿ.

Leave a Reply

%d bloggers like this: