ಈ 3 ಗಿಡಮೂಲಿಕೆಗಳು ನೀವು ವೇಗವಾಗಿ ಗರ್ಭ ಧರಿಸುವಂತೆ ಮಾಡುತ್ತವೆ!

ಇತ್ತೀಚಿನ ದಿನಗಳಲ್ಲಿ ದಂಪತಿಗಳು ಮಗುವನ್ನ ಪಡೆಯಲು ಕಷ್ಟ ಪಡುತ್ತಿದ್ದಾರೆ ಎಂಬುದು ಸುಳ್ಳಲ್ಲ. ಈ ಗರ್ಭತಾಳುವ ಪ್ರಕ್ರಿಯೆ ಸುಲಭವಾಗಿ ಆಗಬೇಕಾದ ೨೦ರ ಹರೆಯದ ಹುಡುಗಿಯರಲ್ಲೂ ಈ ತೊಂದರೆ ಎದ್ದು ಕಾಣುತ್ತಿದೆ. ಆರೋಗ್ಯಕರ ಸಂತಾನಕ್ಕೆ ಮತ್ತು ಫಲವತ್ತತೆ ಹೆಚ್ಚಿಸಿಕೊಳ್ಳುವುದಕ್ಕೆ ಅತಿಮುಖ್ಯ ಅಂಶವೆಂದರೆ ಅದು ಆಹಾರಪದ್ಧತಿ. ಕೆಲವೊಂದು ಫಲವತ್ತತೆ ಹೆಚ್ಚಿಸುವ ಗಿಡಮೂಲಿಕೆಗಳು ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತವೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರದ ವಿಷಯ. ನಿಮ್ಮ ಫಲವತ್ತತೆಯನ್ನ ಹೆಚ್ಚಿಸಿ ನೀವು ಬೇಗನೆ ಗರ್ಭತಾಳಲು ಸಹಾಯ ಮಾಡುವಂತ ಮೂರು ಗಿಡಮೂಲಿಕೆಗಳ ಬಗ್ಗೆ ಇಲ್ಲಿ ನಾವು ಹೇಳಿದ್ದೇವೆ ಓದಿ :

೧. ತುರಿಕೆ ಸೊಪ್ಪು

ಇದು ಒಂದು ಪೂರ್ಣ ಪ್ರಮಾಣದ ಫಲವತ್ತತೆಯ ಗಿಡಮೂಲಿಕೆ ಆಗಿದ್ದು, ಇದು ಕೇವಲ ನಿಮ್ಮ ಗರ್ಭಕೋಶದ ಪೋಷಣೆ ಮಾಡದೆ, ನಿಮ್ಮ ಕಿಡ್ನಿ ಮತ್ತು ಅಡ್ರಿನಲ್ ಗ್ರಂಥಿಗಳ ಬಲಪಡಿಸುವ ಕಾರ್ಯವನ್ನು ವೃದ್ಧಿಸುತ್ತದೆ. ನೀವು ಕಾಫೀ ಅಥವಾ ಚಹಾ ಸೇವಿಸುತ್ತೀರಾ ಅಂದರೆ ನಿಮಗೆ ಇದು ಸೂಕ್ತವಾದ ಸೊಪ್ಪು.

ಇದರ ಎಲೆಗಳಿಂದ ಮಾಡಿದ ಚಹಾ ಪುಡಿ ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದು ಕ್ಲೋರೊಫಿಲ್ ಅನ್ನು ಅಪಾರ ಪ್ರಮಾಣದಲ್ಲಿ ಹೊಂದಿದ್ದು, ಇದು ಹೆಣ್ಣಿನ ದೇಹವನ್ನ ಗರ್ಭಧಾರಣೆಗೆ ತಯಾರು ಮಾಡುತ್ತದೆ ಮತ್ತು ಒಮ್ಮೆ ಫಳೀಕರಣ ಹೊಂದಿದೊಡನೆ ಭ್ರೂಣವನ್ನ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನೀವು ಸ್ತನ್ಯಪಾನ ಮಾಡುವಾಗಲೂ ಇದರ ಚಹಾವನ್ನ ಸೇವಿಸಿದರೆ, ಇದು ಹಾಲಿನ ಉತ್ಪತ್ತಿಯನ್ನ ವೃದ್ಧಿಸುತ್ತದೆ!

೨. ಕೆಂಪು ಕ್ಲೋವರ್

ಕೆಂಪು ಕ್ಲೋವರ್ ತನ್ನ ಅಪಾರ ಪ್ರಮಾಣದ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಇಂದ ಅತ್ಯುತ್ತಮ ಫಲವತ್ತತೆಯ ಗಿಡಮೂಲಿಕೆ ಆಗಿದೆ. ಈ ಎರಡು ಖನಿಜಗಳು(ಮಿನರಲ್) ಹೆಣ್ಣಿನ ಫಲವತ್ತತೆಯ ಮೇಲೆ ಭಾರೀ ಪರಿಣಾಮ ಬೀರುವಂತವು.

ನಮ್ಮಲ್ಲಿನ ಗ್ರಂಥಿಗಳಿಗೆ  (ಗ್ಲ್ಯಾಂಡ್ಸ್ ) ಬೇಕಾಗಿರುವ ಎಲ್ಲಾ ಅಂಶಗಳು ಈ ಗಿಡದಲ್ಲಿ ಇದೆ. ಇದು ಒಂದು ಅತಿಮುಖ್ಯ ಕ್ಷಾರಗೊಳಿಸುವ(alkanizing) ಗಿಡಮೂಲಿಕೆ ಆಗಿದ್ದು, ಗರ್ಭತಾಳಲು ಬೇಕಾಗಿರುವ ಹಾರ್ಮೋನ್ಗಳ  ಸರಿಯಾದ ಪ್ರಮಾಣದಲ್ಲಿ ಇರಿಸಿ ತುಲನೆಯನ್ನ ಕಾಪಾಡುತ್ತದೆ.

ಅಲ್ಲದೆ ಇದನ್ನ ಪುದೀನಾ ಜೊತೆ ಸೇವಿಸಿದರೆ ಇದು ಒಂದು ಅತ್ಯುತ್ತಮ ಲೈಂಗಿಕ ಪ್ರಚೋದಕ ಆಗಿಯೂ ಕೆಲಸ ಮಾಡುತ್ತದೆ. ಮೊದಲು ಕಾಲು ಲೀಟರ್ ಅಷ್ಟು ನೀರನ್ನು ಚೆನ್ನಾಗಿ ಕುಡಿಸಿ , ನಂತರ ಅದಕ್ಕೆ ಒಂದು ೩೦ ಗ್ರಾಂ ಅಷ್ಟು ಕೆಂಪು ಕ್ಲೋವರ್ ಮತ್ತು ಒಂದು ಸ್ವಲ್ಪ ಪುದೀನಾ ಹಾಕಿ. ಇವೆರೆದನ್ನ ಬೆರೆಸಿದ ಮೇಲೆ, ಕುದಿಸಿದ ನೀರಿನ ಪಾತ್ರೆಯನ್ನ ಯಾವುದರಿಂದಲಾದರೂ ಮುಚ್ಚಿಡಿ. ಒಳಗಿನ ಹವೆ ಹೊರಗೆ ಬರದಂತೆ ಮುಚ್ಚಿ.

ಈ ಮಿಶ್ರಣವು ತಣ್ಣಗಾದಮೇಲೆ ನಿಮಗೆ ಯಾವಾಗ ಬೇಕೋ ಅವಾಗ ಕುಡಿಯಿರಿ. ಉಳಿದಿದ್ದನ್ನು ಗಾಳಿ ಆಡದಂತ ಡಬ್ಬಿಯಲ್ಲಿ ಮುಚ್ಚಿಟ್ಟು, ಫ್ರಿಡ್ಜ್ ಅಲ್ಲಿ ಇಡಿ .

೩. ಕೆಂಪು ರಾಸ್ಪಬೆರಿ

ಕೆಂಪು ರಾಸ್ಪ್ಬೇರಿ ಎಲೆಗಳು, ಅದರಲ್ಲೂ ಕಾಡು ಜಾತಿಯ ಗಿಡದ ಎಳೆಗಳು ಅಪಾರ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತವೆ. ತುರಿಕೆ ಸೊಪ್ಪು ಮತ್ತು ಕೆಂಪು ಕ್ಲೋವರ್ ಅಂತೆಯೇ ಇದು ಕೂಡ ಗರ್ಭಕೋಶಕ್ಕೆ ಟಾನಿಕ್ ಆಗಿದ್ದು, ಒಂದು ಉತ್ತಮ ಫಲವತ್ತತೆಯ ಗಿಡಮೂಲಿಕೆ ಆಗಿದೆ.

ಈ ಗಿಡಮೂಲಿಕೆಯ ಮಿಶ್ರಣವನ್ನ ಮಾಡಲು 15 ಗ್ರಾಂ ಅಷ್ಟು ಕೆಂಪು ರಾಸ್ಪ್ಬೇರಿ ಎಳೆಗಳು ಮತ್ತು 15 ಗ್ರಾಂ ಅಷ್ಟು ಕೆಂಪು ಕ್ಲೋವರ್ ಎಲೆಗಳನ್ನ ಕಾಲು ಲೀಟರ್ ಅಷ್ಟು ಕುದಿಯುತ್ತಿರುವ ನೀರಿಗೆ ಬೆರೆಸಿ. ನಂತರ ಅದನ್ನ ಯಾವುದರಿಂದಾದರೂ ಮುಚ್ಚಿಡಿ.

ತಣ್ಣಗಾದ ಮೇಲೆ ಸೇವಿಸಿ ಮತ್ತು ಉಳಿದಿದ್ದನ್ನು ಫ್ರಿಡ್ಜ್ ಅಲ್ಲಿ ಶೇಖರಿಸಿ ಇಡಿ .  

ಇದರ ಫಲವತ್ತತೆ ಹೆಚ್ಚಿಸುವ ಗುಣವು ಬೇರೆ ಫಲವತ್ತತೆಯ ಗಿಡಮೂಲಿಕೆಯ ಮಿಲನದೊಂದಿಗೆ ಮತ್ತಷ್ಟು ಪರಿಣಾಮಕಾರಿ ಆಗುತ್ತದೆ.

Leave a Reply

%d bloggers like this: