ಎಲ್ಲಾ ಗರ್ಭಿಣಿಯರು ಈ ಕೆಲಸವನ್ನ ಈಗಲೇ ಮಾಡಬೇಕು ಎನ್ನುತ್ತಾಳೆ ಜ್ಞಾನೋದಯ ಹೊಂದಿದ ಈ ತಾಯಿ

ನಾನು ಗರ್ಭಿಣಿ ಆಗಿದ್ದಾಗ, ಮಗು ಬರುವ ಮುನ್ನ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕೋ ಅದನ್ನೆಲ್ಲಾ ಮಾಡಿಕೊಂಡೆ. ಆದರೆ ಒಂದನ್ನ ಮಾತ್ರ ನಾನು ಮರೆತು ಬಿಟ್ಟೆ.

ನೀವು ಒಂದು ಗರ್ಭಿಣಿ ಆಗಿ ಇದನ್ನು ಓದುತ್ತಿದ್ದರೆ, ಈಗಲೇ ಎದ್ದು ನಿಮ್ಮ ಬಾಗಿಲಿನಿಂದ ಹೊರ ನಡೆಯಿರಿ. ಈಗಿಂದೀಗಲೇ ಆ ಬಾಗಿಲಿನಿಂದ ಆಚೆ ನಡೆಯಿರಿ ಹಾಗು ಬಾಗಿಲನ್ನ ಮುಚ್ಚಿ. ನಿಮ್ಮ ಪರ್ಸ್ ಬೇಕಾದರೆ ಇಟ್ಟುಕೊಳ್ಳಿ ಅಥವಾ ಬೇಡ. ನಿಮ್ಮ ಮೊಬೈಲ್ ಬೇಕಾದರೆ ಇಟ್ಟುಕೊಳ್ಳಿ, ಇಲ್ಲ ಅದು ಕೂಡ ಬೇಡ. ಸುಮ್ಮನೆ ಹೋಗಿ, ಒಂದು ೨೦ ನಿಮಿಷಗಳ ನಂತರ ವಾಪಸ್ ಬನ್ನಿ. ಹೋಗಿ, ನಾನು ಇಲ್ಲೇ ಕಾಯುತ್ತಾ ಇರುತ್ತೀನಿ ನಿಮಗೆ!

ವಾಪಸ್ ಬಂದ್ರ? ಓಕೆ. ಈ ಕೆಲಸವನ್ನ ಇನ್ನೂ ಮುಂದೆ ನೀವು ಯಾವತ್ತೂ ಮುಂಚಿನ ರೀತಿಯಲ್ಲಿ ಯೋಚಿಸುವುದಿಲ್ಲ.

ಅವತ್ತೊಂದು ದಿನ, ನಾನು ನನಿಗೋಸ್ಕರ ಅಂತ ಒಂದು ಸ್ವಲ್ಪ ಹೊತ್ತು ಕಾಲ ಕಳೆಯಬೇಕು ಎಂದು ಬಾತ್ರೂಮ್ ಗೆ ಹೋದೆ. ನಿಜ ಕಣ್ರೀ, ಹೊಸದಾಗಿ ಮಗುವಾದ ಮೇಲೆ ಬಿಡುವು ಸಿಗುವುದು ನಾವು ಬಾತ್ರೂಮ್ ಅಲ್ಲಿ ಇದ್ದಾಗ ಮಾತ್ರ. ಆಗ ನೆನಪಾಯಿತು ನಾನು ಕಳೆದ ಬಾರಿ ಅಂಗಡಿಗೆ ಹೋದಾಗ ಶ್ಯಾಂಪೂ ತರುವುದು ಮರೆತಿದ್ದೇನೆ ಅಂತ. ಈಗ ಶ್ಯಾಂಪೂ ಖಾಲಿ ಆಗಿತ್ತು. ಓ ಖಾಲಿ ಆದರೇನು? ಅಂಗಡಿಗೆ ಹೋಗಿ ತರೋದಿಕ್ಕೆ ಎಷ್ಟೊತ್ತು ಬೇಕು ಆಲ್ವಾ? ಹೀಗೆ ಹೋಗಿ ಹಾಗೆ ಬಂದರೆ ಆಯಿತು, ೧೦ ನಿಮಿಷಗಳ ಕೆಲಸ ಅಷ್ಟೇ. ಆದರೆ ಹೊಸ ತಾಯಂದಿರಿಗೆ “ಹೀಗೆ ಹೋಗಿ ಹಾಗಿ ಬರುವುದು” ಎಂದರೆ ಏನು ಅರ್ಥ ಎಂಬುದನ್ನ ಈಗ ಬಿಡಿಸಿ ಹೇಳುತ್ತೇನೆ ಕೇಳಿ :

4 ನಿಮಿಷಗಳು : ಡಯಾಪರ್  ಬ್ಯಾಗ್ ಅನ್ನು ರೆಡಿ ಮಾಡಿಕೊಳ್ಳಿ. ಡಯಾಪರ್ , ಒರೆಸುವ ಬಟ್ಟೆ ಹಾಗು ಇತ್ಯಾದಿ.

2 ನಿಮಿಷಗಳು : ಸುಮ್ಮನೆ ಎರಡು ಸಲ ಬಾಚಣಿಕೆಯನ್ನ ಕೂದಲ ಮೇಲೆ ಆಡಿಸಿ, ಬ್ಯಾಂಡ್  ಹಾಕಿಕೊಳ್ಳಿ. ಮೇಕ್ಅಪ್ ಮಾಡಿಕೊಳ್ಳುವಷ್ಟು ಸಮಯವಿಲ್ಲ.

20 ನಿಮಿಷಗಳು : ಮಗುವಿಗೆ ಉಣಿಸಬೇಕು. ಮಗು ಊಟ ಮಾಡಿ ಆಗಲೇ ಬಹಳ ಹೊತ್ತು ಆಗಿದೆ, ನೀವು ಆಚೆ ಹೋದಮೇಲೆ ಮಗುವು ಹಠ ಶುರು ಮಾಡಬಾರದು.

3 ನಿಮಿಷಗಳು : ಮಗುವಿನ ಬಟ್ಟೆ ಚೇಂಜ್ ಮಾಡಿ. ಹೊರಗೆ ಹೋಗುತ್ತಿದ್ದೀರಾ ಎಂದಲ್ಲ ನಿಮ್ಮ ಮಗು ಹಾಲು ಕುಡಿದು ಗ್ಯಾಸ್ ಹೊರಹಾಕಿದರೆ, ಅದರೊಂದಿಗೆ ಇನ್ನೂ ಏನೋ ಒಂದು ಕೂಡ ಹೊರಬರುತ್ತದೆ. ಹೀಗಾಗಿ ನೀವು ನಿಮ್ಮ ಮಗುವಿನ ಬಟ್ಟೆ ಚೇಂಜ್ ಮಾಡಬೇಕಾಗುತ್ತದೆ.

5 ನಿಮಿಷಗಳು : ಮಗುವಿನ ಡಯಾಪರ್  ಚೇಂಜ್ ಮಾಡಿ. ನೀವು ಆಗಲೇ ನಿರ್ಲಕ್ಷಿಸುತ್ತಿದ್ದ ವಾಸನೆ, ಈಗ ಇನ್ನಷ್ಟು ಕೆಟ್ಟದಾಗಿದೆ. ಹಾಗಾಗಿ ನೀವು ಡಯಾಪರ್  ಚೇಂಜ್ ಮಾಡಲೇಬೇಕು.

2 ನಿಮಿಷಗಳು : ನಿಮ್ಮ ಪರ್ಸ್ ಮತ್ತು ಮನೆ ಕೀಲಿಗಳನ್ನೆಲ್ಲಾ ಎತ್ತಿಕೊಳ್ಳಿ.

2 ನಿಮಿಷಗಳು : ಮೂತ್ರ. ಹೊರಗೆ ಹೋಗುವ ಮುನ್ನ ಒಮ್ಮೆ ಮತ್ತೆ ಬಾತ್ರೂಮ್ ಕಡೆ ಹೋಗಿ ಬರಲೇ ಬೇಕು.

2 ನಿಮಿಷಗಳು : ಮಗುವನ್ನ ಎತ್ತಿಕೊಂಡು ಮತ್ತು ನಿಮ್ಮ ವಸ್ತುಗಳನ್ನೆಲ್ಲಾ ಇಟ್ಟುಕೊಂಡು, ಮನೆಯ ಬೀಗ ಹಾಕಿ ಹೊರನಡೆಯಿರಿ.

ಹೀಗಾಗಿ, 40 ನಿಮಿಷಗಳು ಆದ ಮೇಲೆ ಕೊನೆಗೂ ನಾನು ಹೊರಗೆ ನಡೆದೆ . ನನಗೆ ಮನೆಯಿಂದ ಆಚೆ ಬರಲಿಕ್ಕೇನೇ  ಸುಮಾರು ಒಂದು ಘಂಟೆ ಬೇಕಾಯಿತು, ಅದೂ ಕೂಡ ಉಟ್ಟ ಬಟ್ಟೆಯಲ್ಲೇ.

ಇಲ್ಲಿ ನಾನು ಕಲಿತ ಪಾಠ ಎಂದರೆ ಅದು ಮನೆಯಿಂದ ಆಚೆ ಕಾಲಿಡುವುದು ಮಗು ಆಗುವುದಕ್ಕಿಂತ ಮುಂಚೆ ಎಷ್ಟೊಂದು ಸುಲಭವಾಗಿತ್ತು ಎಂದು. ನಾನು ಸಮಯದಲ್ಲಿ ಹಿಂದೆ ಚಲಿಸಬಹುದು ಎಂದರೆ, ನಾನು ಗರ್ಭಿಣಿ ಆಗಿದ್ದ ನನಗೆ ಹೇಳಿಕೊಳ್ಳುತ್ತಿದ್ದು ಒಂದೇ – ಕಾಲುಗಳಳ್ಳಿ ಎಷ್ಟೇ ನೋವಿರಲಿ, ಅವು ಎಷ್ಟೇ ಊದಿಕೊಂಡಿರಲಿ, ಎದ್ದು ನಡೆ. ಆಚೆ ಬಾ. ಈಗ ಹೊರಗೆ ಹೋಗಬೇಕೆಂದು ನಿರ್ಧರಿಸಿ, ಆ ಕ್ಷಣವೇ ಮನೆಯಾಚೆ ಬರುವ ಸ್ವಾತಂತ್ರ್ಯವನ್ನ ಅನುಭವಿಸಲಿಕ್ಕೆ ನಾನು ಹೇಳುತ್ತಿದ್ದೆ.

ಹೀಗಾಗಿ ನೀವು ನಿಮ್ಮ ಗರ್ಭಧಾರಣೆ ವೇಳೆ ಎಷ್ಟೇ ಸುಸ್ತಿದ್ದರೂ , ದಿನಕ್ಕೆ ಒಂದು ಬಾರಿ ನಿಮ್ಮ ಬಡಾವಣೆಯ ಒಂದು ಸುತ್ತಾದರೂ ಹಾಕಿ ಬನ್ನಿ . ಹೋಗಿ ನಿಮಗೆ ಇಷ್ಟವಾದ ಐಸ್ ಕ್ರೀಮ್ ತಿಂದು ಬನ್ನಿ. ನಿಮ್ಮ ಪಾರ್ಲರ್ ಅಲ್ಲಿ ಮ್ಯಾನಿಕ್ಯೂರ್ ಮಾಡಿಸಿಕೊಳ್ಳಿ. ಒಟ್ಟಿನಲ್ಲಿ ಎಲ್ಲಾದರೂ ಹೊರಗೆ ಹೋಗಿ. ಶೀಘ್ರದಲ್ಲೇ ನಿಮ್ಮ ಹಾಗು ನಿಮ್ಮ ಮನೆಯ ಬಾಗಿಲಿನ ನಡುವೆ ಒಂದು ಅಡಚಣೆ ಬರಲಿದೆ.

ನಿಮಗೆ ಇದು ಸರಿ ಅನಿಸಿದರೆ, ಇತರೆ ತಾಯಿ ಆಗಲಿರುವ ಹೆಂಗಸರಿಗೂ ಇದನ್ನು ತಿಳಿಸಲು ಶೇರ್ ಮಾಡಿ.

Leave a Reply

%d bloggers like this: