ಗರ್ಭಪಾತದ ನಂತರ ಋತುಸ್ರಾವದ ಬಗ್ಗೆ ಈ 5 ಸಂಗತಿಗಳು ನೀವು ತಿಳಿದಿರಲೇ ಬೇಕು!

ಗರ್ಭಪಾತಗಳು ವಿನಾಶಕಾರಿ. ನೀವು ಮಗು ಬೇಕು ಎಂದು ಗರ್ಭಧರಿಸಿ ಅಥವಾ ಆಕಸ್ಮಿಕವಾಗಿ ಗರ್ಭಿಣಿಯಾಗಿ, ಭ್ರೂಣವನ್ನು ಕಳೆದುಕೊಳ್ಳುವುದು ಭಾವನಾತ್ಮಕವಾದ ವಿಷಯ ಇದು ನಿಮ್ಮನ್ನು ಖಿನ್ನತೆಗೆ ನೂಕಬಹುದು. ನೋವು ಮತ್ತು ದುಃಖದ ಜೊತೆಗೆ, ನಿಮ್ಮ ದೇಹ ಹಲವು ಬದಲಾವೆಣೆಗೆ ಒಳಗಾಗುತ್ತದೆ ಮತ್ತು ಅದನ್ನು ಸರಿಪಡಿಸಲು(/ಮರುಹೊಂದಲು) ನಿಮ್ಮ ದೇಹ ಶ್ರಮಿಸುತ್ತದೆ.

ನೀವು ಪುನಃ ಗರ್ಭಧರಿಸಲು ಆಸಕ್ತಿ ಹೊಂದಿದ್ದು, ಅದಕ್ಕೆ ಪ್ರಯತ್ನಿಸುತ್ತಿದ್ದರೆ, ನೀವು ನನ್ನ ಮುಂದಿನ ಮುಟ್ಟು ಯಾವಾಗ ಆಗುವುದು ಮತ್ತು ನಾನು ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗಳು ಸಾಮಾನ್ಯ. ನೀವು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

೧.ನಿಮ್ಮ ಗರ್ಭಪಾತವು ಗರ್ಭಪಾತವಾಗದಿದ್ದರೆ

ಇದು ಗರ್ಭಪಾತವೋ ಅಥವಾ ಋತುಚಕ್ರವೋ? ಗರ್ಭಧರಿಸಲು ಪ್ರಯತ್ನಿಸುತ್ತಿರುವ ಹಲವು ಮಹಿಳೆಯರು ಇವೆರಡರ ವ್ಯತ್ಯಾಸ ತಿಳಿಯಲು ತುಂಬಾ ಕಷ್ಟ ಪಡುತ್ತಾರೆ.

ನೀವು ಗರ್ಭ ನಿಂತಿರುವುದನ್ನು ಮನೆಯಲ್ಲಿ ಮತ್ತು ವೈದ್ಯರ ಬಳಿ ಪರೀಕ್ಷಿಸಿ ಖಚಿತ ಪಡಿಸಿಕೊಂಡಿದ್ದರೆ ಇದು ಗರ್ಭಪಾತ ಎಂಬ ತೀರ್ಮಾನಕ್ಕೆ ಬರಬಹುದು. ನಿಮ್ಮ ಗರ್ಭಧಾರಣೆ ಖಚಿತವಾಗಿಲ್ಲ ಎಂದಾದರೆ ಅದು ನಿಮ್ಮ ನಿಯಮಿತ ಋತುಚಕ್ರ ಅಷ್ಟೇ.

ಗರ್ಭಪಾತದ ಸಾಮಾನ್ಯ ಗುಣಲಕ್ಷಣಗಳೆಂದರೆ,

ತೀವ್ರ ಸೆಳೆತ: ಕೆಲವು ಮಹಿಳೆಯರು ಈ ಎರಡು ಲಕ್ಷಣಗಳನ್ನು ತಮ್ಮ ಮುಟ್ಟಿನ ದಿನಗಳಲ್ಲಿ ಅನುಭವಿಸುತ್ತಾರೆ, ಆದರೆ, ಗರ್ಭಪಾತದಲ್ಲಿ ಇದು ಅತಿ ತೀವ್ರವಾದ ಸೆಳೆತವನ್ನು ಉಂಟುಮಾಡುತ್ತದೆ.

ಹೆಚ್ಚು ರಕ್ತಸ್ರಾವ: ನೀವು ಎಷ್ಟು ಸಮಯ ಮಗುವನ್ನು ಉದರದಲ್ಲಿ ಹೊತ್ತಿರುವಿರಿ ಎಂಬುದರ ಮೇಲೆ ಅವಲಂಭಿತವಾಗಿ, ನೀವು ಅತಿಯಾದ ರಕ್ತಸ್ರಾವವನ್ನು ಅನುಭವಿಸುವಿರಿ. ಮತ್ತು ನಿಮ್ಮ ಯೋನಿಯಿಂದ ಬರುವ ರಕ್ತಸ್ರಾವದಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ನೀವು ಗಮನಿಸಬಹುದು.

೨.ಗರ್ಭಪಾತದ ನಂತರ ಮುಟ್ಟು ಆಗದಿರುವುದು ಸಾಮಾನ್ಯ

ನಿಮಗೆ ಗರ್ಭಪಾತವಾಗಿ ಒಂದು ತಿಂಗಳು ಕಳೆದಿರಬಹುದು, ಆದರೆ ನೀವು ಇನ್ನು ನಿಮ್ಮ ಮುಟ್ಟಿನ ದಿನವನ್ನು ನೋಡಿಲ್ಲ. ಹಲವು  ಸಂದರ್ಭಗಳಲ್ಲಿ, ಇದು ಸಾಮಾನ್ಯ, ಇದರ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ.

ಗರ್ಭಪಾತವಾದ ಬಳಿಕ, ದೇಹವು ಮೊದಲಿನ ಸ್ಥಿತಿಗೆ ಬರಲು ತನ್ನ ಸಮಯವನ್ನು ತೆಗೆದುಕೊಳ್ಳುತ್ತದೆ. HCG ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರಲು ದೇಹವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. HCG ಮಟ್ಟ ಸೊನ್ನೆಯಾಗಿ, ನಾಲ್ಕು ವಾರ ಕಳೆದ ನಂತರ ನಿಮ್ಮ ಋತುಚಕ್ರವನ್ನು ಕಾಣಬಹುದು.

ಗರ್ಭಪಾತದ ನಂತರ ಒಂದು ವಾರದವರೆಗೆ ರಕ್ತಸ್ರಾವವನ್ನು ಅನುಭವಿಸಬೇಕಾಗಬಹುದು. ಒಂದು ವಾರದ ನಂತರ ರಕ್ತಸ್ರಾವ ಸಂಪೂರ್ಣವಾಗಿ ನಿಂತುಹೋಗಬಹುದು, ಅಥವಾ ನಿಧಾನವಾಗಿ ಸ್ವಲ್ಪ ಸ್ವಲ್ಪ ಕಾಣಿಸಿಕೊಂಡು ನಿಂತುಕೊಳ್ಳಬಹುದು. ರಕ್ತಸ್ರಾವ ಸಂಪೂರ್ಣವಾಗಿ ನಿಂತಾಗ HCG ಮಟ್ಟ ಸೊನ್ನೆ ತಲುಪಿ ಮುಟ್ಟು ನಿಲ್ಲವಂತೆ ಮಾಡುತ್ತದೆ.

ನೆನಪಿರಲಿ, ನಿಮ್ಮ ದೇಹ ತನ್ನ ಹಾರ್ಮೋನುಗಳನ್ನು ಮೊದಲಿನ ಸ್ಥಿತಿಗೆ ತರಲು ಶ್ರಮಿಸುತ್ತಿದೆ, ಆದ್ದರಿಂದ ಗರ್ಭಪಾತವಾಗಿ ೭ ವಾರದವರೆಗೂ ಮುಟ್ಟು ಆಗದೆ ಇರಬಹುದು.

೩.ಎರಡನೇ ಸುತ್ತಿನ ರಕ್ತಸ್ರಾವವು ಕೂಡ ಕಾಣಿಸಿಕೊಳ್ಳಬಹುದು(/ಆಗಬಹುದು)

ಇದು ಸಹಜವಲ್ಲ ಆದರೂ, ಕೆಲವು ಮಹಿಳೆಯರು ಗರ್ಭಪಾತವಾದ ನಂತರ ರಕ್ತಸ್ರಾವವನ್ನು ಅನುಭವಿಸದೇ, ಗರ್ಭಪಾತವಾದ ಒಂದು ಅಥವಾ ಎರಡು ವಾರದ ನಂತರ ರಕ್ತಸ್ರಾವವನ್ನು ಅನುಭವಿಸುತ್ತಾರೆ. ಇದು ಋತುಚಕ್ರ ಎಂದು ಸುಲಭವಾಗಿ ತಪ್ಪು ಕಲ್ಪನೆ ಮಾಡಿಕೊಳ್ಳಬಹುದು, ಗರ್ಭಪಾತವಾದ ಕನಿಷ್ಠ ೨೦ದಿನಗಳು ಕಳೆಯುವ ವರೆಗೆ ಮುಟ್ಟು ಆಗುವುದಿಲ್ಲ. ಎರಡನೇ ಬಾರಿ ರಕ್ತಸ್ರಾವ ಸಾಮಾನ್ಯವಲ್ಲದಿದ್ದರು, ಆಗುವುದು ಸಹಜ.

ಈ ಎರಡನೇ ಸುತ್ತಿನ ರಕ್ತಸ್ರಾವವು ಸಾಮಾನ್ಯವಾಗಿ ಆರಂಭಿಕ ಗರ್ಭಪಾತದ ಸಮಯದಲ್ಲಿ ಗರ್ಭಾಶಯದಲ್ಲಿ ಉಳಿದಿರುವ ಜರಾಯುವಿನ ಒಂದು ಭಾಗವನ್ನು ಹೊರಹಾಕಲು ಪ್ರಯತ್ನಿಸುವ ದೇಹದ ಪರಿಣಾಮವಾಗಿದೆ.

೪.ಗರ್ಭಪಾತದ ನಂತರ ಅನಿಯಮಿತ ಋತುಚಕ್ರ ಹಾರ್ಮೋನಿನ ಸಮಸ್ಯೆಯ ಒಂದು ಚಿಹ್ನೆಯಾಗಿರಬಹುದು

ನಿಮ್ಮ ಋತುಚಕ್ರ ಸಾಮಾನ್ಯ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳಬಹುದು, ಆದರೆ, ಗರ್ಭಪಾತದ ನಂತರ ನೀವು ಕ್ರಮವಲ್ಲದ ಋತುಚಕ್ರವನ್ನು ಅನುಭವಿಸುತ್ತಿದ್ದರೆ, ವೈದ್ಯರನ್ನು ಈ ಸಮಯದಲ್ಲಿ ಭೇಟಿ ಮಾಡಬೇಕು.

ಅನಿಯಮಿತ ಋತುಚಕ್ರವು ನಿಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನವನ್ನು ಸೂಚಿಸುತ್ತವೆ. ಇದನ್ನು ಸರಿಪಡಿಸಲು ದೇಹ ಹೆಚ್ಚು ಸಮಯ ತೆಗೆದುಕೊಳ್ಳಬಬಹುದು ಅಥವಾ ವೈದ್ಯಕೀಯ ಔಷದಿಯ ಸಹಾಯ ಬೇಕಾಗಿರಬಹುದು.

ಕೆಲವು ಮಹಿಳೆಯರು ಗರ್ಭಪಾತದ ನಂತರ ಮೊದಲ ತಿಂಗಳ ಅವಧಿಯಲ್ಲಿ ಅಥವಾ ನಂತರವೂ, ರಕ್ತಸ್ರಾವದ ಕಲೆಗಳನ್ನು ಆಗಾಗ್ಗೆ ಕಾಣುತ್ತಿದ್ದರೆ, ಮತ್ತು ನಿಮ್ಮ HCG ಮಟ್ಟ ಇನ್ನು ಹೆಚ್ಚಿದರೆ, ನಿಮ್ಮ ಗರ್ಭದೊಳಗೆ ಹೊರಹೋಗಬೇಕಾಗಿರುವ ಕೆಲವು ಅಂಗಾಂಶ ಇನ್ನು ಅಲ್ಲಿ ಇದೆ ಎಂದು. ನಿಮ್ಮ ದೇಹ ಅದನ್ನು ಹೊರಹಾಕುವಲ್ಲಿ ವಿಫಲವಾಗುತ್ತಿದೆ, ಆದ್ದರಿಂದ ಅದನ್ನು ಹೊರಹಾಕಲು ವೈದ್ಯರು ನಿಮಗೆ ಸಹಾಯ ಮಾಡುವರು.

೫.ಗರ್ಭಪಾತದ ನಂತರ ಬಾರಿ ಮುಟ್ಟು ಕಾಳಜಿಗೆ ಕಾರಣವಾಗಬಹುದು

ಗರ್ಭಪಾತವಾಗಿ ೨೦ ದಿನಗಳು ಕಳೆದಿವೆ, ಭಾರೀ ಋತುಚಕ್ರವು ಸಂಪೂರ್ಣವಾಗಿ ಸಾಮಾನ್ಯವಾಗಬಹುದು (ನೀವು ಗರ್ಭಾವಸ್ಥೆಯ ಮೊದಲು ಭಾರೀ ರಕ್ತಸ್ರಾವವನ್ನು ಅನುಭವಿಸಿದ್ದರೆ).

ಆದಾಗ್ಯೂ, ಗರ್ಭಪಾತವಾಗಿ ಎರಡು ವಾರವಾದರೂ ಅಥವಾ ಎರಡು ವಾರದ ನಂತರವೂ ಬಾರಿ ರಕ್ತಸ್ರಾವ ಆಗುತ್ತಿದ್ದರೆ, ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.

ಇಲ್ಲಿ ಕಾಳಜಿವಹಿಸಲು ಎರಡು ಪ್ರಮುಖ ಕಾರಣಗಳಿವೆ:

೧.ರಕ್ತ ನಷ್ಟವಾಗುವುದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ

೨.ನಿಮ್ಮ HCG ಮಟ್ಟ ೫೦೦ ಅಥವಾ ಹೆಚ್ಚಕ್ಕೆ ತಲುಪಬಹುದು.

Leave a Reply

%d bloggers like this: