ಥೈರಾಯಿಡ್ ಮತ್ತು ಗರ್ಭಧಾರಣೆ

ಗರ್ಭಧಾರಣೆ ಮತ್ತು ಹೈಪೋ ಥೈರಾಯಿಡ್ಇಸಂ

ಗರ್ಭಧಾರಣೆ ಮುಂಚೆ

ನೀವು ಈ ಮೊದಲು ನಿಮ್ಮ ಹೈಪೋ ಥೈರಾಯಿಡ್ಇಸಂ (ಥೈರಾಯಿಡ್ ಕೊರತೆ) ಗೆ ಸರಿಯಾಗಿ ಚಿಕಿತ್ಸೆ  ಪಡೆಯದೇ ಇದ್ದರೆ, ನೀವು ಗರ್ಭತಾಳುವುದೇ ಕಷ್ಟ ಆಗುತ್ತದೆ. ನಿಮಗೆ ದೀರ್ಘಕಾಲದ ಅಥವಾ ತೀವ್ರ ರಕ್ತಸ್ರಾವದ ಪಿರಿಯಡ್ಸ್ ಆಗಬಹುದು. ಇದು ನಿಮ್ಮಲ್ಲಿ ರಕ್ತಹೀನತೆ ಉಂಟು ಮಾಡಬಹುದು ಹಾಗು ಪಿರಿಯಡ್ಸ್ ಆಗುವುದನ್ನೇ ನಿಲ್ಲುವಂತೆ ಮಾಡಬಹುದು. ನೀವು ನಿಮ್ಮ ಥೈರಾಯಿಡ್ ಹಾರ್ಮೋನ್ ಕೊರತೆಗೆ ಸರಿಯಾದ ಔಷಧಿಗಳನ್ನ ಸೇವಿಸಿ, ಥೈರಾಯಿಡ್ ಗತಿಯನ್ನ ಸರಿಯಾದ ಪ್ರಮಾಣಕ್ಕೆ ತಂದರೆ, ನೀವು ಗರ್ಭತಾಳುವ ಸಾಧ್ಯತೆಗಳು ಗಣನೀಯವಾಗಿ ಹೆಚ್ಚುತ್ತವೆ.

ನೀವು ಈಗ ಗರ್ಭತಾಳುವ ಮನಸ್ಸು ಮಾಡಿದ್ದರೆ, ನೀವು ನಿಮ್ಮ ವೈದ್ಯರನ್ನ ಭೇಟಿ ಮಾಡಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಈ ಕ್ಷೇತ್ರದಲ್ಲಿನ ತಜ್ಞರು ಹೇಳುವ ಪ್ರಕಾರ ನಿಮ್ಮ TSH ಲೆವೆಲ್ ಇರಬೇಕಾದ ವ್ಯಾಪ್ತಿಯ ಮೊದಲಾರ್ಧದ ಒಳಗೆ ಇದ್ದಾರೆ ನೀವು ಗರ್ಭಪಾತ ಆಗುವ ಸಾಧ್ಯತೆಗಳನ್ನ ತಳ್ಳಿ ಹಾಕಬಹುದು. 

ಗರ್ಭಧಾರಣೆ ಸಮಯದಲ್ಲಿ

ನೀವು ಗರ್ಭಿಣಿ ಆದೊಡನೆ ಮತ್ತು ನೀವು ಈ ಮೊದಲೇ ಥೈರಾಯಿಡ್ ಔಷಧಿ ಸೇವಿಸುತ್ತಿದ್ದರೆ, ಅದರ ಪ್ರಮಾಣ (ಡೋಸೇಜ್) ಹೆಚ್ಚಿಸಲು ವೈದ್ಯರು ಸೂಚಿಸುತ್ತಾರೆ. ನೀವು ಈಗ ಪುನಃ ಥೈರಾಯಿಡ್ ಪರೀಕ್ಷೆ ಮಾಡಿಸಬೇಕು.

ಗರ್ಭಧಾರಣೆಯ ಮೊದಲಿನಲ್ಲಿ ನಿಮ್ಮ ಥೈರಾಯಿಡ್ ಲೆವೆಲ್ ಇರಬೇಕಾಗಿದ್ದಕ್ಕಿಂತ ಜಾಸ್ತಿ ಇದ್ದರೂ ನೀವು ಇತರರಿಗಿಂತ  ಸ್ವಲ್ಪವೇ ಜಾಸ್ತಿ ಗರ್ಭಪಾತ ಹೊಂದುವ ಸಾಧ್ಯತೆಗಳು ಇರುತ್ತವೆ ಅಷ್ಟೇ. ನೀವು ಎಲ್ಲರಂತೆಯೇ ಯಶಸ್ವಿಯಾಗಿ ಗರ್ಭಧಾರಣೆ ಪೂರ್ಣಗೊಳಿಸುವಿರಿ. ನಿಮ್ಮ ಔಷಧಿಗಳು ಹೇಗಿದ್ದರೂ ಥೈರಾಯಿಡ್ ಮಟ್ಟವನ್ನ ಸರಿ ಇಡುವುದರಿಂದ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.

ಗರ್ಭಧಾರಣೆ ಮತ್ತು ಹೈಪರ್ ಥೈರಾಯಿಡ್ಇಸಂ

ಗರ್ಭಧಾರಣೆ ಮುಂಚೆ

ಹೈಪರ್ ಥೈರಾಯಿಡ್ಇಸಂ ಮುಖ್ಯ ಕಾರಣ ಎಂದರೆ ಅದು ಗ್ರೇವ್ಸ್ ಕಾಯಿಲೆ. ಇದಕ್ಕೆ ನೀವು ಮೊದಲೇ ಚಿಕಿತ್ಸೆ ಪಡೆಯದೇ ಇದ್ದರೆ, ನಿಮ್ಮ ಪಿರಿಯಡ್ಸ್  ಅಲ್ಪಾವಧಿಯದ್ದಾಗಿರುತ್ತದೆ ಮತ್ತು ಕಡಿಮೆ ರಕ್ತಸ್ರಾವದ್ದಾಗಿರುತ್ತದೆ. ಹೀಗಾಗಿ ನೀವು ಗರ್ಭತಾಳುವುದು ಕಷ್ಟವಾಗಬಹುದು.

ಗಂಡಸರಲ್ಲಿ ಹೈಪರ್ ಥೈರಾಯಿಡ್ಇಸಂ ಇರುವವರಲ್ಲಿ  ವೀರ್ಯದ ಸಂಖ್ಯೆ ಕಮ್ಮಿ ಇರುತ್ತದೆ ಹಾಗು ಇದು ಬಂಜೆತನಕ್ಕೆ ಕಾರಣವಾಗುತ್ತದೆ. ಈ ಥೈರಾಯಿಡ್ ಪ್ರಮಾಣವನ್ನ ಸರಿಯಾದ ಮಟ್ಟಕ್ಕೆ ಇಳಿಸಿದರೆ ವೀರ್ಯದ ಸಂಖ್ಯೆಯು ಸರಿ ಹೋಗುತ್ತದೆ.

ಗರ್ಭಧಾರಣೆ ಸಮಯದಲ್ಲಿ 

ನೀವು ಈಗ ಗರ್ಭಿಣಿ ಆಗಿದ್ದು ನಿಮಗೆ ಗ್ರೇವ್ಸ್ ಕಾಯಿಲೆ ಈ ಮೊದಲೇ ಇದ್ದರೆ, ನೀವು ನಿಮ್ಮ ಹೆರಿಗೆತಜ್ಞರ ಬಳಿ ನಿಮ್ಮ್ ವೈದ್ಯಕೀಯ ಹಿನ್ನಲೆಯ ಸಂಪೂರ್ಣ ಮಾಹಿತಿ ನೀಡಬೇಕು. ನಿಮ್ಮ ಥರೋಯಿಡ್ ಗತಿಯು ನಾರ್ಮಲ್ ಗೆ ಮರಳಿದ್ದರೂ, ನಿಮ್ಮಲ್ಲಿ ಇನ್ನು ಗ್ರೇವ್ಸ್ ಪ್ರತಿಕಾಯಗಳು (ಆಂಟಿಬಾಡೀಸ್) ಇರುತ್ತವೆ. ಇದು ನಿಮ್ಮ ಗರ್ಭಧಾರಣೆ ವೇಳೆ ಅಥವಾ/ಮತ್ತು ಹೆರಿಗೆ ಆದ ಮೇಲೆ ನಿಮಗೆ ಅಥವಾ/ಮತ್ತು ನಿಮ್ಮ ಮಗುವಿಗೆ ತೊಂದರೆ ಉಂಟು ಮಾಡಬಹುದು. ನಿಮ್ಮ ಥರೋಯಿಡ್ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ನೀವು ಗರ್ಭಿಣಿ ಆದೊಡನೆ ವಿಷಯ ತಿಳಿಸಬೇಕು. ನೀವು ನಿಮ್ಮ ಗರ್ಭಧಾರಣೆಯ ವೇಳೆಯೂ ಥೈರಾಯಿಡ್ ಔಷಧಿಗಳನ್ನ ಸೇವಿಸಬೇಕು. ನಿಮ್ಮ ಮಗುವಿಗೆ ತೊಂದರೆ ಆಗದಿರಲು ಅತಿ ಕಡಿಮೆ ಪ್ರಮಾಣದ ಡೋಸೇಜ್ ಅನ್ನು ವೈದ್ಯರು ಸಹಜವಾಗಿ ಸೂಚಿಸುತ್ತಾರೆ.

ಥೈರಾಯಿಡ್ ಬಗ್ಗೆ A-Z ಸಂಪೂರ್ಣ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ ಓದಿ!

Leave a Reply

%d bloggers like this: