ನಿಮ್ಮ ಮಗುವಿಗೆ ೫ ಸುಲಭವಾದ ಮತ್ತು ಸವಿಯಾದ ಗಂಜಿಗಳು

ನಿಮ್ಮ ಮಗುವಿಗೆ ನೀವು ಗಟ್ಟಿ/ಘನ ಆಹಾರ ಪದಾರ್ಥಗಳನ್ನು ನೀಡಲು ಶುರು ಮಾಡಿದ್ದು, ಅಧಿಕ ಫೈಬರ್ ವುಳ್ಳ ಆರೋಗ್ಯಕರ ಆಹಾರವನ್ನು ನೀಡಲು ನೀವು ಬಯಸುತ್ತಿದ್ದರೆ, ಗಂಜಿಯು ಒಂದು ಉತ್ತಮ ಮಾರ್ಗವಾಗಿದೆ. ಆರೋಗ್ಯಕರ ಮತ್ತು ರುಚಿಕರ ಗಂಜಿಯು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ನೀವು ಈ ಸುಲಭ ಗಂಜಿಗೆ ಕೆಲವು ಪದಾರ್ಥಗಳನ್ನು ಸೇರಿಸುವ ಮೂಲಕ ಗಂಜಿಯನ್ನು ಮತ್ತಷ್ಟು ಪೌಷ್ಟಿಕಾಂಶವನ್ನು ನೀಡಬಹುದು.

೧.ಸೇಬು-ಓಟ್ಸ್ ಗಂಜಿ

ಒಂದು ಪಾತ್ರೆಯಲ್ಲಿ ನೀರನ್ನು ಕುದಿಯಲು ಬಿಡಿ, ಕುದಿಯುತ್ತಿರುವ ನೀರಿಗೆ ಒಂದು ಕಪ್ ಓಟ್ಸ್ ಅನ್ನು ಹಾಕಿ. ನಂತರ, ಸೇಬಿನ ಸಿಪ್ಪೆ ತೆಗೆದು ಸಣ್ಣಕ್ಕೆ ಕತ್ತರಿಸಿ ಪಾತ್ರೆಗೆ ಹಾಕಿ. ಸೇಬು ಕಿವುಚುವಂತಾಗುವವರೆಗೂ ಮತ್ತು ಓಟ್ಸ್ ಮೃದುವಾಗುವವರೆಗೂ ಕುದಿಯಲು ಬಿಡಿ. ಮಿಶ್ರಣವನ್ನು ಚೆನ್ನಾಗಿ ಕಲಸಿ, ಈಗ ನಿಮ್ಮ ರುಚಿಕರ ಸೇಬು-ಓಟ್ಸ್ ಸವಿಯಲು ಸಿದ್ದ.

ಇದಕ್ಕೆ ೫೦ಎಂ.ಎಲ್. ಹಾಲನ್ನು ಸೇರಿಸಿ ಒಂದೂವರೆ ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ ನೀಡಬಹುದು.

೨.ಬಾಳೆಹಣ್ಣು-ಓಟ್ಸ್ ಗಂಜಿ

ಒಂದು ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಒಂದು ಕಪ್ ಓಟ್ಸ್ ಅನ್ನು ಸೇರಿಸಿ. ಓಟ್ಸ್ ಚೆನ್ನಾಗಿ ಮೃದುವಾಗುವವರೆಗೆ ಇದನ್ನು ಕುದಿಸುತ್ತಿರಿ. ಬಾಳೆಹಣ್ಣನ್ನು ಸಿಪ್ಪೆ ಸುಲಿದು, ಕಿವುಚಿ, ಪಾತ್ರೆಗೆ ಸೇರಿಸಿ. ನಂತರ ಚೆನ್ನಾಗಿ ಮಿಶ್ರಿಸಿ ಅರ್ಧ ನಿಮಿಷ ಬೇಯಿಸಿ. ನಂತರ ಚೆನ್ನಾಗಿ ಮಿಶ್ರಿಸಿ, ರುಚಿಕರ ಬಾಳೆಹಣ್ಣು-ಓಟ್ಸ್ ಗಂಜಿ ಸಿದ್ದ.

೩.ಪೀರ್-ಓಟ್ಸ್ ಗಂಜಿ

ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಒಂದು ಕಪ್ ಓಟ್ಸ್ ಅನ್ನು ಸೇರಿಸಿ. ಸಿಪ್ಪೆ ತೆಗೆದ ಪೀರ್ ಹಣ್ಣನ್ನು ಸಣ್ಣಕ್ಕೆ ಕತ್ತರಿಸಿ ಇದಕ್ಕೆ ಸೇರಿಸಿ. ಹಣ್ಣು ಮೃದುವಾಗುವವರೆಗೆ ಮತ್ತು ಓಟ್ಸ್ ಮೆತ್ತಾಗಾಗುವವರೆಗೆ ಚೆನ್ನಾಗಿ ಬೇಯಿಸಿ. ಇದು ಮೃದುವಾಗುವರೆಗೆ ಚೆನ್ನಾಗಿ ಮಿಶ್ರಿಸಿ. ಚೆನ್ನಾಗಿ ಹಣ್ಣಾಗಿರುವ ಪೀರ್ ಹಣ್ಣನ್ನು ಬಳಸುವುದು ಸಿಹಿಯಾಗಿರುವುದರಿಂದ ಮಕ್ಕಳು ಇಷ್ಟಪಟ್ಟು ಸೇವಿಸುತ್ತಾರೆ.

೪.ಮಾವಿನಹಣ್ಣು-ಓಟ್ಸ್ ಗಂಜಿ

ಒಂದು ಕಪ್ ಓಟ್ಸ್ ಅನ್ನು ಕುದಿಯುತ್ತಿರುವ ನೀರಿಗೆ ಹಾಕಿ. ಓಟ್ಸ್ ಚೆನ್ನಾಗಿ ಮೃದುವಾಗುವ ವರೆಗೆ ಅದನ್ನು ಚೆನ್ನಾಗಿ ಬೇಯಿಸಿ, ಮತ್ತು ಆರಲು ಬಿಡಿ. ಹಣ್ಣಾಗಿರುವ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಇದಕ್ಕೆ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಿಸಿ, ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ.

ಮಾವಿನ ಹಣ್ಣು ಪೊಟ್ಯಾಸಿಯಮ್ ಮತ್ತು ವಿಟಮಿನ್(C, A ಮತ್ತು K)ಗಳನ್ನು ಒಳಗೊಂಡಿದ್ದು, ಗಂಜಿಗೆ ಸಿಹಿ ರುಚಿಯನ್ನು ನೀಡುತ್ತದೆ.

೫.ಕಲ್ಲಂಗಡಿ ಮತ್ತು ಸ್ಟ್ರಾಬೆರಿ ಓಟ್ಸ್ ಗಂಜಿ

ಇದು ಸಿಹಿಯಾಗಿರುವುದರಿಂದ ನಿಮ್ಮ ಮಗು ಇದನ್ನು ಖಂಡಿತ ಇಷ್ಟ ಪಡುತ್ತದೆ, ಬೀಜ ತೆಗೆದ ಕಲ್ಲಂಗಡಿ ಮತ್ತು ಸ್ಟ್ರಾಬೆರಿ ಅನ್ನು ಒಂದು ಕಪ್ ತೆಗೆದುಕೊಂಡು ಎರಡನ್ನು ಮಿಶ್ರಿಸಿ. ಅರ್ಧ ಕಪ್ ಓಟ್ಸ್ ಅನ್ನು ಚೆನ್ನಾಗಿ ಮೃದುವಾಗುವವರೆಗೆ ಕುದಿಯುತ್ತಿರುವ ನೀರಿನಲ್ಲಿ ಬೇಯಿಸಿ. ಅದು ಗಂಜಿಯಂತಾಗುವವರೆಗೆ ಚೆನ್ನಾಗಿ ಕದಡುತ್ತಿರಿ, ನಂತರ ಎಲ್ಲವನ್ನು ಮಿಶ್ರಿಸಿ ೮ ತಿಂಗಳು ತುಂಬಿರುವ ಅಥವಾ ೮ ತಿಂಗಳು ಮೇಲಿನ ಮಕ್ಕಳಿಗೆ ಸೇವಿಸಲು ನೀಡಿ.

ಕಲ್ಲಂಗಡಿ ಮತ್ತು ಸ್ಟ್ರಾಬೆರಿ ಎರಡರಲ್ಲೂ ಪೌಷ್ಟಿಕಾಂಶಗಳು ಮತ್ತು ಫೈಬರ್ ಅಂಶಗಳು ಹೆಚ್ಚು ಇದ್ದು ದೇಹಕ್ಕೆ ಪುಷ್ಟಿ ನೀಡುವುದರ ಜೊತೆಗೆ ಬಾಯಿಗೆ ರುಚಿಯನ್ನು ನೀಡುತ್ತದೆ.

Leave a Reply

%d bloggers like this: