ಹೆರಿಗೆಯ ನಂತರವು ಹೊಟ್ಟೆ ಬಸುರಿ ಹೊಟ್ಟೆಯಂತೆಯೇ ಇದ್ದರೆ ಎಂದರೆ ಏನು ಅರ್ಥ?

ಗರ್ಭಾವಸ್ಥೆಯಲ್ಲಿ ನಿಮ್ಮ ಮಗುವು ಉದರದೊಳಗೆ ಬೆಳೆದಂತೆ ನಿಮ್ಮ ಉದರ ಹೊರಗಿನಿಂದ ನೋಡಲು ದಪ್ಪದಾಗಿ ಕಾಣುತ್ತದೆ, ಈ ಸಮಯದಲ್ಲಿ ನಿಮಗೆ ಯಾವುದೇ ಮುಜುಗರ ಇಲ್ಲ. ಆದರೆ, ಹೆರಿಗೆಯಾದ ಮೇಲು ಉದರದ ಗಾತ್ರ ಕರಗಲಿಲ್ಲ ಎಂದರೆ ನಿಮಗೆ ಏನೋ ಒಂತರ ಮುಜುಗರ.

ಸಾಮಾನ್ಯವಾಗಿ ಹೆರಿಗೆಯ ನಂತರ ಉದರದ ಗಾತ್ರ ಮತ್ತು ದೇಹದ ಸ್ಥಿತಿ ತನ್ನ ಮೊದಲಿನ ಸ್ಥಿತಿಗೆ ಮರಳುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಹೆರಿಗೆಯಾಗಿ ಒಂದು ತಿಂಗಳು ಕಳೆದರು ಉದರದ ಗಾತ್ರದಲ್ಲಿ ಅಂತ ಯಾವುದೇ ಬದಲಾವಣೆ ಕಾಣದಿದ್ದರೆ ಅದು ನಿಮ್ಮಲ್ಲಿ ಆತಂಕವನ್ನುಂಟುಮಾಡುವುದು ಸಹಜ. ಅದರಲ್ಲೂ ಸಿಸೇರಿಯನ್ ಗೆ ಒಳಗಾದ ಮಹಿಳೆಯರಲ್ಲಿ ಇದು ಸಾಮಾನ್ಯ. ಇದರ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ.

ತಜ್ಞರ ಪ್ರಕಾರ ಸಾಮಾನ್ಯವಾಗಿ ಹೆರಿಗೆಯಾದ ಮಹಿಳೆಯರಲ್ಲಿ ಒಂದರಿಂದ ಎರಡು ವಾರಗಳಲ್ಲಿ ತಮ್ಮ ಹೊಟ್ಟೆ ಮೊದಲಿನ ಸ್ಥಿತಿಗೆ ಮರಳುತ್ತದೆ.

ಹೊಟ್ಟೆಯ ಗಾತ್ರ ಕಡಿಮೆಯಾಗದಿರಲು ಅಥವಾ ಮೊದಲಿನ ಸ್ಥಿತಿಗೆ ಬರದೇ ಇರಲು, ಗರ್ಭಾವಸ್ಥೆಯಲ್ಲಿ ಹಿಗ್ಗಿದ ಸ್ನಾಯುಗಳು ಕಾರಣವಿರಬಹುದು. ಹೆರಿಗೆಯ ನಂತರ ಈ ಸ್ನಾಯುಗಳು ಸಂಕುಚಿತಗೊಂಡು ಉದರವು ತನ್ನ ಮೊದಲಿನ ಸ್ಥಾನಕ್ಕೆ ಬರಲು ಸಹಾಯವಾಗುತ್ತದೆ, ಆದರೆ ಇವು ಸಂಕುಚಿತಗೊಳ್ಳದಿದ್ದರೆ ಉದರ ತನ್ನ ಮೊದಲಿನ ಸ್ಥಾನ ಪಡೆಯಲು ಕಷ್ಟವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಗುವು ಬೆಳವಣಿಗೆಯಾಗುತ್ತಿದ್ದಂತೆ, ಗರ್ಭಾಶಯದ ಗಾತ್ರವು ಹಿಗ್ಗುತ್ತದೆ. ಹೆರಿಗೆಯ ಬಳಿಕ ಗರ್ಭಾಶಯ ಸಂಕುಚಿತಗೊಂಡು ತನ್ನ ಮೊದಲಿನ ಸ್ಥಾನಕ್ಕೆ ಮರಳುತ್ತದೆ, ಒಂದು ವೇಳೆ ಇದು ಸಂಕುಚಿತಗೊಳ್ಳುವುದು ನಿಧಾನವಾದರೆ, ಉದರವು ತನ್ನ ಮೊದಲಿನ ಸ್ಥಾನವನ್ನು ಪಡೆಯುವಲ್ಲಿ ನಿಧಾನವಾಗುತ್ತದೆ.

ಗರ್ಭಾಶಯ ಸಂಕುಚಿತಗೊಂಡು ತನ್ನ ಮೊದಲಿನ ಸ್ಥಿತಿ ತಲುಪುವ ವರೆಗೂ ಸ್ವಲ್ಪ ನೋವು ಕಾಣಿಸಿಕೊಳ್ಳುವುದು ಸಹಜ.

ಉದರದೊಳಗೆ ಮಗುವನ್ನು ಅಪಾಯದಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಮ್ನಿಯೋಟಿಕ್ ದ್ರವ ಹೆರಿಗೆಯ ನಂತರ ದ್ರವ ರೂಪದಲ್ಲಿ ದೇಹದಿಂದ ಹೊರ ಹೋಗುತ್ತದೆ. ಒಂದು ವೇಳೆ ಹೆರಿಗೆಯ ನಂತರ ಇದು ಸಂಪೂರ್ಣವಾಗಿ ಹೊರ ಹೋಗದೆ ಉದರದೊಳಗೆ ಸ್ವಲ್ಪ ಉಳಿದಿದ್ದರೆ, ಅದು ಕೂಡ ನಿಮ್ಮ ಉದರ ತನ್ನ ಮೊದಲಿನ ಸ್ಥಿತಿಗೆ ಬರದೇ ಇರಲು ಕಾರಣ ಆಗಿರಬಹುದು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ತಜ್ಞರ ಪ್ರಕಾರ ಹೆರಿಗೆಯಾದ ಎರಡು ತಿಂಗಳ ಒಳಗೆ ಮಹಿಳೆಯು ಸಾಮಾನ್ಯವಾಗಿ ತನ್ನ ದೇಹದ ಸ್ಥಿತಿಯನ್ನು ಮರಳಿ ಪಡೆಯುತ್ತಾಳೆ. ಅಂದರೆ ತನ್ನ ಹೊಟ್ಟೆಯ ಗಾತ್ರ ಮತ್ತು ಕೆಲವರಲ್ಲಿ ಊದಿಕೊಂಡ ಕೈ ಕಾಲುಗಳು, ತನ್ನ ಎಲ್ಲ ದೇಹದ ಸ್ಥಿತಿಯನ್ನು ಸಾಮಾನ್ಯವಾಗಿ ಮರಳಿ ಪಡೆಯುತ್ತಾಳೆ. ಆದರೆ, ಎರಡು ತಿಂಗಳಾದರೂ, ತನ್ನ ಉದರದ ಗಾತ್ರದಲ್ಲಿ ಸ್ವಲ್ಪವೂ ಅಥವಾ ಯಾವುದೇ ಬದಲಾವಣೆಯನ್ನು ಕಾಣದಿದ್ದರೆ, ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳಿತು.

ಹೆರಿಗೆಯಾದ ಕೆಲವು ದಿನಗಳು ತನ್ನ ಗಾತ್ರವನ್ನು ಮರಳಿ ಪಡೆಯುತ್ತಿದ್ದು, ನಂತರ ಯಾವುದೇ ಬದಲಾವಣೆ ಅಥವಾ ಗಾತ್ರ ಕಡಿಮೆಯಾಗುವುದು ನಿಂತರೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

Leave a Reply

%d bloggers like this: