ನವ ಪೋಷಕರ ಜೀವನವನ್ನು ಸುಲಭವಾಗಿಸಲು 6 ಅತ್ಯುತ್ತಮವಾದ ಉತ್ಪನ್ನಗಳು

ಪೋಷಕರಾಗಿರುವುದು ಕಷ್ಟಕರವಾಗಿರಬಹುದು ಆದರೆ ಮೊತ್ತ ಮೊದಲ ಬಾರಿಗೆ ಪೋಷಕರಾಗುವುದು ನಿಜಕ್ಕೂ ಕಠಿಣವಾಗಬಹುದು. ನಿಮ್ಮ ದೈನಂದಿನ ವಾಡಿಕೆ ಮತ್ತು ಜೀವನದೊಂದಿಗೆ, ನಿಮ್ಮ ಪುಟ್ಟ ಕಂದನನ್ನು ಆರೈಕೆ ಮಾಡುವಾಗ ಒದಗುವ ಕೆಲವು ಅಡೆತಡೆಗಳನ್ನು ಜಯಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಕಷ್ಟಕರವಾಗಿರುತ್ತದೆ. ಕೆಲವು ಉತ್ಪನ್ನಗಳ ಮೂಲಕ ದೈನಂದಿನ ಜೀವನದಲ್ಲಿ ಎದುರಾಗುವ ಹೆಚ್ಚಿನ ಅಡೆತಡೆಗಳನ್ನು ಸುಲಭವಾಗಿ ನಿಭಾಯಿಸಬಹುದು, ಇದು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ಆದ್ದರಿಂದ ಅವುಗಳನ್ನು ಪೋಷಕರಾಗುವ ಸಂದರ್ಭದಲ್ಲಿಯೂ ಬಳಕೆ ಮಾಡಬಹುದು .ನವ ಪೀಳಿಗೆಯ  ಪೋಷಕರಾಗಿ ನೀವು ಹೂಡಿಕೆ ಮಾಡಬೇಕಾದ ೬ ಉತ್ಪನ್ನಗಳು ಇಲ್ಲಿವೆ.
೧.ವಿಡಿಯೋ ಪ್ರದರ್ಶಕ (ವೀಡಿಯೊ ಮಾನಿಟರ್)

ನಿಮ್ಮ ಮಗುವಿನ ಮೇಲೆ ಸದಾ  ದೃಷ್ಟಿಯನ್ನು ಇಟ್ಟುಕೊಳ್ಳುವುದು ಕಷ್ಟಕರವಾದದ್ದು. ಕೆಲವೊಮ್ಮೆ ಕೆಲಸದಲ್ಲಿ ತಲ್ಲೆನರಾಗಿದ್ದರೆ ಇನ್ನು ಕೆಲವೊಮ್ಮೆ ಬೇರೆ ಕೋಣೆಯಲ್ಲಿನ ದೂರವಾಣಿ ಸದ್ದು ಮಾಡುವಾಗ ಅಲ್ಲಿಗೂ ಓಡಬೇಕಾಗುತ್ತದೆ. ಅಂತಹ ಸಮಸ್ಯೆಗಳು ವಾಸ್ತವವಾಗಿ ಒಂದೇ ಸ್ಥಳದಲ್ಲಿರದೆ ನಿಮ್ಮ ಮಗುವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುವ ಸಾಧನಕ್ಕೆ ಇಂಬು ನೀಡುತ್ತವೆ. ಸಾಂಪ್ರದಾಯಿಕ ಆಡಿಯೋ ಮಾನಿಟರ್ಗಿಂತ ಭಿನ್ನವಾಗಿ ಮಗುವಿನ ವೀಡಿಯೊ ಮಾನಿಟರ್ ನಿಮ್ಮ ಮಗುವಿನ ದೃಶ್ಯವನ್ನು ನಿಮಗೆ ತರುತ್ತದೆ. ಈ ಸಾಧನವು ಸಾಮಾನ್ಯವಾಗಿ ಅಂತರ್ಜಾಲ ಸ್ನೇಹಿಯಾಗಿದ್ದು, ಹಾಗಾಗಿ ಮನೆಯಲ್ಲೇ ಅಲ್ಲದೆ  ಇತರ ಸ್ಥಳಗಳಲ್ಲಿ ಕೂಡಾ ಬಳಸಬಹುದಾಗಿದೆ.

೨.ಹಾಲೂಡಿಸಲು ದಿಂಬು

ಪೋಷಕರಾಗಿ ನೀವು ಮಾಡಬಹುದಾದ ಅತ್ಯಂತ ತೃಪ್ತಿಕರ ಕಾರ್ಯ ಎಂದರೆ ನಿಮ್ಮ ಮಗುವಿಗೆ ಹಾಲೂಡಿಸುವುದು. ಆದರೆ, ನಿಮ್ಮ ಮಗುವನ್ನು ಸರಿಯಾದ ಸ್ಥಾನದಲ್ಲಿ ಹಿಡಿಯುವಂತಹ ಕೆಲವು ಸವಾಲುಗಳನ್ನು ಆಹಾರ ಅಥವಾ ಶುಶ್ರೂಷೆಯ ಸಂದರ್ಭದಲ್ಲಿ ಎದುರಿಸಬೇಕಾಗಿ ಬರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರುವಲ್ಲಿ ಹಾಲೂಡಿಸುವ ದಿಂಬು ನಿಮ್ಮ ಸಹಾಯಕ್ಕೆ ಬರುತ್ತದೆ. ಅವನು ಅಥವಾ ಅವಳು ಹಾಲುಣುತ್ತಿರುವಾಗ ಹಾಲೂಡಿಸುವ ದಿಂಬು ಅವರಿಗೆ ಆಧಾರವಾಗಿ ಕಾರ್ಯನಿರ್ವಹಿಸಿ ಮಗುವು ಆರಾಮವಾಗಿ ಹಾಲು ಕುಡಿಯಲು ಸಹಾಯ ಮಾಡುತ್ತದೆ. ಇದು ತೋಳುಗಳಿಗೆ ಒಳ್ಳೆಯದು  ಮತ್ತು ನಿಮ್ಮ ಮಗುವನ್ನು ಸರಿಯಾಗಿ ಇಡುವುದಕ್ಕೆ  ಯಾವುದೇ ಅಭ್ಯಾಸದ ಅಗತ್ಯವಿರುವುದಿಲ್ಲ.

೩.ಸರಳವಾದ ಉಷ್ಣಮಾಪಕ (ಪಾಸಿಫೈಯರ್ ಥರ್ಮಾಮೀಟರ್)

ಸಾಂಪ್ರದಾಯಿಕ ಉಷ್ಣಮಾಪಕದೊಂದಿಗೆ ನಿಮ್ಮ ಮಗುವಿನ ಉಷ್ಣಾಂಶವನ್ನು ಮೇಲ್ವಿಚಾರಣೆ ಮಾಡುವುದು ನೋವನ್ನುಂಟುಮಾಡುತ್ತದೆ ಏಕೆಂದರೆ ಇದಕ್ಕೆ  ತೀವ್ರವಾದ ಚಲನೆ ಮತ್ತು ಕಾಲಿನ ಒದೆಯುವಿಕೆಯೊಂದಿಗೆ ಬರುವ ಪ್ರಕ್ರಿಯೆಯು ಅಗತ್ಯವಾಗಿದೆ. ಸುಲಭವಾಗಿ ಕೆಲಸ ಮಾಡುವ ಉತ್ಪನ್ನವನ್ನು ಹೊಂದಿರುವ ಮೂಲಕ ಅದನ್ನು ತಪ್ಪಿಸಲು ಯಾವಾಗಲೂ ಸುಲಭವಾಗುತ್ತದೆ. ನಿಮ್ಮ ಮಗುವನ್ನು ಎಚ್ಚರಗೊಳಿಸಬೇಕಾದ ಅಗತ್ಯವನ್ನು ತಪ್ಪಿಸುವ ದೃಷ್ಟಿಯಿಂದ ಸಹ  ಸರಳವಾದ  ಉಷ್ಣಮಾಪಕವು ಫಲಕಾರಿಯಾಗಿದೆ. ಅಲ್ಲದೆ, ನಿಮ್ಮ ಮಗುವಿನ ರೋಗಗಳ  ಬಗ್ಗೆ ಚಿಂತಿಸುವ ಪೋಷಕರಲ್ಲಿ ನೀವೂ ಒಬ್ಬರಾಗಿದ್ದಲ್ಲಿ ಇದು ಒಂದು ಉತ್ತಮ ವಸ್ತುವಾಗಿದೆ ,ಇದು ಹೆಚ್ಚಿನ ಸಮಯವನ್ನೂ ಸಹ ತೆಗೆದುಕೊಳ್ಳುವುದಿಲ್ಲ .

೪.ಸ್ತನ ಪಂಪ್

ನೀವು ಹಾಲುಣಿಸಲು ನಿರ್ಧರಿಸಿದರೆ, ಸ್ತನ ಪಂಪ್ ನಿಮ್ಮ ಉತ್ತಮ ಸ್ನೇಹಿತನಾಗಬಹುದು. ಸ್ತನ ಪಂಪ್ ನಿಮ್ಮ ಮಗುವಿಗೆ ಆಹಾರಕ್ಕಾಗಿ ಮಾತ್ರವಲ್ಲದೆ  ದೀರ್ಘ ದಿನದಿಂದ ನಿಮಗೆ ವಿರಾಮ ಬೇಕಾದಾಗ ಸಹ ಸಹಾಯ ಮಾಡುತ್ತದೆ. ಕೆಲವು ದಿನಗಳು ನೀವು ಬಾಟಲಿಯಿಂದ ಮಗುವಿಗೆ ಹಾಲನ್ನು ನೀಡುವ ಸಂದರ್ಭ ಕೂಡಾ ಬರಬಹುದು. ಕೆಲವು ಸಮಯ ನೀವು ಹಾಲನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ನಿಮ್ಮ ದೇಹವು ಹಾಲು ಉತ್ಪಾದಿಸಿದ ಸಂದರ್ಭದಲ್ಲಿ ಮಗುವು ನಿದ್ರಿಸಿದಾಗ ಸ್ತನ ಪಂಪ್ ಅಗಾಧವಾಗಿ ಸಹಾಯ ಮಾಡಬಹುದು.

೫.ಶಿಶು ಸಂಬಂಧಿ ಆಪ್ಸ್

ಇಂದಿನ ದಿನಗಳಲ್ಲಿ ಜೀವನವನ್ನು ಸಂಘಟಿಸುವಲ್ಲಿ  ಅಪ್ಲಿಕೇಶನ್ಗಳು ನಮ್ಮ ವಾಡಿಕೆಯನ್ನು ಆಳುತ್ತಿವೆ. ಶಿಶು ಸಂಬಂಧಿ ಅಪ್ಲಿಕೇಶನ್ ಗಳು ಇದಕ್ಕೆ ಹೊರತಾಗಿಲ್ಲ. ಆಹಾರದ ಸಮಯದ ಮೇಲೆ ,ಮಲಗುವ ಮತ್ತು ಒದ್ದೆ ಬಟ್ಟೆಯನ್ನು ಬದಲಿಸುವ ಸಮಯದ ಮೇಲೆ ನಿಗದಿತ ವೇಳಾಪಟ್ಟಿಯನ್ನು ಹೊಂದಲು ಶಿಶು ಅಪ್ಲಿಕೇಶನ್ ಗಳು ಅತ್ಯಂತ ಉಪಯುಕ್ತವಾಗಿವೆ. ಸರಿಯಾದ ಸಮಯವನ್ನು ಇದರಲ್ಲಿ ತುಂಬಿರಿ ಮತ್ತು  ನಿಮ್ಮ ಮಗುವನ್ನು ಆಹಾರಕ್ಕಾಗಿ ಅಥವಾ ಒದ್ದೆ ಬಟ್ಟೆಯನ್ನು ಬದಲಿಸಲು ನೀವು ಮರೆಯುವ ಪ್ರಮೇಯವೇ ಇಲ್ಲ. ನಿಮ್ಮ ಮಗುವಿನ  ಸಮಯವನ್ನು  ಕರಾರುವಾಕ್ಕಾಗಿರಿಸಲು  ಇದು ಅತ್ಯಂತ ಉಪಯುಕ್ತವಾಗಿದೆ.

೬.ಚಲನವಲನಗಳ ಅವಲೋಕನಕಾರ(ಚಲನವಲನಗಳ ಮಾನಿಟರ್)

ನಿಮ್ಮ ಪುಟ್ಟ ಕಂದನು ತನ್ನ ಬೆನ್ನಿನ ಮೇಲೆ ಇರದೇ ಉರುಳಲು/ಹೊರಳಲು ಪ್ರಾರಂಭಿಸಿದಾಗ ಎಲ್ಲ ತಾಯಂದಿರು ಖುಷಿಯ ಜೊತೆ ಆತಂಕಿತರಾಗುತ್ತಾರೆ . ನೀವು ಭೌತಿಕವಾಗಿ ಇದ್ದಾಗಲೂ ಅಥವಾ ಮಗುವಿನ ಮಾನಿಟರ್ ಅನ್ನು ಹೊಂದಿರುವಾಗಲೂ ಜಾಡನ್ನು (ಟ್ರ್ಯಾಕ್) ಅನ್ನು ಇರಿಸುವುದು ಕಷ್ಟವಾಗಬಹುದು. ಇದಕ್ಕಾಗಿ ಚಲನವಲನಗಳ ಮಾನಿಟರ್ ಅನ್ನು ನಿಮ್ಮ ಮಗುವಿನ ಡೈಪರ್ ಗೆ ಜೋಡಿಸಬಹುದು. ಏನಾದರೂ ಆದಲ್ಲಿ ನಿಮ್ಮ ಗಮನವನ್ನು ಸೆಳೆಯುವ ಶಬ್ದವನ್ನು (ಬುಝರ್) ಅನ್ನು ಅಳವಡಿಸಿದ್ದರಿಂದ ನಿಮಗೆ ತಿಳಿಯಲು ಸಹಾಯವಾಗುತ್ತದೆ .

Leave a Reply

%d bloggers like this: