ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತವೆ?

ಮುಂದಿನ ಬಾರಿ ನೀವು ನಿಮ್ಮ ಉಗುರುಗಳನ್ನ ಕತ್ತಿರಿಸುವ ಮುನ್ನ ಅವುಗಳ ಮೇಲೆ ಒಮ್ಮೆ ಸರಿಯಾಗಿ ಕಣ್ಣಾಡಿಸಿ. ನಿಮ್ಮ ಉಗುರಿನ ಆಕಾರ, ಬಣ್ಣ ಮತ್ತು ಸ್ಥಿತಿ ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಸೂಚನೆ ನೀಡುತ್ತವೆ. ನಮ್ಮಲ್ಲಿ ಬಹಳಷ್ಟು ಜನ ಉಗುರುಗಳಿಗೆ ಬಣ್ಣ ಹಚ್ಚುವುದರಲ್ಲೇ ಕಾಲ ಕಳೆಯುತ್ತೇವೆ ಹೊರತು ಅವುಗಳು ಹಾಗೆಯೇ ಹೇಗಿವೆ ಎಂದು ತೀಕ್ಷ್ನವಾಗಿ ಗಮನಿಸುವುದಿಲ್ಲ.

ತಜ್ಞರಾದ ಡಾ ।। ಮಧುಸೂಧನ್ ಅವರು ವೈದ್ಯಕೀಯ ವ್ಯಾಸಂಗ ಮಾಡುವಾಗ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊದಲು ರೋಗಿಗಳ ಉಗುರುಗಳನ್ನ ನೋಡಿ ನಂತರವೇ ತಪಾಸಣೆ ಮಾಡಲು ಹೇಳಿಕೊಡವರು ಎಂದು ತಿಳಿಸುತ್ತಾರೆ. ಅವರು ನಮಗೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರು. ನಿಮ್ಮ ಉಗುರುಗಳು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂಬುದರ ಬಗ್ಗೆ  ಮಧುಸೂಧನ್ ಅವರು ನಮಗೆ ನೀಡಿದ ಮಾಹಿತಿಯನ್ನ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ ಓದಿ.

೧. ನಿಮ್ನ (ಒಳಬಾಗಿದ/ ಚಮಚ ಆಕಾರದ) ಉಗುರುಗಳು

ಇಂತಹ ಉಗುರುಗಳನ್ನ ಕೊಯಿಲೋನಿಕ್ಯಾಸ್ ಎಂದು ಕೂಡ ಕರೆಯುವರು. ಹೆಸರೇ ಹೇಳುವ ಹಾಗೆ ಇವುಗಳು ಒಳಬದಿಯಲ್ಲಿ ಬಾಗಿರುತ್ತವೆ.

ಮಧುಸೂಧನ್ ಅವರು ಇದು ಕೆಂಪು ರಕ್ತ ಜೀವಕೋಶಗಳ ಕೊರತೆ ಇಂದ ಉಂಟಾಗುವ ಕಬ್ಬಿಣದ ಅಂಶದ ಕೊರತೆಯನ್ನು ಸೂಚಿಸುತ್ತದೆ ಎನ್ನುವರು. ಕೆಲವೊಂದು ಪ್ರಕರಣಗಳಲ್ಲಿ ಇದು ರಯ್ನಾಡ್ಸ್  ಕಾಯಿಲೆ ಅಥವಾ ಹೈಪೋಥೈರಾಯಿಡ್ಇಸಂ ಕೂಡ ಸೂಚಿಸುತ್ತಿರಬಹುದು.

೨. ಅಡ್ಡಡ್ಡ ಗೆರೆಗಳಿರುವ ಉಗುರುಗಳು

ಇವುಗಳನ್ನ ಚೆಲುವ ಗೆರೆಗಳು ಎಂದು ಕೂಡ ಕರೆಯುವರು. ಇವುಗಳು ನಿಮ್ಮ ಉಗುರುಗಳ ಮೇಲಿರುವ ಆಳವಾದ ಅಡ್ಡಡ್ಡ ಗೆರೆಗಳು.

ವೈದ್ಯರು ಹೇಳುವ ಪ್ರಕಾರ ಇದು ನಿಮ್ಮ ಆಹಾರದಲ್ಲಿನ ಜಿಂಕ್ (ಸತು) ಕೊರತೆಯನ್ನ ಸೂಚಿಸುತ್ತದೆ. ಅನಾರೋಗ್ಯ, ಗಾಯ ಅಥವಾ ಶೀತಲ ವಾತಾವರಣದಿಂದ ಈ ಗೆರೆಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ರಾಯ್ನಡ್ಸ್  ಕಾಯಿಲೆ ಇದ್ದರೆ ಈ ಗೆರೆಗಳು ಉಗುರುಗಳ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.

೩. ಬಿಳಿ ಕಲೆಗಳು

ಉಗುರಿನ ಮೇಲ್ಮೈ ಮೇಲೆ ಬಿಳಿಯ ಪ್ಯಾಚ್ ಗಳು ಕಾಣಿಸಿಕೊಳ್ಳುತ್ತವೆ ಹಾಗು ಬಿಳಿಚಿಕೊಂಡಂತೆ ಕಾಣುತ್ತವೆ.

ಇದಕ್ಕೆ ಸಹಜವಾದ ಕಾರಣಗಳು ಎಂದರೆ ಅವು ಫಂಗಲ್ ಸೋಂಕು ಅಥವಾ ರಕ್ತವು ಬೆರಳಿನ ತುದಿಯವರೆಗೆ ಸರಿಯಾಗಿ ಹರಿಯದೆ ಇರುವುದು. ಈ ಉಗುರುಗಳನ್ನು ಟೆರ್ರಿಸ್ ನೈಲ್ಸ್  ಎಂದು ಕೂಡ ಕರೆಯುತ್ತಾರೆ.

ಟೆರ್ರಿಸ್ ನೈಲ್ಸ್  ಮತ್ತಷ್ಟು ವೈದ್ಯಕೀಯ ತೊಡಕುಗಳ ಬಗ್ಗೆ ಸೂಚಿಸುತ್ತವೆ. ಅವುಗಳು ಯಾವು ಅಂದರೆ :

೧. ಮಧುಮೇಹ

೨. ಲಿವರ್, ಕಿಡ್ನಿ ಫೇಲ್ಯೂರ್

೩. ಹೈಪರ್ ಥೈರಾಯಿಡ್

೪. ಕಬ್ಬಿಣದ ಕೊರತೆ

೫. ಅಪೌಷ್ಟಿಕತೆ

೪. ಹಳದಿ ಉಗುರುಗಳು

ಇದು ನೋಡಿದ ತಕ್ಷಣ ನಿಮಗೇ  ತಿಳಿಯುವುದು. ಉಗುರುಗಳ ಮೇಲೆ ತಿಳಿಯಾದ ಹಳದಿ ಬಣ್ಣ ಅಥವಾ ಹಳದಿ ಟಿಂಟ್ ಇರಬಹುದು.

ಇದಕ್ಕೆ ಕಾರಣಗಳು ಹಲವಾರು ಇರಬಹುದು – ಫಂಗಲ್ ಸೋಂಕು, ಉಗುರು ಸೋರಿಯಾಸಿಸ್, ಟ್ಯೂಬರ್ಕ್ಯುಲೋಸಿಸ್, ಜಾಂಡೀಸ್, ಸೈನುಸೈಟಿಸ್. ಮಧುಮೇಹ ಉಗುರುಗಳೊಂದಿಗೆ ಚರ್ಮವನ್ನು ಕೂಡ ಹಳದಿ ಮಾಡುತ್ತದೆ. ಗ್ಲುಕೋಸ್ ವಿಭಜನೆಗೊಂಡು ಉಗುರಿನಲ್ಲಿರುವ ಕಾಲಜನ್ ಮೇಲೆ ಬೀರುವ ಪರಿಣಾಮವೇ ಬಣ್ಣದ ಬದಲಾವಣೆಗೆ ಕಾರಣ. ಆದರೆ ಅದೃಷ್ಟವಶಾತ್ ಬಹಳಷ್ಟು ಕಲೆ ಹೊಂದಿರುವ ಉಗುರುಗಳಿಗೆ ಕಾರಣ, ಬಹಳ ಗಾಢ ಬಣ್ಣದ ನೈಲ್ ಪಾಲಿಶ್  ಅನ್ನು ಪದೇ ಪದೇ ಹಚ್ಚುವುದು.

೫. ದಪ್ಪವಾದ ಉಗುರುಗಳು

ದಪ್ಪವಾದ ಉಗುರುಗಳು ಮಿತಿಮೀರಿ ಬೆಳೆಯಬಹುದು ಮತ್ತು ಬಣ್ಣವನ್ನ ಬಿಡಬಹುದು.

ಡಾ ।। ಮಧುಸೂಧನ್ ಹೇಳುವ ಪ್ರಕಾರ ಇದು ಒಂದು ಫಂಗಲ್ ಸೋಂಕಿನಿಂದ ಆಗಿರಬೇಕು ಇಲ್ಲವಾದಲ್ಲಿ ಓನಿಖೋಗ್ರಾಯ್ಫೋಸಿಸ್ ಎಂಬ ವೃದ್ಧರಲ್ಲಿ ಕಾಣಿಸಿಕೊಳ್ಳುವ ಒಂದು ತೊಡಕು ಆಗಿರಬಹುದು.

ಇವುಗಳನ್ನ ನೀವು ಸರಿಯಾಗಿಸಿಕೊಳ್ಳುವುದು ಹೇಗೆ?

ನೀವು ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಂಡಿದ್ದೀರಾ ಎಂಬುದನ್ನ ಖಚಿತ ಮಾಡಿಕೊಳ್ಳಿ ಮತ್ತು ಅಪಾರ ಕಬ್ಬಿಣ ಅಂಶ ಹೊಂದಿರುವ ಆಹಾರಗಳು (ಕೆಂಪು ಮಾಂಸ, ಎಲೆ ತರಕಾರಿಗಳು), ಜಿಂಕ್ ಹೊಂದಿರುವ ಆಹಾರಗಳು (ಡಾರ್ಕ್ ಚಾಕಲೇಟ್, ಕಡಲೇಬೀಜ ) ಮತ್ತು ಬಿ12 ವಿಟಮಿನ್ ಹೊಂದಿರುವಂತ ಆಹಾರ (ಮೊಟ್ಟೆ , ಕೆನೆಹಾಲು) ಸೇವಿಸಲೇ ಬೇಕು. ನಿಮ್ಮ ಕೈಗಳನ್ನು ಮತ್ತು ಉಗುರುಗಳನ್ನು ಯಾವಾಗಲೂ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.. ನಿಮ್ಮ ವೈದ್ಯರು ನಿಮ್ಮಲ್ಲಿ ವಿಟಮಿನ್ ಗಾಲ ಕೊರತೆ ಉಂಟಾಗಿದೆ ಎಂದರೆ ಸಪ್ಲಿಮೆಂಟ್ ಸೇವಿಸಿ.

Leave a Reply

%d bloggers like this: