ನಿಮ್ಮ ಮಗುವಿಗೆ ಯಾವ ಲಸಿಕೆ, ಯಾವಾಗ : ಎಲ್ಲಾ ಲಸಿಕೆಗಳ ಮಾಹಿತಿ

ತಾಯಿಯ ಗರ್ಭದಲ್ಲಿ ಶಿಶುವು ತುಂಬಾ ಸುರಕ್ಷಿತವಾಗಿ ಆರಾಮವಾಗಿರುತ್ತದೆ. ಆದರೆ ತಾಯಿಯ ಉದರದಿಂದ ಹೊರ ಪ್ರಪಂಚಕ್ಕೆ ಕಾಲಿಟ್ಟೊಡನೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಮತ್ತು ಶಿಶುವಿನ ಶರೀರ ತುಂಬಾ ಸೂಕ್ಷ್ಮವಾಗಿರುವುದರಿಂದ ಬೇಗನೆ ಅನಾರೋಗ್ಯಕ್ಕೆ ತುತ್ತಾಗಬಹುದು. ಮಗುವನ್ನು ಆರೋಗ್ಯವಾಗಿರಿಸಲು ಲಸಿಕೆಗಳನ್ನು ಹಾಕಿಸುವುದು ಒಳ್ಳೆಯದು.

ಸಾಮಾನ್ಯವಾಗಿ ಪೋಷಕರಲ್ಲಿ ಕಾಡುವ ಪ್ರಶ್ನೆ ಎಂದರೆ

ಮಗುವಿಗೆ ಯಾವ ಲಸಿಕೆಯನ್ನು ನಾವು ಹಾಕಿಸಬೇಕು? ಮಗುವಿಗೆ ಲಸಿಕೆಯನ್ನು ಯಾವಾಗ ಹಾಕಿಸಬೇಕು? ಅಥವಾ ಮಗುವಿನ ಯಾವ ವಯಸ್ಸಿನಲ್ಲಿ ಯಾವ ಲಸಿಕೆಯನ್ನು ಹಾಕಿಸಬೇಕು? ನಾವು ಮರೆತು ಲಸಿಕೆ ಹಾಕಿಸಲಿಲ್ಲ ಎಂದರೆ ತೊಂದರೆಯೇ?

ಚಿಂತಿಸದಿರಿ ನಿಮಗೆ ಸಹಾಯ ಮಾಡಲು ಈ ಲೇಖನವನ್ನು ಬರೆದಿರುವೆವು,

ಲಸಿಕೆ

ತಡೆಗಟ್ಟುತ್ತದೆ

ವಯಸ್ಸು

BCG

ಟಿ.ಬಿ ಮತ್ತು ಬ್ಲ್ಯಾಡರ್ ಕ್ಯಾನ್ಸರ್

ಜನನದಲ್ಲಿ

HepB

Hepatitis B

ಜನನದಲ್ಲಿ(೮ ವಾರಗಳ ನಂತರ Dose ೨)

OPV

ಪೋಲಿಯೊ

ಜನನದಲ್ಲಿ(೪ ವಾರಗಳ ನಂತರ Dose ೨, ೮ನೇ ವಾರದಲ್ಲಿ DOse ೩)

DTP

Diphtheria, Tetanus & Pertussis

ಮಗು ಜನಿಸಿದ ೬ನೇ ವಾರದಲ್ಲಿ

HIB

Infections caused by Bacteria

೬ನೇ ವಾರದಲ್ಲಿ

PCV

Pneumococcal Conjugate Vaccine

೬ನೇ ವಾರದಲ್ಲಿ

RV

Severe Diarrheal Disease

೬ನೇ ವಾರದಲ್ಲಿ

ಟೈಫಾಯಿಡ್

ಟೈಫಾಯಿಡ್ ಜ್ವರ ಮತ್ತು ಡೈರ್ಹೆಯಾ

೯ನೇ ತಿಂಗಳು

MMR

Measles, Mumps ಮತ್ತು ರುಬೆಲ್ಲಾ

೯ನೇ ತಿಂಗಳು

varicella

Chickenpox

೧ವರ್ಷ

HepA

ಲಿವರ್ ಕಾಯಿಲೆ

೧ವರ್ಷ

Tdap

Diphtheria, Tetanus & Pertussis

೭ವರ್ಷ

ಸೂಚನೆ : ಲಸಿಕೆಗಳನ್ನು ಶಿಶುಗಳಿಗೆ ಹಲವು ಅಥವಾ ಎರಡರಿಂದ ಮೂರೂ ಲಸಿಕೆಗಳಾಗಿ ಮೊದಲ ಡೋಸೇಜ್ ನೀಡಿದ ಬಳಿಕ ನಿಯಮಿತ ಅಂತರದಲ್ಲಿ ನೀಡುತ್ತಾರೆ. ನಿಮ್ಮ ಮಗುವಿಗೆ ಮೊದಲ ಲಸಿಕೆ ಹಾಕಿಸಿದ ದಿನ ಮುಂದಿನ ಲಸಿಕೆಯ ಬಗ್ಗೆ ಅವರಿಂದ ಸಂಪೂರ್ಣ ಮಾಹಿತಿ ಪಡೆಯುದು ಒಳ್ಳೆಯದು.

ಕೆಲವು ಲಸಿಕೆಗಳನ್ನು ಮಗುವು ೬ ವರ್ಷ ತುಂಬುವವರೆಗೂ ನಿಗದಿತ ಸಮಯದ ಅಂತರದಲ್ಲಿ ನೀಡುತ್ತಾರೆ. ಕೆಲವನ್ನು ಎರಡು ಡೋಸೇಜ್ ಗೆ ನಿಲ್ಲಿಸುತ್ತಾರೆ.

ಮೇಲೆ ನೀಡಿರುವ ಟೇಬಲ್(ಕೌಷ್ಟುಕದಲ್ಲಿ) BCG ಅನ್ನು ಒರತುಪಡಿಸಿ ಉಳಿದ ಎಲ್ಲಾ ಲಸಿಕೆಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ನೀಡಲಾಗುತ್ತದೆ.

ನಾವು ಮರೆತು ಲಸಿಕೆ ಹಾಕಿಸಲಿಲ್ಲ?

ನೀವು ಲಸಿಕೆ ಹಾಕುವ ದಿನವನ್ನು ಮರೆತು ಒಂದೆರಡು ದಿನ ತಡವಾಗಿ ಲಸಿಕೆ ಹಾಕಿಸುವುದು ತೊಂದರೆಯಿಲ್ಲ. ಆದರೆ, ಮಗುವಿಗೆ ಲಸಿಕೆಯನ್ನೇ ಹಾಕಿಸಿಲ್ಲ ಎಂದರೆ ಕೂಡಲೇ ನಿಮ್ಮ ಶಿಶು ವೈದ್ಯರನ್ನು ಅಥವಾ ಮಕ್ಕಳ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

Leave a Reply

%d bloggers like this: