ನಿಮ್ಮ ಮಗುವಿಗೆ ಹುಷಾರಿಲ್ಲದಿದ್ದಾಗ ಸೇವಿಸಲು ಏನನ್ನು ನೀಡುವಿರಿ? ಇದನ್ನೇ ನೀಡುತ್ತಿರುವಿರಿ ತಾನೇ?!

ಪೋಷಕರು ಹುಷಾರಿಲ್ಲದ ಮಗುವಿಗೆ ಏನು ಆಹಾರವನ್ನು ಕೊಡಬೇಕು ಎಂಬ ಗೊಂದಲದಲ್ಲಿ ಇರುವುದು ಸಾಮಾನ್ಯ. ಸಾಮಾನ್ಯವಾಗಿ ಹುಷಾರಿಲ್ಲ ಎಂದರೆ, ಹಸಿವು ಕಾಣಿಸುವುದಿಲ್ಲ ಮತ್ತು ಊಟವನ್ನು ಬೇಡ ಎಂದು ಹೇಳುತ್ತಾರೆ, ಹಾಗೆಂದು ಆಹಾರ ನೀಡದೆ ಇದ್ದರೆ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಸಣ್ಣ ಕಾಯಿಲೆ ದೊಡ್ಡ ಪರಿಣಾಮವನ್ನು ಬೀರಬಹುದು.

ಈ ಸಮಯದಲ್ಲಿ ನೀವು ಏನು ಮಾಡಬೇಕು?

ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಔಷಧಿಗಳನ್ನು ನೀಡುವುದು. ಜೊತೆಗೆ ನಿಮ್ಮ ಮಗುವು ಹೆಚ್ಚು ನೀರು ಕುಡಿಯುವಂತೆ ಹೇಳಿ. ಮಗುವಿನ ದೇಹವನ್ನು ಜಲೀಕರಣದಿಂದ ಕೂಡಿರುವಂತೆ ನೋಡಿಕೊಳ್ಳಿ.

ಮಗು ಅನಾರೋಗ್ಯಕ್ಕೆ ಗುರಿಯಾದಾಗ ಅವರ ಉದರದಲ್ಲಿ ಜಠರವು ವಿಶ್ರಾಂತಿಯನ್ನು ಬಯಸುತ್ತದೆ, ಆದ್ದರಿಂದ ಅದು ಹಸಿವನ್ನು ತೋರಿಸುವುದಿಲ್ಲ ಅಥವಾ ಹೆಚ್ಚು ಆಹಾರವನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನೀವು ದ್ರವ ರೂಪದ ಆಹಾರವನ್ನು ಮಾತ್ರ ನೀಡುವುದು ಉತ್ತಮ.

ನಿಮ್ಮ ಮಗುವಿಗೆ ಹಸಿವು ಇಲ್ಲ ಎಂದರು ಪೌಷ್ಟಿಕಾಂಶಗಳ ಅಗತ್ಯ ತುಂಬಾ ಇರುತ್ತದೆ, ರೋಗ ಉಂಟುಮಾಡುವ ಕೋಶಗಳನ್ನು ನಾಶಮಾಡಲು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಚೆನ್ನಾಗಿರಬೇಕು. ಇದನ್ನು ಉತ್ತಮವಾಗಿರಿಸಲು ಪೌಷ್ಟಿಕಾಂಶಗಳ ಅಗತ್ಯವಿದೆ.

ನೆನಪಿರಲಿ ನಿಮ್ಮ ಮಗುವು ಈಗ ಮೊದಲಿನಂತೆ ಆಹಾರವನ್ನು ಸೇವಿಸದೇ ಇರಬಹುದು ಅಥವಾ ಆಹಾರವನ್ನು ಬೇಡ ಎನ್ನಬಹುದು, ಆದರೆ ಜಠರ ಹೆಚ್ಚು ಕೆಲಸ ಮಾಡಲು ಸಾಧ್ಯವಾಗದ ಕಾರಣ ದ್ರವ ರೂಪದ ಆಹಾರವನ್ನು ಮಾತ್ರ ನೀಡಿ ಕ್ರಮೇಣ ನಿಧಾನವಾಗಿ ಘನ ರೂಪದ ಆಹಾರವನ್ನು ನೀಡಿ.

ಇವುಗಳನ್ನು ನೀಡಿ- ಹಣ್ಣಿನ ರಸ, ಗಂಜಿ, ಬೇಗ ಜೀರ್ಣವಾಗುವ ಆರೋಗ್ಯಕರ ಆಹಾರ ಪದಾರ್ಥ ಮತ್ತು ಚಿಕನ್ ಸೂಪ್.

ಈ ಕೆಳಗಿನ ಪಟ್ಟಿಯಲ್ಲಿ ಯಾವ ಅನಾರೋಗ್ಯಕ್ಕೆ ಯಾವ ಆಹಾರವನ್ನು ನೀಡಬಹುದು ಎಂಬುದನ್ನು ನೀಡಲಾಗಿದೆ.

ಅನಾರೋಗ್ಯ

ನೀಡಬಹುದಾದ ಆಹಾರ

ಶೀತ

ಬಿಸಿ ನೀರು, ಶುಂಠಿ ರಸ, ಚಿಕನ್ ಸೂಪ್

ಜ್ವರ

ರವೆ ಗಂಜಿ, ಒಣ ದ್ರಾಕ್ಷಿ ಮತ್ತು ದಾಲ್ಚಿನ್ನಿಯನ್ನು ಸಕ್ಕರೆಯೊಂದಿಗೆ ಸೇರಿಸಿ ಅದರ ರಸ ನೀಡಿ, ಮೊಸರು, ಹೆಚ್ಚು ದ್ರವ ಆಹಾರಗಳನ್ನು ನೀಡಿ.

ವಾಂತಿ

ಚಿಕನ್ ಸೂಪ್, ಗೋಧಿ ಬಿಸ್ಕತ್, ಪಾನ್ ಕೇಕ್,(ನೀರಿನಾಂಶ ಕಡಿಮೆಯಾಗುವುದರಿಂದ ಹೆಚ್ಚು ನೀರನ್ನು ಕುಡಿಯುವುದು ಒಳ್ಳೆಯದು, ಸುಸ್ತು ಕಡಿಮೆಯಾಗಲು ಗ್ಲುಕೋಸ್ ಅನ್ನು ಸೇರಿಸಿಕೊಂಡು ಕುಡಿಯಬಹುದು).

ಗಂಟಲು ನೋವು

ಹಣ್ಣಿನ ರಸಗಳು, ಜೇನುತುಪ್ಪ ಸೇರಿಸಿರುವ ಬಿಸಿ ಟೀ, ಶುಂಠಿ ಟೀ.

ಮಲಬದ್ಧತೆ

ಒಣ ದ್ರಾಕ್ಷಿ, ಸೇಬು, ಕಿತ್ತಳೆಹಣ್ಣು, ಕ್ಯಾರೆಟ್, ಚೆರ್ರಿ ಹಣ್ಣು, ಹೆಚ್ಚು ಫೈಬರ್ ಯುಳ್ಳ ಆಹಾರಗಳು ಮತ್ತು ಹೆಚ್ಚು ನೀರು.

Leave a Reply

%d bloggers like this: