ನಿಮ್ಮ ಮನೆಯಲ್ಲೇ ಬೆಳೆಯುವ ಈ ಗಿಡಗಳು ನಿಮ್ಮನ್ನು ಗಟ್ಟಿ ಮುಟ್ಟು ಮಾಡುತ್ತವೆ!

ಭಾರತ ದೇಶವು ಹಿಂದಿನ ಕಾಲದಿಂದಲೂ ಗಿಡ ಮೂಲಿಕೆ ಔಷಧಿಗಳಿಂದ ನೈಸರ್ಗಿಕವಾಗಿ ಅರೋಗ್ಯ ವೃದ್ಧಿಸಿಕೊಳ್ಳುವ ವಿಷಯಗಳನ್ನು ಹೇಳಿಕೊಟ್ಟಿದೆ. ಆದರೆ, ವೈಜ್ಞಾನಿಕ ಪದ್ಧತಿ ಇಂಗ್ಲಿಷ್ ಔಷದಿ ಎಂದು ಅದರ ಸೇವನೆ ಬಹಳ ಮಾಡುತ್ತಿರುವುದು ಬೇಸರದ ಸಂಗತಿ. ಕಾಯಿಲೆ ಬಂದ ಮೇಲೆ ಔಷಧಿ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬರುವುದನ್ನು ತಡೆಗಟ್ಟುವುದು ತುಂಬಾ ಒಳ್ಳೆಯದು. ಇಲ್ಲಿ ನೀಡಿರುವ ನಿಮ್ಮ ಮನೆಯಂಗಳದಲ್ಲಿ ಸಿಗುವ ಅಥವಾ ಬೆಳೆಯಬಹುದಾದ ಸಸ್ಯಗಳಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.

ಈ ಸಸ್ಯಗಳು ತಮ್ಮಲ್ಲಿ ಔಷಧೀಯ ಗುಣಗಳನ್ನು ಹೊಂದಿವೆ ಎಂದು ವೈಜ್ಞಾನಿಕವಾಗಿ ಕೂಡ ಸಾಭೀತಾಗಿದೆ. ನೈಸರ್ಗಿಕವಾದ ಈ ಸಸ್ಯಗಳ ಬಳಕೆ ಮಾಡುವುದರಿಂದ ಯಾವುದೇ ಅಡ್ಡಪರಿಣಾಮದ ಭಯವಿಲ್ಲ. ಅತಿಯಾದ ಇಂಗ್ಲಿಷ್ ಔಷಧಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ವಿಜ್ಞಾನವೇ ಹೇಳುತ್ತದೆ.

೧.ಅಮೃತಬಳ್ಳಿ

ಇದನ್ನು ಯಾರು ಬೇಕಾದರೂ ಸೇವಿಸಬಹುದು. ಇದು ಸಾಮಾನ್ಯವಾಗಿ ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಿದ್ದರು, ಹೆಸರೇ ಸೂಚಿಸುವಂತೆ ಇದು ಒಂದು ಬಳ್ಳಿಯಾಗಿದ್ದು, ಹಲವು ಔಷದಿಯ ಗುಣಗಳನ್ನು ಹೊಂದಿದೆ.

ಜ್ವರ ಇದ್ದರೆ, ಊಟದ ನಂತರ ೪ ಚಮಚ ಅಮೃತಬಳ್ಳಿ ಕಾಂಡದ ರಸವನ್ನು ಒಂದು ಚಮಚ ಜೇನುತುಪ್ಪದ ಜೊತೆಗೆ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಮಕ್ಕಳಾದರೆ ಇದರಲ್ಲಿ ಅರ್ಧ ಪ್ರಮಾಣವನ್ನು ನೀಡಿ. ಇದರ ಒಣಗಿದ ಕಾಂಡದಿಂದ ಕಷಾಯವನ್ನು ಮಾಡಿ ಸೇವಿಸುವುದು ಒಳ್ಳೆಯದು.

ಚರ್ಮರೋಗ: ಚರ್ಮದ ಸಮಸ್ಯೆ ಇದ್ದರೆ, ಇದರ ಎಲೆಯನ್ನು ತೊಳೆದು ಅರಿಶಿಣದ ಜೊತೆ ಹರೆದು ಚರ್ಮ ಕಲೆ ಅಥವಾ ಚರ್ಮ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿರಿ, ೧೦-೧೫ ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

ಮಧುಮೇಹ: ಇದರ ಕಾಂಡದ ರಸವನ್ನು ಕಾಲಿ ಹೊಟ್ಟೆಯಲ್ಲಿ ದಿನ ಸೇವಿಸುವುದರಿಂದ ಸಕ್ಕರೆ ರೋಗ ನಿಯಂತ್ರಣಕ್ಕ್ಕೆ ಬರುತ್ತದೆ.

೨.ತುಳಸಿ

ಇದು ಎಲ್ಲರ ಮನೆಮುಂದೆ ಕಾಣಸಿಗುವ ಸಸ್ಯ. ಇದರ ಪರಿಚಯ ಎಲ್ಲರಿಗೂ ಇದೆ. ಆದರೆ ಇದರ ಔಷದಿಯ ಗುಣವನ್ನು ನೀವು ತಿಳಿದುಕೊಂಡಿಲ್ಲ. ಇದರ ಕೆಲವು ಉಪಯೋಗಗಳನ್ನು ನಮ್ಮ ಗ್ರಾಮೀಣ ಜನರು ತಿಳಿದುಕೊಂಡಿದ್ದಾರೆ.

ಕೆಮ್ಮು, ಶೀತ ಮತ್ತು ನಗಡಿ ಇರುವವರು, ೧೦ ತುಳಸಿ ಎಲೆಗಳನ್ನು ಊಟದ ನಂತರ ಸೇವಿಸುವುದರಿಂದ ಇದರಿಂದ ಮುಕ್ತಿ ಪಡೆಯಬಹುದು. ಮಕ್ಕಳು ಎಲೆ ತಿನ್ನಲು ಇಚ್ಛಿಸದಿದ್ದರೆ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಬಹುದು.

ಚರ್ಮ ಸಮಸ್ಯೆ: ಇದರ ಎಲೆಯ ರಸವನ್ನು ಅರಿಶಿಣ ಪುಡಿ ಜೊತೆ ಮಿಶ್ರಿಸಿ ಚರ್ಮ ತೊಂದರೆ ಇರುವ ಜಾಗದಲ್ಲಿ ಹಚ್ಚಿ ಅರ್ಧ ಗಂಟೆ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಜಂತುಹುಳು: ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬರುವ ಜಂತುಹುಳು ಸಮಸ್ಯೆಗೆ ತುಳಸಿ ಬೀಜವನ್ನು ಬೆಲ್ಲದೊಂದಿಗೆ ಸೇರಿಸಿ ಊಟದ ನಂತರ ನೀಡುವುದು ಇದರ ನಿವಾರಣೆಗೆ ಸಹಾಯವಾಗುತ್ತದೆ.

ತುಳಸಿಯ ೮-೧೦ ಎಲೆಗಳನ್ನು ಒಂದು ಸಣ್ಣ ಪಾತ್ರೆಯ ನೀರಿಗೆ ಹಾಕಿದರೆ ನೀರು ಶುದ್ಧವಾಗುತ್ತದೆ.

ಮನೆಯ ಸುತ್ತ ತುಳಸಿ ಗಿಡ ಬೆಳಸಿದರೆ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.

೩.ಒಂದೆಲಗ

ಇದರ ಒಂದು ಎಲೆ ಹಲವು ಔಷದಿಯ ಗುಣಗಳನ್ನು ಹೊಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಇದರ ಎಲೆಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಮತ್ತು ಸರಾಗವಾಗಿ ತೊದಲಿಸದೆ ಮಾತನಾಡಬಹುದು.

ಇದನ್ನು ಎಣ್ಣೆ ಮಾಡಿ ತಲೆಯ ನೆತ್ತಿ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ನೆಮ್ಮದಿ ಸಿಗುತ್ತದೆ.

ಮಕ್ಕಳಿಗೆ ಇದರ ರಸವನ್ನು ಜೇನುತುಪ್ಪದೊಡನೆ ನೀಡುವುದರಿಂದ ಚುರುಕಾಗುತ್ತಾರೆ, ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ.

೪.ಕರಿಬೇವು ಸೊಪ್ಪು

ಇದು ಪ್ರತಿಯೊಬ್ಬರಿಗೂ ತಿಳಿದಿರುವ ಸಸ್ಯ, ಸಸ್ಯ ಗೊತ್ತಿಲ್ಲ ಎಂದರು ಇದರ ಎಲೆಗಳು ಪರಿಚಿತ. ಪ್ರತಿದಿನ ಬಳಸುವ ಅಡುಗೆಯಲ್ಲಿ ಇದು ಇರಲೇಬೇಕು.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು, ಬೊಜ್ಜು ಕರಗಿಸಲು ಬೆಳಿಗ್ಗೆ ಕಾಲಿ ಹೊಟ್ಟೆಗೆ ಇದರ ಎಲೆಗಳನ್ನು ತಿನ್ನುವುದು ತುಂಬಾ ಬೇಗ ನಿಮ್ಮ ಬೊಜ್ಜನ್ನು ಕರಗಿಸುತ್ತದೆ.

ಇದರ ಎಲೆಯನ್ನು ಪುಡಿಮಾಡಿ ಎರಡು ಹನಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ರಕ್ತಹೀನತೆಯ ತೊಂದರೆಯನ್ನು ಬೇಗನೆ ಗುಣಪಡಿಸಿಕೊಳ್ಳಬಹುದು.

ಕತ್ತರಿಸಿದ ಕರಿಬೇವು ಸೊಪ್ಪಿನಲ್ಲಿ ನೀರಿನಾಂಶ ಹೋಗುವವರೆಗೆ ಹುರಿದು, ಬೆಚ್ಚಗಿರುವ ಕೊಬ್ಬರಿ ಅಥವಾ ಎಳ್ಳೆಣ್ಣೆಯ ಜೊತೆ ಸೇರಿಸಿ ಆರಿಸಿ, ಶೋಧಿಸಿ ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆ ಮಾಡಬಹುದು ಮತ್ತು ಉತ್ತಮ ಕೂದಲನ್ನು ಪಡೆಯಬಹುದು.

Leave a Reply

%d bloggers like this: