ಪ್ರಸವದ ನಂತರ ಋತುಸ್ರಾವದಲ್ಲಿ ಉಂಟಾಗುವ ಬದಲಾವಣೆಗಳು

ಪ್ರಸವದ ನಂತರ, ನಿಮ್ಮ ಮಾನಸಿಕ ಹಾಗೂ ಶಾರೀರಿಕ ಒತ್ತಡಗಳೂ, ಆತಂಕಗಳೂ ಕೊನೆಗೊಂಡಿತೆಂದು ನಿಟ್ಟುಸಿರು ಬಿಡಬೇಡಿ. ಅಷ್ಟಕ್ಕೆ ಕತೆ ಮುಗಿದಿಲ್ಲ.

ಗರ್ಭಧಾರಣೆಯ ಸಮಯದ ಮಾಸಿಕ ಋತುಸ್ರಾವ

ಎಲ್ಲಾ ತಿಂಗಳುಗಳಲ್ಲೂ, ಯಥಾಪ್ರಕಾರ ಋತುಸ್ರಾವವಾಗುತ್ತಿದೆ ಎಂದಾದರೆ, ನೀವು ಗರ್ಭ ಧರಿಸಿಲ್ಲವೆಂದರ್ಥ.ಗರ್ಭಧಾರಣೆಯಾಗಿದ್ದರೆ, ಋತುಸ್ರಾವ ನಿಲ್ಲುವುದು. ಗರ್ಭಿಣಿಯಾದ ಯಾವುದೇ ಹಂತದಲ್ಲೂ, ಋತುಸ್ರಾವವಾಗುವುದಿಲ್ಲ. ಬಹಳ ಅಪರೂಪಕ್ಕೆ, ಒಂದೊಂದು ತೊಟ್ಟು ಸ್ರಾವವಾಗಬಹುದು.ಆದರೆ ಗರ್ಭಧಾರಣೆಯ ಹಂತದಲ್ಲಿ ತುಂಬಾ ರಕ್ತಸ್ರಾವವಾದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉಚಿತ

ಗರ್ಭಧಾರಣೆಯ ನಂತರದ ಋತುಸ್ರಾವ

ಮಗುವಿಗೆ ಹಾಲೂಡಿಸುವ ತಾಯಿಯರಿಗೆ ಪ್ರಸವದ ೫-೬ ವಾರಗಳ ನಂತರ ಮುಟ್ಟು ಕಾಣಿಸಿಕೊಳ್ಳುವುದು. ಆದರೆ, ಪರಿಪೂರ್ಣ ರೂಪದಲ್ಲಿ ಹಾಲೂಡಿಸುವ ತಾಯಿಯು ತಮ್ಮ ಎದೆ ಹಾಲೂಡಿಸುವುದನ್ನು ನಿಲ್ಲಿಸುವವರೆಗೂ ಮಾಸಿಕ ಸ್ರಾವ ಉಂಟಾಗದು. ಆದರೂ, ನಿಖರವಾಗಿ ಯಾವುದೇ ಸ್ತ್ರೀಯರ ಮಾಸಿಕ ಸ್ರಾವದ ಬಗ್ಗೆ ಹೇಳಲಾಗುವುದಿಲ್ಲ. ಯಾಕೆಂದರೆ, ಹವಾಮಾನ ಬದಲಾವಣೆ, ಮಾನಸಿಕ ಒತ್ತಡ ಹಾಗೂ ಹಲವಾರು ಪರಿಸ್ಥಿತಿಗಳು ಋತುಸ್ರಾವದ ಪರಿಮಾಣದಲ್ಲಿ ಏರಿಳಿತಗಳನ್ನುಂಟುಮಾಡುತ್ತದೆ. 

ಋತುಸ್ರಾವದಲ್ಲಾಗುವ ಏರುಪೇರುಗಳು

ಪ್ರಸವದ ನಂತರದ ಪುನಃ ಮಾಸಿಕ ಸ್ರಾವವು ಮೊದಲಿನ ಅದೇ ರೀತಿ ಆಗಿರುವುದಿಲ್ಲ. ಕೆಲವೊಮ್ಮೆ ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿರಬಹುದು ಅಥವಾ ಹೆಚ್ಚಾಗಿರಬಹುದು. ಆದರೆ, ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಋತುಸ್ರಾವದಲ್ಲಿ ಯಾವುದೇ ಅಸಾಮಾನ್ಯ ಬದಲಾವಣೆ ಕಂಡು ಬಂದರೆ ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.

 ಅಂಡಕಗಳ ಬಿಡುಗಡೆ ಮತ್ತು ಋತುಚಕ್ರ

ಅಂಡದ ಬಿಡುಗಡೆ ಹಾಗೂ ಮಾಸಿಕ ಋತುಸ್ರಾವ ಏಕಕಾಲದಲ್ಲೇ ನಡೆಯುವುದಿಲ್ಲ. ಪ್ರಸವದ ನಂತರ, ಋತುಸ್ರಾವ ಪ್ರಾರಂಭವಾಗುವ ಮೊದಲೇ, ಅಂಡದ ಬಿಡುಗಡೆಯಾಗತೊಡಗುವುದು. ಆದಕಾರಣ, ಯಾವುದೇ ಮುನ್ನೆಚ್ಚರಿಕೆಗಳಿಲ್ಲದೆ, ಶಾರೀರಿಕ ಸಂಪರ್ಕದಲ್ಲೇರ್ಪಡಬಾರದು.

 ಶುಚಿತ್ವ ಮತ್ತು ಆರೋಗ್ಯ

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿರಿಸಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲ ತಾನೇ ?

ಋತುಸ್ರಾವವಾಗುವ ಸಮಯದಲ್ಲಿ ಶುಚಿಯಾದ, ಶುಭ್ರವಾದ ಅಡಿ ವಸ್ತ್ರಗಳನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಮಾತ್ರವಲ್ಲದೇ, ಇತರ ಸೋಂಕು ರೋಗಗಳಿಂದ ರಕ್ಷಿಸಿಕೊಳ್ಳಬಹುದು. ರಕ್ತಸ್ರಾವವೂ ಹೆಚ್ಚಾಗಿರಬಹುದಾದಕಾರಣ, ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕಾದದ್ದು ಬಹಳ ಅಗತ್ಯ. ಇದರಿಂದ, ಶರೀರದಲ್ಲಿ ನಷ್ಟವಾಗುವ ರಕ್ತದ ಪ್ರಮಾಣವನ್ನು ಪುನಃ ಗಳಿಸಿಕೊಳ್ಳಬಹುದು.

Leave a Reply

%d bloggers like this: