ಪ್ರೆಗ್ನನ್ಸಿ ಆದಮೇಲೆ ಪುನಃ ಸ್ಲಿಮ್ ಆಗುವ ಬಗ್ಗೆ ನೀವು ತಿಳಿದಿರಬೇಕಾದ 5 ವಿಷಯಗಳು

ಗರ್ಭಧಾರಣೆಯ 9 ತಿಂಗಳ ಅವಧಿಯಲ್ಲಿ ತೂಕ ಹೆಚ್ಚಾಗುವುದು ನಿಸ್ಸಂಶಯವಾಗಿ ನಿಮ್ಮ ಕಡೆಯಿಂದ ಕಾರ್ಯವನ್ನು  ಮತ್ತು ಸಮರ್ಪಣೆಯನ್ನು ಅಪೇಕ್ಷಿಸುತ್ತದೆ. ನಾವು ಅದನ್ನು ಎದುರಿಸೋಣ… ಮಾತೃತ್ವದ ಪೈಜಾಮಗಳಿಂದ ಕಾಲೇಜಿನ ದಿನಗಳ ಹಿತವಾದ ಜೀನ್ಸ್ ಗೆ ಹಾರುವ ನಿರೀಕ್ಷೆಯಿರುವುದು ಅಸಾಧ್ಯವಾಗಿದೆ.

ಹೊಸ ತಾಯಿಯು ಹೊಸದಾಗಿ ಹೊಂದಿದ ತೂಕದ ಭಾಗವನ್ನು ಕಳೆದುಕೊಳ್ಳಲು ಬಯಸುವುದು ಸಂಪೂರ್ಣವಾಗಿ ಸಮರ್ಥನೀಯವಾಗಿದೆ. ಆ ಹೆಚ್ಚುವರಿ ಗರ್ಭಾವಸ್ಥೆಯ ಪೌಂಡುಗಳನ್ನು ಹಿಡಿದಿಟ್ಟುಕೊಳ್ಳುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಭವಿಷ್ಯದ ಗರ್ಭಧಾರಣೆಗಳಲ್ಲಿ ಇದು ಸಮಸ್ಯೆಗಳನ್ನು ಉಂಟುಮಾಡಬಹುದು.

ಬಹುತೇಕ ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಹೆಚ್ಚು ಬದಲಾವಣೆಯನ್ನು ಮಾಡದೆ ನೈಸರ್ಗಿಕವಾಗಿ ಗರ್ಭಧಾರಣೆಯ ತೂಕವನ್ನು ಕಳೆದುಕೊಳ್ಳುತ್ತಾರೆ.ಇತರರಿಗಾಗಿ, ತೂಕವನ್ನು ಕಳೆದುಕೊಳ್ಳುವ ಮಾರ್ಗಗಳಿವೆ ಮತ್ತು ಪೂರ್ವ ಗರ್ಭಧಾರಣೆಯ ಬಟ್ಟೆಗಳನ್ನು ತೊಟ್ಟುಕೊಳ್ಳಲು ದೇಹವನ್ನು ಮೊದಲಿನಂತಾಗಿಸುವ ಉಪಾಯಗಳಿವೆ. ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳು ಗಮನಿಸಿದಂತೆ ಪೌಷ್ಟಿಕಾಂಶ ಮತ್ತು ದೈಹಿಕ ಚಟುವಟಿಕೆಯ ತಂತ್ರಗಳನ್ನು ಹೊಂದುವುದು  ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಆಹಾರದ ಬಗ್ಗೆ ಯೋಚಿಸುವಾಗ ಮೆಡಿಟರೇನಿಯನ್ ಆಹಾರವು ಆಕಾರದಲ್ಲಿ ಮರಳಲು ಅತ್ಯುತ್ತಮ ಮಾರ್ಗವಾಗಿದೆ. ಅಗತ್ಯ ಪೋಷಕಾಂಶಗಳು ಮತ್ತು ವಿಟಮಿನ್ ಗಳ ಮೇಲೆ ರಾಜಿ ಮಾಡದೆ ತೂಕವನ್ನು ಕಳೆದುಕೊಳ್ಳುವ ಒಂದು ಆರೋಗ್ಯಕರ ಮಾರ್ಗವಾಗಿದೆ. ಆಹಾರವು ನೈಸರ್ಗಿಕ ಆಹಾರಗಳನ್ನು ತಿನ್ನುವ ಸಂಯೋಜನೆಯಾಗಿದ್ದು, ಅನಾರೋಗ್ಯಕರ ಕೊಬ್ಬುಗಳು ಮತ್ತು ಹೆಚ್ಚುವರಿ ಕೆಂಪು ಮಾಂಸವನ್ನು ತಪ್ಪಿಸುತ್ತದೆ. ಇದರಲ್ಲಿ ಹೆಚ್ಚಿನ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮೀನು, ಮೊಟ್ಟೆ, ಹಾಲು (ಮಿತವಾಗಿ) ಮತ್ತು ಆಲಿವ್ ಎಣ್ಣೆಯನ್ನು ಸೇವಿಸಲಾಗುತ್ತದೆ.

ಮುಂದಿನ ಸಾಲಿನಲ್ಲಿ ವ್ಯಾಯಾಮ ಇದೆ. ಗರ್ಭಧಾರಣೆಯ ಸಮಯದಲ್ಲಿ ವ್ಯಾಯಾಮವು ದೇಹವನ್ನು ಸಕ್ರಿಯವಾಗಿಟ್ಟುಕೊಂಡು ಗರ್ಭಾವಸ್ಥೆಯಲ್ಲಿ ಮತ್ತು ನಂತರದ ಯಾವುದೇ ತೊಡಕುಗಳನ್ನು ತಡೆಗಟ್ಟುತ್ತದೆ ಎಂದು ಮಹಿಳೆಯರಿಗೆ ತಿಳಿದಿರುವುದು ಬಹಳ ಮುಖ್ಯ. ಗರ್ಭಾವಸ್ಥೆಯಲ್ಲಿ ಸಕ್ರಿಯ ಮತ್ತು ಚುರುಕಾದ ವಾಕಿಂಗ್ ನಿಮ್ಮನ್ನು ಆರೋಗ್ಯಕಾರಿಯಾಗಿಡುವ  ವಿಧಾನವಾಗಿದೆ.

ಅಮ್ಮಂದಿರು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಚಲಿಸುವ ಅವಶ್ಯಕತೆಯಿದ್ದರೂ ಸಹ ಪ್ರಸವದ ನಂತರ ನಿಮ್ಮ ಪ್ರಸೂತಿಯ ವಿಚಾರದಲ್ಲಿ ನೀವು ಇನ್ನೂ ಸರಿಯಾಗಿ ಅಭ್ಯಾಸ ಮಾಡುವುದಕ್ಕೋಸ್ಕರ ಮೊದಲಿಗೆ ಪರೀಕ್ಷಿಸುವುದು ಒಳ್ಳೆಯದು. ನಿಮ್ಮ ವೈದ್ಯರಿಂದ ಹಸಿರು ಸೂಚನೆ ಸಿಕ್ಕಿದ ನಂತರ ವಾಕಿಂಗ್ ಪ್ರಾರಂಭಿಸಿ. ತಜ್ಞರು ಹೇಳುವುದಾದರೆ, ವಾಕಿಂಗ್ ,ವ್ಯಾಯಾಮ ಪಡೆಯಲು ಹೊಸ ತಾಯಂದಿರಿಗೆ ಉತ್ತಮ ಮಾರ್ಗವಾಗಿದೆ. ನಿಧಾನವಾಗಿ ಮತ್ತು ಹಂತ ಹಂತವಾಗಿ ನಿಮ್ಮ ಸಮಯವನ್ನು ರೂಪುಗೊಳಿಸಿ  ಮತ್ತು ಪ್ರತಿ ದಿನವೂ ನೀವು ನಡೆಯುವ ನಿಮಿಷಗಳ ಸಂಖ್ಯೆಯನ್ನು ಹೆಚ್ಚಿಸಿ. ಬಹುಶಃ ನಿಮ್ಮ ಮಗುವನ್ನು ಸ್ವಲ್ಪ ದೂರ ವಿಹರಿಸಲು ಕರೆದುಕೊಳ್ಳಿ!

ಜಾಗಿಂಗ್, ಸೈಕ್ಲಿಂಗ್, ಯೋಗ, ಮತ್ತು ಈಜುವುದು ವ್ಯಾಯಾಮ ಮಾಡಲು ಕೆಲವು ಉತ್ತಮ ವಿಧಾನಗಳಾಗಿವೆ. ಕೆಲವು ಪೌಂಡ್ಗಳನ್ನು ಕಳೆದುಕೊಳ್ಳಲು ನೀವು ಮಾಡಬಹುದಾದ ಅನೇಕ ಇತರ ಚಟುವಟಿಕೆಗಳು ಇವೆ.

ಮನೆಯನ್ನು ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ದಿನಬಳಕೆ ಸಾಮಗ್ರಿಗಳ ಖರೀದಿ ಇವೆಲ್ಲವೂ ನಿಮ್ಮ ದೈನಂದಿನ ಕೆಲಸಗಳಲ್ಲಿ ದೈಹಿಕ ಚಟುವಟಿಕೆಯನ್ನು ಉಂಟುಮಾಡುತ್ತದೆ ಮತ್ತು ಜಿಮ್ ಗೆ ಹೋಗದೆಯೇ ಆ ಹೆಚ್ಚುವರಿ ಪೌಂಡ್ ಅನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಹೆಣಿಗೆ (ನಿಟ್ಟಿಂಗ್ )ಮಾಡುವುದು ಗಂಟೆಗೆ ೧೦೦ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ! ಇದು ಕೊಬ್ಬನ್ನು ದಹಿಸುವ ಒತ್ತಡ-ಮುಕ್ತ ಮಾರ್ಗವಾಗಿದೆ.ಆದ್ದರಿಂದ ಸ್ತ್ರೀಯರೇ, ನಿಮ್ಮ ಪುಟ್ಟ ಕಂದನಿಗಾಗಿ ಬೆಚ್ಚಗಿನ ಬಟ್ಟೆಗಳನ್ನು ಹೆಣೆಯಲು ಪ್ರಾರಂಭಿಸಿ .

ನೀವು ಮನೆಯಲ್ಲಿಯೇ, ಒಬ್ಬಂಟಿಯಾಗಿ ಇದ್ದರೆ ಅಥವಾ ನಿಮ್ಮ ಸಂಗಾತಿಯೊಂದಿಗೆ ಇದ್ದಲ್ಲಿ, ಆ ಕಿಲೋಗಳನ್ನು ದೂರವಿರಿಸಲು ನೃತ್ಯ ಮಾಡಿ.ಜಿಮ್ಮಿಗೆ ಸೇರುವುದಕ್ಕಿಂತಲೂ ತೂಕವನ್ನು ಕಳೆದುಕೊಳ್ಳಲು ಇದು ಉತ್ತಮ ಮಾರ್ಗವಾಗಿದೆ ಮತ್ತು ಇದು ಟನ್ನುಗಳಷ್ಟು ಕ್ಯಾಲೊರಿಗಳನ್ನು ದಹಿಸುವುದರಲ್ಲಿ ಸಂದೇಹವೇ ಇಲ್ಲ. ನಿಮ್ಮ ಸಂಗಾತಿಯೊಂದಿಗೆ  ಪುನಃಸಂಪರ್ಕಿಸಲು ನೃತ್ಯವು ಸಹಾಯ ಮಾಡುತ್ತದೆ, ಮತ್ತು ನಿಮಗೆ ತಾಜಾತನ, ಆತ್ಮವಿಶ್ವಾಸವನ್ನು ನೀಡಿ, ಪುನರ್ಯೌವನಗೊಳಿಸುತ್ತದೆ.

ದೇಹವು ಜಲೀಕರಣವಾಗಿ  ಇರಿಸಿಕೊಳ್ಳಲು ಸಾಕಷ್ಟು ನೀರನ್ನು ಕುಡಿಯಿರಿ. ಇದು ವಿಷಪದಾರ್ಥವನ್ನು ಹೊರ ಹಾಕಿ ಜೀರ್ಣ ಕ್ರಿಯೆಯನ್ನು ಚೆನ್ನಾಗಿರಿಸಲು ಸಹಾಯ ಮಾಡುತ್ತದೆ .

ಸಾಕಷ್ಟು ನಿದ್ರೆ ಪಡೆಯುವುದು ಮೇಲಿನ ಎಲ್ಲಕ್ಕಿಂತ ಹೆಚ್ಚು ಮಹತ್ವದ್ದಾಗಿದೆ ಮತ್ತು ಹೊಸ ತಾಯಿಯ ವಾಡಿಕೆಯಲ್ಲಿ ಅತ್ಯಗತ್ಯವಾಗಿರುತ್ತದೆ. ಆಹಾರ, ವ್ಯಾಯಾಮ ಮತ್ತು ಗೃಹ ಚಟುವಟಿಕೆಗಳಿಗೆ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನಿದ್ರೆಯು ನೀಡುತ್ತದೆ. ಇದರರ್ಥ ನಿಮ್ಮ ಗುರಿಯ ತೂಕವನ್ನು ಸಾಧಿಸಲು ನಿಮ್ಮ ದಾರಿ ಚೆನ್ನಾಗಿರುತ್ತದೆ.

Leave a Reply

%d bloggers like this: