ಮಗುವಿಗೆ ನೀಡುವ ಲಸಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ !

ಹಲವರಲ್ಲಿ ಕೆಲವು ಗೊಂದಲ ಅಥವಾ ಅನುಮಾನ ಇರಬಹುದು, ಲಸಿಕೆಯು ತುಂಬಾ ಮುಖ್ಯವೇ ಅದನ್ನು ಯಾವಾಗ ಬೇಕಾದರೂ ಹಾಕಿಸಬಹುದಲ್ಲವೇ ಎಂದು. ಲಸಿಕೆಯನ್ನು ಮಗುವಿನ ವಯಸ್ಸಿನ ಆಧಾರದ ಮೇಲೆ ಹಾಕುವುದು ಎಂದು ನೀವು ತಿಳಿದುಕೊಳ್ಳಬೇಕು. ಲಸಿಕೆಯ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ.

೧.ಮಗುವಿಗೆ ಲಸಿಕೆ ಏಕೆ ಹಾಕಿಸಬೇಕು?

ನಿಮ್ಮ ಮಗು ಅಪಾಯಕಾರಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿಕೊಳ್ಳಲು ಲಸಿಕೆಯನ್ನು ಹಾಕಿಸುವುದು ತುಂಬಾ ಮುಖ್ಯ.

ಸಿಡುಬು, ಪೋಲಿಯೊ ಮುಂತಾದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಲಸಿಕೆ ಹಾಕಿಸುವ(ವ್ಯಾಕ್ಸಿನೇಷನ್) ವಿಧಾನ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಲಸಿಕೆಯನ್ನು ಹಾಕಿದ ನಂತರ ಮಕ್ಕಳ ದೇಹವು ತಮಗೆ ಅಗತ್ಯವಿರುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳುವಲ್ಲಿ ಸಹಾಯವಾಗುತ್ತದೆ.

ಯಾವುದೇ ಬ್ಯಾಕ್ಟೀರಿಯಾ ಅಥವಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಲಸಿಕೆಯ ಅಗತ್ಯ ಶಿಶುಗಳಿಗೆ ಇದೆ.

೨.ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಲಸಿಕೆಗಳು ಮೂಲಭೂತವಾಗಿ ರೋಗದಿಂದ ಉಂಟಾಗುವ ರೋಗದ ಒಂದು ದುರ್ಬಲ ಅಥವಾ ಮರಣದ ಆವೃತ್ತಿಯನ್ನು ಒಳಗೊಂಡಿರುತ್ತದೆ.

ನಿಮ್ಮ ಮಗುವಿನ ರೋಗ ನಿರೋಧಕ ವ್ಯವಸ್ಥೆಯು ಈ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಗುರುತಿಸುವ ಮತ್ತು ಅವುಗಳನ್ನು ನಾಶಪಡಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ.

ಲಸಿಕೆಯಲ್ಲಿರುವ ವೈರಸ್ ಅಥವಾ ಬ್ಯಾಕ್ಟೀರಿಯಾದ ಆವೃತ್ತಿಯನ್ನು ಮುಂದಿನ ಭವಿಷ್ಯದಲ್ಲಿ ಮಗುವಿನ ದೇಹಕ್ಕೆ ಬಂದರೆ ಅದನ್ನು ಗುರುತಿಸುವ ಮತ್ತು ನಾಶಪಡಿಸುವ ಶಕ್ತಿಯನ್ನು ಪಡೆಯುತ್ತದೆ.

೩.ಲಸಿಕೆಯಿಂದ ಏನಾದರೂ ಅಡ್ಡಪರಿಣಾಮಗಳಿವೆಯೇ?

ಲಸಿಕೆಗಳನ್ನು ಸಾಧ್ಯವಾದಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ತಯಾರಿಸಲಾಗುತ್ತದೆ, ಆದರೆ ಔಷಧಿ ತಯಾರಿಸುವಾಗ ಕೆಲವೊಂದು ಅನಪೇಕ್ಷಿತ ಅಡ್ಡ-ಪರಿಣಾಮಗಳನ್ನು ಪಡೆಯುತ್ತವೆ.

ಸಾಮಾನ್ಯವಾಗಿ ಇದು ಒಂದೆರಡು ದಿನಗಳಲ್ಲಿ ಮಾಯವಾಗುತ್ತದೆ.

ಅಡ್ಡಪರಿಣಾಮಗಳು ಸಣ್ಣ ಜ್ವರದಿಂದ ಇಂಜೆಕ್ಷನ್ ಮಾಡಿದ ಜಾಗದಲ್ಲಿ ನೋವುಂಟು ಮಾಡುವವರೆಗೆ ಇರುತ್ತದೆ. ಅದಕ್ಕಿಂತ ಹೆಚ್ಚಿನ ಲಕ್ಷಣಗಳನ್ನು ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಅಥವಾ ಲಸಿಕೆ ಹಾಕಿಸಿದ ನಂತರ ಏನಾದರೂ ಆಗುತ್ತದೆಯೇ ಎಂದು ಅಲ್ಲೇ ಅವರ ಬಳಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

ಸಾಮಾನ್ಯ ಮಾಹಿತಿಗಳು

ಜನನದಲ್ಲಿ ನೀಡುವ ಲಸಿಕೆಯನ್ನು ಮಗು ಜನಿಸಿದ ನಂತರ ಆದಷ್ಟು ಬೇಗ ನೀಡಬೇಕು ಮತ್ತು ಖಡ್ಡಾಯವಾಗಿ ಒಂದು ವಾರದೊಳಗೆ ನೀಡಬೇಕು.

ಬೇರೆ ವಿಧದ ಹಲವು ಲಸಿಕೆಗಳನ್ನು ಒಂದೇ ಸಿರೆಂಜ್ ನಲ್ಲಿ ಮಿಶ್ರಣ ಮಾಡುವಂತಿಲ್ಲ. ಪ್ರತಿರಕ್ಷಣಾ ಲಸಿಕೆ ನೀಡಿದ ಮೇಲೆ ಕನಿಷ್ಠ ೧೫-೨೦ ನಿಮಿಷಗಳು ಮಗುವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಲರ್ಜಿಯ ಯಾವುದಾದರು ಪ್ರತಿಕ್ರಿಯೆ ಆಗುತ್ತಿದಿಯೇ ಎಂಬುದನ್ನು ಗಮನಿಸಿ.

ಒಂದೇ ಭೇಟಿಯಲ್ಲಿ ಅಗತ್ಯವಿದ್ದರೆ ಎರಡು ಲಸಿಕೆಯನ್ನು ಒಂದೇ ಜಾಗಕ್ಕೆ ನೀಡಬಹುದು.

ಎರಡು ಇಂಜೆಕ್ಷನ್ ನಡುವೆ ಕನಿಷ್ಠ ಒಂದು ಇಂಚು ಅಂತರವಿದ್ದರೆ ಒಳ್ಳೆಯದು, ಯಾವುದು ಪ್ರತಿಕ್ರಿಯೆ ನೀಡುತ್ತಿದೆ ಎಬುದನ್ನು ತಿಳಿಯಬಹುದು ಅಥವಾ ಒಂದರ ಮೇಲೆ ಒಂದು ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

Leave a Reply

%d bloggers like this: