ಹೆರಿಗೆಯ ನಂತರದ ಹೊಲಿಗೆಯನ್ನು ಗುಣ ಪಡಿಸುವ ೭ ಸಲಹೆಗಳು

ಇದೀಗ ತಾನೆ ನೀವು ಮಗುವಿಗೆ ಜನ್ಮ ನೀಡಿದವರಾದರೆ, ನಿಮ್ಮ ಹೊಲಿಗೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.ನಿಮ್ಮದು ಸ್ವಾಭಾವಿಕ ಹೆರಿಗೆ, ಸಿಸೇರಿಯನ್ ಅಥವಾ ಎಪಿಸ್ಟೋಟೆಮಿಯೇ ಆಗಿರಲಿ, ಹೊಲಿಗೆಯ ಸ್ವರೂಪ, ಪ್ರತಿಯೊಬ್ಬ ಸ್ತ್ರೀಯರಲ್ಲೂ ಬೇರೆ ಬೇರೆಯಾಗಿರುತ್ತದೆ. ಸನ್ನಿವೇಶ ಯಾವುದೇ ಇರಲಿ, ಮೇಲೆ ಹೇಳಿದ ಎಲ್ಲಾ ಸಂದರ್ಭಗಳಲ್ಲೂ ಮುಂದೆ ಯಾವುದೇ ರೀತಿಯ ಸೋಂಕು ಉಂಟಾಗದಂತೆ ಅಥವಾ ಹೊಲಿಗೆಯು ಬೇಗನೇ ಗುಣಮುಖವಾಗುವಂತೆ, ಹೊಲಿಗೆಯ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತೀ ಅಗತ್ಯ.

ಕೆಳಗೆ ತಿಳಿಸಿದ ಸರಳ ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಮುದ್ದಿನ ಮಗುವಿನ ಜೊತೆಯಲ್ಲಿ ಹೆಚ್ಚಿನ ಸಂತೋಷಭರಿತ ಸಮಯಗಳನ್ನು ಯಾವುದೇ ಅಡಚಣೆ ಅಥವಾ ಕಿರಿಕಿರಿ ಇಲ್ಲದೆ ಕಳೆಯಲು ಸಹಾಯವಾಗುತ್ತದೆ.

೧. ಪ್ರಕೃತಿಯ ಕರೆಗೆ ಓಗೊಡುವಾಗ

ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ್ರವು, ಯೋನಿಯ ಹೊಲಿಗೆಯ ಸುತ್ತ ಉರಿಯನ್ನುಂಟುಮಾಡಬಹುದು. ಪ್ರತಿ ಸಾರಿಯೂ, ಮೂತ್ರ ವಿಸರ್ಜಿಸುವಾಗ, ಕಾಲುಗಳ ನಡುವಿನಿಂದ ನೀರನ್ನು ಯೋನಿಗೆರಚುವುದರಿಂದ ಮೂತ್ರದ ಕಠಿಣತೆಯು ಕಡಿಮೆಯಾಗಿ, ಹೊಲಿಗೆಯ ಉರಿಯು ಶಾಂತವಾಗುವುದು.

ಕೇಳಲು ಮುಜುಗರವೆನಿಸುವುದಾದರೂ, ಪ್ರಯತ್ನಿಸಿದರೆ ಫಲಿತಾಂಶ ಕಾಣದಿರದು.

೨. ಮೆಟರ್ನಿಟಿ ಪ್ಯಾಡ್ ಅಥವಾ ಮುಟ್ಟಿನ ವಸ್ತ್ರ

ಹೆರಿಗೆಯ ನಂತರ ರಕ್ತಸ್ರಾವವಾಗುವುದು ಸರ್ವೇಸಾಮಾನ್ಯ. ಆದುದರಿಂದ ಸದಾ ಮೆಟರ್ನಿಟಿ ಪ್ಯಾಡನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. ಯೋನಿಯ ಹೊಲಿಗೆಯ ಬಗ್ಗೆ ಹೆಚ್ಚು ನಿಗಾವಹಿಸಬೇಕಾದುದರಿಂದ,ಯೋನಿಯ ಶುಚಿತ್ವದ ಬಗ್ಗೆಯೂ ಶ್ರದ್ಧೆ ವಹಿಸಬೇಕು.ಯೋನಿ ಭಾಗವನ್ನು ಸದಾ ಶುಚಿಯಾಗಿಟ್ಟುಕೊಳ್ಳುವುದರಿಂದ, ಸೋಂಕು ಉಂಟಾಗದಂತೆ ತಡೆಯಬಹುದು. ಯೋನಿಯ ಶುಚಿತ್ವವನ್ನು ಕಾಪಾಡಲು, ಪ್ರತಿ ೪ ಗಂಟೆಗಳಿಗೊಮ್ಮೆ ಪ್ಯಾಡನ್ನು ಬದಲಾಯಿಸಿಕೊಳ್ಳಿ.

ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕಾಗದ ಅಥವಾ ಹತ್ತಿಯಿಂದ ತಯಾರಿಸಿದ ಪ್ಯಾಡನ್ನು ಬಳಸಬಹುದು.

೩. ಉಪ್ಪು ನೀರಿನ ಸ್ನಾನ

“ಉಪ್ಪು” ಬಹಳ ಬೇಗನೆ ಗಾಯವನ್ನು ಒಣಗಿಸುತ್ತದೆ. ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಕರಗಿಸಿ, ಹೊಲಿದ ಭಾಗವನ್ನು ತೊಳೆದುಕೊಳ್ಳುವುದು ಹೊಲಿಗೆಯು ಫಕ್ಕನೆ ಒಣಗಲು ಸಹಕರಿಸುತ್ತದೆ.

೪. ತೇವಾಂಶವಾಗಿರಲು ಬಿಡದಿರಿ

ತೇವಾಂಶ ಭರಿತವಾದ ಅಥವಾ ಆರ್ದ್ರವಾಗಿರುವ ಭಾಗಗಳು ಫಕ್ಕನೇ ಸೋಂಕಿಗೊಳಪಡುತ್ತದೆ. ಆದಕಾರಣ,ಹೊಲಿಗೆಯ

ಭಾಗವು ಸದಾ ಕಾಲ ಒಣಗಿರುವಂತೆ ನೋಡಿಕೊಳ್ಳಿ. ಹೊಲಿಗೆಯ ಮೇಲೆ ನೀರು ಬೀಳದಂತೆ ತಡೆಯುವುದು ಅಸಾಧ್ಯವಾದರೂ, ಸ್ನಾನವಾದ ಬಳಿಕ ಹೊಲಿಗೆಯನ್ನು ಮೃದುವಾಗಿ ಒರೆಸಿ, ಒಣಗಿಸಿಟ್ಟುಕೊಳ್ಳಿ. ಆದರೆ ಗಟ್ಟಿಯಾಗಿ ಒಮ್ಮೆಲೇ ಉಜ್ಜಿ ಬಿಡಬೇಡಿ.

೫. ಗಾಳಿಯಾಡುವಂತೆ ನೋಡಿಕೊಳ್ಳಿ

ಆಗ ತಾನೇ ಮನೆಗೆ ಮರಳಿದ ತಾಯಿಯಂದಿರು ಹೊರಗಡೆ ಸುತ್ತಾಡುವ ಅಭಿಪ್ರಾಯದ ಬಗ್ಗೆ ಸಂತೋಷ ವ್ಯಕ್ತಪಡಿಸಲಾರರು. ಆದರೆ, ಅವರ ಹೊಲಿಗೆಯ ಹೊರಗಿನ ವಾತಾವರಣದ ಶುಭ್ರವಾದ ಗಾಳಿಯನ್ನು ಶ್ವಸಿಸಲು ಬಯಸುತ್ತದೆ.ಯಾವುದೇ ಗಾಯಗಳಂತೆ ಹೊಲಿಗೆಯು, ಗಾಳಿ ಬಿಸಿಲಿಗೊಡ್ಡುವುದರಿಂದ, ಬೇಗನೆ ಒಣಗುತ್ತದೆ.

ತಲೆದಿಂಬನ್ನು ಸೊಂಟದ ಕೆಳಗಡೆ ಅಥವಾ ಕಾಲುಗಳ ನಡುವೆ ಇರಿಸಿ ಕಾಲುಗಳನ್ನು ಅಗಲವಾಗಿರಿಸಿ,ಕುಳಿತುಕೊಳ್ಳುವುದರಿಂದ ಗಾಳಿಯಾಡುವಂತೆ ಮಾಡಬಹುದು.

ಈ ರೀತಿ ಮಾಡುವುದರಿಂದ, ನಿಮ್ಮ ಹೊಲಿಗೆಯು ಎಷ್ಟು ಬೇಗನೆ ಗುಣವಾಗುವುದೆಂಬ ಫಲಿತಾಂಶ ನೋಡಿ ನೀವೇ ಆಶ್ಚರ್ಯಚಕಿತರಾಗುವಿರಿ.

೬. ಮಲಬದ್ಧತೆಯಾಗಲು ಬಿಡಬೇಡಿ

ಹೊಲಿದ ಭಾಗದತ್ತ ಹೆಚ್ಚಿನ ಒತ್ತಡವನ್ನು ನೀಡುವುದು ಒಳ್ಳೆಯದಲ್ಲ. ಮಲವಿಸರ್ಜನೆ ಮಾಡುವಾಗ ಸ್ವಾಭಾವಿಕವಾಗಿ ಹೊಲಿಗೆಯ ಭಾಗಗಳತ್ತ ಒತ್ತಡವನ್ನು ಹೇರಬೇಕಾಗುತ್ತದೆ.

ನಾರಿನ ಅಂಶ ಹೇರಳವಾಗಿರುವ ಆಹಾರಗಳನ್ನು ಸೇವಿಸುವುದರಿಂದಲೂ, ಧಾರಾಳವಾಗಿ ನೀರು ಕುಡಿಯುವುದರಿಂದಲೂ ಮಲಬದ್ಧತೆಯಾಗದಂತೆ ತಡೆಯಬಹುದು.

ಮುಂದಕ್ಕೆ ಬಾಗಿ, ಕುಕ್ಕುರುಗಾಲಲ್ಲಿ ಕುಳಿತುಕೊಳ್ಳುವುದೂ ಒಂದು ಉತ್ತಮ ಸಲಹೆ .

೭. ಕೆಗಲ್ ವ್ಯಾಯಾಮ/ ಪೆಲ್ವಿಕ್ ಫ್ಲೋರ್

ಕೆಗಲ್ ವ್ಯಾಯಾಮವು ಹೆರಿಗೆಯು ಸುಲಭವಾಗಲು ಮಾತ್ರವಲ್ಲ, ಹೊಲಿಗೆಯು ಬೇಗ ಗುಣಪಡಿಸುವಲ್ಲೂ ಸಹಾಯ ಮಾಡುತ್ತದೆ. ಪೆಲ್ವಿಕ್ ಫ್ಲೋರ್ನಂತಹ ವ್ಯಾಯಾಮಗಳಿಂದ, ರಕ್ತವು ಹೊಲಿಗೆಯ ಭಾಗಗಳಿಗೆ ಹರಿಯುವುದರಿಂದ ಯೋನೀ ಪ್ರಸವ ಅಥವಾ ಸಿಸೇರಿಯನ್ ನಿಂದ ಉಂಟಾದ ಹೊಲಿಗೆಯನ್ನು

ಫಕ್ಕನೆ ಒಣಗುವಂತೆ ಮಾಡುವುದಲ್ಲದೇ, ಇನ್ ಕಾಂಟಿನೆನ್ನನ್ನೂ ತಡೆಯುತ್ತದೆ.

ನಮ್ಮ ಸಲಹೆಗಳು ನಿಮಗೆ ಮಾತೃತ್ವದ ಸವಿಯನ್ನು ಉಣಿಸಲು ಪ್ರಯೋಜನಕಾರಿಯಾದುವೆಂದು ತಿಳಿದು ಸಂತೋಷಪಡುತ್ತಿದ್ದೇವೆ.

Leave a Reply

%d bloggers like this: