ಹೆರಿಗೆಯ ಸಂದರ್ಭದಲ್ಲಿ ಬೇಕಾದ ೫ ಅಗತ್ಯವಾದ ವಸ್ತುಗಳು

ಹೊಸದೊಂದು ಸಂತೋಷ ತುಂಬಿದ ಕಂತೆಗೆ ನೀವು ಜನ್ಮ ನೀಡುವುದಕ್ಕಾಗಿ ದಿನಗಣನೆ ಮಾಡುತ್ತಿರುವಾಗ , ನೀವು ಯೋಚಿಸಲು ಬಯಸುವ ಕೊನೆಯ ವಿಷಯವೆಂದರೆ “ನನ್ನ ಚೀಲದಲ್ಲಿ ಏನೇನಿರಬೇಕು ?”ಒಂದೋ ಗಂಟು ಜಾಸ್ತಿಯಿರುವುದು ಇಲ್ಲವೇ ಕಡಿಮೆಯಿರುವುದು ಎರಡನ್ನೂ ತಪ್ಪಿಸಿದರೆ ನೀವು ಜನ್ಮ ನೀಡುವ ಮೊದಲು ಮತ್ತು ನಂತರ ಸುಗಮವಾದ ಅನುಭವವನ್ನು ಹೊಂದಿರುತ್ತೀರಿ.ನೀವು ಆಸ್ಪತ್ರೆಯಲ್ಲಿ ಎಷ್ಟು ಸಮಯದವರೆಗೆ ಉಳಿಯಬೇಕು ಎಂದು ನಿಮಗೆ ನಿಜವಾಗಿ ತಿಳಿದಿರುವುದಿಲ್ಲ , ಹಾಗಾಗಿ ದೊಡ್ಡ ದಿನಾಂಕಕ್ಕಾಗಿ ತಯಾರಿಸುವುದು  ಒಳ್ಳೆಯದು. ಆದ್ದರಿಂದ ಪುಸ್ತಕ ಮತ್ತು ಲೇಖನಿಯನ್ನು ಪಡೆದುಕೊಳ್ಳಿ ಮತ್ತು ನಾವು ಪರಿಶೀಲನಾಪಟ್ಟಿಯನ್ನು ರಚಿಸೋಣ.

ವೈಯಕ್ತಿಕ ವಸ್ತುಗಳು

ನಿಮ್ಮ ಚೀಲದಲ್ಲಿ ಹಾಕಬೇಕಾದ ಮೊದಲ ಮತ್ತು ಅತಿ ಮುಖ್ಯವಾದ ವಸ್ತುಗಳು ನಿಮ್ಮ ಬಟ್ಟೆ. ನಿಮ್ಮ ಅತ್ಯಂತ ಆರಾಮದಾಯಕವಾದ ಜೋಡಿ ಪೈಜಾಮಗಳು  ಮತ್ತು ನಿಮ್ಮ ಅತ್ಯಂತ ಸಡಿಲವಾದ ಮೇಲಂಗಿಗಳು (ಅಥವಾ ನಿಮಗೆ  ಹೆಚ್ಚು ಆರಾಮದಾಯಕವಾದ ಬಟ್ಟೆಗಳು), ಆರಾಮದಾಯಕ ದಿಂಬುಗಳು, ಮನೆಯಿಂದ ನಿಮ್ಮ ಶೌಚದ ವಸ್ತುಗಳು , ಮುಖ್ಯವಾಗಿ ನಿಮ್ಮ ಬ್ರಷ್ಷು, ಟೂತ್ಪೇಸ್ಟ್, ಮುಖ ಉಜ್ಜುವ ಟವೆಲ್ , ಒಂದೆರಡು ಕೈ ಟವೆಲ್ಗಳು, ತುಟಿಗೆ ಹಚ್ಚುವ ಬಾಮ್, ಮಸಾಜ್ ಕ್ರೀಮ್ಗಳು ಮತ್ತು ತೈಲಗಳು ಜೊತೆಗೆ  ನಿಮ್ಮ ನೆಚ್ಚಿನ ಸುಗಂಧ ದ್ರವ್ಯ ಸೇರಿದಂತೆ  ನಿಮಗೆ ಆರಾಮದಾಯಕವಾದ ವಿಷಯಗಳನ್ನು ನೀಡುವಂತಹ ವಸ್ತುಗಳನ್ನು ಸಹ ತೆಗೆದುಕೊಳ್ಳುವುದು ಒಳ್ಳೆಯದು.

ಆರಾಮದಾಯಕವಾದ ಆಹಾರ

ಕೋಣೆಯಲ್ಲಿ ನಿಮ್ಮನ್ನು ಸೇರಲು ನಿಮ್ಮ ಮಗುವಿಗೆ ಎಷ್ಟು ಸಮಯ ಬೇಕಾಗುವುದು  ಎಂದು ನಿಮಗೆ ಗೊತ್ತಿರುವುದಿಲ್ಲ .ಹೆಚ್ಚಿನ ಜನರು ಲಭ್ಯವಿರುವ ಆಸ್ಪತ್ರೆಯ ಆಹಾರದಲ್ಲಿ ಮುಂದಾಗುತ್ತಾರೆ, ಆದರೆ ನೀವು ನಿಮ್ಮ ಸ್ವಂತ ವೈಯಕ್ತಿಕ ಮೆಚ್ಚಿನವುಗಳನ್ನು ತೆಗೆದುಕೊಂಡರೆ ಅದು ಉತ್ತಮವಾಗಿದೆ.ಕಾಳುಗಳು, ಹಣ್ಣುಗಳು, ಬಿಸ್ಕಟ್ಗಳು ಮುಂತಾದ ಉಪಹಾರಗಳು ಉತ್ತಮ ಆಯ್ಕೆಯಾಗಿವೆ.ಅಲ್ಲದೆ, ಕುಡಿಯಲು ಏನಾದರೂ ಇಟ್ಟುಕೊಳ್ಳಲು  ಮರೆಯಬೇಡಿ. ನೀರಿನ ಬಾಟಲ್ ಮತ್ತು ಒಂದೆರಡು ಹಣ್ಣಿನ ರಸದ ಬಾಟಲಿಗಳನ್ನು ಪ್ಯಾಕ್ ಮಾಡುವುದು ಸೂಕ್ತವಾಗಿದೆ.

ಎಲೆಕ್ಟ್ರಾನಿಕ್ಸ್

ಇದು  ಜನನ ಪ್ರಕ್ರಿಯೆಯನ್ನು ಸರಾಗಗೊಳಿಸುವಲ್ಲಿ  ಅಥವಾ ಸರಳಗೊಳಿಸುವಿಕೆಯಲ್ಲಿ ಸಹಾಯ ಮಾಡದಿದ್ದರೂ, ಅದನ್ನು ನೀವು ಹೊಂದಬೇಕಾದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಿಮ್ಮ ದೂರವಾಣಿ ( ಫೋನ್), ಇದು ನಿಮ್ಮ ಕ್ಯಾಮರಾ, ವೀಡಿಯೊ ರೆಕಾರ್ಡರ್ ಮತ್ತು ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕವನ್ನು ನೀಡುವ ಸಾಧನವಾಗಿದೆ .ಆದ್ದರಿಂದ ನಿಮ್ಮ ಫೋನ್ ಮತ್ತು ಅದರ ಚಾರ್ಜರ್ ಅನ್ನು ಮರೆಯಬೇಡಿ. ಹಾಗೆಯೇ, ಮನರಂಜನೆಗಾಗಿ ನಿಮ್ಮ ಮೋಜಿನ ಸಂಗೀತದ ಪಟ್ಟಿಯನ್ನು  ಜೊತೆಗೆ ತರಲು ಮರೆಯದಿರಿ.

ಮಗುವಿನ ಸುರಕ್ಷತೆ (ಬೇಬಿ ಕೇರ್ )

ಮಗುವಿನ ರಕ್ಷಣೆಯನ್ನು ಪ್ರಾರಂಭಿಸಲು ಮೂಲಭೂತ ಅಗತ್ಯತೆಗಳನ್ನು ನೀವು ಹೊಂದಿರಬೇಕು.  ಆದ್ದರಿಂದ ಕೆಲವು  ಮಕ್ಕಳಿಗೆ ಕಟ್ಟುವ ಬಟ್ಟೆಗಳು (ನ್ಯಾಪಿಗಳು ) (ನವಜಾತ ಗಾತ್ರ),  ಹತ್ತಿಯ ಕಂಬಳಿಗಳು, ಮಸ್ಲಿನ್ ಚೌಕಗಳು, ಮಗುವಿಗೆ ಉಡುಪುಗಳು,ಮಗುವನ್ನು ಒರೆಸುವ ಬಟ್ಟೆಗಳು,ಮಗುವಿನ ಸ್ಪಂಜು ,ಮಗುವಿನ ಕ್ರೀಮ್ ,ನ್ಯಾಪಿ ಚೀಲಗಳು ಮತ್ತು ಕೊಲಿಕ್ ಹನಿಗಳನ್ನು ಪ್ಯಾಕ್ ಮಾಡಿ.ಇವುಗಳು ಮೂಲಭೂತವಾದುದು, ಆದ್ದರಿಂದ ನೀವು ಇವುಗಳನ್ನು  ಕೈಯಲ್ಲಿ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಪ್ರಸವದ ನಂತರದ ತಾಯಿಗೆ ಅಗತ್ಯವುಳ್ಳ ವಸ್ತುಗಳು

ನವ ತಾಯಿಯರು  ಸಂಪೂರ್ಣ ಹೊಸ ಅಗತ್ಯಗಳನ್ನು ಹೊಂದಿದ್ದಾರೆ. ಮಾತೃತ್ವ ಪ್ಯಾಡ್ಗಳು (ಮೆತ್ತೆಗಳು)ಮತ್ತು ರಾತ್ರಿಯ ಸಮಯದ ನೈರ್ಮಲ್ಯದ  ಟವೆಲ್, ಸ್ತನ ಪ್ಯಾಡ್ಗಳು,ಹಾಲೂಡಿಸಲು ಅನುಗುಣವಾದ ಕಂಚುಕಗಳು (ಬ್ರಾ) ,ಹದವಾದ ಕಾಲುಚೀಲಗಳು ,ಚಪ್ಪಲಿಗಳು ಮತ್ತು ಆಹಾರ  ಪದಾರ್ಥಗಳು ಅತ್ಯವಶ್ಯವಾಗಿವೆ . ಮೊದಲೇ ಹೇಳಿದಂತೆ, ನೀವು ಆ ಸಮಯದಲ್ಲಿ ನಿಮ್ಮೊಂದಿಗೆ ಇರಬೇಕು ಎಂದು ನೀವು ಭಾವಿಸುವ ಯಾವುದೇ ಮೆಚ್ಚಿನ ವಸ್ತುಗಳನ್ನು ಸಹ ಪ್ಯಾಕ್ ಮಾಡಬೇಕು.

ಈಗ ನಿಮ್ಮ ಚೀಲ ಪ್ಯಾಕ್ ಮಾಡಲ್ಪಟ್ಟಿದೆ, ಇದೀಗ  ನಿಮ್ಮ ತೋಳುಗಳಲ್ಲಿ ನಿಮ್ಮ ಮುದ್ದು ಮಗುವು ಇರುವ  ಕ್ಷಣದ ಕನಸು ಕಾಣಲು  ಹಿಂತಿರುಗುವ ಸಮಯವಾಗಿದೆ!

Leave a Reply

%d bloggers like this: