ನಾವೆಲ್ಲರೂ ಚಿಕ್ಕವರಿದ್ದಾಗ ನಮ್ಮ ತಂದೆ ತಾಯಿ ನಮಗೆ ಮೊಗ್ಗಿನ ಜಡೆ ಹಾಕಿ ಫೋಟೋ ತೆಗಿಸಿರುತ್ತಾರೆ. ಮಕ್ಕಳನ್ನ ಭಿನ್ನ ವಿಭಿನ್ನ ರೀತಿಯಲ್ಲಿ ತಯಾರು ಮಾಡಿ ಕಣ್ಣು ತುಂಬಿಸಿಕೊಳ್ಳಲು ಪೋಷಕರಿಗೆ ಏನೋ ಖುಷಿ. ಅದನ್ನ ಫೋಟೋ ತೆಗೆದು ಇತರರಿಗೆ ತೋರಿಸುವುದು ಎಂದರೆ ಮತ್ತಷ್ಟು ಖುಷಿ. ಆದರೆ ಇಲ್ಲಿ ಕೆಲವು ಪೋಷಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೀವು ಅಂದುಕೊಳ್ಳಲು ಸಾಧ್ಯವಾಗದಂತಹ ಕೇಶಶೈಲಿಗಳನ್ನ ತಮ್ಮ ಮಕ್ಕಳಿಗೆ ನೀಡಿದ್ದಾರೆ. ಇವುಗಳನ್ನ ನೋಡಿದರೆ ನೀವು ಬೆರಗಾಗುತ್ತೀರಾ !
ಇವುಗಳು ನಿಮಗೆ ಚೆನ್ನಾಗಿದೆ ಎನಿಸಿದರೆ, ಇತರೆ ತಾಯಂದಿರಿಗೂ ತೋರಿಸಲು ಶೇರ್ ಮಾಡಿ !