ಯಾವ ರಾಶಿಯವರು, ಯಾವ ರಾಶಿಯ ಸಂಗಾತಿಯೊಂದಿಗೆ ಅತ್ಯುತ್ತಮ ಪೋಷಕರಾಗುತ್ತಾರೆ

ನೀವು ನಿಮ್ಮ ಪತಿಯೊಂದಿಗೆ ಭವಿಷ್ಯದ ಬಗ್ಗೆ ಪ್ಲಾನ್ ಮಾಡುವಾಗ, ಯಾವುದಾದರೂ ಒಂದು ಸಂದರ್ಭದಲ್ಲಿ ಮಕ್ಕಳ ವಿಷಯ ಬಂದೇ ಬರುತ್ತದೆ. ನೀವು ನಿಮ್ಮ ಸಂಗಾತಿಯ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರೂ, ನಿಮ್ಮ ಸಂಗಾತಿಯು ಅತ್ಯುತ್ತಮ ತಾಯಿ/ತಂದೆ ಆಗುವರು ಎಂಬ ಗಾಢ ನಂಬಿಕೆ ಇಟ್ಟಿದ್ದರೂ, ಒಂದು ಮಗುವನ್ನ ಭೂಮಿಗೆ ತಂದು ಅದರ ಪೋಷಣೆ ಮಾಡುವುದು ಸುಲಭದ ಮಾತಲ್ಲ.ಜ್ಯೋತಿಷ್ಯ ವಿಜ್ಞಾನ ಅಲ್ಲ ನಿಜ. ಆದರೆ, ನಿಮ್ಮ ಗ್ರಹಗಳು, ನಕ್ಷತ್ರಗಳು, ನಿಮಗಾಗಿ ಏನು ಕಾಯ್ದಿರಿಸಿವೆ ಎಂಬುದು ತಿಳಿದುಕೊಳ್ಳುವುದು ನಿಮ್ಮ ಕುತೂಹಲ ತೀರಿಸಿಕೊಳ್ಳಲು ಇದು ಒಂದು ಸುಲಭವಾದ ಮತ್ತು ತಿಳಿಯಾದ ಒಂದು ವಿಧಾನ.

ಮೇಷ

ಮೇಷ ಮತ್ತು ಸಿಂಹ ರಾಶಿಯ ದಂಪತಿಗಳು ಯಾವಾಗಲೂ ವಿನೋದ ತುಂಬಿದ ಮಜವಾದ ದಂಪತಿಗಳು ಆಗಿರುತ್ತಾರೆ. ಇವರು ಯಾವಾಗಲೂ ಉತ್ಸಾಹಿಗಳು ಆಗಿರುತ್ತಾರೆ ಹಾಗು ಮಕ್ಕಳು ಇಷ್ಟ ಪಡುವ ಎಲ್ಲಾ ಸಾಹಸಗಳನ್ನ ಮಾಡಲು ಇವರು ಸೈ. ಆದರೆ ದಣಿವಾದಾಗ ಸ್ವಲ್ಪ ವಿಶ್ರಾಂತಿ ಪಡೆಯಲು ಮರೆಯಬಾರದು.

ವೃಷಭ

ವೃಷಭ ರಾಶಿಯ ಜಡ ವ್ಯಕ್ತಿತ್ವದೊಂದಿಗೆ ಸರಿ ಹೊಂದುವುದು ಎಂದರೆ ಅದು ಸಿಂಹ ರಾಶಿಯವರ ಉತ್ಸಾಹ. ವೃಷಭ ರಾಶಿಯವರು ಇಂತಿಂಥ ಕೆಲಸಗಳು ಮಾಡಬಾರದು ಎಂದು ಮೊದಲೇ ನಿರ್ಣಯ ಮಾಡಿಕೊಳ್ಳುವುದರಿಂದ ಇವರು ಭಂಡರಂತೆ ಕಾಣಿಸಿಕೊಳ್ಳಬಹುದು. ಹೀಗಾಗಿ, ಇವರಿಗೆ ಎಲ್ಲದಕ್ಕೂ ಮುನ್ನುಗ್ಗುವ ಸಿಂಹ ರಾಶಿಯವರು ಒಂದು ದೇವರ ವರವೇ  ಸರಿ.

ಮಿಥುನ

ಮಿಥುನ ರಾಶಿಯ ಪೋಷಕರು ಜೀವನದಲ್ಲಿ ಸೃಜನಶೀಲತೆಯನ್ನ ತರುತ್ತಾರೆ ಹಾಗು ಅತ್ಯುತ್ತಮ ಗುರುಗಳಾಗುತ್ತಾರೆ. ಇವರು ತಮ್ಮ ಮಕ್ಕಳಿಗೆ ಎಲ್ಲವನ್ನೂ ಪ್ರಶ್ನಿಸಲು ಹೇಳಿಕೊಡುತ್ತಾರೆ. ಮೀನಾ ರಾಶಿಯವರು ಸಹಾನುಭೂತಿಗಳು ಆಗಿರುತ್ತಾರೆ ಹಾಗು ಇವರು ಮಕ್ಕಳಿಗೆ ಯೋಚಿಸುವುದು ಮತ್ತು ಅನುಭವಿಸುವದರ ಮಧ್ಯ ಇರುವ ವ್ಯತ್ಯಾಸ ತಿಳಿಸಿ, ಜೀವನದಲ್ಲಿ ಸಮತೋಲನ ತರುತ್ತಾರೆ. ಈ ಎಲ್ಲಾ ವಿಷಯಗಳನ್ನ ಕೂಡಿಸಿದರೆ, ಒಂದು ಮಗುವನ್ನ ಒಳ್ಳೆಯ ವ್ಯಕ್ತಿಯಾಗಿ ರೂಪಿಸಬಹುದು.

ಕಟಕ

ಕಟಕ ರಾಶಿಯವರ ಕಾಳಜಿಯ ವ್ಯಕ್ತಿತ್ವಕ್ಕೆ ತುಲಾ ರಾಶಿಯವರ ಸಾಮರಸ್ಯಕರ ಕುಟುಂಬ ಸೃಷ್ಟಿಸಬೇಕೆಂಬ ಬಯಕೆಯು ಒಳ್ಳೆಯ ಸಾಥ್ ನೀಡುತ್ತದೆ. ಕಟಕ ರಾಶಿಯವರ ಮೇಲೆ ಕೆಲವೊಮ್ಮೆ ತುಂಬಾ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಾರೆ ಎನ್ನುವ ಆರೋಪವಿದ್ದರೂ, ಅದು ಅವರ ಮಕ್ಕಳ ರಕ್ಷಣೆಗಾಗಿ ಮಾತ್ರವೇ ಹೊರತು ಬೇರೆ ಏನಲ್ಲ. ಈ ಎರಡು ವ್ಯಕ್ತಿತ್ವಗಳು ಬೆಳೆಯುವ ಮಕ್ಕಳಿಗೆ ಸುರಕ್ಷಿತವಾದ ಮತ್ತು ಸ್ವಸ್ಥ್ಯ ವಾತಾವರಣ ಸೃಷ್ಟಿಸುತ್ತವೆ.

ಸಿಂಹ

ಸಿಂಹ ಮತ್ತು ವೃಷಭ ರಾಶಿಯವರು ಒಳ್ಳೆಯ ಜೋಡಿಯಾಗುತ್ತಾರೆ, ಆದರೆ, ಸಿಂಹಕ್ಕೆ ಇನ್ನೊಂದು ಒಳ್ಳೆಯ ಜೋಡಿ ಇದೆ. ಸಿಂಹ ಮತ್ತು ಮೇಷ ಇಬ್ಬರು ದೊಡ್ಡದ್ದನ್ನೇ ಯೋಚಿಸುತ್ತಾರೆ ಮತ್ತು ಅನಿರೀಕ್ಷಿತತೆಯನ್ನ ಇಷ್ಟಪಡುತ್ತಾರೆ. ರಜಾದಿನಗಳು ಮತ್ತು ಹಬ್ಬಗಳು ಎಂದರೆ ಇವರ ಮನೆ ಜಗಮಗಿಸುತ್ತಿರುತ್ತದೆ. ಈ ಎರಡು ಅಗ್ನಿಯ ರಾಶಿಗಳು ತಮ್ಮ ಮಕ್ಕಳೊಂದಿಗಿನ ಸಂಬಂಧವು ಯಾವಾಗಲೂ ಪ್ರಜ್ವಲಿಸುವಂತೆ ನೋಡಿಕೊಳ್ಳುತ್ತಾರೆ.

ಕನ್ಯಾ

ಕನ್ಯಾ ರಾಶಿಯವರ ಪ್ರಾಯೋಗಿಕ ವಿಧಾನಕ್ಕೆ ಸರಿಯಾಗಿ ಸಾಥ್ ಕೊಡುವುದು ಎಂದರೆ ಅದು ಧನು ರಾಶಿಯ ಸಾಹಸಮಯ ವ್ಯಕ್ತಿತ್ವ. ಒಂದು ಹಾಸ್ಯ ಸಿನಿಮಾದಲ್ಲಿ ಬರುವಂತೆ, ಕುಟುಂಬದಲ್ಲಿ ಕೂಡ ಒಬ್ಬರು ನಾಜೂಕಾದ ನಡೆ ಹೊಂದಿರುವವರು ಇದ್ದರೆ, ಇನ್ನೊಬ್ಬರು ವಿನೋದಮಯ ಆಗಿರಬೇಕು.

ತುಲಾ

ತುಲಾ ರಾಶಿಯವರ ಸಮತೋಲನ ಹೊಂದಲು ಬಯಸುವ ವ್ಯಕ್ತಿತ್ವಕ್ಕೆ ಸರಿ ಹೊಂದುವುದು ಎಂದರೆ ಅದು ಮಕರ ರಾಶಿಯವರ ಕುಟುಂಬಕ್ಕೆ ಭದ್ರತೆ ಒದಗಿಸಲು ಬಯಸುವ ವ್ಯಕ್ತಿತ್ವ. ನಿಮ್ಮ ಮಕ್ಕಳು ನೀವು ಅವರಿಗೆ ಹಾಕಿ ಕೊಟ್ಟ ಭದ್ರ ಬುನಾದಿಯ ಬಗ್ಗೆ ನಿಮ್ಮನ್ನು ಎಂದಿಗೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ.

ವೃಶ್ಚಿಕ

ವೃಶ್ಚಿಕ ಮತ್ತು ಕಟಕ, ಈ ಎರಡು ರಾಶಿಗಳು ಅತ್ಯುತ್ತಮ ಪೋಷಕರನ್ನು ಮಾಡುತ್ತವೆ. ಎಲ್ಲಾದಕ್ಕಿಂತ ಮುಖ್ಯ ಕುಟುಂಬ ಎನ್ನುವುದನ್ನು ಈ ಇಬ್ಬರು ತಿಳಿದಿರುತ್ತಾರೆ, ಮತ್ತು ಆಳವಾದ ಪಿರೀತಿಯ ಮೇಲೆ ಅವಲಂಬಿತ ಆಗಿರುತ್ತದೆ. ನೀವು ಮತ್ತು ನಿಮ್ಮ ಸಂಗಾತಿಯು ನಿಮ್ಮ ಕುಟುಂಬದ ಖುಷಿ, ನೆಮ್ಮದಿ ಕದಡಲು ಪ್ರಯತ್ನಿಸುವ ಯಾರ ಮೇಲಾದರೂ ಸರಿ, ದಾಳಿ ಮಾಡಲು ಸಿದ್ಧರಾಗಿರುತ್ತೀರಾ.

ಧನು

ಧನು ರಾಶಿಯವರ ಸಾಹಸಮಯ ವ್ಯಕ್ತಿತ್ವಕ್ಕೆ ಸರಿ ಹೊಂದುವುದು ಎಂದರೆ ಅದು ಮೀನಾ ರಾಶಿಯವರ ಮಕ್ಕಳ ಹಾಗು ಸಂಗಾತಿಯ ಕಾಳಜಿಯ ವ್ಯಕ್ತಿತ್ವ. ನೀವು ನಿಮ್ಮ ಮುಂದಿನ ದೊಡ್ಡ ಪ್ರವಾಸಕ್ಕೆ ಸ್ಥಳ ಯಾವುದು ಎಂದು ಹುಡುಕುತ್ತಿದ್ದರೆ, ನಿಮ್ಮ ಸಂಗಾತಿಯು ಅಲ್ಲಿಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಮತ್ತು ಮನೆಗೆ ಮಾಡಬೇಕಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ನೋಡಿಕೊಳ್ಳುತ್ತಿರುತ್ತಾರೆ.

ಮಕರ

ಮಕರ ಮತ್ತು ವೃಶ್ಚಿಕ ಎರಡು ಜೋಡಿ ಆಗಬೇಕು. ಈ ಎರಡು ರಾಶಿಗಳು ಒಂದಕ್ಕೊಂದು ವಿರುದ್ಧವಾಗಿ ಇದ್ದರೂ, ಪೋಷಕರಾಗಿ ಉತ್ತಮ ಸಮತೋಲನ ಹೊಂದುತ್ತಾರೆ. ಈ ಎರಡು ರಾಶಿಯ ವ್ಯಕ್ತಿಗಳು ತಮ್ಮ ನಡುವಿನ ಭಿನ್ನತೆಗಳನ್ನ ಗೌರವಿಸಿದರೆ, ಮಕ್ಕಳು ಈ ಎರಡು ವ್ಯಕ್ತಿತ್ವಗಳ ಉತ್ತಮ ಮಿಶ್ರಣದ ದೃಷ್ಟಿಕೋನದಿಂದ ಬಹಳಷ್ಟು ಉಪಯೋಗ ಪಡೆದುಕೊಳ್ಳುತ್ತಾರೆ.

ಕುಂಭ

ಕುಂಭ ರಾಶಿಯವರ ಸ್ವಾವಲಂಬಿ ವ್ಯಕ್ತಿತ್ವಕ್ಕೆ ಸರಿ ಹೊಂದುವುದು ಎಂದರೆ ಅದು ವೃಷಭ ರಾಶಿ ಅವರ ಸ್ಥಿರವಾದ ಜೀವನ ಹೊಂದಲು ಬಯಸುವ ವ್ಯಕ್ತಿತ್ವ. ಗಾಳಿಯ ಚಿಹ್ನೆಯಾದ ಕುಂಭ ರಾಶಿಯನ್ನ ಹಿಡಿದುವುದು ಎಂದರೆ ಅದು ಭೂಮಿಯ ಚಿಹ್ನೆಯಾದ ವೃಷಭ. ಇವೆರೆಡು ಒಟ್ಟಿಗೆ ಕೂಡಿದರೆ, ಉತ್ತಮ ಪೋಷಕರನ್ನ ಹುಟ್ಟು ಹಾಕುತ್ತವೆ.

ಮೀನಾ

ಮೀನಾ ರಾಶಿಯ ಭಾವನಾತ್ಮಕ ವ್ಯಕ್ತಿತ್ವಕ್ಕೆ ಒಳ್ಳೆಯ ಸಾಥ್ ನೀಡುವುದು ಎಂದರೆ ಅದು ಮಿಥುನ ರಾಶಿಯ ತರಾವರಿ ವ್ಯಕ್ತಿತ್ವದ ಮಕ್ಕಳನ್ನ ಬೆಳೆಸುವ ಬಯಕೆಯ ವ್ಯಕ್ತಿತ್ವ. ಸರಿಯಾಗಿ ಹೇಳಬೇಕೆಂದರೆ, ಈ ಜೋಡಿ ಇರುವ ಮನೆಯಲ್ಲಿ ಬೇಸರದ ಕ್ಷಣವೇ ಇರುವುದಿಲ್ಲ. ಅದೃಷ್ಟವಶಾತ್, ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಕೂಡ ಇದು ಉತ್ತಮ ಸಂಗತಿಯೇ ಎಂದು ಯೋಚಿಸುತ್ತೀರ.

Leave a Reply

%d bloggers like this: