ರಾತ್ರಿ ಹೊತ್ತು ನಿಮ್ಮ ಸಂಗಾತಿಯೊಂದಿಗೆ ಮಾಡಬಾರದ 6 ಕೆಲಸಗಳು!

ನೀವು ನಂಬುತ್ತೀರೋ ಬಿಡುತ್ತೀರೋ, ನೀವು ದಿನದ ಕೊನೆಯ ಕೆಲವು ಘಂಟೆಗಳು ಹೇಗೆ ಕಳೆಯುತ್ತೀರಾ ಎನ್ನುವುದು ನಿಮ್ಮ ಸಂಬಂಧದಲ್ಲಿ ಬಹಳ ಮುಖ್ಯ ಆಗುತ್ತದೆ. ಮನೋವಿಜ್ಞಾನದ ಪ್ರಕಾರ ಈ ತೀರಾ ಚಿಕ್ಕ ವಿಷಯಗಳು ನಿಮ್ಮ ಒಟ್ಟಾರೆ ಖುಷಿಯ ಮೇಲೆ ನೀವು ಅಂದುಕೊಂಡಿರದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಈ ಕೆಲವು ಅಭ್ಯಾಸಗಳನ್ನ ನೀವು ಕೈಬಿಟ್ಟರೆ ನೀವು ದೀರ್ಘಕಾಲದವರೆಗೆ ನಿಮ್ಮ ಸಂತೋಷವನ್ನ ಕಾಯ್ದುಕೊಳ್ಳಬಹುದು. ನೀವು ಮಾಡಬಾರದ ಕೆಲಸಗಳು ಯಾವು ಎಂದರೆ :

೧. ಬೇರೆ ಬೇರೆಯಾಗಿ ಮಲಗಿಕೊಳ್ಳುವುದು

ಜೋರಾಗಿ ಗೊರಕೆ ಹೊಡೆಯುವುದು, ವಿಶ್ರಾಂತಿ ಸಿಗದೇ ಇರುವುದು ಅಥವಾ ತಿಳಿ ನಿದ್ದೆ ನಿಮ್ಮ ಸಂಗಾತಿಯಿಂದ ದೂರವಾಗಿ ಮಲಗಿಕೊಳ್ಳುವಂತೆ ಮಾಡುತ್ತದೆ. ಇಂತಹ ಸಮಯದಲ್ಲಿ ನೀವು ಬೇರೆ ಬೇರೆಯಾಗಿ ಮಲಗಿಕೊಳ್ಳುವುದು ಉಪಯುಕ್ತ. ಆದರೆ, ಹೀಗೆ ಮಾಡುವುದರಿಂದ ಒಬ್ಬರಿಗೊಬ್ಬರು ಸನಿಹದಲ್ಲಿ ಇರುವಾಗ ಉಂಟಾಗುವ ಹಾರ್ಮೋನ್ ವರ್ಧನೆಯನ್ನ ನೀವು ಮಿಸ್ ಮಾಡಿಕೊಳ್ಳುತ್ತೀರಿ.

ಇದು ಕೇವಲ ಸೆಕ್ಸ್ ಬಗ್ಗೆ ಅಲ್ಲ, ದಿಂಬಿನ ಮೇಲೆ ತಲೆ ಇಟ್ಟು ಮಾತಾಡುವುದು, ಅಪ್ಪಿಕೊಳ್ಳುವುದು, ಸನಿಹದಲ್ಲಿ ಇರುವುದು ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಬೂಸ್ಟ್ ಮಾಡುತ್ತದೆ. ಇದು ದಂಪತಿಗಳು ಮತ್ತಷ್ಟು ಹತ್ತಿರವಾಗುವಂತೆ ಮಾಡುತ್ತದೆ.

೨. ಪ್ರೀತಿ ಮಾತುಗಳು ಆಡದೆ ಇರುವುದು

ಮೊದಲೇ ಹೇಳಿದಂತೆ, ಬಹುತೇಕ ತುಂಬಾ ಮುಖ್ಯವಾದ ವಿಷಯಗಳೆಲ್ಲವೂ ತುಂಬಾ ಚಿಕ್ಕ ವಿಷಯಗಳೇ. ದಿನಕ್ಕೆ ಕೆಲವು ಬಾರಿ ಅಪ್ಪುವುದು, ಜೊತೆಯಲ್ಲಿ ಊಟ ಮಾಡುವುದು, ಜೊತೆಯಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡುವುದು ಇವೆಲ್ಲವುಗಳೊಂದಿಗೆ ಮಲಗುವ ಮುನ್ನ ನೀವು ಅವರನ್ನ ಎಷ್ಟು ಪ್ರೀತಿಸುತ್ತೀರಾ ಎಂದು ಹೇಳುವುದು (ಅದು ಐ ಲವ್ ಯು ಅಂತಾನೆ ಆಗಿರಬೇಕಿಲ್ಲ), ದಂಪತಿಗಳು ಅತ್ಯಗತ್ಯವಾಗಿ ರೂಪಿಸಿಕೊಳ್ಳಲೇ ಬೇಕಾದ ಕೆಲವು ಅಭ್ಯಾಸಗಳು ಎಂದು ಡೈಲಿ ಮಿರರ್ ಅವರು ನಡೆಸಿದ ಸಮೀಕ್ಷೆ ಪ್ರಕಾರ ತಿಳಿದು ಬಂದಿದೆ.

೩. ವಿರುದ್ಧ ವೇಳಾಪಟ್ಟಿ ಹೊಂದುವುದು

ಹೌದು, ಕೆಲವೊಮ್ಮೆ ಇಬ್ಬರ ವೇಳಾಪಟ್ಟಿಯು ಒಂದೇ ಆಗಿರಲು ಅಸಾಧ್ಯ ಆಗಿರುತ್ತದೆ. ಆದರೆ ನಿಮ್ಮ ಸಾಮರ್ಥ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀವು ಮತ್ತು ನಿಮ್ಮ ಸಂಗಾತಿ ಒಂದೇ ಸಮಯಕ್ಕೆ ಮಂಚಕ್ಕೆ ಹೋಗುವಂತೆ ನೋಡಿಕೊಳ್ಳಿ..

ಸೈಕಾಲಜಿ ಟುಡೇ ಪತ್ರಿಕೆ ಪ್ರಕಾರ, ಬೇರೆ ಬೇರೆ ಸಮಯಕ್ಕೆ ಮಲಗುವುದು ಸಹಜವಾಗಿ ದಂಪತಿಗಳು ದೂರವಾಗಲು ಮೊದಲ ಹೆಜ್ಜೆ. ಆದರೆ ಸಮೀಕ್ಷೆ ಇಂದ ತಿಳಿದು ಬಂದ ಒಂದು ಆಶ್ಚರ್ಯಕರ ಸಂಗತಿ ಎಂದರೆ ಅದು 60% ಅಷ್ಟು ದಂಪತಿಗಳು ಒಟ್ಟಿಗೆ ನಿದ್ದೆಗೆಂದು ಮಂಚ ಏರುವುದಿಲ್ಲ ಎಂದು. ಅದು ಇಬ್ಬರ ದಿನಚರಿ ಬೇರೆ ಬೇರೆ ಆಗಿರುವುದರಿಂದ ಇರಬಹುದು ಅಥವಾ ಇನ್ನೊಬ್ಬರು ತಡರಾತ್ರಿವರೆಗೂ ಟಿವಿ ನೋಡುವುದರಿಂದ ಇರಬಹುದು.

೪. ಮಂಚದ ಮೇಲೆ ಮೊಬೈಲ್ ನೋಡಿಕೊಂಡು ಮಲಗುವುದು

ನಿಮ್ಮ ಸಂಗಾತಿಯೊಂದಿಗೆ ಮಾತನಾಡುವ ಬದಲು ನಿಮ್ಮ ಮೊಬೈಲ್ ಫೋನಿನಲ್ಲಿ ಮುಳುಗಿ ಹೋಗಿ, ನಂತರ ಹಾಗೆಯೇ ನಿದ್ದೆ ಹೋದರೆ, ಇದು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ತಪ್ಪನ್ನು ಎಲ್ಲರೂ ಮಾಡುತ್ತಾರೆ, ಆದರೆ ಮಲಗುವ ಒಂದು ಘಂಟೆಯ ಮುಂಚೆ ನೀವು ನಿಮ್ಮ ಫೋನ್ ಅನ್ನು ಸೈಲೆಂಟ್ ಮೋಡಿನಲ್ಲಿ ಇಟ್ಟು, ಒಂದು ಮೂಲೆಯಲ್ಲಿ ಎತ್ತಿಟ್ಟರೆ, ನಿಮ್ಮ ಸಂಬಂಧದ ಮೇಲೆ ಅದು ಸಕಾರಾತ್ಮಕ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ನಿದ್ದೆಯ ಗುಣಮಟ್ಟ ಕೂಡ ವೃದ್ಧಿಸುತ್ತದೆ.

೫. ಬೇಕಾದಷ್ಟು ನಿದ್ದೆ ಸಿಗದೇ ಇರುವುದು

ಇದರಲ್ಲಿ ಆಶ್ಚರ್ಯ ಏನಿಲ್ಲ. ಕಳಪೆ ನಿದ್ದೆಯು ಕಳಪೆ ಮಟ್ಟದ ಸಂಬಂಧಗಳಿಗೆ ದಾರಿ ಮಾಡಿಕೊಡುತ್ತದೆ. ನಿಜ ಹೇಳಬೇಕೆಂದರೆ, AARP ಹೇಳುವ ಪ್ರಕಾರ ರಾತ್ರಿ ಹೊತ್ತು ಬೇಕಾದಷ್ಟು ನಿದ್ದೆ ಪಡೆಯುವುದು, ನೀವು ನಿಮ್ಮ ಸಂಬಂಧದಲ್ಲಿ ಮಾಡುವ ಅತ್ಯಂತ ಮುಖ್ಯ ಕೆಲಸಗಳಲ್ಲಿ ಒಂದು.

೬. ಜಗಳ ಆಡಿದ ನಂತರ ಸುಮ್ಮನೆ ಮಲಗುವುದು

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೇ ಇದೆ, ಏಕೆಂದರೆ ನಾವು ಯಾವುದೇ ವಾದಗಳನ್ನ ಅಥವಾ ಜಗಳಗಳನ್ನ ಬಗೆಹರಿಸಿಕೊಳ್ಳದೆ ನಿದ್ದೆಗೆ ಜಾರಬಾರದು. ಬಹಳಷ್ಟು ಜನರು ಜಗಳ ಆಡಿ ರಾತ್ರಿ ಮಲಗಿ ಎದ್ದರೆ, ಬೆಳಗ್ಗೆ ಆ ಜಗಳವು ಸಣ್ಣದು ಎನಿಸುವುದು ಎನ್ನುತ್ತಾರೆ. ಆದರೆ ವಾಸ್ತವತೆ ಅದಕ್ಕೆ ವಿರುದ್ಧವಾಗಿದೆ.

ನೀವು ಜಗಳವಾಡಿ ಮಲಗಿದರೆ, ನಕಾರಾತ್ಮಕ ಯೋಚನೆಗಳು ಮತ್ತು ಭಾವನೆಗಳು ನಿಮ್ಮ ಮೆದುಳಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತವೆ. ಹೀಗಾಗಿ ನೀವು ರಾತ್ರಿ ಎಲ್ಲಾ ಜಗಳ ಆಡಿಕೊಂಡು ಎದ್ದಿರುವುದಕ್ಕಿಂತ ಬೆಳಗ್ಗೆ ಇನ್ನಷ್ಟು ಜಾಸ್ತಿ ರೋಷದಿಂದ ಎಚ್ಚರಗೊಳ್ಳುತೀರಾ.

Leave a Reply

%d bloggers like this: