ಜನಿಸಿದ ಮೊದಲ ಒಂದು ವರ್ಷದೊಳಗೆ ಮಗುವಿನ ಬಾಡಿ ಡೆವಲಪ್ಮೆಂಟ್ ಮತ್ತು ಗಾತ್ರದ ಹೇಗಿರಬೇಕು?

ಮಗುವು ಜನಿಸಿದ ಮೊದಲ ವರ್ಷಗಳಲ್ಲಿ ಮಗುವನ್ನು ವೈದ್ಯರಲ್ಲಿಗೆ ಕರೆದೊಯ್ಯಬೇಕಾದದ್ದು ಅತ್ಯಗತ್ಯ. ಆದರೆ,  ಯಾಕಾಗಿ ಮಕ್ಕಳನ್ನು ವೈದ್ಯರ ಭೇಟಿ  ಮಾಡಿಸುತ್ತಿದ್ದೆವೆಂದೂ ತಿಳಿದಿರಬೇಕಷ್ಟೆ. ಮಕ್ಕಳ ತಜ್ಞರು ಮಗುವಿನ ತೂಕವನ್ನು ಅಳೆದು ನೋಡಿ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ನಿಮ್ಮಲ್ಲಿ ತಿಳಿಸುವರು. ಮಗುವಿನ ತೂಕ ಹಾಗೂ ಬೆಳವಣಿಗೆಯನ್ನು ಶೇಕಡವಾರುವಿನಲ್ಲಿ ಅಳೆಯುವರು. ಎಂದರೆ, ನಿಮ್ಮ ಮಗುವನ್ನು ತನ್ನದೇ ಪ್ರಾಯದ ಇತರ ಹಲವಾರು ಮಕ್ಕಳೊಂದಿಗೆ ತುಲನೆ ಮಾಡಿ ದೃಢೀಕರಿಸಿದ ಫಲಿತಾಂಶದೊಂದಿಗೆ ಮೌಲ್ಯಮಾಪನ. ಆದರೆ, ಗಂಡು ಮಕ್ಕಳ ಬೆಳವಣಿಗೆಯ ಪ್ರಮಾಣವು ಹೆಣ್ಣು ಮಕ್ಕಳಿಗಿಂತ ಹೆಚ್ಚಾಗಿರುವುದರಿಂದ, ಫಲಿತಾಂಶಗಳ ರೇಖಾಪಟ್ಟಿಯು ಹೆಣ್ಣು ಹಾಗೂ ಗಂಡು ಮಕ್ಕಳಲ್ಲಿ ಸರಾಸರಿ ಬೆಳವಣಿಗೆ ಅಂಕೆಅಂಶಗಳು ಬೇರೆ ಬೇರೆಯಾಗಿರುತ್ತದೆ.

೧.ಶರೀರ ತೂಕ

ಮಕ್ಕಳ ಬೆಳವಣಿಗೆಯ ಸರಾಸರಿಯು ಮಗುವಿನಿಂದ ಮಗುವಿಗೆ ವ್ಯತ್ಯಸ್ತವಾಗಿರುವುದು. ತನ್ನದೇ ಪ್ರಾಯದ ಇತರ ಮಕ್ಕಳೊಂದಿಗೆ ನಿಮ್ಮ ಮಗುವಿನ ಬೆಳವಣಿಗೆ ತಾಳೆಯಾಗದಿದ್ದರೆ ನೀವೇನೂ ಗಾಬರಿ ಪಡಬೇಕಾದ್ದಿಲ್ಲ. ಮಗುವಿನ ತನ್ನ ತಂದೆ ತಾಯಿಗಳೊಂದಿಗಿನ ಒಡನಾಟ, ಮಗುವಿನ ಬೆಳವಣಿಗೆಯ ಹಂತ ಹಾಗೂ ಇತರ ಹಲವಾರು ಘಟಕಗಳನ್ನು ಗಣನೆಗೆ ತೆಗೆದುಕೊಂಡು, ಮಗುವಿನ ಬೆಳವಣಿಗೆಯು ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ ಎಂದು ಅರಿಯಬಹುದು.

ವೈದ್ಯರ ಅಭಿಪ್ರಾಯದಂತೆ ನಾಲ್ಕು ತಿಂಗಳು ಪ್ರಾಯವಾಗಿರುವ ಮಗುವು ತಾನು ಜನಿಸಿದ ಶರೀರದ ತೂಕಕ್ಕಿಂತ ದುಪ್ಪಟ್ಟು ಭಾರವನ್ನೂ,ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿರುವಾಗ, ಜನನದ ಬಾರದ ಮೂರು ಪಟ್ಟು ಹೆಚ್ಚಿನ ಶರೀರ ಭಾರವನ್ನು ಹೊಂದಿರುತ್ತದೆ.        

ದೃಢಕಾಯರಾದ ತಂದೆ ತಾಯಿಯರಿಗೆ ಜನಿಸಿದ ಮಕ್ಕಳ ಬೆಳವಣಿಗೆಯೂ, ಸಪೂರ ತಂದೆ ತಾಯಿಗಳಿಗೆ ಜನಿಸಿದ ಮಕ್ಕಳ ಬೆಳವಣಿಗೆಗಿಂತ ಕಡಿಮೆಯಾಗಿರುವುದೆಂದು ಕೆಲವು ತಜ್ಞರು ಅಭಿಪ್ರಾಯ ಪಡುತ್ತಾರೆ.ಎಂದರೆ ಕೃಶಕಾಯರಾದ ಮಕ್ಕಳು, ಇತರ ಮಕ್ಕಳಿಗಿಂತ ಬೇಗನೆ ಒಂದು ವರ್ಷದ ಅವಧಿಯೊಳಗೆ ತಮ್ಮ ಸರಾಸರಿ ತೂಕವನ್ನು ಹೊಂದುತ್ತಾರೆ .

೨.ತಲೆಯ ಸುತ್ತಳತೆ

ಶರೀರದ ಬೆಳವಣಿಗೆ ಹಾಗೂ ತೂಕವನ್ನಲ್ಲದೇ, ಮಗುವಿನ ಆರೋಗ್ಯಕರ ಬೆಳವಣಿಗೆಯನ್ನು ಅರಿಯಲು ವೈದ್ಯರು ತಲೆಯ ಸುತ್ತಳತೆಯನ್ನೂ  ಅಳೆಯುತ್ತಾರೆ. ಕಿವಿಯ ಮೇಲ್ಭಾಗದಿಂದ ,ಹುಬ್ಬಿನ ಭಾಗದಲ್ಲಿರುವ ಅಳತೆಯು ತಲೆಯ ಅತಿ ದೊಡ್ಡ ಅಳತೆಯಾಗಿರುವುದು.

ತಲೆಯ ಸುತ್ತಳತೆಯನ್ನು ಪರೀಕ್ಷಿಸುವುದರಿಂದ ಮೆದುಳಿನ ಬೆಳವಣಿಗೆಯನ್ನು ತಿಳಿಯಬಹುದು. ಮಗುವಿನ ತಲೆಯು ಸರಿಯಾದ ಬೆಳವಣಿಗೆಯನ್ನು ತೋರಿಸದಿದ್ದರೆ, ಮೆದುಳಿಗೆ ಏನಾದರೂ ಹಾನಿಯುಂಟಾಗಿದೆ ಎಂದು ತಿಳಿಯಬಹುದು.ಅದೇ ವೇಳೆಯಲ್ಲಿ ತಲೆಯ ಸುತ್ತಳತೆಯೂ ಅಧಿಕವಾಗಿದ್ದರೆ ತಲೆಬುರುಡೆಗೆ ಹಾನಿಯನ್ನು ಉಂಟು ಮಾಡುವ ದ್ರಾವಕಗಳು ಮೆದುಳಿನಲ್ಲಿ ಸಂಗ್ರಹವಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಆದರೆ ತಲೆಯ ಗಾತ್ರವು ಪಾರಂಪರ್ಯ ಅಥವಾ ಅನುವಂಶೀಯವೆಂದು ತಿಳಿದಿರಬೇಕು. ಒಂದು ವರ್ಷ ಪ್ರಾಯವಾದ ಬಳಿಕ ಮಗುವಿನ ತಲೆಯ ಸುತ್ತಳತೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿರುವುದಿಲ್ಲ. ಆದ ಕಾರಣ ,ತಲೆಯ ಸುತ್ತಳತೆಯ ಗುರುತು ಪಡಿಸುವಿಕೆಯು ಕೇವಲ ಒಂದು ವರ್ಷದ ಅವಧಿಯವರೆಗೆ ಮಾತ್ರ ಸೀಮಿತವಾಗಿರುತ್ತದೆ .

೩.ಬೆಳವಣಿಗೆಯ ಚಕ್ರ

ಅನುವಂಶಿಕವಾಗಲ್ಲದೆ, ಜನಿಸಿದ ಮೊದಲ ವರ್ಷಗಳಲ್ಲಿ ಮಗುವು ಹತ್ತು ಇಂಚಿನಷ್ಟು ಬೆಳೆದಿರುತ್ತದೆ. ವರ್ಷಗಳುರುಳಿದಂತೆ ಮಗುವಿನ ಬೆಳವಣಿಗೆಯ ಪ್ರಮಾಣವೂ ೨.೫ ಇಂಚಿನಷ್ಟು ಪ್ರತಿ ವರ್ಷವೂ ಕಡಿಮೆಯಾಗುತ್ತಿರುತ್ತದೆ. ನೆಲದಲ್ಲಿ ಮಲಗಿಸಿದೊಡನೆಯೇ, ಮಗುವು ಚುರುಟಿಕೊಳ್ಳುವುದರಿಂದ ಅಥವಾ ಮುದುಡಿಕೊಳ್ಳುವುದರಿಂದ ಮಗುವಿನ ಸರಿಯಾದ ಅಳತೆಯನ್ನು ಗುರುತಿಸಲು ಸ್ವಲ್ಪ ಕಷ್ಟವಾಗಬಹುದು.

ವೈದ್ಯರು ಮಕ್ಕಳು ಬೆಳವಣಿಗೆಯನ್ನು ಪರಿಶೀಲಿಸುವ ಕೆಲವು ಮಾನದಂಡಗಳನ್ನಷ್ಟೇ  ಮೇಲೆ ತಿಳಿಸಲಾಗಿದೆ. ಆದರೆ, ನಿಮ್ಮ ಮಗುವಿನಲ್ಲಿ  ಅಸ್ವಾಭಾವಿಕವಾದ ಅಥವಾ ಅಸಹಜವಾದ ಬೆಳವಣಿಗೆ ಏನಾದರೂ ಕಂಡು ಬಂದರೆ ತಡಮಾಡದೇ, ವೈದ್ಯರನ್ನು ಭೇಟಿ ಮಾಡಿರಿ.

Leave a Reply

%d bloggers like this: