ನಿಮ್ಮ ಮಕ್ಕಳಿಗೆ ರುಚಿಯಾದ ಆರೋಗ್ಯಕರ ರಾಗಿ ಬಿಸ್ಕತ್

ರಾಗಿ ಹೆಚ್ಚು ಕ್ಯಾಲೋರಿ, ಪೌಷ್ಟಿಕಾಂಶಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳು ಆರೋಗ್ಯವಾಗಿರಲು ಮತ್ತು ಪುಷ್ಟಿ ಹೊಂದಲು ಇದರ ಸೇವನೆ ಅಗತ್ಯ, ಮಕ್ಕಳು ಇಷ್ಟ ಪಡುವ ಬಿಸ್ಕತ್ ಅನ್ನು ಇದರಿಂದ ಮಾಡಿದರೆ ಬಾಯಿಗೆ ರುಚಿ ಸಿಗುವ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶಗಳು ಕೂಡ ಸಿಗುತ್ತವೆ.

ಬೇಕಾಗಿರುವ ಪದಾರ್ಥಗಳು

ಗೋಧಿ ಹಿಟ್ಟು – ೩/೪ ಬಟ್ಟಲು (ಮುಕ್ಕಾಲು ಕಪ್)

ರಾಗಿ ಹಿಟ್ಟು – ೩/೪ ಬಟ್ಟಲು (ಮುಕ್ಕಾಲು ಕಪ್)

ಸಿಹಿ ಇಲ್ಲದ ಕೋಕೋ ಪುಡಿ (cocoa powder) – ೧/೨ ಬಟ್ಟಲು (ಅರ್ಧ ಬಟ್ಟಲು)

ಸಕ್ಕರೆ – ೩/೪ ಬಟ್ಟಲು (ಮುಕ್ಕಾಲು ಕಪ್) [ಹೆಚ್ಚು ಸಿಹಿ ಬೇಕಿದ್ದರೆ ೧ ಬಟ್ಟಲು ಸಕ್ಕರೆಯನ್ನು ಹಾಕಿ]

ಬೇಕಿಂಗ್ ಸೋಡಾ – ಅರ್ಧ ಚಮಚ

ಬೆಣ್ಣೆ (ಮೃದುವಾಗಿರುವ) – ೧೫೦ ಗ್ರಾಂ.

ಮಾಡುವ ವಿಧಾನ

ರಾಗಿ ಹಿಟ್ಟು, ಗೋಧಿ ಹಿಟ್ಟು ಮತ್ತು cocoa ಪುಡಿಯನ್ನು ಜಾಲರಿಯಲ್ಲಿ ತೀರಿದುಕೊಳ್ಳಿ, ಪಕ್ಕಕ್ಕೆ ಇಡಿ.

ಮತ್ತೊಂದು ದೊಡ್ಡ ಪಾತ್ರೆಯಲ್ಲಿ ಮೃದುವಾಗಿರುವ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ.

ಸಣ್ಣ ಹುರಿಯಲ್ಲಿ ಅವೆರಡನ್ನು (ಚೆನ್ನಾಗಿ ಕಲಸುತ್ತಿರಿ) ಕ್ರೀಮ್ ತರಹ ಮಾಡಿ, ಹುರಿಯಿಂದ ಕೆಳಗಿಳಿಸಿ.

ನಿಧಾನವಾಗಿ ತೀರಿದುಕೊಂಡಿರುವುದನ್ನು ಇದಕ್ಕೆ ಮಿಶ್ರಿಸಿ. ಮರದ ಚಮಚದಿಂದ ಅಥವಾ ಕೈ ಇಂದ ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಅದು ಮೃದು/ಮೆತ್ತಗಾಗುವವರೆಗೆ ಯಾವುದೇ ಗಂಟು ಅಥವಾ ಗುಳ್ಳೆ ಬಾರದಂತೆ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟು ಕಂಡರೆ ೫-೬ಚಮಚ ಹಾಲನ್ನು ಅಥವಾ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಿಸಿ.

ಸಿದ್ದಪಡಿಸಿದ ಮಿಶ್ರಣವನ್ನು ಗಾಳಿ ಹೋಗದಂತೆ ಇರುವ (airtight) ಡಬ್ಬಿ ಅಥವಾ ಬ್ಯಾಗ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಅರ್ಧ ಗಂಟೆ ಇರಿಸಿ.

ಓವೆನ್ ಅನ್ನು ೧೮೦ ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಮಾಡಿ.

ಅದಕ್ಕೆ ಬೇಕಿಂಗ್ ಶೀಟ್ ಅನ್ನು ಹಾಕಿ ಅಥವಾ ಟ್ರೇ ತರಹದನ್ನು ಇಡಿ.

ರೆಫ್ರಿಜಿರೇಟರ್ ಅಥವಾ ಫ್ರಿಡ್ಜ್ ನಲ್ಲಿ ಇಟ್ಟಿರುವ ಹಿಟ್ಟಿನ ಮಿಶ್ರಣವನ್ನು ತೆಗೆದು ಬಿಸ್ಕತ್ ಆಕಾರದಲ್ಲಿ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಮಾಡಿ.

ಬಿಸ್ಕತ್ ಆಕಾರದಲ್ಲಿರುವ ಹಿಟ್ಟನ್ನು ಬೇಕಿಂಗ್ ಶೀಟ್ ಅಥವಾ ಟ್ರೇ ನಲ್ಲಿ ಇರಿಸಿ.

ಒಂದು ಬಿಸ್ಕತ್ ಮತ್ತು ಇನ್ನೊಂದರ ನಡುವೆ ಅಂತರವಿರಲಿ, ಅದು ಬಿಸಿಯಾಗುವಾಗ ದೊಡ್ಡದಾಗುತ್ತವೆ. ಇದನ್ನು ೧೨ ನಿಮಿಷ ಬೇಯಿಸಿ.

ಅವು ಈಗಲೂ ಮೃದುವಾಗಿರುತ್ತವೆ, ಅದರ ಬಗ್ಗೆ ಚಿಂತಿಸಬೇಡಿ, ತಣ್ಣಗಾದ ಮೇಲೆ ಅವು ಗಟ್ಟಿಯಾಗುತ್ತವೆ.

ಓವೆನ್ ಇಂದ ಬಿಸ್ಕತ್ ಅನ್ನು ಹೊರ ತೆಗೆದು ೫ನಿಮಿಷ ಹಾಗೆಯೆ ಆರಲು ಬಿಡಿ.

ನೆನಪಿರಲಿ ೧೨ನಿಮಿಷಕ್ಕಿಂತ ಹೆಚ್ಚು ಬೇಯಿಸ ಬೇಡಿ.

Leave a Reply

%d bloggers like this: