ಪುರುಷರ ವೀರ್ಯ ಪ್ರಮಾಣ ಕಡಿಮೆಯಾಗಲು ಕಾರಣ

ನಿಮ್ಮ ಕಣ್ಣಿಗೆ ಕಾಣಿಸದ ವೀರ್ಯದ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಆ ವೀರ್ಯವೇ ನಿಮ್ಮನ್ನು ಅಪ್ಪನನ್ನಾಗಿ ಮಾಡುವ ಶಕ್ತಿ ಹೊಂದಿರುವುದು. ನಿಮ್ಮಲ್ಲಿರುವ ವೀರ್ಯ ಕಡಿಮೆಯಾಗಲು ಕಾರಣವೇನು? ನೀವು ಸೇವಿಸುವ ಆಹಾರ, ಕುಡಿಯುವ ಪಾನೀಯ ಮತ್ತು ದಿನನಿತ್ಯ ಕ್ರಮ ನಿಮ್ಮ ವೀರ್ಯ ಪ್ರಮಾಣ ಕಡಿಮೆ ಮಾಡಿ ನೀವು ಮಗು ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ನಿಮ್ಮ ವಾರಸುದಾರನನ್ನು ಪಡೆಯುವಲ್ಲಿ ನಿಮ್ಮ ವೀರ್ಯ ಅತಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮಲ್ಲಿರುವ ಕೆಲವು ಗುಣಗಳನ್ನು ಸಹ ಅದು ನಿಮ್ಮ ಮಗುವಿಗೆ ಕಳುಹಿಸುತ್ತದೆ. ನಿಮ್ಮ ವೀರ್ಯ ಪ್ರಮಾಣ ಕಡಿಮೆ ಆಗಲು ಕೆಲವು ಕಾರಣಗಳು ಈ ಕೆಳಗಿವೆ.

೧.ಶಮನಕಾರಿ ಮತ್ತು ಕೂದಲು ಉದುರುವಿಕೆಯ ಮಾತ್ರೆ/ಔಷಧಿಗಳ ಸೇವನೆ

ಫಿನಾಸ್ಟೈಡ್(finasteride) ಎಂದು ಕರೆಯಲ್ಪಡುವ, ಪ್ರೊಫೆಸಿಯದಲ್ಲಿರುವ(propecia) ಚಟುವಟಿಕೆಯ ಪದಾರ್ಥ, ಪುರುಷರ ಹಾರ್ಮೋನು ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ, ಮತ್ತು ಇದು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆ ಮತ್ತು ವೀರ್ಯದ ಗುಣಮಟ್ಟವನ್ನು ಮತ್ತು ಆರೋಗ್ಯವನ್ನು ಹದಗೆಡಿಸುತ್ತದೆ.

ಖಿನ್ನತೆ-ಶಮನಕಾರಿಗಳು, ಕೂಡ ನಿಮ್ಮ ವೀರ್ಯದ ಡಿಎನ್ಎ(DNA) ಅನ್ನು ಹಾಳುಮಾಡುವ ಮೂಲಕ ವೀರ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

೨.ಬಿಸಿ ನೀರಲ್ಲಿ ಇರುವುದು

ನಿಮ್ಮ ಸ್ನಾಯುಗಳ ಮತ್ತು ಮಾಂಸಖಂಡಗಳ ಆರಾಮಕ್ಕಾಗಿ ಮತ್ತು ನಿಮ್ಮ ಮಗುವಿನ ಜನನಕ್ಕೆ ಕೆಲಸ ಮುಗಿಸಿದ ನಂತರ ಬಿಸಿ ನೀರಲ್ಲಿ ಮುಳುಗುವುದು ದೇಹಕ್ಕೆ ವಿಶ್ರಾಂತಿ ಮತ್ತು ಆರಾಮವನ್ನು ನೀಡುತ್ತದೆ, ಆದರೆ ಹೆಚ್ಚು ಸಮಯ ಬಿಸಿ ನೀರಿನಲ್ಲಿ ಮುಳುಗಿರುವುದು ವೀರ್ಯವನ್ನು ಹಿಸುಕಿ ಉತ್ಪತ್ತಿ ಮಾಡುವ ಅಂಗವನ್ನು ತಡೆಯುತ್ತದೆ.

೩.ಹೆಚ್ಚು ಕಾಫಿ ಕುಡಿಯುದು

ಕಾಫಿ ಅಲ್ಲಿರುವ ಕೆಫಿನ್ ಎಂಬ ಅಂಶವು ವೇಗವಾಗಿ ಸಾಗಲು ಸಹಾಯ ಮಾಡಿದರು, ಅತಿಯಾದರೆ ಅಮೃತವು ವಿಷ ಎಂಬಂತೆ, ಹೆಚ್ಚು ಕಾಫಿ ಸೇವನೆ ವೀರ್ಯಕ್ಕೆ ತೊಂದರೆಯಾಗುತ್ತದೆ. ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಸಾಕು. ಕಾಫಿಯಲ್ಲಿರುವ ಕೆಫಿನ್ ಅಂಶವು ದೇಹಕ್ಕೂ ಅಪಾಯ, ಆದ್ದರಿಂದ ಕಾಫಿ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಕೂಡ ಒಳ್ಳೆಯದು.

೪.ವಯಸ್ಸು

ಡಾಕ್ಟರ್ ಡೊಮರ್ ಪ್ರಕಾರ, ಪುರುಷನ ವಯಸ್ಸು ಮಹಿಳೆ ಗರ್ಭಿಣಿಯಾಗಲು ಅವನ ಸಾಮರ್ಥ್ಯದ ಮೇಲೆ ನಿಜವಾದ ಪರಿಣಾಮವನ್ನು ಬೀರುತ್ತದೆ. ಅವನ ವೀರ್ಯದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ ಎಂದು ಅವರು ಹೇಳುತ್ತಾರೆ.

೫.ಮಧ್ಯ

ಮಧ್ಯ ಸೇವನೆ ವೀರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾಕ್ಟರ್ ಡೊಮರ್ ಅವರು ಹೇಳುತ್ತಾರೆ. ವಾರದಲ್ಲಿ ಏಳು ಲೋಟಕ್ಕಿಂತ ಅಧಿಕ ಮಧ್ಯ ಸೇವನೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಮಧ್ಯಪಾನ ಮತ್ತು ಧೂಮಪಾನ ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತವೆ. ನೀವು ನಿಜವಾಗಿ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಮಧ್ಯಪಾನ ಮತ್ತು ಧೂಮಪಾನವನ್ನು ಬಿಡುವುದು ಒಳ್ಳೆಯದು. ನಿಕೋಟಿನ್ ನಿಮ್ಮ ವೀರ್ಯ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ, ವೀರ್ಯ ಉತ್ಪತ್ತಿ ಮಾಡುವ ಅಂಗವನ್ನು ಹಾಳು ಮಾಡುತ್ತದೆ.

ನಿಮ್ಮ ವೀರ್ಯ ಪ್ರಮಾಣ ಕಡಿಮೆಯಾಗಲು ಈ ಮೇಲಿನ ಸಂಗತಿಗಳೇ ಕಾರಣ, ನೀವು ನಿಜವಾಗಿ ಮಗು ಪಡೆಯಲು ಪ್ರಯತ್ನಿಸುತ್ತಿದ್ದರೆ ಈ ಕಾರಣಗಳನ್ನು ತಿಳಿದುಕೊಂಡು ಅದರಿಂದ ಹೊರ ಬನ್ನಿ, ಕಾರಣ ತಿಳಿದರೆ ಅದರ ಪರಿಹಾರ ಸುಲಭ.

Leave a Reply

%d bloggers like this: