ಮಕ್ಕಳಲ್ಲಿ ಮಧುಮೇಹ : ಕಾರಣ ಮತ್ತು ಲಕ್ಷಣಗಳು

ಮಧುಮೇಹ(ಡಯಾಬಿಟಿಸ್) ವಯಸ್ಸಾದವರಿಗೆ ಸಾಮಾನ್ಯ ಎನ್ನುತ್ತಿದ್ದ ಕಾಲ ಇತ್ತು, ಆದರೆ ಈಗ ಸಣ್ಣ ಮಕ್ಕಳಿಂದ ಯುವ ಜನತೆಯರಲ್ಲೂ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ಎಲ್ಲಾ ವಯಸ್ಸಿನವರಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಧುನಿಕ ಜೀವನ ಶೈಲಿ, ಆಹಾರ ಕ್ರಮ ಮುಂತಾದ ದೈನಂದಿನ ಚಟುವಟಿಕೆಗಳು ಕಾರಣ. ಮಧುಮೇಹ ಎಂದರೆ ಏನು ಎಂಬ ಅರಿವೇ ಇಲ್ಲದ ಮಕ್ಕಳನ್ನು ಅದರಿಂದ ಕಾಪಾಡುವುದು ಪೋಷಕರ ಕರ್ತವ್ಯ. ಇದು ಅವರಿಗೆ ಸವಾಲಿನ ವಿಷಯವೇ ಸರಿ.

ಟೈಪ್ ೧ ಮಧುಮೇಹ

ಮೇದೋಜೀರಕ ಗ್ರಂಥಿಯ ಹಾನಿ ಇಂದ ಮಕ್ಕಳಲ್ಲಿ ಟೈಪ್ ೧ ಮಧುಮೇಹ ಕಾಣಿಸಿಕೊಳ್ಳಬಹುದು. ಇದರಿಂದ ಮಕ್ಕಳ ದೇಹವು ಇನ್ಸುಲಿನ್ ಉತ್ಪತ್ತಿ ಮಾಡಲು ವಿಫಲವಾಗುತ್ತದೆ. ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗದ ಕಾರಣ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ.

ಟೈಪ್ ೨ ಡಯಾಬಿಟಿಸ್

ಟೈಪ್ ೨ ಮಧುಮೇಹವು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ತೀರಾ ಕಡಿಮೆ ಇರುವ ಪರಿಣಾಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಸರಿಯಾದ ಸಮಯದಲ್ಲಿ ಇದನ್ನು ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡಿಯದಿದ್ದರೆ, ಕಿಡ್ನಿ, ಹೃದಯ ಮತ್ತು ಕಣ್ಣಿನ ತೀವ್ರ ಸಮಸ್ಯೆಯನ್ನು ಎದುರಿಸಬೇಕಾದೀತು. ಅತಿಯಾದಲ್ಲಿ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾದೀತು.

ಕಾರಣಗಳು

ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳಲು ಹಲವು ಕಾರಣಗಳಿದ್ದರೂ ಕೆಲವು ಪ್ರಮುಖ ಕಾರಣಗಳೆಂದರೆ, ವಂಶವಾಹಿನಿ, ವೈರಸ್ ಸೋಂಕು, ಮೇದೋಜೀರಕ ಗ್ರಂಥಿ ಹಾನಿಯಾಗಿರುವುದು, ಆಧುನಿಕ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮ.

ಲಕ್ಷಣಗಳು

೧.ಮಕ್ಕಳಲ್ಲಿ ಆಗಾಗ್ಗೆ ಹೊಟ್ಟೆನೋವು ಕಾಣಿಸಿಕೊಳ್ಳುವುದು

೨.ಪದೇ ಪದೇ ಮೂತ್ರವಿಸರ್ಜನೆ ಮಾಡುವುದು

೩.ಬೇಗನೆ ಸುಸ್ತಾಗುವುದು, ನಿಶ್ಯಕ್ತಿ

೪.ದೇಹದ ಕೆಲವು ಭಾಗ ಬೇಗನೆ ಮರಗಟ್ಟುವುದು(ಜೋಗು ಹಿಡಿಯುವುದು)

೫.ಸಣ್ಣ ಗಾಯ ಕೂಡ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಅಥವಾ ಗುಣವಾಗದೆ ಇರುವುದು

೬.ಮಗುವಿನ ತೂಕ ಕಡಿಮೆಯಾಗುವುದು

೭.ಕಡಿಮೆ ರಕ್ತದೊತ್ತಡ(low BP)

೮.ಮನಸ್ಥಿತಿ ಬದಲಾವಣೆ ಆಗುವುದು.

ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಚಿಕಿತ್ಸೆ ಪಡೆಯುದು ತುಂಬಾ ಮುಖ್ಯ. ನೀವು ಮಕ್ಕಳಲ್ಲಿ ಅದರ ಲಕ್ಷಣ ಕಂಡ ತಕ್ಷಣ ಸರಿಯಾದ ಚಿಕಿತ್ಸೆ ನೀಡುವುದರ ಮೂಲಕ ಸಂಪೂರ್ಣವಾಗಿ ಅದನ್ನು ಗುಣ ಪಡಿಸಬಹುದು. ಮತ್ತು ಮುಂದಿನ ಹೆಚ್ಚಿನ ಅಪಾಯಗಳನ್ನು ತಪ್ಪಿಸಬಹುದು.

Leave a Reply

%d bloggers like this: