ಮೊಟ್ಟೆಯ ಅದ್ಭುತವಾದ ೫ ಉಪಯೋಗಗಳು

 “ಮೊಟ್ಟೆ” ಎಂಬ ಹೆಸರಲ್ಲಿ ಅಡುಗೆ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ಈ ಸಂಜೀವಿನಿ, ಸ್ವಾದಿಷ್ಟವಾದ ಆಮ್ಲೇಟ್ ತಯಾರಿಗೆ ಮಾತ್ರವಲ್ಲದೆ, ಬೇರೆ ನಂಬಲಾರದಂತಹ ಹತ್ತು ಹಲವಾರು ಉಪಯೋಗಗಳೂ ಇವೆ.  ಹೇರಳವಾಗಿ ಪ್ರೊಟೀನ್ನಿಂದ ಪೂರಕವಾಗಿರುವ ಮೊಟ್ಟೆಯು, ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಾಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನೀವು ಅರಿತಿರದ ಮೊಟ್ಟೆಯ ಕೆಲವು ಉಪಯೋಗಗಳ ಬಗ್ಗೆ ಎಂದು ತಿಳಿದುಕೊಳ್ಳೋಣ. 

೧.  ಬ್ಲ್ಯಾಕ್ ಹೆಡ್ ಗಳ ನಿವಾರಣೆ  

       ಮೂಗಿನ ಹಾಗೂ ಗದ್ದದ ಭಾಗಗಳಲ್ಲಿ ಕಂಡುಬರುವ ಬ್ಲ್ಯಾಕ್ ಹೆಡ್ಗಳ ನಿವಾರಣೆಗಾಗಿ ಮೊಟ್ಟೆಯನ್ನು ಬಳಸಬಹುದು. ಮೊಟ್ಟೆಯಿಂದ, ಅದರ ಹಳದಿ ಭಾಗವನ್ನು ಬೇರ್ಪಡಿಸಿದ ಬಳಿಕ ಅದಕ್ಕೆ ಲಿಂಬೆ ರಸ, ಜೇನು ಮತ್ತು ಬೇಕಿಂಗ್ ಸೋಡಾವನ್ನು ಸೇರಿಸಿ ಚೆನ್ನಾಗಿ ಕಲೆಸಿರಿ. (ಇವುಗಳನ್ನು ಸೇರಿಸದಿದ್ದರೂ ಏನು ತೊಂದರೆ ಇಲ್ಲ. ಆದರೆ ಇವುಗಳು ನಿಮ್ಮ ತ್ವಚೆಯನ್ನು ಮೃದುವಾಗಿರಿಸುತ್ತದೆ) ಮುಖದ ತೊಂದರೆ ಪೀಡಿತ ಭಾಗಗಳಲ್ಲಿ ಅಥವಾ ಮುಖದ ಮೇಲೆ ಸಂಪೂರ್ಣವಾಗಿ ಈ ಮಿಶ್ರಣವನ್ನು ಲೇಪಿಸಿ. ಈ ಲೇಪನದ ಮೇಲೆ ಟಿಶ್ಯೂ ಪೇಪರನ್ನು ಹರಡಿ. ಆ ಟಿಷ್ಯೂ ಪೇಪರಿನ ಮೇಲೆ ಕಲೆಸಿದ ಮೊಟ್ಟೆಯನ್ನು ಪುನಃ ಲೇಪಿಸಿ. ಈ ರೀತಿಯಾಗಿ ಮೂರು ನಾಲ್ಕು ಪದರಗಳಂತೆ ಲೇಪಿಸಿದ ಬಳಿಕ ಸಂಪೂರ್ಣವಾಗಿ ಒಣಗಲು ಬಿಡಿ. ಒಣಗಿದ ಬಳಿಕ ಈ ಪದರವನ್ನು ಮೆಲ್ಲನೆ ಎಳೆದು ತೆಗೆಯಿರಿ. ಪ್ರತಿ ವಾರಗಳಿಗೊಮ್ಮೆ ಈ ರೀತಿ ಆವರ್ತಿಸಿದರೆ, ನಂಬಲು ಸಾಧ್ಯವಾಗದಂತೆ ನಿಮ್ಮ ಚರ್ಮವೂ ಬದಲಾಗುವುದು.  

೨. ರೇಷ್ಮೆಯಂತೆ ನುಣುಪಾದ ಕೂದಲು  

ಮೊಟ್ಟೆಯಿಂದ ತಯಾರಿಸಲ್ಪಟ್ಟವೆಂಬ ಕಂಪೆನಿಯ ಜಾಹೀರಾತುಗಳಿಗೆ ಮರುಳಾಗಿ, ಮೊಟ್ಟೆಯ ಎಸ್ಸೆನ್ಸ್ ಅನ್ನು ಹೊಂದಿರುವ ದುಬಾರಿ ಬೆಲೆಯ ಶಾಂಪು ಅಥವಾ ಕಂಡೀಶನರನ್ನು ನೀವು ಖರೀದಿಸಿರಬಹುದು. ಆದರೆ, ನಿಜವಾದ ಮೊಟ್ಟೆಯ ಬಳಕೆಯಿಂದ ಲಭಿಸುವ ಫಲಿತಾಂಶವೇ ಬೇರೆ ಎನ್ನುವುದನ್ನು ಮರೆಯದಿರಿ.  ಮೊಟ್ಟೆಯೊಂದನ್ನು ಒಲಿವ್ ಆಯಿಲ್ ನೊಂದಿಗೆ ಚೆನ್ನಾಗಿ ಕದಡಿ. ಅದನ್ನು ನಿಮ್ಮ ತಲೆಯೋಡಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.ಅರ್ಧ ಗಂಟೆಯ ತರುವಾಯ ಶ್ಯಾಂಪು ಮತ್ತು ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆದುಕೊಳ್ಳಿ.  

ಮೊಟ್ಟೆಯಲ್ಲಿರುವ ಪ್ರೊಟೀನ್ ನಿಮ್ಮ ಕೂದಲನ್ನು ಸುದೃಢವಾಗಿರಿಸುತ್ತದೆ. ಮಾತ್ರವಲ್ಲದೆ ಕಂಡೀಶನರಂತೆ ವರ್ತಿಸಿ, ನಿಮಗೆ ನುಣುಪಾದ ರೇಷ್ಮೆಯಂತಹ ಸುಂದರ ಕೂದಲನ್ನು ಉಡುಗೋರೆಯಂತೆ ನೀಡುತ್ತದೆ.  

೩. ರುಚಿಕರವಾದ ಕಾಫಿ 

 ಮೊಟ್ಟೆಯ ಸಿಪ್ಪೆಯನ್ನು ಉಪಯೋಗಿಸಿ ಕಾಫಿಯ ಕಹಿಯನ್ನು ಕಡಿಮೆಗೊಳಿಸಬಹುದೆಂದು ನೀವು ಯಾವತ್ತಾದರೂ ಆಲೋಚಿಸಿದ್ದೀರಾ ? ? ಕಾಫಿಯು ಆಮ್ಲೀಯ ಗುಣವನ್ನು ಹೊಂದಿದೆ. ಮೊಟ್ಟೆಯ ಸಿಪ್ಪೆಯು ಕ್ಷಾರೀಯ ಗುಣಗಳನ್ನು ಪ್ರಕಟಿಸುತ್ತದೆ. ಇವೆರಡರ ಸಂಯೋಗದಿಂದ ಕಾಫಿಯ ಕಹಿಯೂ ಕಡಿಮೆಯಾಗುವುದು.  ಮೊಟ್ಟೆಯ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಶುಚಿ ಮಾಡಿ, ಕುಟ್ಟಿ ಪುಡಿ ಮಾಡಿ ಕಾಫಿ ಪೌಡರ್ ನೊಂದಿಗೆ ಬೆರೆಸಿ,ಯಥಾವತ್ತಂತೆ ಕಾಫಿ ತಯಾರಿಸಿ. ಸ್ವಾದಿಷ್ಟವಾದ ಕಾಫಿಯನ್ನು ನೀವು ಆಸ್ವಾದಿಸುವಿರಿ.   

೪. ನಿರ್ಮಲ ತ್ವಚೆ 

 ಮೊಟ್ಟೆಯ ಹಳದಿ ಬಣ್ಣವನ್ನು ಅದರಿಂದ ಬೇರ್ಪಡಿಸಿ ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಕಲೆಗಳು ಮಾಯವಾಗುವುದಲ್ಲದೇ,  ತ್ವಚೆಯೂ ಹೊಳೆಯುವುದು. ಮೊಟ್ಟೆಯ ಹಳದಿ ಭಾಗದೊಂದಿಗೆ ಮೊಸರು ಹಾಗೂ ಚೆನ್ನಾಗಿ ಕಳಿಸಿದ ಅವಕಾಡೊ ಹಣ್ಣನ್ನು ಸೇರಿಸಿ ನುಣ್ಣಗೆ ಕಲೆಸಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ೧೫ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ ನಂತರ ಯಾವುದಾದರೂ  ಮೋಸ್ಚುರೈಸರನ್ನು ತ್ವಚೆಗೆ ಹಚ್ಚಿಕೊಳ್ಳಿ.  

 ೫. ಸ್ಟ್ರೆಚ್ ಮಾರ್ಕುಗಳ ನಿವಾರಣೆ 

ಮೊಂಡು ಹಿಡಿದ ಹಠ ಮಾರಿ ಸ್ಟ್ರೆಚ್ ಮಾರ್ಕುಗಳ ನಿವಾರಣೆಗೆ, ಮೊಟ್ಟೆಯ ಬಿಳಿ ಭಾಗವು ರಾಮಬಾಣ. ಮೊಟ್ಟೆಯ ಬಿಳಿಭಾಗವನ್ನು ಹೊಟ್ಟೆಯ ಮೇಲೆ ಹಚ್ಚಿಕೊಂಡು ೧೫ ನಿಮಿಷಗಳ ಬಳಿಕ ತೊಳೆದುಕೊಳ್ಳಿ. ನಂತರ ಕೊಕೋ ಅಥವಾ ಆಲಿವ್ ಆಯಿಲನ್ನು ಹಚ್ಚಿಕೊಳ್ಳಿ .  ಮೊಟ್ಟೆಯಲ್ಲಿರುವ ಪ್ರೋಟಿನ್ ಹೊಸ ಚರ್ಮವನ್ನು ಉತ್ಪಾದಿಸುವಲ್ಲಿ ಸಹಕರಿಸುತ್ತದೆ ಹಾಗೂ ಕೊಲೆಗನ್ ಗಳು, ಸ್ಟ್ರೆಚ್ ಕಲೆಗಳನ್ನು ನಿವಾರಿಸುತ್ತದೆ.ದಿನವೂ ಈ ರೀತಿ ಮಾಡಿದರೆ ಬಹಳ ಶೀಘ್ರದಲ್ಲೇ ಕಲೆಗಳು ಅದೃಶ್ಯವಾಗುವುದನ್ನು ಕಾಣಬಲ್ಲಿರಿ.   

Leave a Reply

%d bloggers like this: