ಈ ನವಜಾತ ಶಿಶುವು ನರ್ಸಿನ ನಂಬಿಕೆಯನ್ನು, ಶಿಶು ಬೆಳವಣಿಗೆಯ ಗುರಿಗಳನ್ನು ಮತ್ತು ಗುರುತ್ವಾಕರ್ಷಣೆಯನ್ನೇ ಸುಳ್ಳು ಮಾಡಿ ಜನಿಸಿದ ಕೆಲವೇ ನಿಮಿಷಗಳಲ್ಲಿ ತನ್ನ ಪುಟ್ಟ ಕಾಲುಗಳ ಮೇಲೆ ನಿಂತು ನಡೆದಿದ್ದಾಳೆ.
ಆಶ್ಚರ್ಯ ಚಕಿತರಾದ ಆಸ್ಪತ್ರೆ ಸಿಬ್ಬಂದಿ ಈ ಛಲಮಾರಿ ಮಗುವನ್ನು ಸ್ನಾನ ಮಾಡಿಸಲೆಂದು ಮುಂದಾದರೆ, ಈ ಮಗು ಮಾಡಿದ್ದೆ ಬೇರೆ! ಈ ವಿಡಿಯೋದಲ್ಲಿ ನೀವು ಸೂಲಗಿತ್ತಿ ಮಗುವನ್ನು ಎದೆಮೇಲೆ ಹಾಕಿಕೊಂಡು ತೂಗಿಸಲು ಹೋದಾಗ, ಆ ಮಗುವು ಹೊರಳಾಡಿ ತನ್ನ ಕಾಲ ಮೇಲೆ ನಡೆಯುತ್ತಾ ಹೋಗುವುದನ್ನ ನೀವು ಕಾಣಬಹುದು.
ಶಸ್ತ್ರಚಿಕಿತ್ಸಾ ವಸ್ತ್ರ ಧರಿಸಿ, ಮುಖದ ಮೇಲೆ ಕ್ಲಿನಿಕಲ್ ಮಾಸ್ಕ್ ಹಾಕಿಕೊಂಡಿರುವ ಸೂಲಗಿತ್ತಿಯು ಪೋರ್ಚುಗೀಸ್ ಭಾಷೆಯಲ್ಲಿ “ಅಯ್ಯೋ ದೇವ್ರೇ, ಈ ಹೂಗುಗಿ ನಡಿತಿದಾಳೆ, ಪವಾಡ ಇದು!” ಎಂದು ಆಶ್ಚರ್ಯದಿಂದ ಹೇಳುವುತ್ತಿರುವುದನ್ನ ನೀವು ಕಾಣಬಹುದು.
“ತಡಿ, ಇದನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡ್ತೀನಿ” ಎಂದು ರೂಮಿನ ಇನ್ನೊಂದು ಬದಿಯಲ್ಲಿರುವ ಮತ್ತೋರ್ವ ವ್ಯಕ್ತಿ ಹೇಳುತ್ತಿರುವುದನ್ನು ನೀವು ಕೇಳಿಸಿಕೊಳ್ಳಬಹುದು.
ವಿಡಿಯೋದಲ್ಲಿ ಈ ಸೂಲಗಿತ್ತಿಯು “ನಾನು ಇವಳಿಗೆ ಸ್ನಾನ ಮಾಡಿಸಬೇಕು ಅಂತ ಹೋದರೆ, ಇವಳು ಇಲ್ಲಿಂದ ಇಲ್ಲಿವರೆಗೆ ನಡೆದುಕೊಂಡು ಹೋದಳು!” ಎಂದು ಟೇಬಲ್ ಮೇಲಿನ ಆ ಅಂತರವನ್ನು ತೋರಿಸುತ್ತಿರುವುದನ್ನು ನೀವು ಕಾಣಬಹುದು.
ಈ ವಿಡಿಯೋ ಬ್ರೆಜಿಲ್ ದೇಶದ ರಿಯೋ ಗ್ರಾಂಡೆ ಸೋಲ್ ಎಂಬ ಊರಿನ ಸಾಂಟಾ ಕ್ರೂಜ್ ಆಸ್ಪತ್ರೆಯದ್ದು. ನವಜಾತ ಶಿಶುಗಳು ಸಹಜವಾಗಿ ನಡೆಯಲು ಶುರು ಮಾಡುವುದು ಜನಿಸಿದ ೧೨ ತಿಂಗಳುಗಳ ನಂತರ. ಅದು ಕೂಡ ಅವರು ಕೈ-ಕಣ್ಣು ಸಮನ್ವಯತೆ, ಕೂರುವುದು ಮತ್ತು ತೆವಳುವಂತ ಕಾರ್ಯಗಳ ಮೈಲಿಗಲ್ಲುಗಳನ್ನ ದಾಟಿದ ಮೇಲೆ.