ಸಾಮಾನ್ಯ, ಆರೋಗ್ಯಕರ ಸರಿಯಾದ ಋತುಚಕ್ರ ಎಂದರೇನು?

ನಿಮ್ಮ ಮುಟ್ಟಿನ ಅವಧಿಯಲ್ಲಿ ನೀವು ಕಷ್ಟವನ್ನು ಅಥವಾ ನೋವನ್ನು ಅನುಭವಿಸಲು ಯಾವುದೇ ಕಾರಣ ಇರುವುದಿಲ್ಲ. ಇದು ನೀವು ಬೇರೆ ವಿಧಿ ಇಲ್ಲದೆ, ಯಾವುದೇ ಮಾರ್ಗ ವಿಲ್ಲದೆ ಅನುಭವಿಸಲೇಬೇಕಾದ ಹಣೆಬರಹವಲ್ಲ, ಸೆಳೆತ, ಹೆಚ್ಚು ರಕ್ತಸ್ರಾವ, ದೀರ್ಘ ಅವಧಿಯ ಮುಟ್ಟು, ಹೆಪ್ಪುಗಟ್ಟುವುದು ಇವುಗಳನ್ನೆಲ್ಲಾ ನೀವು ತಡೆಯಬಹುದು ಅಥವಾ ಇವುಗಳಿಂದ ನೀವು ತಪ್ಪಿಸಿಕೊಳ್ಳಬಹುದು.

ಆರೋಗ್ಯಕರ ಋತುಚಕ್ರ ಎಂದರೆ,

೧.ನಿಮ್ಮ ಮುಟ್ಟು ೨೬ ರಿಂದ ೩೨ ದಿನಗಳ ಅಂತರದಲ್ಲಿ ಸಂಭವಿಸಬೇಕು. ಈ ಮಧ್ಯದಲ್ಲಿ ಆದರೂ ನಿಮಗೆ ನಿಯಮಿತವಾಗಿ ಮತ್ತು ಸ್ಥಿರವಾಗಿದ್ದರೆ ಅದು ಉತ್ತಮವಾಗಿರುತ್ತದೆ.

೨.ನಿಮ್ಮ ಶುರು ದಿನದಿಂದ ಕೊನೆಯ ದಿನದ ತನಕ ರಕ್ತಸ್ರಾವದ ಬಣ್ಣವು ಕಡು ಕೆಂಪು ಬಣ್ಣವಿರಬೇಕು ಮತ್ತು ಅದರಲ್ಲಿ ಯಾವುದೇ ಹೆಪ್ಪುಗಟ್ಟುವಿಕೆ ಇರಬಾರದು. ನಿಮ್ಮ ಮುಟ್ಟು ೪-೭ ದಿನದ ಒಳಗೆ ಮುಗಿಯ ಬೇಕು ಮತ್ತು ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡಲ್ಲಿ ವೈದ್ಯರನ್ನು ಭೇಟಿ ಮಾಡಿ.

೩.ನೀವು ಮಾಡುವಾಗ ನಿಮ್ಮ ಗರ್ಭಕೋಶದಲ್ಲಿ ಸಾಗುವ ಅನುಭವವನ್ನು ಅನುಭವಿಸಬೇಕು, ಆದರೆ ಅದು ನೋವಲ್ಲ, ಬೆಚ್ಚನೆಯ ಅನುಭವ ಅಥವಾ ಸ್ವಲ್ಪ ಸಂವೇದನೆ ಆಗುತ್ತದೆ.

೪.ನಿಮ್ಮ ಮುಟ್ಟಿನ ದಿನದ ನಂತರ, ಅಂಡೋತ್ಪತ್ತಿಯಾಗಲು ಸೆರ್ವಿಕಲ್ ದ್ರವ ಅಭಿವೃದ್ಧಿ ಆಗುವುದನ್ನು ನೀವು ನೋಡಬಹುದು, ಇದು ಆರೋಗ್ಯಕರ ಫಲವತ್ತತೆಯ ಸೂಚಕ ಮತ್ತು ಗರ್ಭಿಣಿಯಾಗಲು ಇದು ತುಂಬಾ ಅವಶ್ಯಕವಾಗಿದೆ. ನಿಮ್ಮ ಒಳಉಡುಪಿನಲ್ಲಿ ಅಥವಾ ಪ್ಯಾಡ್ನಲ್ಲಿ ಅಥವಾ ನೀವು ಬಾತ್ ರೂಮ್ ನಿಂದ ಹೊರಗೆ ಬರುವಾಗ ಇದನ್ನು ನೀವು ನೋಡಬಹುದು.

ಈ ಮೇಲಿನವುಗಳಿಗೆ ವಿರುದ್ದವಾಗಿದ್ದರೆ ನಿಮ್ಮ ಋತುಚಕ್ರದಲ್ಲಿ ಅತಿಯಾದ ನೋವು, ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಸೆಳೆತ ಕಾಣಿಸಿಕೊಂಡರೆ ತೊಂದರೆ ಇದೆ ಎಂದು ಭಾವಿಸಬಹುದು, ಇದರ ಬಗ್ಗೆ ವೈದ್ಯರ ಬಳಿ ಸಮಾಲೋಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ. ನೀವು ನಿಮ್ಮ ಮುಂದಿನ ಋತುಚಕ್ರವನ್ನು ಆರಾಮವಾಗಿ ಯಾವುದೇ ತೊಂದರೆ ಇಲ್ಲದೆ ನೋವಿಲ್ಲದೆ ಕಳೆಯಬಹುದು.

Leave a Reply

%d bloggers like this: