ಅಂಟಿಕೊಂಡ ಅವಳಿ ಮಕ್ಕಳಿಗೆ ಸಾಮಾನ್ಯ ಹೆರಿಗೆಯಲ್ಲೇ ಜನ್ಮ ನೀಡಿ ಗಂಟೆಯಲ್ಲೇ ಆಸ್ಪತ್ರೆಯಿಂದ ಹೊರನಡೆದ ತಾಯಿ!

ಈ ತಾಯಿ ಅಂಟಿಕೊಂಡಿರುವ ಅವಳಿ ಮಕ್ಕಳಿಗೆ ಸಾಮಾನ್ಯವಾಗಿ ಜನ್ಮ ನೀಡಿ ಅಲ್ಲಿಂದ ಬೇಗನೆ ಆಸ್ಪತ್ರೆಗೆ ತನ್ನ ಮಕ್ಕಳನ್ನು ಕರೆದುಕೊಂಡು ಓಡಿದಳು. ಏಕೆಂದರೆ ಆ ಮಕ್ಕಳಿಗೆ ತಕ್ಷಣವೇ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ.

ಭಾರತದ ಉತ್ತರಪ್ರದೇಶದಲ್ಲಿ ಈ ಮಹಿಳೆ ಜಾದುವಿನ ರೀತಿಯಲ್ಲಿ ಒಂದೇ ಕರುಳಬಳ್ಳಿಯನ್ನು ಹೊಂದಿರುವ ಮತ್ತು ಇಬ್ಬರು ತಮ್ಮ ಉದರದಲ್ಲಿ ಅಂಟಿಕೊಂಡಿರುವ ಶಿಶುಗಳಿಗೆ ಜನ್ಮ ನೀಡಿದ್ದಾಳೆ.

ವೈದ್ಯರು ಸಹ ಈ ಶಿಶುಗಳ ಲಿಂಗವನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದಾರೆ. ಇಬ್ಬರು ಒಂದೇ ಕರುಳ ಬಳ್ಳಿಯನ್ನು ಹೊಂದಿದ್ದರಿಂದ ಅವರ ದೇಹ ತುಂಬಾ ದುರ್ಬಲವಾಗಿತ್ತು ಎಂದು ಅವರು ಹೇಳುತ್ತಾರೆ.

ಈ ಮಕ್ಕಳು ಸೆಪ್ಟೆಂಬರ್ ೨ ರಂದು ಜನಿಸಿದ್ದು, ಇಬ್ಬರಿಗೂ ಕಾಲುಗಳು ಮತ್ತು ಎಲ್ಲಾ ಪ್ರಮುಖ ಅಂಗಗಳು ಇದ್ದವು.

ಶಸ್ರ್ತ ಚಿಕಿತ್ಸೆ ಮಾಡಿದಾಗ ಮಾತ್ರ ಈ ಮಕ್ಕಳು ಗಂಡೋ ಅಥವಾ ಹೆಣ್ಣೋ ಎಂಬುದು ತಿಳಿಯುತ್ತದೆ ಎಂದು ಡಾ. ಅಗರ್ವಾಲ್ ಅವರು ಹೇಳುತ್ತಾರೆ.

ಅವರಿಬ್ಬರಿಗೂ ನಾಲ್ಕು ಕಾಲು, ಒಂದು ಹೃದಯ ಮತ್ತು ಇತರ ಅಂಗಗಳು ಇದ್ದವು ಆದರೆ, ಉದರ ಭಾಗವು ಅಂಟಿಕೊಂಡು ಒಂದೇ ಕರುಳ ಬಳ್ಳಿಯನ್ನು ಹಂಚಿಕೊಂಡಿದ್ದರಿಂದ ದೇಹದಲ್ಲಿ ರಕ್ತ ಸಂಚಲನ ಮಾಡುವುದು ಸವಾಲನ್ನು ಮಾಡಿತು.

ಈ ತಾಯಿಯು ಆಸ್ಪತ್ರೆಗೆ ಬಂದಾಗಲೇ ಅವಳಿಗೆ ಹೆರಿಗೆ ನೋವು ಶುರುವಾಯಿತು. ಸ್ಕ್ಯಾನ್ ಮಾಡಿ ನೋಡಿದಾಗ ಅವಳಿಗೆ ಅವಳಿ ಮಕ್ಕಳಿರುವುದು ದೃಢವಾಯಿತು ಆದರೆ ಅಲ್ಟ್ರಾಸೌಂಡ್ ಮಾಡಿದಾಗ ಇಬ್ಬರು ಅಂಟಿಕೊಂಡಿರುವುದು ದೃಢಪಟ್ಟಿತು.

ಅವಳಿ ಮಕ್ಕಳಿಗೆ ಜನ್ಮ ನೀಡುವುದು ಸುಲಭವಲ್ಲ ಅದರಲ್ಲೂ ಈಕೆ ಅಂಟಿಕೊಂಡಿರುವ ಅವಳಿ ಶಿಶುವನ್ನು ಹೊಂದಿದ್ದಾಳೆ, ಆದರೆ ಜಾದು ಎಂಬಂತೆ ಈಕೆ ಸಾಮಾನ್ಯ ಹೆರಿಗೆಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಇದು ನಿಜಕ್ಕೂ ಆಶ್ಚರ್ಯದ ವಿಷಯ.

ಈಗ ಮಕ್ಕಳನ್ನು ಬೇರ್ಪಡಿಸುವುದೇ ಒಂದು ಸವಾಲಿನ ವಿಷಯ, ತಂತ್ರಜ್ಞಾನ ಮುಂದುವರೆದಿದೆ ನಿಜ, ಆದರೆ ಉದರ ಭಾಗದಲ್ಲಿ ಅಂಟಿಕೊಂಡಿರುವ ಈ ಮಕ್ಕಳನ್ನು ಬೇರ್ಪಡಿಸುವುದು ತುಂಬಾ ಕಷ್ಟ, ನಾವು ಒಂದು ಮಗುವನ್ನು ಮಾತ್ರ ಉಳಿಸಲು ಸಫಲವಾಗುವೆವು ಅದು ಕೇವಲ ಶೇಕಡಾ ೭೫ ರಷ್ಟು ಮಾತ್ರ ಭರವಸೆ ನೀಡಬಹುದು.

ಆ ಮಕ್ಕಳಿಗೆ ಈಗ ನಿಜವಾಗಿಯೂ ವೈದ್ಯಕೀಯದ ಸಹಾಯ ಅಗತ್ಯವಿದೆ. ಆದರೆ ಆಕೆ ಏಕೆ ಮಕ್ಕಳನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋದಳು ನನಗೆ ತಿಳಿದಿಲ್ಲ, ಬಹುಶಃ ಬೇರೆ ಆಸ್ಪತ್ರೆ ಅಥವಾ ವೈದ್ಯರ ಬಳಿ ಹೋಗಿರಬಹುದು. ಆದರೆ ಅದ್ಭುತ ಎಂಬಂತೆ ತಾಯಿ ಮಗು ಆರೋಗ್ಯವಾಗಿದ್ದಾರೆ. ಆದರೆ ಅವಳಿ ಮಕ್ಕಳ ಬೆನ್ನು ಮೂಳೆ ಒಂದೇ ಆಗಿರುವುದರಿಂದ ಅವರು ನೇರವಾಗಿ ಕುಳಿತುಕೊಳ್ಳಲು ಮತ್ತು ಮುಂದೆ ಬಾಗಲು ಕಷ್ಟವಾಗುತ್ತದೆ. ಅವರಿಗೆ ಈಗಲೇ ಶಸ್ತ್ರ ಚಿಕಿತ್ಸೆ ಮಾಡಿಸುವುದು ಉತ್ತಮ ಎನ್ನುವುದು ಡಾಕ್ಟರ್ ಅಗರ್ವಾಲ್ ಅವರ ಅಭಿಪ್ರಾಯ.

Leave a Reply

%d bloggers like this: