ಈ ಮೂರು ಪದಾರ್ಥಗಳಿಂದ ದಪ್ಪವಾದ, ಬಲವಾದ ಸುಂದರ ಕೂದಲನ್ನು ಮರು ಪಡೆಯಿರಿ

ನಾವು ಆರೋಗ್ಯಕರ, ಮಿನುಗುವ ಸುಂದರವಾದ ಕೂದಲಿಗಾಗಿ ಹಂಬಲಿಸುವೆವು. ಆದರೆ ವಿವಿಧ ಕೂದಲು ಸಮಸ್ಯೆಗೆ ನಾವು ಸಿಲುಕುತ್ತೇವೆ. ನಾವು ಬಳಸುವ ಶಾಂಪೂ(ಕೇಶಮರ್ಧನ) ಮತ್ತು ಕಂಡಿಷನರ್ ಗಳು ಅವಕ್ಕೆ ಕಾರಣ ಎಂದು ಗುರುತಿಸಿದರೆ, ನಾವು ಹೆಚ್ಚು ಕಾಲ ರಾಸಾಯನಿಕಗಳನ್ನು ಬಳಸಿರುವುದು ಕೂದಲು ಸಮಸ್ಯೆಗೆ ಕಾರಣವಾಗಿದೆ. ಒಂದು ಉತ್ತಮ ಆಯ್ಕೆ ಎಂದರೆ ಸ್ವಾಭಾವಿಕವಾದ ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಇದರಿಂದ ನಿಮ್ಮ ಕೂದಲು ರಾಸಾಯನಿಕ ಮುಕ್ತ ಅರೋಗ್ಯ ಕೂದಲನ್ನು ಪಡೆಯುತ್ತದೆ. ಆದರೆ ಸರಿಯಾದ ನೈಸರ್ಗಿಕ ಪರಿಹಾರ ಯಾವುದು ಮತ್ತು ಅದನ್ನು ಹೇಗೆ ಬಳಸುವುದು ಎಂಬುದು ಪ್ರಶ್ನೆ. ಇಲ್ಲಿ ನಾವು ಅದಕ್ಕಾಗಿ ನೈಸರ್ಗಿಕ ೩ ಪದಾರ್ಥಗಳನ್ನು ನಿಮಗಾಗಿ ತಂದಿದ್ದೇವೆ(ಮೊಟ್ಟೆ, ಜೇನುತುಪ್ಪ ಮತ್ತು ಹರಳೆಣ್ಣೆ).

೧.ಮೊಟ್ಟೆ

ಕೂದಲು ಉದುರುವ ಮತ್ತು ಹಗುರಿನ(ಡ್ಯಾಂಡ್ರಫ್) ವಿರುದ್ಧ ಹೊರಡುವ ತಮ್ಮ ಸಾಮರ್ಥ್ಯಕ್ಕೆ ಮೊಟ್ಟೆಯು ಹೆಸರುವಾಸಿಯಾಗಿದೆ. ಇದು ವಿಟಮಿನ್ A, B, D ಮತ್ತು E ಯನ್ನು ಒಳಗೊಂಡು ಸಜ್ಜಿತವಾಗಿರುತ್ತದೆ, ಮೊಟ್ಟೆಯ ಹಳದಿ ಬಾಗ ನಿಮ್ಮ ಕೂದಲಿನ ಎಳೆಗಳಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಇದರಲ್ಲಿರುವ ಫ್ಯಾಟಿ ಆಸಿಡ್ ಹಗುರಿನ ವಿರುದ್ಧ ಹೋರಾಡುತ್ತದೆ ಮತ್ತು ಡ್ಯಾಂಡ್ರಫ್ ಅನ್ನು ತೊಲಗಿಸುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.

೨.ಜೇನುತುಪ್ಪ

ಒಣಗಿರುವ ಮತ್ತು ಹಾನಿಯಾಗಿರುವ ಕೂದಲಿಗೆ ಜೇನುತುಪ್ಪವನ್ನು ಬಳಸುವುದು ಉತ್ತಮ ಉಪಾಯವಾಗಿದೆ. ಇದು ತನ್ನಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ನಿಮ್ಮ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಜೇನಿನಲ್ಲಿರುವ ಫಂಗಲ್ ನಿರೋಧಕ ಫಂಗಲ್ ನಿಂದ ಆದ ಡ್ಯಾಂಡ್ರಫ್(ಹಗುರು)ಅನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಶುದ್ಧ, ಸ್ವಚ್ಛ ಸಾವಯವ ನೈಸರ್ಗಿಕ ಪರಿಹಾರವಾಗಿದೆ.

೩.ಹರಳೆಣ್ಣೆ

ತಲೆಬುರುಡೆಗೆ ರಕ್ತಸಂಚಲನವನ್ನು ಸರಾಗವಾಗಿ ಆಗುವಂತೆ ಮಾಡುತ್ತದೆ, ಇದು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ತಲೆಯ ph ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಕೂದಲಿನ ಎಳೆಯ ತುದಿಯಲ್ಲಿ ಸೀಳುವುದು ಯುವತಿಯರಲ್ಲಿ ಸಾಮಾನ್ಯ ಇದನ್ನು ಹರಳೆಣ್ಣೆ ಸರಿಪಡಿಸುತ್ತದೆ. ಯಾವಾಗಲು ಶುದ್ಧವಾದ ಸಾವಯವ ಹರಳೆಣ್ಣೆಯನ್ನು ಬಳಸಿ, ಇದರಿಂದ ಹೆಚ್ಚು ಉಪಯೋಗಗಳನ್ನು ಪಡೆದುಕೊಳ್ಳಬಹುದು.

ಮೊಟ್ಟೆ, ಜೇನುತುಪ್ಪ ಮತ್ತು ಹರಳೆಣ್ಣೆಯನ್ನು ನಿಮ್ಮ ಕೂದಲಿಗೆ ಉಪಯೋಗಿಸುವುದು
ಪದಾರ್ಥಗಳು

ಮೊಟ್ಟೆಯ ಹಳದಿ ಬಾಗ : ೧

ಹರಳೆಣ್ಣೆ : ೨ ಚಮಚ

ಜೇನುತುಪ್ಪ : ೧ ಚಮಚ

ನಿಮ್ಮ ಕೂದಲು ಉದ್ದವಿದ್ದರೆ, ಇದನ್ನು ನಿಮ್ಮ ಕೂದಲಿಗೆ ಆಗುವ ರೀತಿಯಲ್ಲಿ ಸರಿಯಾದ ಪ್ರಮಾಣವನ್ನು ಹಾಕಿಕೊಳ್ಳಿ.

ಉಪಯೋಗಿಸುವ ವಿಧಾನ

ಮೊಟ್ಟೆಯ ಹಳದಿ ಭಾಗ, ಜೇನುತುಪ್ಪ ಮತ್ತು ಹರಳೆಣ್ಣೆಯನ್ನು ಒಂದು ಬಟ್ಟಲಿಗೆ ಹಾಕಿ ಚೆನ್ನಾಗಿ ಮಿಶ್ರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಮತ್ತು ಕೂದಲಿನ ಎಳೆಗಳಿಗೆ ಹಚ್ಚಿರಿ. ಮೃದುವಾಗಿ ಈ ಮಿಶ್ರಣದಿಂದ ನಿಮ್ಮ ತಲೆಬುರುಡೆಯನ್ನು ಮಸಾಜ್ ಮಾಡಿ. ಈ ಮಿಶ್ರಣ ನಿಮ್ಮ ಕೂದಲಿನ ಬುಡಕ್ಕೆ ಮತ್ತು ಕೂದಲಿನ ಎಲ್ಲಾ ಭಾಗಕ್ಕೆ ಅನ್ವಯಿಸಿದೆ ಎಂದು ಖಚಿತಪಡಿಸಿಕೊಳ್ಳಿ. ಒಂದರಿಂದ ಎರಡು ಗಂಟೆಗಳ ಕಾಲ ಮಿಶ್ರಣವು ಕೂದಲಿನಲ್ಲಿ ಇರಲು ಬಿಡಿ. ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ವಾರದಲ್ಲಿ ಒಂದು ಬಾರಿ ಇದನ್ನು ಮಾಡಿ.

ಹಲವು ವಿಷಯಗಳ ಜೊತೆಗೆ ನಿಮ್ಮ ಕೂದಲನ್ನು ಆರೋಗ್ಯವಾಗಿಡಲು ಪೌಷ್ಟಿಕಾಂಶಗಳ ಅವಶ್ಯಕತೆಯೂ ಮುಖ್ಯ ಪಾತ್ರವನ್ನು ವಹಿಸುತ್ತವೆ. ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪೌಷ್ಟಿಕಾಂಶಗಳನ್ನು ಸೇವಿಸಿ, ಆರೋಗ್ಯಕರ ಆಹಾರವನ್ನು ಸೇವಿಸಿ. ದೈಹಿಕವಾಗಿ ಚಟುವಟಿಕೆಯಿಂದ ಇರಿ ಮತ್ತು ಒತ್ತಡಕ್ಕೆ ಒಳಗಾಗದಿರಿ, ಇದರಿಂದ ನಿಮ್ಮ ತ್ವಚೆ ಮತ್ತು ಕೂದಲು ಹಾನಿಯಾಗುವುದನ್ನು ತಪ್ಪಿಸಬಹುದು.

Leave a Reply

%d bloggers like this: