ಎರಡನೇ ಮಗು ಪಡೆಯುವುದರ ಬಗ್ಗೆ ನಿಮಗೆ ಯಾರು ತಿಳಿಸದ 6 ವಿಷಯಗಳು

ನೀವು ಮೊದಲ ಬಾರಿ ತಾಯಿ ಆದಾಗ ಸಿಕ್ಕವರೆಲ್ಲಾ ನಿಮಗೆ ಸಲಹೆಗಳನ್ನ ಕೊಡುತ್ತಲೇ ಇರುತ್ತಾರೆ. ನಿಮ್ಮ ಉಬ್ಬಿರುವ ಹೊಟ್ಟೆ ನೋಡಿ, ಅದು ನಿಮ್ಮ ಮೊದಲ ಮಗು ಅಂತ ತಿಳಿದೊಡನೆ, ನಿಮ್ಮ ಕಡೆಗೆ ಸಲಹೆಗಳು, ಬುದ್ಧಿಮಾತುಗಳ ಮಹಾಪೂರವೇ ಹರಿದು ಬರುತ್ತದೆ. ಹಾಗೇ ಸ್ವಲ್ಪ ಕಾಲ ಮುಂದೆ ಬಂದು ನೀವು ಈಗ ಎರಡನೇ ಬಾರಿ ಗರ್ಭವತಿ ಆಗುತ್ತಿದ್ದರೆ, ಈಗ ನಿಮಗೆ ವಿಷಯಗಳು ತಿಳಿದಿವೆ ಎಂದು ಭಾವಿಸಿ ಅವರು ಸುಮ್ಮನಾಗುವರು.

೧. ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ಪಾಪಪ್ರಜ್ಞೆ ಕಾಡುತ್ತದೆ

ನೀವು ನಿಮ್ಮ ಹೊಸ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಮತ್ತು ದೊಡ್ಡ ಮಗುವಿನ ಕಡೆ ಅಷ್ಟೊಂದು ಗಮನ ಹರಿಸಲು ಆಗದ ಕಾರಣಕ್ಕೆ ನಿಮಗೆ ಪಾಪಪ್ರಜ್ಞೆ ಕಾಡುತ್ತದೆ. ಆಗ ನೀವು ಮತ್ತೆ ದೊಡ್ಡ ಮಗು ಜೊತೆ ಜಾಸ್ತಿ ಕಾಲ ಕಳೆಯುತ್ತೀರಾ. ಈಗ ಸಣ್ಣ ಮಗುವಿನೊಂದಿಗೆ ಕಾಲ ಕಳೆಯುತ್ತಿಲ್ಲ ಎಂದು ಬೇಸರ! ನೀವು ನಿಮ್ಮ ಪ್ರತಿಯೊಂದು ಕ್ಷಣವನ್ನು ನಿಮ್ಮ ಮಗುವಿನೊಂದಿಗೆ ಕಳೆಯಬೇಕು ಎಂದುಕೊಳ್ಳುತ್ತೀರಾ. ಆದರೆ, ನೆಮ್ಮದಿಯಿಂದ ಒಬ್ಬರೇ ಒಂದು ೨೦ ನಿಮಿಷ ಸ್ನಾನ ಮಾಡುತ್ತಾ ಆರಾಮಾಗಿ ಕಳೆಯಬೇಕು ಎಂದು ಕೂಡ ಅಂದುಕೊಳ್ಳುತ್ತೀರಾ. ಇದು ಒಂದು ನಿಲ್ಲದೆ ತಿರುಗುವ ಚಕ್ರ!

೨. ನೀವು ಅಂದುಕೊಂಡಷ್ಟು ನೆನಪು ನಿಮಗೆ ಇರುವುದಿಲ್ಲ

ನೀವು ಒಮ್ಮೆ ಆಗಲೇ ಒಂದು ಮಗುವನ್ನು ಹಡೆದು, ಅದನ್ನು ಸಾಕಿದ್ದೀನಿ, ಹೀಗಾಗಿ ನನಗೆ ಏನು ಮಾಡಬೇಕೆಂದು ತಿಳಿದಿದೆ ಎಂದು ನೀವು ಅಂದುಕೊಳ್ಳುವಂತಿಲ್ಲ. ನೀವು ನಿಮ್ಮ ಮಗುವಿಗೆ ಏನೇನು ಮಾಡಿದ್ದೀರಿ ಎಂಬುದು ನಿಮಗೆ ಸಂಪೂರ್ಣವಾಗಿ ನೆನಪಿರುವುದಿಲ್ಲ. ಹೀಗಾಗಿ ನೀವು ಎಲ್ಲಾ ಪ್ರಕ್ರಿಯೆಗಳನ್ನು ಪುನಃ ಅರಿದು ಕುಡಿಯಬೇಕು. ಎಷ್ಟು ಬಾರಿ ಉಣಿಸಬೇಕು, ಎಷ್ಟು ಬಾರಿ ಡೈಪರ್ ಚೇಂಜ್ ಮಾಡಬೇಕು ಎನ್ನುವುದರಿಂದ ಹಿಡಿದು ನೀವು ಬಹುತೇಕ ಎಲ್ಲಾ ವಿಷಯಗಳನ್ನ ಇನ್ನೊಮ್ಮೆ ಕೇಳಿ ತಿಳಿಯಬೇಕು.

೩. ಒಟ್ಟಾರೆ ಅನುಭವ ಮೊದಲಷ್ಟು ತೀವ್ರ ಇರುವುದಿಲ್ಲ

ಹೀಗೆಂದ ಮಾತ್ರಕ್ಕೆ ಇದು ಅಮುಖ್ಯ ಅಥವಾ ಸಂಭ್ರಮಪಡುವ ವಿಷಯವಲ್ಲ. ಆದರೆ, ಇದು ಮೊದಲ ಹೆರಿಗೆ ಆದಮೇಲೆ, ಇಷ್ಟು ದಿನ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಒಂದು ಪುಟ್ಟ ಜೀವವನ್ನು ಭೂಮಿಗೆ ತಂದಾಗ  “ಇದು ಜೀವನ ಬದಲಿಸುವ ಘಟನೆ” ಎಂದು ಅನಿಸುವಂತೆ ಎರಡನೇ ಬಾರಿಗೆ ಅನಿಸುವುದಿಲ್ಲ. “ಏ ಇದೆಲ್ಲಾ ನಾನು ಆಗಲೇ ನೋಡಿಬಿಟ್ಟಿದ್ದೀನಿ” ಎಂದು ಅನಿಸದೇ ಇದ್ದರು, ಇದು ನಿಮಗೆ ಮೊದಲ ಹೆರಿಗೆಯಾದಾಗ ಆದ ನಡುಕ ಅಥವಾ ಒಂಥರಾ ಭಾವನೆ ನೀಡುವುದಿಲ್ಲ.

೪. ನಿಮಗೆ ಮುಂಚಿನಷ್ಟು ಸಂಕೋಚ ಈಗ ಇರುವುದಿಲ್ಲ

ಇದು ಅಸಾಧ್ಯ ಎಂದು ಅನಿಸಬಹುದು, ಆದರೆ ನಾವೆಲ್ಲರೂ ಈ ಸ್ಥಾನದಲ್ಲಿ ಮೊದಲ ಮಗು ಆದ ಸಮಯದಲ್ಲಿ ಇದ್ದೆವು, ಈಗ ಪುನಃ ಅಲ್ಲಿಗೆ ಬಂದು ನಿಂತಿದ್ದೇವೆ. ನಿಮಗೆ ಮುಂಚೆ ಆದರೂ ಸ್ವಲ್ಪ ಸಮಯ ಸಿಗುತಿತ್ತು, ಆದರೆ ಈಗ ನಿಮಗೆ ಎರಡು ಮಕ್ಕಳ ಜವಾಬ್ದಾರಿ. ನೀವು ನಿಮ್ಮ ದೊಡ್ಡ ಮಗುವನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗುವ ಸಮಯ ಬಂದೇ ಬರುತ್ತದೆ. ಹೀಗಾಗಿ ನೀವು ಈಗ ಪಬ್ಲಿಕ್ ಅಲ್ಲಿ ನಿಮ್ಮ ಮಗುವಿಗೆ ಉಣಿಸುವುದರ ಬಗ್ಗೆ ಆಗಲಿ, ಅದರ ಕಾಳಜಿ ವಹಿಸುವುದರಲ್ಲಿ ಆಗಲಿ ಮುಂಚೆ ಅಷ್ಟು ಸಂಕೋಚ ಪಡುವುದಿಲ್ಲ, ನಿಜ ಹೇಳಬೇಕೆಂದರೆ ನೀವು ಈಗ ತಲೆ ಕೆಡೆಸಿಕೊಳ್ಳುವುದೇ ಇಲ್ಲ. ನನಗೆ ಕೇಳಿದರೆ ಇದೊಂದು ಮುಕ್ತಿ ಹೊಂದುವ ಭಾವನೆ!

೫. ನೀವು ಊಹಿಸದಷ್ಟು ಕೊಳೆ ಬಟ್ಟೆಗಳು ಈಗ ನಿಮ್ಮ ಮುಂದೆ ಇರುತ್ತವೆ

ಈ ಪುಟ್ಟ ಮಗುವಿನ ಪುಟ್ಟ ಪುಟ್ಟ ಬಟ್ಟೆಗಳು ಈಗಾಗಲೇ ಇರುವ ಮೂರು ಜನರ ಬಟ್ಟೆಗಳ ರಾಶಿಗೆ ಸೇರಿದರೆ ಅಂತದ್ದೇನು ವ್ಯತ್ಯಾಸ ಆಗುವುದಿಲ್ಲ ಎಂದು ಅಂದುಕೊಳ್ಳಬಹುದು. ಆದರೆ, ಅದು ಹೇಗೋ ಆ ಮಗುವು ಈ ಬಟ್ಟೆಯ ರಾಶಿಯನ್ನು ದುಪ್ಪಟ್ಟು ಮಾಡುತ್ತದೆ. ನೀವು ಒಂದು ದಿನ ಏನಾದರೂ ಈ ಕೊಳೆಯಾದ ಬಟ್ಟೆಗಳನ್ನು ಒಗೆಯದೇ ಇದ್ದರೆ, ಮಾರನೇ ದಿನಕ್ಕೆ ನೀವು ಮೂರ್ಛೆ ಬೀಳುವಷ್ಟು ಬಟ್ಟೆಗಳು ಉಳಿದುಕೊಂಡಿರುತ್ತವೆ.

೬. ಎದೆಹಾಲು ಕುಡಿಸುವುದು ಈಗಲೂ ಕಷ್ಟವೇ ಆಗಿರುತ್ತದೆ

ಬಹಳಷ್ಟು ಬಾರಿ ಎರಡನೇ ಮಗುವಾದಾಗ ಹಾಲು ಕುಡಿಸುವುದು ಸುಲಭ ಆಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ. ಸುಲಭ ಏನೋ ಆಗುತ್ತದೆ, ಆದರೂ ಅದು ಕಷ್ಟವೇ. ನಿಮಗೆ ಮೊದಲ ಬಾರಿ ಎದೆಹಾಲು ಉಣಿಸುವಾಗ ಆದಂತೆ ಈಗ ನಿಮಗೆ ಇದು ಮೈನವಿರೇಳಿಸದಿದ್ದರೂ, ನೀವು ಈಗಲೂ ಮಗು ಕಚ್ಚಿಕೊಳ್ಳುವಂತೆ ಮಾಡಲು ಪರದಾಡುವುದು, ಮೊಲೆತೊಟ್ಟುಗಳು ಉರಿಯುವುದಕ್ಕೆ  ಕ್ರೀಂ ಹಚ್ಚಿಕೊಂಡು ಸಂತೈಸಿಕೊಳ್ಳುವುದು ಮಾಡುತ್ತೀರಾ. ಆದರೆ ಒಂದು ಒಳ್ಳೆಯ ವಿಷಯ ಏನು ಅಂದರೆ, ಮೊಲೆತೊಟ್ಟುಗಳಿಗೆ ಮೊದಲು ಆಗುವಷ್ಟು ನೋವು ಆಗುವುದು ಆಗಲಿ ಅಥವಾ ಬಹಳ ದಿನಗಳವರೆಗೆ ನೋವು ಕಾಣಿಸಿಕೊಳ್ಳುವುದು ಆಗಲಿ ಈಗ ಎರಡನೇ ಬಾರಿಗೆ ಆಗುವುದಿಲ್ಲ.

Leave a Reply

%d bloggers like this: