ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್(PCOS)ನ ೫ ಮುನ್ಸೂಚನೆಗಳು

ನಮಗೆ ಹಾರ್ಮೋನುಗಳು ಸಮತೋಲನದಿಂದ ಆರೋಗ್ಯವಾಗಿರುವುದು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಅವು ಸರಿಯಾಗಿ ತಮ್ಮ ಕಾರ್ಯ ನಿರ್ವಹಿಸದಿದ್ದರೆ ಅದರಿಂದ ನಮಗೆ ತೊಂದರೆ ಎದುರಾಗುತ್ತದೆ. ಈ ತೊಂದರೆಗಳು ಸಣ್ಣ ಮುಜುಗರದ ಕೂದಲು ಉದುರುವ ಸಮಸ್ಯೆ ಇಂದ ಗಂಭೀರ ಹೃದಯ ಸಮಸ್ಯೆ ಮತ್ತು ಟೈಪ್-೨ ಮಧುಮೇಹದಂತಹ ಸಮಸ್ಯೆಯನ್ನು ಉಂಟುಮಾಡುತ್ತವೆ.

ಮಹಿಳೆಯರಿಗೆ, ಆಂಡ್ರೋಜೆನ್ಸ್ ಎಂದು ಕರೆಯಲ್ಪಡುವ ಗಂಡು ಹಾರ್ಮೋನುಗಳ ಅಸಮತೋಲನವನ್ನು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎನ್ನುತ್ತಾರೆ. ಶೇಕಡಾ ೧೫ ರಷ್ಟು ಮಹಿಳೆಯರು ಈ ಸಿಂಡ್ರೋಮ್ ಅನ್ನು ಹೊಂದಿದ್ದಾರೆ ಆದರೆ ಹಲವರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ಇಲ್ಲಿ ಅದರ ೬ ಚಿಹ್ನೆಗಳನ್ನು ವಿವರಿಸಲಾಗಿದೆ.

೧.ಅನಿಯಮಿತ ಋತುಚಕ್ರ(ಸರಿಯಾದ ಸಮಯಕ್ಕೆ ಮುಟ್ಟು ಆಗದಿರುವುದು)

ನಿಮ್ಮ ಕೊನೆಯ ಮುಟ್ಟು ಯಾವಾಗ ಆಯಿತು ಎಂಬುದು ನೆನಪಿಲ್ಲವೇ? ಇದು PCOSನ ಒಂದು ಚಿಹ್ನೆ. ಸರಿಯಾದ ಸಮಯಕ್ಕೆ ಮುಟ್ಟು ಆಗದಿರುವುದು ಇದರ ಮೊದಲ ಪ್ರಮುಖ ಚಿಹ್ನೆ. PCOSನ ಮಹಿಳೆಯರಲ್ಲಿ ಗಂಡು ಹಾರ್ಮೋನುಗಳು ಹೆಚ್ಚಿರುವುದು ಮಾತ್ರವಲ್ಲ, ಆದರೆ, ಅವರ ಅಂಡಾಶಯವು ಸಾಕಾಗುವಷ್ಟು ಪ್ರೊಜೆಸ್ಟೊರಾನ್ ಅನ್ನು ಉತ್ಪಾದಿಸಲು ಅಶಕ್ತವಾಗಿರುತ್ತದೆ ಇದು ಸಾಮಾನ್ಯ (ಹೆಣ್ಣಿನ ಹಾರ್ಮೋನು)ಋತುಚಕ್ರವಾಗುವಂತೆ ಮಾಡುವುದು. ಆದ್ದರಿಂದ PCOS ಇರುವ ಮಹಿಳೆಯರು ತಮ್ಮ ಮುಟ್ಟನ್ನು ಸರಿಯಾದ ಸಮಯಕ್ಕೆ ಆಗದೆ, ಅನಿಯಮಿತವಾಗಿ ಅನುಭವಿಸುತ್ತಾರೆ.

೨.ಮೊಡವೆ

ಪ್ರೌಢಾವಸ್ಥೆ ನಂತರವೂ ಮುಖದ ತುಂಬಾ ಮೊಡವೆ ಅಥವಾ ಗುಳ್ಳೆ ಕಾಣಿಸಿಕೊಳ್ಳುವುದು ಇದರ ಎರಡನೇ ಲಕ್ಷಣವಾಗಿದೆ. ಪ್ರೌಢಾವಸ್ಥೆಯಲ್ಲಿ ಹಾರ್ಮೋನುಗಳ ಒಳಹರಿವು ಮೊಡವೆ ಬರಲು ಕಾರಣವಾಗುತ್ತದೆ, PCOSನ ಹೆಚ್ಚುವರಿ ಹಾರ್ಮೋನುಗಳು ಕೂಡ ಇದನ್ನೇ ಮಾಡುತ್ತದೆ ಎಂದು ಅರ್ಥ ಮಾಡಿಕ್ಕೊಳ್ಳಬಹುದು.

೩.ಅಸಹಜ ಕೂದಲು ಬೆಳವಣಿಗೆ

ನೀವು ಸಾಂದರ್ಭಿಕವಾಗಿ(ವಿಶೇಷ ಸಂದರ್ಭದಲ್ಲಿ) ಗಲ್ಲ(ಗಡ್ಡ)ದಲ್ಲಿ ಕೂದಲನ್ನು ಪಡೆದರೆ ಚಿಂತಿಸಬೇಡಿ. ವಿಭಿನ್ನ ಜಾಗದಲ್ಲಿ ಕೆಲವು ಕೂದಲು ಬೆಳೆಯುವುದು PCOSನ ಸಂಕೇತವಲ್ಲ, ಆದರೆ, ನಿಮ್ಮ ಗಲ್ಲದ ಮೇಲೆ ಗಮನಾರ್ಹ ಕೂದಲು ಬೆಳೆಯುವುದು, ಕೆನ್ನೆಯ ಮೇಲೆ ಬೆಳೆಯುವುದು(ಕೆನ್ನೆಮಿಸೆ), ತುಟಿ ಮೇಲೆ, ಅಥವಾ ಕೂದಲು ಸಾಮಾನ್ಯವಾಗಿ ಬೆಳೆಯದ ಕೆಲವು ಬೇರೆ ಜಾಗದಲ್ಲಿ ಕೂದಲು ಬೆಳೆದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಇದನ್ನು ರೋಮಾಧಿಕೃತ ಎನ್ನುವರು, ಮತ್ತು ಇದು ಮೂರನೇ ಪ್ರಮುಖ PCOSನ ಚಿಹ್ನೆಯಾಗಿದೆ.

೪.ನಿಮಗೆ ಗರ್ಭ ನಿಲ್ಲದಿರುವುದು(ಗರ್ಭಿಣಿಯಾಗದಿರುವುದು)

ಬಂಜೆತನಕ್ಕೆ ಪ್ರಮುಖ ಕಾರಣ PCOS ಆಗಿದೆ. ನಿಮ್ಮ ದೇಹವು ಸಂಪೂರ್ಣ ಮುಟ್ಟಿನ ಚಕ್ರಕ್ಕೆ ಸಾಕಷ್ಟು ಪ್ರೊಜೆಸ್ಟರಾನ್ ಅನ್ನು ರಚಿಸದಿದ್ದಾಗ(ಉತ್ಪತ್ತಿ ಮಾಡದಿದ್ದಾಗ), ಅದು ನಿಮ್ಮ ಅಂಡಾಶಯಗಳಲ್ಲಿ ಕೋಶಗಳನ್ನು ಪರಿವರ್ತಿಸಲು ಅಭಿವೃದ್ಧಿಯಾಗದ ಮೊಟ್ಟೆಗಳನ್ನು ಉಂಟುಮಾಡುತ್ತದೆ. ನಂತರ ಕೋಶಗಳು ನಿಮ್ಮ ಆರೋಗ್ಯಕರ ಮೊಟ್ಟೆಗಳನ್ನು ಫೆಲೋಫಿಲಿಯನ್ ನಾಳದಿಂದ ಗರ್ಭಕೋಶಕ್ಕೆ ತಲುಪುವುದನ್ನು ತಡೆಯುತ್ತದೆ.

೫.ನೀವು ಅಧಿಕ ತೂಕ ಪಡೆದರೆ

ನಿಮ್ಮ ಜೀವನದ, ಒಂದು ಹಂತದಲ್ಲಿ ನೀವು ತ್ವರಿತವಾಗಿ ಮತ್ತು ಅನಿರೀಕ್ಷಿತವಾಗಿ ಹೆಚ್ಚು ತೂಕವನ್ನು ಹೊಂದಿದ್ದೀರಾ? ಇದಕ್ಕೆ PCOS ಕಾರಣ. ಈಗ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ತುಂಬಾ ಕಷ್ಟ. ತೂಕ ಹೆಚ್ಚುವುದು ಇದರ ಲಕ್ಷಣವೇ ಎಂದು ನಿಖರವಾಗಿ ಹೇಳಲಾಗುವುದಿಲ್ಲ, ಆದರೆ ಇದು ಇದರ ಒಂದು ಚಿಹ್ನೆ ಆಗಿರಬಹುದು. ಮತ್ತು PCOS ನಿರ್ಧಿಷ್ಟವಾಗಿ ದೇಹದ ಮೇಲ್ಬಾಗದಲ್ಲಿ ಮತ್ತು ಹೊಟ್ಟೆಯಲ್ಲಿ ತೂಕವನ್ನು ಹೆಚ್ಚಳ ಮಾಡುತ್ತದೆ.

ನೀವು ಏನು ಮಾಡಬಹುದು?

ನೀವು ಈ ಗುಣಲಕ್ಷಣಗಳನ್ನು ಗಮನಿಸಿದರೆ, ಅದರಲ್ಲೂ ವಿಶೇಷವಾಗಿ, ಅನಿಯಮಿತ ಋತುಚಕ್ರ, ಮೊಡವೆ ಮತ್ತು ಅಸಹಜ ಕೂದಲು ಬೆಳವಣಿಗೆ ಕಂಡರೆ, ನಿಮ್ಮ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಅದರ ಫಲಿತಾಂಶ ಬಂದ ಮೇಲೆ ವೈದ್ಯರು ನಿಮಗೆ ಕೋಶವನ್ನು ಪರೀಕ್ಷಿಸಲು ಯೋನಿಯ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಿಸಲು ಸೂಚಿಸಬಹುದು. ಮೇಲಿನ ಲಕ್ಷಣಗಳು ಕಂಡರೆ, ನೀವು ವೈದ್ಯರನ್ನು ಕೂಡಲೇ ಭೇಟಿಯಾಗುವುದು ಸೂಕ್ತ.

Leave a Reply

%d bloggers like this: