ಮುಟ್ಟಿನ(ಪಿರಿಯಡ್) ದಿನದ ರಕ್ತದ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?

ನಿಮ್ಮ ಋತುಚಕ್ರವು ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡುವುದು. ಅಮೆರಿಕಾದ ಒಬ್ಸ್ಟೆಟ್ರಿಷಿಯನ್ಸ್(Obstetricians) ಮತ್ತು ಸ್ತ್ರೀರೋಗ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆ ಇದನ್ನು ಶಿಫಾರಸ್ಸು ಮಾಡಿದೆ. ಏಕೆಂದರೆ, ನೀವು ಗರ್ಭಿಣಿಯೋ ಇಲ್ಲವೋ ಎಂಬುದನ್ನು ತಿಳಿಯಲು ಇದು ಸಹಾಯ ಮಾಡುತ್ತದೆ ಮತ್ತು ನಿಮ್ಮ ಅವಧಿ ನಿಮ್ಮ ಹಾರ್ಮೋನ್ ಆರೋಗ್ಯಕ್ಕೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಹಾರ್ಮೋನುಗಳು ನಿಮ್ಮ ಮೆದುಳಿನಿಂದ ಹಿಡಿದು ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತವೆ.

ಪ್ರತಿ ಮಹಿಳೆಯು ತಮ್ಮದೇ ಆದ ವಿಭಿನ್ನ ದೇಹ ಸ್ಥಿತಿಯನ್ನು ಹೊಂದಿರುತ್ತಾರೆ. ನಿಮ್ಮ ಮಟ್ಟಿನ ಅಥವಾ ಋತುಚಕ್ರದ ಅವಧಿಯಲ್ಲಿ ಬರುವಂತಹ ರಕ್ತದ ಬಣ್ಣವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕೆಳಗೆ ನೀಡಲಾಗಿದೆ.

೧.ಅದು ಪಿಂಕ್ ಅಥವಾ ಗುಲಾಬಿ ಬಣ್ಣದ್ದಾಗಿದ್ದರೆ

ನೀವು ಕಡಿಮೆ ಈಸ್ಟ್ರೋಜೆನ್ ಮಟ್ಟವನ್ನು ಹೊಂದಿರಬಹುದು. ಸಾಮಾನ್ಯವಾಗಿ ಬರುವುದಕ್ಕಿಂತ ಸ್ವಲ್ಪ ಕಡಿಮೆ ಹರಿದು ಬರುವುದನ್ನು ನೀವು ಗಮನಿಸಬಹುದು. ಅಧ್ಯಯನದ ಪ್ರಕಾರ ವಿಪರೀತ ಪರಿಶ್ರಮ ಅಥವಾ ವ್ಯಾಯಾಮ ಈಸ್ಟ್ರೋಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಕಡಿಮೆ ಈಸ್ಟ್ರೋಜೆನ್ ಮಟ್ಟಗಳು ನಿಮ್ಮಲ್ಲಿ ಅಸ್ಥಿರಂಧ್ರತೆ ಅಪಾಯಗಳನ್ನು ಹೆಚ್ಚಿಸಬಹುದು. ಇದು ಸಾಮಾನ್ಯವಾಗಿ ಓಟಗಾರರಲ್ಲಿ ಕಾಣಿಸಿಕೊಳ್ಳುತ್ತದೆ, ಆದರೆ ಇದನ್ನು ಬಗೆಹರಿಸಬಹುದು.

ಡಾಕ್ಟರ್ ರೋಮೆರೊ ಪ್ರಕಾರ ಇದಕ್ಕೆ ಇನ್ನೊಂದು ಕಾರಣವೆಂದರೆ, ಸರಿಯಾದ ಪೌಷ್ಟಿಕಾಂಶದ ಕೊರತೆ.

೨.ಅದು ನೀರಿನಂತೆ ಕಂಡರೆ

ನೀವು ಪೌಷ್ಟಿಕಾಂಶದ ಕೊರತೆಯನ್ನು ಹೊಂದಿರಬಹುದು. ಡಾಕ್ಟರ್ ಅಲಿಸ್ಸಾ ಡ್ವೆಕ್ ಅವರು ಹೇಳುವಂತೆ ತಿಳಿಯಾಗಿ ಬಿಳಿಯುಕ್ತ ನೀರಿನಂತೆ ಬರುವುದು ನಿಮ್ಮಲ್ಲಿ ತೀವ್ರ ರಕ್ತಹೀನತೆಯ(ಅನಿಮಿಯಾ) ಗುಣಲಕ್ಷಣವಿರಬಹುದು, ಅದರಲ್ಲೂ ನಿಮ್ಮ ಋತುಚಕ್ರದ ಸಮಯದಲ್ಲಿ ತಿಳಿಯಾದ ಬಿಳಿ ರಕ್ತವನ್ನು ನೋಡುವುದು ನಿಮ್ಮ ದೇಹದಲ್ಲಿ ರಕ್ತದ ಕೊರತೆಯನ್ನು ತೋರಿಸುತ್ತದೆ. ಇದನ್ನು ನೀವು ಗಮನಿಸಿದ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

೩.ಒಂದು ವೇಳೆ ಅದು ಗಾಢ ಕಂದು ಬಣ್ಣ ಹೊಂದಿದ್ದರೆ

ನಿಮ್ಮ ದೇಹದಲ್ಲಿ ಹಳೆಯ ಗರ್ಭಕೋಶ ಮತ್ತು ವ್ಯರ್ಥ ರಕ್ತದ ಕೆಲವು ತುಣುಕುಗಳು ಇದ್ದು ಅದು ಈಗ ನಿಮ್ಮ ದೇಹದಿಂದ ಹೊರ ಬರುತ್ತಿದೆ ಎಂದು ಅರ್ಥ. ಇದರ ಬಗ್ಗೆ ಚಿಂತಿಸಬೇಡಿ, ಇದು ಸಾಮಾನ್ಯ. ಎಲ್ಲಾ ಸಮಯದಲ್ಲೂ ಇದು ಏಕೆ ಆಗುತ್ತದೆ ಅಥವಾ ಇದು ಆದಾಗಲೆಲ್ಲಾ ಇದೆ ಕಾರಣ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಡ್ವೆಕ್ ಪ್ರಕಾರ ಉತ್ಕರ್ಷಣವಾಗಲು ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಈ ಬಣ್ಣ ಕಾಣಿಸಬಹುದು.

೪.ಇದು ಗಟ್ಟಿಯಾಗಿ ಕೆಂಪು ಜಾಮ್ ಬಣ್ಣ ಮತ್ತು ರಕ್ತ ಹೆಪ್ಪುಗಟ್ಟಿದ ಹಾಗೆ ಇದ್ದರೆ

ನೀವು ಕಡಿಮೆ ಪ್ರೊಜೆಸ್ಟರಾನ್ ಮಟ್ಟ ಮತ್ತು ಅಧಿಕ ಈಸ್ಟ್ರೋಜೆನ್ ಮಟ್ಟವನ್ನು ಹೊಂದಿದ್ದೀರಾ ಎನ್ನಬಹುದು. ಕೆಲವೊಮ್ಮೆ ಹೆಪ್ಪುಗಟ್ಟುವಿಕೆ ಸಾಮಾನ್ಯವಾದರೂ, ಅದರ ಗಾತ್ರ ಮತ್ತು ಸ್ಥಿತಿ ನಿಮ್ಮ ದೇಹದಲ್ಲಿನ ಹಾರ್ಮೋನಿನ ಅಸಮತೋಲನವನ್ನು ತೋರಿಸುತ್ತದೆ. ಇದು ನಿಮ್ಮಲ್ಲಿ ಕಂಡು ಬಂದರೆ ನೀವು ಸೋಯಾ, ಸಕ್ಕರೆ, ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ ಬದಲಾವಣೆಯನ್ನು ನೋಡಲು ಡಾಕ್ಟರ್ ರೋಮೆರೊ ರವರು ಸೂಚಿಸುತ್ತಾರೆ. ಇದು ನಿಮಗೆ ನೋವು ಉಂಟುಮಾಡುತ್ತಿದ್ದರೆ ಕೂಡಲೇ ವೈದ್ಯರ ಬಳಿ ಅಲ್ಟ್ರಾಸೌಂಡ್ ಮಾಡಿಸಿ.

೫.ಇದು ಬೂದು ಬಣ್ಣ ಮತ್ತು ಕೆಂಪು ಬಣ್ಣದ ಮಿಶ್ರಣದಂತೆ ಇದ್ದರೆ

ನೀವು ಸೋಂಕಿಗೆ ಒಳಗಾಗಿರಬಹುದು. ಪರೀಕ್ಷೆಗೆ ಒಳಗಾಗಿ ಸರಿಯಾದ ಕಾರಣ ತಿಳಿದರೆ ಸೂಕ್ತ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ.

ಕೆಲವೊಮ್ಮೆ ಲಿವರ್ ನಂತೆ ಬೂದು ಬಣ್ಣದ ಅಂಗಾಂಶ ಕಾಣಿಸುತ್ತದೆ ಇದು ಗರ್ಭಪಾತ ಆಗಿರುವ ಸೂಚನೆ ಇರಬಹುದು, ಒಂದು ವೇಳೆ ನೀವು ಗರ್ಭಿಣಿ ಆಗಿದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೬.ಇದು ಗಾಢ ಕೆಂಪು ಬಣ್ಣ ಆಗಿದ್ದರೆ

ನೀವು ಆರೋಗ್ಯಕರ ಮತ್ತು ಸಹಜ ಋತುಚಕ್ರವನ್ನು ಹೊಂದಿರುವಿರಿ. ಪ್ರತಿಯೊಬ್ಬರ ಸಹಜತೆ ವಿಭಿನ್ನವಾಗಿರುತ್ತದೆ, ಆದರೆ ನಾವು ಇಲ್ಲಿ ಸಾಮಾನ್ಯವಾಗಿ ಇದರ ಬಗ್ಗೆ ಹೇಳುತ್ತಿದ್ದೇವೆ.

Leave a Reply

%d bloggers like this: